ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kichcha Sudeep: ಸುದೀಪ್‌, ದರ್ಶನ್‌ ಒಂದಾಗದಂತೆ ಕಾಣದ ಕೈಗಳಿಂದ ಪಿತೂರಿ? ಕಿಚ್ಚನ ನೇರ ಮಾತು

Darshan Sudeep: ಕಿಚ್ಚ ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾ ಡಿಸೆಂಬರ್ 25ಕ್ಕೆ ಬಿಡುಗಡೆ ಆಗಲಿದೆ. ಪ್ರಚಾರ ಕಾರ್ಯ ಶುರುವಾಗಿದೆ. ಈ ಸಿನಿಮಾದ ಬಿಡುಗಡೆಗೂ ಮುನ್ನ ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಫ್ಯಾನ್ಸ್ ಮತ್ತು ಸುದೀಪ್ ಫ್ಯಾನ್ಸ್ ನಡುವೆ ಕಿತ್ತಾಟ ಶುರುವಾಗಿದೆ ಇದೀಗ ಮತ್ತೆ ಸುದೀಪ್‌ ಅವರ ಮುಂದೆ ದರ್ಶನ್‌ ವಿಚಾರವಾಗಿ ಪ್ರಶ್ನೆ ಬಂದಿದೆ.

ಸುದೀಪ್‌, ದರ್ಶನ್‌ ಒಂದಾಗದಂತೆ ಕಾಣದ ಕೈಗಳಿಂದ ಪಿತೂರಿ?

ಕಿಚ್ಚ ಸುದೀಪ್‌ -

Yashaswi Devadiga
Yashaswi Devadiga Dec 23, 2025 9:16 PM

ಕಿಚ್ಚ ಸುದೀಪ್ (kichcha sudeep) ನಟನೆಯ ‘ಮಾರ್ಕ್’ (Mark Movie) ಸಿನಿಮಾ ಡಿಸೆಂಬರ್ 25ಕ್ಕೆ ಬಿಡುಗಡೆ ಆಗಲಿದೆ. ಪ್ರಚಾರ ಕಾರ್ಯ ಶುರುವಾಗಿದೆ. ಈ ಸಿನಿಮಾದ ಬಿಡುಗಡೆಗೂ ಮುನ್ನ ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಫ್ಯಾನ್ಸ್ ಮತ್ತು ಸುದೀಪ್ (Darshan Sudeep) ಫ್ಯಾನ್ಸ್ ನಡುವೆ ಕಿತ್ತಾಟ ಶುರುವಾಗಿದೆ ಇದೀಗ ಮತ್ತೆ ಸುದೀಪ್‌ ಅವರ ಮುಂದೆ ದರ್ಶನ್‌ ವಿಚಾರವಾಗಿ ಪ್ರಶ್ನೆ ಬಂದಿದೆ. ಸುದೀಪ್‌, ದರ್ಶನ್‌ ಒಂದಾಗಂತೆ ಕಾಣದ ಕೈಗಳಿಂದ ಪಿತೂರಿ ನಡೆಯುತ್ತಿದ್ದೆಯಾ? ಎಂಬ ಚರ್ಚೆಗಳು ಸೋಷಿಯಲ್‌ ಮೀಡಿಯಾದಲ್ಲಿ (Social Media) ನಡೆಯುತ್ತಿದೆ. ಕಿಚ್ಚ ಸುದೀಪ್‌ ಹೇಳಿದ್ದೇನು?

ಕೆಲವು ಆಗು ಹೋಗುಗಳ ಬಗ್ಗೆ ನನಗೆ ನೋವಿದೆ!

ಕಿಚ್ಚ ಮಾತನಾಡಿ, ನಾನು ಏನು ರಿಯಾಕ್ಷನ್‌ ಕೊಡಬೇಕಿತ್ತು ಕೊಟ್ಟೆ. ಯಾರಾದರೂ ರಿಯಾಕ್ಷನ್‌ ಮಾಡಿದ್ರೆ ಅವರನ್ನ ನೀವು ಹೋಗಿ ಕೇಳಬೇಕು. ನನ್ನ ಉತ್ತರ ನಾನು ಕೊಟ್ಟಿದ್ದೇನೆ. ವೇದಿಕೆ ಮೇಲೆ ಏನೇನೂ ಮಾತನಾಡೋಕೆ ನಾನು ದಡ್ಡ ಅಲ್ಲ. ದರ್ಶನ್‌ ಅವರ ಮೇಲೆ ನನಗೆ ಗೌರವ ಇದೆ. ಕೆಲವು ಆಗು ಹೋಗುಗಳ ಬಗ್ಗೆ ನನಗೆ ನೋವಿದೆ. ಅವರ ಅಭಿಮಾನಿಗಳ ನೋವು ನನಗೆ ಅರ್ಥ ಆಗತ್ತೆ.

ಇದನ್ನೂ ಓದಿ: Mark Trailer : ಕಿಚ್ಚ ಸುದೀಪ್‌ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌! ಬರ್ತಿದೆ ‘ಮಾರ್ಕ್‌’ ಟ್ರೈಲರ್, ಯಾವಾಗ?

ಫ್ಯಾನ್ಸ್‌ ಕೆದಕಲು ಹೋಗಬೇಡಿ ಎಂದು ನಾನು ಸಾಕಷ್ಟು ಬಾರಿ ಹೇಳಿದ್ದೆ. ಆ ಅಭಿಮಾನಿಗಳು ಕೇಳಿಸಿಕೊಂಡು ಹೊಗಳಿದ್ದೂ ಉಂಟು. ಆದರೆ ಇನ್ನೊಂದು ಗುಂಪಿಗೆ ಅದು ಇಷ್ಟ ಆಗದೇ ಇರಬಹುದು. ನಾವು ಒಂದಾಗೋದು ಕೆಲವರಿಗೆ ಇಷ್ಟ ಆಗದೇ ಇರಬಹುದು ಅದು ಗೊತ್ತಿಲ್ಲ ನಂಗೆ. ನಾವು ಕಿತ್ತಾಡೇ ಇಲ್ಲ. ನಿಮಗೆ ಕ್ಲಾರಿಟಿ ಕೊಡ್ತೀನಿ ಅಂತಲ್ಲ. ನಾನು ಮುಂಚೆ ಹೇಳಿದ್ದೆ. ಕೆಲವರಿಗೆ ನಾನು ಕೊಡೋ ಉತ್ತರ ಅಲ್ಲ ಅನ್ನಿಸಿದೆ. ಇಲ್ಲಿ ಈಗ ಚಿಕ್ಕದಾಗೇ ಬಿಗ್‌ ಬಾಸ್‌ ನಡೆಯುತ್ತಾ ಇದೆ ಎಂದರು.



ಇನ್ನು ಪೈರೆಸಿ ಬಗ್ಗೆ ಮಾತನಾಡಿ, , ಪೈರಸಿ ಬಗ್ಗೆ ನಾನು ಮಾತನಾಡುವ ಅಧಿಕಾರ ಇಲ್ವಾ? ನನ್ನ ಸಿನಿಮಾ ನಾನು ಕಾಪಾಡಿಕೊಳ್ಳಬಾರದಾ? ನನ್ನ ವೇದಿಕೆ ಮೇಲೆ ನಿಂತು ನಾನು ವಾರ್ನ್‌ ಮಾಡೋದು ತಪ್ಪಾ? ಯಾರಿಗೆ ರೀಚ್‌ ಅಗಬೇಕು ಅವರಿಗೆ ಆಗತ್ತೆ. ನಾನು ಯಾರಿಗೆ ಹೇಳಬೇಕು ಅವರಿಗೆ ಹೇಳಿದೆ. ಯಾವ ಆರ್ಟಿಸ್ಟ್‌ ಸಂಬಂಧಪಟ್ಟ ಅವರಿಗೆ ಹೇಳಿಲ್ಲ. ಎಲ್ಲ ಕಲಾವಿದರ ಬಗ್ಗೆ ನಾನು ಮಾತನಾಡಲ್ಲ. ಎಷ್ಟು ಸಂದರ್ಶನ ನೋಡಿಲ್ಲ ನೀವು? ನಾನು ಆ ಥರ ಏನು ಮಾತನಾಡಲ್ಲ ಎಂದರು.

ಬೇರೆಯವರ ಸಿನಿಮಾದಲ್ಲಿ ತಲೆ ಹಾಕುವ ಉದ್ದೇಶ ನನಗೆ ಇಲ್ಲ. ಇಂಥವರಿಗೆ ಹೇಳಿದ್ದು ಅಂತ ನಾನು ಹೇಳಿಲ್ಲ. ಅಷ್ಟು ಜನ ಕಲಾವಿದರು ಇದ್ದಾರೆ. ಎಲ್ಲರಿಗೂ ಸುದೀಪ್ ಗೊತ್ತು. ಅವರು ಯಾರೂ ಕೂಡ ಪ್ರತಿಕ್ರಿಯಿಸಿಲ್ಲ. ಸಿನಿಮಾ ಬಿಟ್ಟು ಬೇರೆ ವಿಚಾರಗಳ ಬಗ್ಗೆ ನಾನು ಕೇರ್ ಮಾಡಲ್ಲ ಎಂದರು.

ಇದನ್ನೂ ಓದಿ: Bigg Boss Kannada 12: ಬಿಗ್‌ ಬಾಸ್‌ ಫಿನಾಲೆ ಯಾವಾಗ? ಕಿಚ್ಚ ಸುದೀಪ್‌ ಏನಂದ್ರು?

ಮಾರ್ಕ್‌ ಸಿನಿಮಾ

ಮಾರ್ಕ್’ ಸಿನಿಮಾ ಡಿಸೆಂಬರ್ 25ಕ್ಕೆ (ಗುರುವಾರ) ಬಿಡುಗಡೆ ಆಗಲಿದೆ. ಸತ್ಯಜ್ಯೋತಿ ಫಿಲ್ಮ್ಸ್‌ 39 ವರ್ಷಗಳ ನಂತರ ಕನ್ನಡದಲ್ಲಿ ಮಾರ್ಕ್‌ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಸುದೀಪ್‌ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಮ್ಯಾಕ್ಸ್‌ ಡೈರೆಕ್ಟರ್‌ ವಿಜಯ್‌ ಕಾರ್ತಿಕೇಯ ಅವರು ನಿರ್ದೇಶನ ಮಾಡಿದ್ದಾರೆ. ನವೀನ್‌ ಚಂದ್ರ, ಯೋಗಿ ಬಾಬು, ನಿಶ್ವಿಕಾ ನಾಯ್ಡು, ರೋಶಿಣಿ ಪ್ರಕಾಶ್‌, ಅಶ್ವಿನ್ ಹಾಸನ್‌, ಮಹಾಂತೇಶ್‌ ಹಿರೇಮಠ್‌ ಮುಂತಾದವರು ನಟಿಸಿದ್ದಾರೆ.