ದರ್ಶನ್ ಪತ್ನಿ (Darshan) ವಿಜಯಲಕ್ಷ್ಮಿ ಹಾಗೂ ನಟ ಕಿಚ್ಚ ಸುದೀಪ್ (kichcha sudeep) ಅವರ ಇತ್ತೀಚಿನ ಹೇಳಿಕೆಗಳಿಂದ ಸ್ಯಾಂಡಲ್‌ವುಡ್‌ನಲ್ಲಿ ಫ್ಯಾನ್ ವಾರ್ ಅಗಿತ್ತು. ಅಷ್ಟೇ ಅಲ್ಲ ಸುದೀಪ್ ಅವರು ಯುದ್ಧಕ್ಕೆ ಸಿದ್ದ ಅನ್ನೋ ಮಾತು ಸಾಕಷ್ಟು ಚರ್ಚೆಗೆ ಗುರಿಯಾಗಿತ್ತು. ಇದಾದ ಬಳಿಕ ವಿಜಯಲಕ್ಷ್ಮೀ ಅವರಿಗೆ ಸಾಕಷ್ಟು ಅಶ್ಲೀಲ ಕಮೆಂಟ್‌ಗಳು ಬಂದವು. ಪೊಲೀಸರಿಗೆ ದೂರು ಸಹ ನೀಡಿದ್ದರು. ದರ್ಶನ್ ಪತ್ನಿ, ಕ್ಲಾಸ್ ಫ್ಯಾನ್ಸ್‌ಗೆ ಇದು ಎಚ್ಚರಿಕೆಯ ಸಂದೇಶ ಎಂದು ಪೋಸ್ಟ್ (Post) ಹಂಚಿಕೊಂಡಿದ್ದರು. ಈ ಬಗ್ಗೆ ಸುದೀಪ್ (Sudeep Reaction) ಈಗ ಪ್ರತಿಕ್ರಿಯೆ ನೀಡಿದ್ದಾರೆ.
ನೀವು ಕಪಾಳಕ್ಕೆ ಹೊಡೆದರೆ ನಾವು ಹೊಡೆಸಿಕೊಳ್ಳುವವರಲ್ಲ. ಪ್ರೀತಿಯಿಂದ ತಾಯಿ ಹೊಡೆಯುವ ಏಟುಗಳು ಬೇರೆ, ಪಕ್ಕದ ಮನೆಯವರು ಹೊಡೆಯುವ ಏಟುಗಳು ಬೇರೆಯೇ ಆಗುತ್ತೆ ಎಂದು ತಿರುಗೇಟು ನೀಡಿದ್ದಾರೆ.
ಕಪಾಳಕ್ಕೆ ಹೊಡೆಸಿಕೊಳ್ಳುವಷ್ಟು ನಾನು ಒಳ್ಳೆಯವನಲ್ಲ
ದರ್ಶನ್ ಪತ್ನಿ ಪೋಸ್ಟ್ ವಿಚಾರವಾಗಿ ಸುದೀಪ್ ಅವರು ಟಾಂಗ್ ಕೊಟ್ಟಿದ್ದಾರೆ. ಹೊಡೆದ್ರೆ ಕಪಾಳಕ್ಕೆ ಹೊಡೆಸಿಕೊಳ್ಳುವಷ್ಟು ನಾನು ಒಳ್ಳೆಯವನಲ್ಲ. ಪ್ರೀತಿಯಿಂದ ತಾಯಿ ಹೊಡೆಯೋದು ಬೇರೆ. ಪಕ್ಕದ ಮನೆಯವರು ಹೊಡೆಯೋದು ಬೇರೆ ಆಗತ್ತೆ. ಇರುತ್ತೆ ನಮ್ಮ ಮೇಲಿನ ಒಲವು. ಬಿಗ್ ಬಾಸ್ ನಡಯುವ ಒಂದು ಮಾತು ಹೇಳ್ತಾ ಇರ್ತೀನಿ.
ಇದನ್ನೂ ಓದಿ: Mark Review: ಮ್ಯಾಕ್ಸಿಮಮ್ ಮಾಸ್‌ನೊಂದಿಗೆ ʻಮಾರ್ಕ್ʼ ಮಾರಾಮಾರಿ; ಸುದೀಪ್ ಅಭಿಮಾನಿಗಳಿಗೆ ಇದು ಹಬ್ಬ ಕಣ್ರೀ!
ಬುಡಕ್ಕೆ ಹೋಗಿ ಎಲ್ಲಿಂದ ಪ್ರಾರಂಭವಾಯ್ತು ಅಂತ. ನಾನು ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕೆ ಅಲ್ಲ. ಮೇಕಪ್ ಹಾಕಿ ಜನರನ್ನು ನಗಿಸೋಕೆ ಬಂದಿದ್ದು. ನಾವು ಜೀವನದಲ್ಲಿ ಏನೋ ಮಾಡಿದ್ದೀವಿ ಅಂತ ಬಂದಿದ್ದೀವಿ. ನಾವು ಯುದ್ಧ ಅದೆಲ್ಲ ಮಾಡಿಕೊಂಡು ಕೂರೋಕೆ ಬಂದವರಲ್ಲ. ನಮ್ಮ ಕಡೆಯಿಂದ ಯಾವುದಾದರೂ ತಪ್ಪಾದಾಗ ಓಪನ್ ಆಗಿ ಮುಂದೆ ಬಂದು ಹೇಳಿದ್ದೀವಿ, ಅಂತದ್ದನ್ನ ಮಾಡಬೇಡಿ ಅಂತ ಬುದ್ಧಿವಾದವೂ ಹೇಳಿದ್ದೀವಿ' ಎಂದಿದ್ದಾರೆ.
ಸರಿಯಾಗಿರುವುದರ ಕಡೆ ಸದಾ ನಿಲ್ಲುತ್ತೇನೆ
ನಾನು ಯಾವಾಗಲೂ ಜೀವನವನ್ನು ಪಾಸಿಟಿವ್ ಆಗಿ ತೆಗದುಕೊಳ್ಳೋದು. ಉತ್ತರ ಕೊಡೋ ಕಡೆ ಕೊಡೋಣ. ನಾನು ಸರಿಯಾಗಿರುವುದರ ಕಡೆ ಸದಾ ನಿಲ್ಲುತ್ತೇನೆ. ಈಗ ಇದು ಮಾತ್ರ ಕೇಳಿಸುತ್ತೆ, ಪ್ರತಿ ಸಲ ಎಲ್ಲ ಅಭಿಮಾನಿಗಳನ್ನ ಎಷ್ಟೋ ಕೇಳಿಕೊಂಡಿದ್ದು ಗೊತ್ತಿಲ್ವಾ? ಎಷ್ಟೋ ಸಲ ಹೇಳಿದ್ದೀವಿ, ನಮಗೆ ಈ ಯುದ್ಧ ಎಲ್ಲ ಬರೋದಿಲ್ಲ, ನಾವು ಯಾವತ್ತೂ ಅದನ್ನ ಮಾಡಿಕೊಂಡು ಕೂತವರಲ್ಲ.
ನಮ್ಮ ಕಡೆಯಿಂದ ಯಾವುದಾದರೂ ತಪ್ಪಾದಾಗ ಓಪನ್ ಆಗಿ ಮುಂದೆ ಬಂದು ಹೇಳಿದ್ದೀವಿ, ಅಂತದ್ದನ್ನ ಮಾಡಬೇಡಿ ಅಂತ ಬುದ್ಧಿವಾದವೂ ಹೇಳಿದ್ದೀವಿ' ಎಂದಿದ್ದಾರೆ.
ಕಿಚ್ಚ ಸುದೀಪ್ ಅಭಿನಯದ ಮಾರ್ಕ್ ಸಿನಿಮಾ ಇದೇ ಡಿ.25 ರಂದು ರಾಜ್ಯಾದ್ಯಂತ ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ತಮಿಳಿನ ಸತ್ಯಜ್ಯೋತಿ ಫಿಲ್ಮ್ಸ್ ಮತ್ತು ಕಿಚ್ಚ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಾಣ ಮಾಡಿರುವ ಈ ಸಿನಿಮಾವನ್ನು ವಿಜಯ್ ಕಾರ್ತಿಕೇಯ ಅವರು ನಿರ್ದೇಶನ ಮಾಡಿದ್ದಾರೆ.
ಇದನ್ನೂ ಓದಿ: Kichcha Sudeep: ಸುದೀಪ್, ದರ್ಶನ್ ಒಂದಾಗದಂತೆ ಕಾಣದ ಕೈಗಳಿಂದ ಪಿತೂರಿ? ಕಿಚ್ಚನ ನೇರ ಮಾತು
ಹಾಡುಗಳಿಗೆ ಅಜನೀಶ್ ಲೋಕನಾಥ್ ಅವರು ಸಂಗೀತ ಸಂಯೋಜಿಸಿದ್ದು, ನವೀನ್ ಚಂದ್ರ, ಯೋಗಿ ಬಾಬು, ಗುರು ಸೋಮಸುಂದರಂ, ದೀಪ್ಶಿಕಾ, ರೋಶಿಣಿ ಪ್ರಕಾಶ್, ಅರ್ಚನಾ ಕೊಟ್ಟಿಗೆ, ಅಶ್ವಿನ್ ಹಾಸನ್ ಮುಂತಾದವರು ನಟಿಸಿದ್ದಾರೆ.