ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Bigg Boss Kannada 12: PR ಇಲ್ಲದೇ ಇಲ್ಲಿ ತನಕ ಬಂದೆ! ಗಿಲ್ಲಿ ಬಗ್ಗೆ ಧ್ರುವಂತ್‌ ಹೇಳಿದ್ದೇನು?

Dhruvanth: ಬಿಗ್‌ ಬಾಸ್‌ ಸೀಸನ್‌ 12ರಲ್ಲಿ ಗಿಲ್ಲಿ ನಟ ವಿನ್ನರ್‌ ಆಗಿದ್ದಾರೆ. ಇದೀಗ ಮನೆಯ ಎಲ್ಲ ಸ್ಪರ್ಧಿಗಳು ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಧ್ರುವಂತ್ ಅವರು ಸಾಕಷ್ಟು ಚರ್ಚೆ ಆಗಿದ್ದರು. ಅವರಿಗೆ ಸೀಸನ್ ಚಪ್ಪಾಳೆಯನ್ನು ಸುದೀಪ್ ನೀಡಿದರು. ನಂತರ ಇದಕ್ಕೆ ಟೀಕೆ ಸಿಕ್ಕಿದ್ದರಿಂದ ವಾರದ ಚಪ್ಪಾಳೆ ಎಂದು ಕಲರ್ಸ್ ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಬದಲಾಯಿಸಿತ್ತು. ಇದೀಗ ವಿಶ್ವವಾಣಿ ಜೊತೆ ಮಾತನಾಡಿದ್ದಾರೆ ಧ್ರುವಂತ್‌.

PR ಇಲ್ಲದೇ ಇಲ್ಲಿ ತನಕ ಬಂದೆ! ಗಿಲ್ಲಿ ಬಗ್ಗೆ ಧ್ರುವಂತ್‌ ಹೇಳಿದ್ದೇನು?

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Jan 21, 2026 9:54 AM

ಬಿಗ್‌ ಬಾಸ್‌ ಸೀಸನ್‌ 12ರಲ್ಲಿ (Bigg Boss Kannada 12) ಗಿಲ್ಲಿ ನಟ ವಿನ್ನರ್‌ (Gilli Nata) ಆಗಿದ್ದಾರೆ. ಇದೀಗ ಮನೆಯ ಎಲ್ಲ ಸ್ಪರ್ಧಿಗಳು ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಧ್ರುವಂತ್ (Dhruvanth) ಅವರು ಸಾಕಷ್ಟು ಚರ್ಚೆ ಆಗಿದ್ದರು. ಅವರಿಗೆ ಸೀಸನ್ ಚಪ್ಪಾಳೆಯನ್ನು ಸುದೀಪ್ ನೀಡಿದರು. ನಂತರ ಇದಕ್ಕೆ ಟೀಕೆ ಸಿಕ್ಕಿದ್ದರಿಂದ ವಾರದ ಚಪ್ಪಾಳೆ ಎಂದು ಕಲರ್ಸ್ ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಬದಲಾಯಿಸಿತ್ತು. ಇದೀಗ ವಿಶ್ವವಾಣಿ ಜೊತೆ ಮಾತನಾಡಿದ್ದಾರೆ ಧ್ರುವಂತ್‌.

ನಮಗೆ ಗುರುವಾಗಿ ನಿಂತಿದ್ದು ಕಿಚ್ಚ

ಧ್ರುವಂತ್‌ ಮಾತನಾಡಿ, ನಮಗೆ ಗುರುವಾಗಿ ನಿಂತಿದ್ದು ಕಿಚ್ಚ ಸುದೀಪ್‌. ಅವರು ಹೇಳಿದ್ದು ಕೇಳಿ ನಾವು ಕಲಿತು ಆಟ ಆಡಿದೆವು. ನಾನು ಯಾರು , ನಮ್ಮ ವ್ಯಕ್ತಿತ್ವ ಏನು ತೋರಿಸಿದ ವ್ಯಕ್ತಿ. ಯಾವುದೇ ಫೇವರಿಸಮ್‌ ಇಲ್ಲದೇ ನಿರ್ಧಾರವನ್ನು ತೆಗೆದುಕೊಳ್ಳಲು ಸಹಾಯ ಮಾಡಿದ ವ್ಯಕ್ತಿ. ಗೇಮ್‌ ಹೇಗೆ ವರ್ಕ್‌ ಆಗತ್ತೆ ಅಂತ ಗೊತ್ತಿರಲಿಲ್ಲ, ನಾನು ಏನು ಕೊಟ್ಟಿದ್ದೀನಿ ಅದು ಕೊಟ್ಟಿದ್ದೇನೆ. ನನಗೆ ಏನು ಸಿಗಬೇಕು ಅದು ಸಿಕ್ಕಿದೆʼ ಎಂದಿದ್ದಾರೆ.

ಇದನ್ನೂ ಓದಿ: Bigg Boss Kannada 12: ನಿಮ್ಮನ್ನು ಕಳಿಸಿಯೇ ನಾನು ಹೊರಕ್ಕೆ ಹೋಗೋದು! ಅಶ್ವಿನಿ ವಿರುದ್ಧದ ಚಾಲೆಂಜ್​​ನಲ್ಲಿ ರಕ್ಷಿತಾಗೆ ಗೆಲುವು

ಜನರಿಗೆ ಬಿಟ್ಟಿದ್ದು

ʻನನಗೆ ಕಪ್‌ ಗೆಲ್ಲುವ ಆಸೆ ಇತ್ತು. ಆದದರೆ ಅದು ಜನರಿಗೆ ಬಿಟ್ಟಿದ್ದು. ನಾನು ಮಿಡ್‌ ವೀಕ್‌ ತನಕ ಬಂದಿದ್ದೆ. ಎಲ್ಲೋ ಮನರಂಜನೆ ಅಂತ ಬಂದರೆ, ಅಲ್ಲಿ ಮುಂದೆ ಹೋಗಿದವರು ಹೋಗಿದ್ದಾರೆ. ಆ ಶೋ 12 ವರ್ಷದಲ್ಲಿ ನಿಲ್ಲಿಸಿದ್ದು ಕಿಚ್ಚ ಅವರು. ಕಿಚ್ಚ ಅವರು ಇಡೀ ಜರ್ನಿಯನ್ನು ನೋಡುತ್ತಾರೆ. ಜನಗಳು ಇದೆಲ್ಲ ನೋಡಲು ಆಗಲ್ಲ.

ಅಲ್ಲಿ ಟಾಸ್ಕ್‌ ಓದೋದು, ನಿರ್ಧಾರ, ಮನರಂಜನೆ ಅದೆಲ್ಲ ನೋಡುವಾಗ, ಅದೆಲ್ಲ ನೋಡ್ತಾರೆ ಕಿಚ್ಚ ಅವರು. ಅವರ ಕೈಯಿಂದ ಬಂದಿದೆ ಅಂತ ಆದರೆ ಅವರು ತುಂಬಾ ಆಂಗಲ್‌ನಿಂದ ಜಡ್ಜ್‌ ಮಾಡಿದ್ದಾರೆ. ಜನಗಳು ನೋಡೋ ಆಂಗಲ್‌ ಬೇರೆ. ಇನ್ನೊಂದು PR ಮಾಫಿಯಾ ಕೂಡ ಆಗ್ತಿದೆʼ ಎಂದಿದ್ದಾರೆ.

ಬೇರೆ ಅವರಿಗೆ ಉರಿಯಬೇಕು

ಇನ್ನೊಬ್ಬರನ್ನು ನೆಗೆಟಿವ್‌ ಆಗಿ ತೋರಿಸ್ತಾ ಇದ್ದಾರೆ. ನಾವು ಬೆಳೆದ ರೀತಿ ಬೇರೆ ಇದೆ. ನಾವು ಮಾಡಿರೋ ಕೆಲಸಕ್ಕೆ ಪ್ರಶಂಸೆ ಬಂದಾಗ ಬೇರೆ ಅವರಿಗೆ ಉರಿಯಬೇಕು. ಅದು ಕೆಲವರಿಗೆ ಉರಿದಿದೆ. ಧ್ರುವಂತ್‌ ಆಟ ಹೇಗೆ ಆಡಿದ ಅನ್ನೋದು ಜನ ನೋಡಿದ್ದಾರೆ.



ಗಿಲ್ಲಿ ಅವರು ಗೆದ್ದಿದ್ದು ಖುಷಿ ಇದೆ

ಶೋ ಅಂತ ವಿಚಾರಕ್ಕೆ ಬಂದರೆ ಮನರಂಜನೆ ನೀಡಿದ್ದಾರೆ ಗಿಲ್ಲಿ ನಟ. ನಾನು ಯೋಚನೆ ಮಾಡೋದು ಇಷ್ಟೆ. ನಾನು ಏನು ಗೆಲ್ಲಬೇಕು ಅದು ಗೆದ್ದಾಗಿದೆ. ಗಿಲ್ಲಿ ಬಗ್ಗೆ ನನಗೆ ಬಹಳ ಸಂತೋಷ ಇದೆ. ಬ್ರ್ಯಾಂಡ್‌ ಏನು ಮಾಡಿದ್ದಾರೆ ಜನ, ಅದು ನನಗೆ ಸಿಕ್ಕಿದೆ. ಗಿಲ್ಲಿ ಅವರು ಗೆದ್ದಿದ್ದು ಖುಷಿ ಇದೆ. ನಮ್ಮ ಜಾನರ್‌ ಬೇರೆ. ನಮ್ಮ ಹೋರಾಟ ಬೇರೆ ಇದೆ. ಬಿಗ್‌ ಬಾಸ್‌ ಶೋ ನೋಡಿದರೆ, ಜನ ಟಿವಿ ನೋಡಿದರೆ, ಒಬ್ಬರು ಖುಷಿ ಪಡಿಸ್ತಾರೆ ಅಂದರೆ ಅದು ಗಿಲ್ಲಿ ಇಂದ ಆಗಿದೆ.

ಇದನ್ನೂ ಓದಿ: Bigg Boss Kannada 12: Bigg Boss 12 Finale: ಕುಚಿಕು ದೋಸ್ತಿಗಳೇ ವಿನ್ನರ್‌, ರನ್ನರ್‌! ಗೆದ್ದ ಗಿಲ್ಲಿ ಪಕ್ಕಾ ನಿಂತ ಪಟಾಕಿ ರಕ್ಷಿತಾ

ಇನ್ನು ರಕ್ಷಿತಾ ಬಗ್ಗೆ ಹೇಳೋದಾದರೆ, ಮನರಂಜನೆ ಅಂತ ಬಂದರೆ ಅವರು ಸೇಮ್‌. ಅವರು ಕೂಡ ಕೊಡುಗೆ ಕೊಟ್ಟಿದ್ದಾರೆ. ಗಿಲ್ಲಿ ಅವರು ಸ್ಟಡಿ ಮಾಡಿಕೊಂಡು ಬಂದಿದ್ದಾರೆ ಎಂದರು.