ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mark Trailer: '‌ಧಮ್‌ ಹೊಡೆಯೋದು ಕಮ್ಮಿ ಮಾಡಬೇಕಲೇ...'; ಬೆಂಕಿ ಕಿಡಿಯಂತೆ ಬಂತು ಕಿಚ್ಚ ಸುದೀಪ್‌ ನಟನೆಯ ʻಮಾರ್ಕ್‌ʼ ಟ್ರೇಲರ್‌!

Kichcha Sudeepa's Mark Trailer: ಸುದೀಪ್‌ ಅಭಿನಯದ ʻಮಾರ್ಕ್‌ʼ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಇದರಲ್ಲಿ ಕಿಚ್ಚ ಸುದೀಪ್‌ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಮಕ್ಕಳ ಅಪಹರಣದ ಸುತ್ತ ಕಥೆ ಸಾಗುವ ಸುಳಿವು ಟ್ರೇಲರ್‌ನಲ್ಲಿದೆ. ಆಕ್ಷನ್ ಸೀನ್‌ಗಳು ಮತ್ತು ಸುದೀಪ್‌ರ '‌ಧಮ್‌ ಹೊಡೆಯೋದು ಕಮ್ಮಿ ಮಾಡಬೇಕಲೇ...' ಡೈಲಾಗ್‌ ಕಿಕ್ ಕೊಟ್ಟಿದೆ.

ಕಿಚ್ಚ ಸುದೀಪ್‌ ಅಭಿನಯದ ʻಮಾರ್ಕ್ʼ‌ ಸಿನಿಮಾದ ಟ್ರೇಲರ್‌ ರಿಲೀಸ್‌ ಆಗಿದೆ. 2.25 ನಿಮಿಷಗಳ ಈ ಟ್ರೇಲರ್‌ ಸಖತ್‌ ಮಾಸ್‌ ಆಗಿ ಮೂಡಿಬಂದಿದೆ. ಇಲ್ಲಿ ಸುದೀಪ್‌ ಅವರು ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದು, ಮ್ಯಾಕ್ಸಿಮಮ್‌ ಮಾಸ್‌ ಆಗಿ ಮಿಂಚಿದ್ದಾರೆ. ಟ್ರೇಲರ್‌ ನೋಡಿದ ಮೇಲೆ ಅಭಿಮಾನಿಗಳ ನಿರೀಕ್ಷೆ ಡಬಲ್‌ ಆಗಿರೋಂದು ಸುಳ್ಳಲ್ಲ.

ಹೇಗಿದೆ ಟ್ರೇಲರ್?‌

ಮಾರ್ಕ್‌ ಸಿನಿಮಾದಲ್ಲಿ ಸುದೀಪ್‌ ಅವರು ಸಸ್ಪೆಂಡ್‌ ಆಗಿರುವ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿರುವಂತಿದೆ. "ಮತ್ತಲ್ಲಿದ್ರು ಸಸ್ಪೆನ್ಷನ್‌ನಲ್ಲಿದ್ರೂ ಡ್ಯೂಟಿಯಲ್ಲೇ ಇರ್ತಾರೆ" ಎಂಬ ಡೈಲಾಗ್‌ ಟ್ರೇಲರ್‌ನಲ್ಲಿ ಇದೆ. ಹಾಗಾಗಿ, ಸುದೀಪ್‌ ಇಲ್ಲಿ ಸಸ್ಪೆಂಡ್‌ ಆಗಿರುವ ಪೊಲೀಸ್‌ ಅಧಿಕಾರಿಯಾಗಿ ನಟಿಸಿರಬಹುದಾ ಎಂಬ ಅನುಮಾನ ಮೂಡುತ್ತದೆ. ಯೋಗಿ ಬಾಬು, ನವೀನ್‌ ಚಂದ್ರ, ಶೈನ್‌ ಟಾಮ್‌ ಚಾಕೋ, ರೋಶಿಣಿ ಪ್ರಕಾಶ್‌ ಹೀಗೆ ಅನೇಕ ಕಲಾವಿದರು ನಟಿಸಿದ್ದಾರೆ.

Mark Trailer : ಕಿಚ್ಚ ಸುದೀಪ್‌ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌! ಬರ್ತಿದೆ ‘ಮಾರ್ಕ್‌’ ಟ್ರೈಲರ್, ಯಾವಾಗ?

ಮಸ್ತ್‌ ಆಕ್ಷನ್‌ ಸೀನ್‌ಗಳು ಟ್ರೇಲರ್‌ನಲ್ಲಿ ಹೈಲೈಟ್‌ ಆಗಿವೆ. ಟ್ರೇಲರ್‌ ಎಂಡ್‌ನಲ್ಲಿ ಕಿಚ್ಚ ಸುದೀಪ್‌ ಅವರು ಹೇಳಿರುವ '‌ಧಮ್‌ ಹೊಡೆಯೋದು ಕಮ್ಮಿ ಮಾಡಬೇಕಲೇ...' ಎಂಬ ಡೈಲಾಗ್‌ ಕಿಕ್‌ ನೀಡುವಂತಿದೆ. ಮಕ್ಕಳನ್ನು ಕಿಡ್ಯಾಪ್ನ್‌ ಮಾಡುವ ಗ್ಯಾಂಗ್‌ ಸುತ್ತ ಈ ಸಿನಿಮಾದ ಕಥೆ ಸಾಗುತ್ತದೆ. ಬಹುತೇಕ ಕತ್ತಲಿನ ಸೀನ್‌ಗಳು ಇರುವುದರಿಂದ ಇದು ಕೂಡ ಮ್ಯಾಕ್ಸ್‌ ನಂತೆಯೇ ಒಂದು ರಾತ್ರಿಯಲ್ಲಿ ನಡೆಯುವ ಕಥೆಯನ್ನು ಹೊಂದಿದೆಯಾ? ಅದಕ್ಕೆ ಉತ್ತರ ಡಿಸೆಂಬರ್‌ 25ರಂದು ಗೊತ್ತಾಗಲಿದೆ.

ಸುದೀಪ್‌ ಹೇಳಿದ್ದೇನು?

ಮಾರ್ಕ್ ಟ್ರೇಲರ್‌‌ ಲಿಂಕ್‌ ಅನ್ನು ಶೇರ್‌ ಮಾಡಿಕೊಂಡಿರುವ ಕಿಚ್ಚ ಸುದೀಪ್‌ ಅವರು, "ಮಾರ್ಕ್ ಇಲ್ಲಿದೆ.. ಹಲೋ ನನ್ನ ಬಾದ್‌ಶಾಗಳೇ..? ಹೇಗಿದೆ ಜೋಶ್? ಚಿತ್ರಮಂದಿರಗಳಿಂದ ಜಗತ್ತಿನವರೆಗೆ, ಈ ಟ್ರೇಲರ್‌ಗಾಗಿ ಮೊದಲು ಎತ್ತಿದ ಕೈಗಳು ನಿಮ್ಮದೇ. ತುಂಬಾ ಪ್ರೀತಿ ಮತ್ತು ಶಕ್ತಿಯಿಂದ ಬಿಡುಗಡೆ ಮಾಡಿದ್ದಕ್ಕಾಗಿ ಧನ್ಯವಾದಗಳು. ಪ್ರತಿ ಹರ್ಷೋದ್ಗಾರ, ಪ್ರತಿ ಸಂದೇಶ.. ನಾನು ಅದನ್ನು ಅನುಭವಿಸಿದ್ದೇನೆ. ನಿಮಗೆ ಎಂದೆಂದಿಗೂ ಕೃತಜ್ಞನಾಗಿದ್ದೇನೆ" ಎಂದು ಅಭಿಮಾನಿಗಳಿಗೆ ಧನ್ಯವಾದಗಳನ್ನು ಸುದೀಪ್‌ ತಿಳಿಸಿದ್ದಾರೆ.

Mark Teaser: 'ಮಾರ್ಕ್‌'ಗೆ ಉಘೇ ಉಘೇ ಅಂದ್ರು ಫ್ಯಾನ್ಸ್‌! ಟೀಸರ್‌ನಲ್ಲಿ ಕಿಚ್ಚನ ರೌದ್ರಾವತಾರ

ವೇಗವಾಗಿ ಶೂಟಿಂಗ್‌ ಮುಗಿಸಿದ ಮಾರ್ಕ್‌

ಸತ್ಯಜ್ಯೋತಿ ಫಿಲ್ಮ್ಸ್‌ ಮತ್ತು ಕಿಚ್ಚ ಕ್ರಿಯೆಷನ್ಸ್‌ ಜಂಟಿಯಾಗಿ ನಿರ್ಮಾಣ ಮಾಡಿರುವ ಮಾರ್ಕ್‌ ಸಿನಿಮಾವನ್ನು ಮ್ಯಾಕ್ಸ್‌ ಖ್ಯಾತಿಯ ವಿಜಯ್‌ ಕಾರ್ತಿಕೇಯ ನಿರ್ದೇಶನ ಮಾಡಿದ್ದಾರೆ. ಈ ವರ್ಷದ ಜುಲೈನಲ್ಲಿ ಶೂಟಿಂಗ್‌ ಶುರು ಮಾಡಿ, ಆಗಲೇ ಡಿಸೆಂಬರ್‌ 25ರಂದು ಗ್ರ್ಯಾಂಡ್‌ ಆಗಿ ಚಿತ್ರಮಂದಿರಗಳಲ್ಲಿ ಈ ಸಿನಿಮಾವನ್ನು ರಿಲೀಸ್‌ ಮಾಡಲು ಚಿತ್ರತಂಡ ಸಜ್ಜಾಗಿದೆ. ಸರಿಯಾಗಿ ಒಂದು ವರ್ಷದ ಬಳಿಕ ಕಿಚ್ಚನನ್ನು ತೆರೆಮೇಲೆ ನೋಡಲು ಫ್ಯಾನ್ಸ್‌ ಕಾಯುತ್ತಿದ್ದಾರೆ. ಅಂದಹಾಗೆ, ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಈ ಚಿತ್ರದ ಟ್ರೇಲರ್‌ ರಿಲೀಸ್‌ ಆಗಿದ್ದು, ಸಿನಿಮಾ ಕೂಡ ಈ ಮೂರು ಭಾಷೆಗಳಲ್ಲಿ ರಿಲೀಸ್‌ ಆಗುವ ಸಾಧ್ಯತೆ ಇದೆ.