Mark Teaser: 'ಮಾರ್ಕ್'ಗೆ ಉಘೇ ಉಘೇ ಅಂದ್ರು ಫ್ಯಾನ್ಸ್! ಟೀಸರ್‌ನಲ್ಲಿ ಕಿಚ್ಚನ ರೌದ್ರಾವತಾರ
ಮಾರ್ಕ್ ಟೀಸರ್ (Mark teaser) ಹೇಗೆ ಇರುತ್ತದೆ ಎಂಬ ನಿರೀಕ್ಷೆ ಫ್ಯಾನ್ಸ್‌ಗೆ ಇತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. ಪವರ್ ಪ್ಯಾಕ್ಡ್ ಆಕ್ಷನ್ ಟೀಸರ್ ನೋಡಿ ಕಿಚ್ಚನ ಬಳಗ ಸಂತಸಗೊಂಡಿದೆ. ತಮಿಳು ನಿರ್ದೇಶಕ ವಿಜಯ್ ಕಾರ್ತಿಕೇಯನ್ (Vijay Karthikeyan) ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಸುದೀಪ್ (Sudeep) ಮತ್ತೊಮ್ಮೆ ಪೊಲೀಸ್ ಆಫೀಸರ್ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಡಿಸೆಂಬರ್ 25ಕ್ಕೆ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಬಿಡುಗಡೆಯಾಗಲಿರುವ ಈ ಚಿತ್ರದ ಟೀಸರ್ ಕಂಡು ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.
sudeep Mark look -
ಮ್ಯಾಕ್ಸ್ ಸಿನಿಮಾ ಸಕ್ಸಸ್ ಬಿಸಿಯಲ್ಲಿ ಬರ್ತಿರುವ ಮಾರ್ಕ್ (Mark Movie) ಸದ್ಯದ ಬಹುನಿರೀಕ್ಷಿತ ಪಟ್ಟಿಯಲ್ಲಿರುವ ಸಿನಿಮಾ. ನಿರ್ದೇಶಕ ವಿಜಯ್ ಕಾರ್ತಿಕೆಯನ್ ಜೊತೆ ಸೇರಿ ಸುದೀಪ್ ( Kichcha Sudeepa) ಮಾಡಿರುವ ಸಿನಿಮಾ. ಈಗ ಫ್ಯಾನ್ಸ್‌ಗೆ ಅಂತೂ ಗುಡ್ ನ್ಯೂಸ್ ಸಿಕ್ಕಿದೆ. ಈ ಚಿತ್ರದ ಮತ್ತೊಂದು ಟೀಸರ್ (Teaser) ಇಂದು (ನವೆಂಬರ್ 7 ) ಬಿಡುಗಡೆಯಾಗಿದೆ. ಡಿಸೆಂಬರ್ 25ಕ್ಕೆ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಬಿಡುಗಡೆಯಾಗಲಿರುವ ಈ ಚಿತ್ರದ ಟೀಸರ್ ಕಂಡು ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.
ಭರ್ಜರಿ ಆಕ್ಷನ್ಸ್ ಮೂಲಕ ಕಿಚ್ಚ ಖದರ್ ತೋರಿಸಿದ್ದು, ಅಭಿಮಾನಿಗಳು ಫಸ್ಟ್ ಡೇ ಫಸ್ಟ್ ಶೋ ಫಿಕ್ಸ್ ಅಂತ ಕಮೆಂಟ್ ಮಾಡುತ್ತಿದ್ದಾರೆ.
ಪವರ್ ಪ್ಯಾಕ್ಡ್ ಆಕ್ಷನ್ ಟೀಸರ್
ಸೈಕೋ ಸೈತಾನ್ ಹಾಡನ್ನ ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ. ಅದಕ್ಕೂ ಮೊದಲು ಬಂದ ಟೈಟಲ್ ಟೀಸರ್ ಅನ್ನೂ ಇಷ್ಟಪಟ್ಟಿದ್ದಾರೆ. ಟೀಸರ್ ಹೇಗೆ ಇರುತ್ತದೆ ಎಂಬ ನಿರೀಕ್ಷೆ ಇತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. ಪವರ್ ಪ್ಯಾಕ್ಡ್ ಆಕ್ಷನ್ ಟೀಸರ್ ನೋಡಿ ಕಿಚ್ಚನ ಬಳಗ ಸಂತಸಗೊಂಡಿದೆ.
ತಮಿಳು ನಿರ್ದೇಶಕ ವಿಜಯ್ ಕಾರ್ತಿಕೇಯನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದು ಸುದೀಪ್ ಮತ್ತೊಮ್ಮೆ ಪೊಲೀಸ್ ಆಫೀಸರ್ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ.
ಇದನ್ನೂ ಓದಿ: Bigg Boss Kannada 12: ಧ್ರುವಂತ್‌ರ ಆ ಒಂದು ಮಾತಿಗೆ ಕಾವ್ಯ ಕೆಂಡ! ಆವಾಜ್ ಹಾಕಿದ ಗಿಲ್ಲಿ
ಮ್ಯಾಕ್ಸ್ ಚಿತ್ರದಲ್ಲಿ ವಿಜಯ್ ಕಾರ್ತಿಕೇಯನ್ ಅವರು ಒಂದು ರಾತ್ರಿಯಲ್ಲಿ ನಡೆಯುವ ಕಥೆಯನ್ನು ಬಹಳ ಸೊಗಸಾಗಿ ತೆರೆಗೆ ತಂದಿದ್ದರು. ಈ ಬಾರಿ ಕೂಡ ಅಂಥದ್ದೇ ಪ್ರಯತ್ನ ನಡೀತಿದೆ. ಮತ್ತಷ್ಟು ರೋಚಕವಾಗಿ ಕಥೆ ಹೇಳಲು ನಿರ್ದೇಶಕರು ಮುಂದಾಗಿದ್ದಾರೆ ಎಂದು ಚಿತ್ರತಂಡ ಹೇಳಿಕೊಂಡಿದೆ.
Here it is,, The Teaser,, a small sneek peek into the world of#MarkTheFilm.
— Kichcha Sudeepa (@KicchaSudeep) November 7, 2025
This Christmas. https://t.co/bLprnhCXL7 @VKartikeyaa @AJANEESHB @iampriya06 @shekarchandra71 @ganeshbaabu21 @shivakumarart @kevinkumarrrr @subbu6panchu @iYogiBabu @Naveenc212 @gurusoms…
ಕಿಚ್ಚನ ಮಾಸ್ ಲುಕ್!
ಶೇಖರ್ ಚಂದ್ರ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿದೆ. ಚಿತ್ರದಲ್ಲಿ ಅಜಯ್ ಮಾರ್ಕೆಂಡೆ ಪಾತ್ರದಲ್ಲಿ ಸುದೀಪ್ ನಟಿಸುತ್ತಿದ್ದಾರೆ. ಪಾತ್ರಕ್ಕಾಗಿ ಹೇರ್‌ಸ್ಟೈಲ್ ಬದಲಿಸಿಕೊಂಡು ದರ್ಶನ ಕೊಟ್ಟಿದ್ದಾರೆ.
ಕ್ರಿಸ್ಮಸ್ ಹಬ್ಬಕ್ಕೆ ಮಾರ್ಕ್ ಚಿತ್ರ ರಿಲೀಸ್ ಆಗುತ್ತಿದೆ. ಕಳೆದ ವರ್ಷ 2024 ರಲ್ಲಿ ಮ್ಯಾಕ್ಸ್ ಚಿತ್ರ ಡಿಸೆಂಬರ್ 25ಕ್ಕೇನೆ ಬಂದಿತ್ತು. ಅದೇ ಡೇಟ್‌ಗೇನೆ ಮಾರ್ಕ್ ಚಿತ್ರದ ಆಗುತ್ತಿದೆ. ಸತ್ಯಜ್ಯೋತಿ ಫಿಲ್ಮ್ಸ್ ಮತ್ತು ಕಿಚ್ಚ ಕ್ರಿಯೇಷನ್ಸ್ ಬ್ಯಾನರ್‌ಗಳು ಜೊತೆಯಾಗಿ ಈ ಸಿನಿಮಾವನ್ನು ನಿರ್ಮಿಸುತ್ತಿವೆ.
ಇದನ್ನೂ ಓದಿ: Prithviraj Sukumaran: SS ರಾಜಮೌಳಿ ಚಿತ್ರದಲ್ಲಿ ʻಕುಂಭʼನಾದ ಪೃಥ್ವಿರಾಜ್ ಸುಕುಮಾರನ್; ಪೋಸ್ಟರ್ ಔಟ್
ಸುದೀಪ್ ಅವರ ಜೊತೆ ನವೀನ್ ಚಂದ್ರ, ದೀಪ್ಶಿಕಾ, ಅರ್ಚನಾ ಕೊಟ್ಟಿಗೆ, ರೋಶಿನಿ ಪ್ರಕಾಶ್ ಹಾಗೂ ನಿಶ್ವಿಕಾ ನಾಯ್ಡು 'ಮಾರ್ಕ್' ಚಿತ್ರದ ತಾರಾಗಣದಲ್ಲಿದ್ದಾರೆ. ಡ್ರ್ಯಾಗನ್ ಮಂಜು ಕೂಡ ಚಿತ್ರದಲ್ಲಿದ್ದಾರೆ. ರೌಡಿಯ ಕುತ್ತಿಗೆ ಹಿಡಿದು ಮೇಲಕ್ಕೆತ್ತಿ ಮದ್ಯ ಕುಡಿಯುವ ದೃಶ್ಯವನ್ನು ನೋಡಿ ಸುದೀಪ್ ಅವರಿಗೆ ಸುದೀಪ್ ಅವರೆ ಸಾಟಿ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.