ಬಿಗ್ ಬಾಸ್ ಸೀಸನ್ 12ರ (Bigg Boss 12) 4ನೇ ರನ್ನರ್ ಅಪ್ ಕಾವ್ಯ ಶೈವ (Kavya Shaiva) ಹೊರಹೊಮ್ಮಿದ್ದರು. ಬಿಗ್‌ಬಾಸ್ ಕನ್ನಡ ಸೀಸನ್‌ನಲ್ಲಿ ಗಮನ ಸೆಳೆದ ಜೋಡಿ ಅಂದರೆ ಗಿಲ್ಲಿ–ಕಾವ್ಯ ಜೋಡಿ. ಮನೆಯೊಳಗೆ ಗಿಲ್ಲಿ ಸದಾ ಕಾವ್ಯ (Kavya Shaiva) ಅವರೊಂದಿಗೆ ಹಾಸ್ಯಭರಿತ ಮಾತುಗಳು, ಜೋಕ್‌ಗಳು ಹಾಗೂ ಸ್ನೇಹಪೂರ್ಣ ವರ್ತನೆಯ ಮೂಲಕ ಗಮನ ಸೆಳೆಯುತ್ತಿದ್ದರು. ಇದರಿಂದಾಗಿ ಇಬ್ಬರ ನಡುವಿನ ಆತ್ಮೀಯತೆ ವೀಕ್ಷಕರಿಗೆ ಮೆಚ್ಚುಗೆಯಾಯಿತು. ಇದೀಗ ವಿಶ್ವವಾಣಿ ವಿಶೇಷ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ತುಂಬಾ ಖುಷಿ ಆಗಿದೆ
ನಾನು ನನ್ನ ಜೀವನದಲ್ಲಿ ಕಷ್ಟ ಇತ್ತು ಎಲ್ಲಿಯೂ ಹೇಳಿಕೊಂಡಿಲ್ಲ. ಎಲ್ಲರೂ ಕಷ್ಟ ಪಟ್ಟೇ ಬಂದಿರ್ತಾರೆ. ಇವತ್ತು ಹೊರಗಡೆ ಬಂದಮೇಲೆ ತುಂಬಾ ಜನರ ಪ್ರೀತಿ ಸಿಕ್ಕಿದೆ. ತುಂಬಾ ಖುಷಿ ಆಗಿದೆ ಎಂದರು. ನಾನು ಒಳಗೆ ಹೋಗಿ ಗೇಮ್ ಆಡಿ ಬಂದಮೇಲೆ ಕರಿಯರ್ ಏಫೆಕ್ಟ್ ಆಗುತ್ತಾ ಅಂತ ಭಯ ಪಟ್ಟಿದ್ದೂ ಇದೆ.
ಇದನ್ನೂ ಓದಿ: Bigg Boss Kannada 12: PR ಇಲ್ಲದೇ ಇಲ್ಲಿ ತನಕ ಬಂದೆ! ಗಿಲ್ಲಿ ಬಗ್ಗೆ ಧ್ರುವಂತ್ ಹೇಳಿದ್ದೇನು?
ನಾನು ಮನೆಯೊಳಗೆ ಹೋಗಬೇಕಾದರೆ ಗೆಲ್ಲೊಕ್ಕಿಂತ, ಇರೋ ಹೆಸರು ಹಾಳು ಮಾಡಿಕೊಂಡು ಬರಬಾದರು ಅಂತ ಉದ್ದೇಶ ಇತ್ತು. ಫೈನಲ್ ತನಕ ಬಂದು ನಾಲ್ಕನೇ ಸ್ಥಾನ ಜನ ಕೊಟ್ಟಿದ್ದಾರೆ ಖುಷಿ ಇದೆ. ಬಿಗ್ ಬಾಸ್ ಶೋ ಅಂತ ಅಂದರೆ ಹೈಪ್ ಇದ್ದೆ ಇರುತ್ತದೆ.
ಸ್ವಲ್ಪ ಡಿಸ್ಟರ್ಬ್ ಆಗಿದ್ದೆ
ಗೆದ್ದಾಗ ಹಿಗ್ಗಬಾರದು ಸೋತಾಗ ಕುಗ್ಗಬಾರದು ಅನ್ನೋದು ಬಿಗ್ ಬಾಸ್ ಮನೆಯಲ್ಲೇ ಕಲಿತೆ. ಮನೆಯವರು ಬಂದಾಗ ಹೊರಗಡೆ ಏನು ಆಗ್ತಿದೆ ಅನ್ನೋದು ಹೇಳಿಲ್ಲ. ಇನ್ನು ರೂಲ್ಸ್ ಅಂದರೆ ರೂಲ್ಸ್. ಸರಿ ಇದೆ. ಆದರೆ ನಾನು ಬಳಿಕ ಸ್ವಲ್ಪ ಡಿಸ್ಟರ್ಬ್ ಆಗಿದ್ದೆ.
ಇನ್ನು ಗಿಲ್ಲಿ ವಿಚಾರಕ್ಕೆ ಬಂದರೆ ಅವನ ವ್ಯಕ್ತಿತ್ವ ಬೇರೆ ನನ್ನದು ಬೇರೆ. ಇನ್ನು ನಾನು ಫೇಕ್ ಕೂಡ ನಾನು ಮಾಡೋಕೆ ಆಗಲ್ಲ. ನನ್ನ ಆಟ ನಾನು ಆಡಿಕೊಂಡು ಬಂದೆ. ಗಿಲ್ಲಿ ಕೂಡ ನನಗೆ ಕಾಂಪಿಟೇಟರ್ ಕೂಡ ಆಗಿದ್ದೆ. ಇನ್ನು ಗಿಲ್ಲಿಯಿಂದ ನಾನು ಅನ್ನೋ ಮಾತು ಕೂಡ ಬಂತು. ಆದರೆ ನಾನು ಚೆನ್ನಾಗಿ ಆಡಿ ಬಂದೆ.
ಏನು ಸರಿ ಅನ್ಸತ್ತೆ ಅದನ್ನೇ ಮಾಡೋದು
ಗಿಲ್ಲಿಗೆ ಜನರ ಪ್ರೀತಿ ಸಿಕ್ಕಿದೆ. ಎಂಜಾಯ್ ಮಾಡಲಿ. ನಾನು ಅವನಿಗೆ ವಿಶ್ ಮಾಡಿದ್ದೇನೆ. ನಮ್ಮಿಬ್ಬರ ಫ್ರೆಂಡ್‌ಶಿಪ್ ಇಷ್ಟ ಪಟ್ಟಿದ್ದಾರೆ. ಯಾರದೇ ಅಭಿಪ್ರಾಯ ತಪ್ಪು ಅಂತಿಲ್ಲ. ಬ್ಲಾಕ್ ಮಾಡ್ತೀನಿ ಅಂದಿದ್ದೆ, ಅದೆಲ್ಲ ಕೆಲವರ ಯೋಚನೆಗೆ ಹೋಗತ್ತೆ. ನನಗೆ ಏನು ಸರಿ ಅನ್ಸತ್ತೆ ಅದನ್ನೇ ಮಾಡೋದು ಎಂದಿದ್ದಾರೆ.
ಮನೆ ಬರೋ ಗೆಸ್ಟ್‌ಗಳು ಕೂಡ ತುಂಬಾ ಚೆನ್ನಾಗಿ ಆಡ್ತಾ ಇದ್ದೀರಾ ಅಂದಾಗ ಖುಷಿ ಆಗೋದು. ಶೋ ಚೆನ್ನಾಗಿ ಹೋಗ್ತಾ ಇತ್ತು ಅನ್ನೋ ಕ್ಲೂ ಇತ್ತು ಎಂದರು. ಇನ್ನು ಮನೆಯಲ್ಲಿ ರಕ್ಷಿತಾ ಕೂಡ ಮೊದಲಿಗೆ ಕ್ಲೋಸ್ ಇದ್ದಳು. ಹೋಗ್ತಾ ಹೋಗ್ತಾ ಸರಿ ಆಗಲಿಲ್ಲ. ನಾನು ತುಂಬಾ ಸೆಲೆಕ್ಟಿವ್. ಅಷ್ಟಾಗಿ ಎಲ್ಲರ ಜೊತೆ ಬೆರೆಯಲ್ಲ ಎಂದಿದ್ದಾರೆ.
ಸ್ಪಂದನಾ ಧನುಷ್ ಮಾತು ತಪ್ಪು ಅಂತ ಹೇಳಲ್ಲ
ನನ್ನ ಹಾಗೂ ಗಿಲ್ಲಿ ಬಗ್ಗೆ ಸ್ಪಂದನಾ ಧನುಷ್ ಮಾತು ತಪ್ಪು ಅಂತ ಹೇಳಲ್ಲ. ಅವರ ಒಂದು ಯೋಚನೆಯಲ್ಲಿ ಸರಿ ಇರಬಹುದು. ಏನು ಮಾಡೋಕೆ ಆಗಲ್ಲ. ಅವರು ಗೆಲ್ಲೋದಕ್ಕೆ ಬಂದಿರೋದು. ಅವರು ಕೂಡ ಯೋಚನೆ ಮಾಡಬೇಕಾಗತ್ತೆ ಎಂದರು.
ರಕ್ಷಿತಾ ಬಿಗ್ ಬಾಸ್ ಮನೆಯಲ್ಲಿ ತುಂಬಾ ಮನರಂಜನೆ ಮಾಡಿದ್ದಾರೆ. ಹಾಗಿದ್ದರೆ ಬಿಗ್ ಬಾಸ್ನಲ್ಲಿ ಅಷ್ಟೇನಾ? ನಾನು ಅರ್ಥ ಮಾಡಿಕೊಂಡ ರೀತಿಯಲ್ಲಿ ಹೇಳಿದೆ. ಆದರೆ ಜನರ ಅಭಿಪ್ರಾಯವೇ ಬೇರೆ ಆಗಿರುತ್ತದೆ. ಆದರೆ ಜನರ ಅಭಿಪ್ರಾಯವೇ ಬೇರೆ ಇರುತ್ತದೆ. ಅದು ತಪ್ಪು ಅಂತಾ ಹೇಳೋಕೆ ಆಗಲ್ಲ ಎಂದಿದ್ದಾರೆ.