ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vicky Kaushal: ಛಾವಾ ಸಕ್ಸಸ್‌ ನಂತ್ರ ವಿಕ್ಕಿ ಕೌಶಲ್‌ ಏನ್‌ ಮಾಡ್ತಿದ್ದಾರೆ? ಖ್ಯಾತ ನಟನ ಬಯೋಪಿಕ್‌ನಲ್ಲಿ ನಟಿಸೋದು ಗಾರಂಟಿನಾ?

ಸಂಜಯ್ ಲೀಲಾ ಬನ್ಸಾಲಿ ಅವರ ಬಹುನಿರೀಕ್ಷಿತ ಲವ್ ಆ್ಯಂಡ್ ವಾರ್ ಚಿತ್ರದಲ್ಲಿ ರಣಬೀರ್ ಕಪೂರ್ ಮತ್ತು ನಟಿ ಆಲಿಯಾಭಟ್ ಜೊತೆಗೆ ನಟ ವಿಕ್ಕಿ ಕೌಶಲ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ಈ ನಡುವೆ ಖ್ಯಾತ ನಿರ್ಮಾಪಕ ಗುರುದತ್ ಅವರ ಜೀವನಾಧರಿತ ವೆಬ್ ಸರಣಿಯಲ್ಲಿ ಕೂಡ ನಟ ವಿಕ್ಕಿ ಕೌಶಲ್ ವಿಭಿನ್ನ ಪಾತ್ರಕ್ಕಾಗಿ ಆಯ್ಕೆ ಆಗಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ.

ಖ್ಯಾತ ನಟನ ಬಯೋಪಿಕ್‌ನಲ್ಲಿ ವಿಕ್ಕಿ ಕೌಶಲ್‌ ನಟಿಸೋದು ಗಾರಂಟಿನಾ?

Profile Pushpa Kumari May 30, 2025 4:43 PM

ನವದೆಹಲಿ: ಬಾಲಿವುಡ್ ಖ್ಯಾತ ನಟರಲ್ಲಿ ವಿಕ್ಕಿ ಕೌಶಲ್ (Vicky Kaushal) ಕೂಡ ಒಬ್ಬರು. ಮಾಸ್ ಫೈಟ್, ಖಡಕ್ ಡೈಲಾಗ್ ವಿಶೇಷ ಅಭಿನಯದ ಮೂಲಕ ನಟ ವಿಕ್ಕಿ ಕೌಶಲ್ ಅವರು ಅಪಾರ ಜನರ ಮನಗೆದ್ದಿದ್ದಾರೆ. ಇತ್ತೀಚೆಗಷ್ಟೇ ನಟಿ ರಶ್ಮಿಕಾ ಮಂದಣ್ಣ(Rashmika Manadanna) ಜೊತೆಗೆ ಛಾವಾ ಚಿತ್ರದಲ್ಲಿ ನಟಿಸಿ ಬಾಕ್ಸ್ ಆಫೀಸ್ ನಲ್ಲಿ ಈ ಸಿನಿಮಾ ಹೊಸ ದಾಖಲೆ ನಿರ್ಮಿಸಿತ್ತು. ಇದೀಗ ಅದರ ಬೆನ್ನಲ್ಲೆ ಸಂಜಯ್ ಲೀಲಾ ಬನ್ಸಾಲಿ ಅವರ ಬಹುನಿರೀಕ್ಷಿತ ಲವ್ ಆ್ಯಂಡ್ ವಾರ್ ಚಿತ್ರದಲ್ಲಿ ರಣಬೀರ್ ಕಪೂರ್ ಮತ್ತು ನಟಿ ಆಲಿಯಾಭಟ್ ಜೊತೆಗೆ ನಟ ವಿಕ್ಕಿ ಕೌಶಲ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ಈ ನಡುವೆ ಖ್ಯಾತ ನಿರ್ಮಾಪಕ ಗುರುದತ್ ಅವರ ಜೀವನಾಧರಿತ ವೆಬ್ ಸರಣಿಯಲ್ಲಿ ಕೂಡ ನಟ ವಿಕ್ಕಿ ಕೌಶಲ್ ವಿಭಿನ್ನ ಪಾತ್ರಕ್ಕಾಗಿ ಆಯ್ಕೆ ಆಗಿದ್ದಾರೆ ಎಂಬ ಬಗ್ಗೆ ಸೋಶಿಯಲ್ ಮಿಡಿಯಾದಲ್ಲಿ ಸಾಕಷ್ಟು ವಿಚಾರಗಳು ಹರಿದಾಡುತ್ತಿದೆ.

ಉರಿ: ದಿ ಸರ್ಜಿಕಲ್ ಸ್ಟ್ರೈಕ್, ಸರ್ದಾರ್ ಉಧಮ್, ಜರಾ ಹಟ್ಕೆ ಜರಾ ಬಚ್ಕೆ ಸಿನಿಮಾ ಖ್ಯಾತಿಯ ನಟ ವಿಕ್ಕಿ ಕೌಶಲ್ ಖ್ಯಾತ ನಿರ್ಮಾಪಕ, ನಟ ಗುರುದತ್ ಅವರ ಜೀವನಾಧಾರಿತ ಚಿತ್ರದಲ್ಲಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ಯಾಸಾ, ಕಾಗಜ್ ಕೆ ಫೂಲ್ ಮತ್ತು ಸಾಹಿಬ್ ಬೀಬಿ ಔರ್ ಗುಲಾಮ್‌ ನಂತಹ ಕ್ಲಾಸಿಕಲ್ ಸಿನಿಮಾಗಳಿಗೆ ಹೆಸರಾದ ಗುರುದತ್ ಅವರ ಪಾತ್ರ ನಿರ್ವಹಿಸಲು ನಟ ವಿಕ್ಕಿ ಕೌಶಲ್ ಆಯ್ಕೆಯಾಗಿದ್ದು ಸದ್ಯ ಅವರ ಅಭಿಮಾನಿಗಳಿಗೆ ಈ ವಿಚಾರ ಸಂತಸ ತಂದಿದೆ.

ಇದನ್ನು ಓದಿ: Kurudu Kanchana Movie: ʼಕುರುಡು ಕಾಂಚಾಣʼ ಚಿತ್ರದ ಫಸ್ಟ್ ಲುಕ್ ಅನಾವರಣಗೊಳಿಸಿದ ರಾಕ್ ಸ್ಟಾರ್ ರೋಹಿತ್

ಅಲ್ಟ್ರಾ ಮೀಡಿಯಾ & ಎಂಟರ್‌ಟೈನ್‌ಮೆಂಟ್ ಗ್ರೂಪ್ ಗುರುದತ್ ಅವರ ಜೀವನಾಧರಿತ ಸಿನಿಮಾ ಮಾಡಲಿದೆ‌. ಗುರುದತ್ ಜೀವನ ಚರಿತ್ರೆ ಸಿನಿಮಾ ರೂಪದಲ್ಲಿ ತರುವುದು ಸವಾಲಿನ ಕೆಲಸವಾಗಿದ್ದು ನೈಜ ಕಥೆಗೆ ಧಕ್ಕೆ ಯಾಗದಂತೆ ವೆಬ್ ಸರಣಿ ಮಾಡಲು ಈಗಾಗಲೇ ಇಬ್ಬರು ನಿರ್ದೇಶಕರ ಜೊತೆಗೆ ಮಾತು ಕಥೆ ನಡೆಸಲಾಗಿದೆ ಎಂದು ಅಲ್ಟ್ರಾದ ಸಿಒಒ ಮತ್ತು ನಿರ್ದೇಶಕ ರಜತ್ ಅಗರ್ವಾಲ್ ತಿಳಿಸಿದ್ದಾರೆ.

ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅಭಿನಯದ ಲವ್ ಆ್ಯಂಡ್ ವಾರ್ ಸಿನಿಮಾದಲ್ಲಿ ನಟ ವಿಕ್ಕಿ ಕೌಶಲ್ ಅವರು ನಟಿಸಲಿದ್ದಾರೆ. ಮುಂಬೈನಲ್ಲಿ ಭಾರೀ ಮಳೆ ಸುರಿದ ಪರಿಣಾಮ ಚಿತ್ರದ ಚಿತ್ರೀಕರಣ ವಿಳಂಬವಾಯಿತು. ಮಳೆಯಿಂದ ಚಿತ್ರದ ಸೆಟ್‌ಗೆ ಗಮನಾರ್ಹ ಹಾನಿಯಾಗಿದೆ. ಹಾಗಾಗಿ ಇನ್ನು ಕೂಡ ಈ ಸಿನಿಮಾ ಶೂಟಿಂಗ್ ಪೂರ್ಣವಾಗಿಲ್ಲ. ಇದರ ಬೆನ್ನಲೇ ನಟ ವಿಕ್ಕಿ ಕೌಶಲ್ ಗುರುದತ್ ಬಯೋಪಿಕ್ ನ ವೆಬ್ ಸರಣಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಅಭಿಮಾನಿಗಳಿಗೆ ಕುತೂಹಲ ಉಂಟು ಮಾಡಿದೆ.