#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Karunada Kanmani Movie: ನಟ ಚರಣ್ ರಾಜ್ ನಿರ್ದೇಶನದ ನೂತನ ಚಿತ್ರ ʼಕರುನಾಡ ಕಣ್ಮಣಿʼ ಶೂಟಿಂಗ್‌ ಮಾರ್ಚ್‌ನಲ್ಲಿ ಆರಂಭ

Karunada Kanmani Movie: ನಟ ಚರಣ್ ರಾಜ್ ನಿರ್ದೇಶಿಸಲಿರುವ ನೂತನ ಚಿತ್ರ ʼಕರುನಾಡ ಕಣ್ಮಣಿʼ ಸಿನಿಮಾದ ಚಿತ್ರೀಕರಣ ಮಾರ್ಚ್ ಅಂತ್ಯದಲ್ಲಿ ಆರಂಭವಾಗಲಿದೆ. ಕನ್ನಡ, ತಮಿಳು, ತೆಲುಗು ಮೂರು ಭಾಷೆಗಳಲ್ಲಿ ಈ ಚಿತ್ರ ಮೂಡಿಬರಲಿದೆ. ಬಹುಭಾಷಾ ನಟ ಕಿಶೋರ್ ಸಹ ಈ ಚಿತ್ರದಲ್ಲಿ ನಟಿಸಲಿದ್ದು, ಚರಣ್ ರಾಜ್ ಅವರ ದ್ವಿತೀಯ ಪುತ್ರ ದೇವ್ ಚರಣ್ ರಾಜ್ ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

ನಟ ಚರಣ್ ರಾಜ್ ದ್ವಿತೀಯ ಪುತ್ರ ದೇವ್ ಚರಣ್ ರಾಜ್ ಸ್ಯಾಂಡಲ್‌ವುಡ್‌ಗೆ ಎಂಟ್ರಿ

ನಟ ಚರಣ್ ರಾಜ್ ನಿರ್ದೇಶನದ ನೂತನ ಚಿತ್ರ ʼಕರುನಾಡ ಕಣ್ಮಣಿʼ

Profile Siddalinga Swamy Feb 11, 2025 6:17 PM

ಬೆಂಗಳೂರು: ತಮ್ಮ ಅಮೋಘ ಅಭಿನಯದ ಮೂಲಕ ಕನ್ನಡ ಸೇರಿದಂತೆ ಅನೇಕ ಭಾಷೆಗಳಲ್ಲಿ ತಮ್ಮದೇ ಆದ ಚಾಪು ಮೂಡಿಸಿರುವ ಜನಪ್ರಿಯ ನಟ ಚರಣ್ ರಾಜ್ ಅವರು ನಿರ್ದೇಶಿಸಲಿರುವ ನೂತನ ಚಿತ್ರವೊಂದು ಮಾರ್ಚ್ ಅಂತ್ಯದಲ್ಲಿ ಆರಂಭವಾಗಲಿದೆ. ಕನ್ನಡ, ತಮಿಳು, ತೆಲುಗು ಮೂರು ಭಾಷೆಗಳಲ್ಲಿ ಈ ಚಿತ್ರ ಮೂಡಿಬರಲಿದ್ದು, ABCR ಫಿಲಂ ಫ್ಯಾಕ್ಟರಿ ಬ್ಯಾನರ್‌ನಲ್ಲಿ ಅಶ್ವಥ್ ಬಳಗೆರೆ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಬಹುಭಾಷಾ ನಟ ಕಿಶೋರ್ ಸಹ ಈ ಚಿತ್ರದಲ್ಲಿ ನಟಿಸಲಿದ್ದು, ಚರಣ್ ರಾಜ್ ಅವರ ದ್ವಿತೀಯ ಪುತ್ರ ದೇವ್ ಚರಣ್ ರಾಜ್ ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಸಾಗರ್ ಗುರುರಾಜ್ ಸಂಗೀತ ನಿರ್ದೇಶನ ಹಾಗೂ ಪೃಥ್ವಿ ಛಾಯಾಗ್ರಹಣವಿರುವ ಈ ನೂತನ ಚಿತ್ರದ ಉಳಿದ ತಾರಾಬಳಗದ ಆಯ್ಕೆ ನಡೆಯುತ್ತಿದೆ.

ಈ ಸುದ್ದಿಯನ್ನೂ ಓದಿ | Valentines Day Nail Art 2025: ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಟ್ರೆಂಡಿಯಾದ ನೇಲ್ ಆರ್ಟ್‌ಗಳಿವು!

ಇದೊಂದು ಮರ್ಡರ್ ಮಿಸ್ಟರಿ ಕಥಾಹಂದರ ಹೊಂದಿರುವ ಚಿತ್ರವಾಗಿದೆ. ನಾನೇ ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದೇನೆ. ಈ ಚಿತ್ರದ ಬಹುತೇಕ ಚಿತ್ರೀಕರಣ ಕಾಲೇಜ್‌ನಲ್ಲೇ ನಡೆಯಲಿದ್ದು, ಕಾಲೇಜ್ ರಜಾ ಶುರುವಾದ ತಕ್ಷಣ ನಮ್ಮ ಚಿತ್ರದ ಚಿತ್ರೀಕರಣ ಸಹ ಆರಂಭವಾಗಲಿದೆ. ಕನ್ನಡದ ಚಿತ್ರೀಕರಣ ಬೆಂಗಳೂರಿನಲ್ಲಿ, ತಮಿಳಿನ ಚಿತ್ರೀಕರಣ ಪಾಂಡಿಚೇರಿ ಹಾಗೂ ಕಡಲೂರಿನಲ್ಲಿ ಮತ್ತು ತೆಲುಗು ಭಾಷೆಯ ಚಿತ್ರೀಕರಣ ಹೊಂಗನೂರು ಮುಂತಾದ ಕಡೆ ನಡೆಯಲಿದೆ. ಈ ಚಿತ್ರದ ಮೂಲಕ ನನ್ನ ದ್ವಿತೀಯ ಪುತ್ರ ದೇವ್ ಚರಣ್ ರಾಜ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾನೆ. ನನಗೆ ತಾವೆಲ್ಲರೂ ಆರಂಭದಿಂದಲೂ ಅಧಿಕ ಪ್ರೀತಿ ಹಾಗೂ ಪ್ರೋತ್ಸಾಹ ನೀಡಿದ್ದೀರಿ. ಅದು ನನ್ನ ಮಗನಿಗೂ ಮುಂದುವರೆಯಲಿ ಎನ್ನುತ್ತಾರೆ ಹಿರಿಯ ನಟ ಹಾಗೂ ನಿರ್ದೇಶಕ ಚರಣ್ ರಾಜ್.