ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಜೀ ಕನ್ನಡದಲ್ಲಿ ಸಾಧನೆ ಮಾಡಿದ ʻಕರ್ಣʼ ಧಾರಾವಾಹಿ; ʻನಿಧಿʼ ಪಾತ್ರಕ್ಕೆ ಪ್ರೀತಿ ನೀಡಿದ ಕನ್ನಡಿಗರಿಗೆ ಧನ್ಯವಾದ ಹೇಳಿದ ಭವ್ಯಾ ಗೌಡ

Karna Serial: ಕಿರಣ್‌ ರಾಜ್‌, ಭವ್ಯಾ ಗೌಡ ಅಭಿನಯದ ʻಕರ್ಣʼ ಧಾರಾವಾಹಿಯು ಹೊಸ ಮೈಲಿಗಲ್ಲನ್ನು ಸೃಷ್ಟಿಸಿದೆ. ಹೌದು, ಈ ಸೀರಿಯಲ್ ಯಶಸ್ವಿಯಾಗಿ 200 ಸಂಚಿಕೆಗಳನ್ನು ಪೂರೈಸಿದೆ. ಈ ಸಂಭ್ರಮವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಭವ್ಯಾ ಗೌಡ, ವೀಕ್ಷಕರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

ಜೀ ಕನ್ನಡ ವಾಹಿನಿಯ ಜನಪ್ರಿಯ ‘ಕರ್ಣ’ ಧಾರಾವಾಹಿ ಟಿಆರ್‌ಪಿ ಏರಿಳಿತಗಳ ನಡುವೆಯೂ ವೀಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ವಿಶೇಷವಾಗಿ ಕರ್ಣ ಮತ್ತು ನಿಧಿ ಜೋಡಿಯ ಪ್ರೇಮಕಥೆ ವೀಕ್ಷಕರಿಗೆ ಸಖತ್ ಇಷ್ಟವಾಗಿದ್ದು, ಈ ಜೋಡಿಯ ಕೆಮಿಸ್ಟ್ರಿ ಸೀರಿಯಲ್ ಯಶಸ್ಸಿಗೆ ಮುಖ್ಯ ಕಾರಣವಾಗಿದೆ.

ಯಶಸ್ವಿಯಾಗಿ 200 ಸಂಚಿಕೆಗಳನ್ನು ಪೂರೈಸಿರುವ ಈ ಧಾರಾವಾಹಿ, ವಾಹಿನಿಯ ಪ್ರಮುಖ ಸೀರಿಯಲ್‌ಗಳಲ್ಲಿ ಒಂದಾಗಿ ಮುನ್ನುಗ್ಗುತ್ತಿದೆ. ಕರ್ಣ ಧಾರಾವಾಹಿಯಲ್ಲಿ ಹೀರೋ ಆಗಿ ನಟ ಕಿರಣ್‌ ರಾಜ್‌ ಕಾಣಿಸಿಕೊಂಡರೆ, ನಿಧಿ ಪಾತ್ರವನ್ನು ನಟಿ ಭವ್ಯಾ ಗೌಡ ನಿಭಾಯಿಸುತ್ತಿದ್ದಾರೆ. ತಮ್ಮ ಧಾರಾವಾಹಿಯು ಯಶಸ್ವಿಯಾಗಿ 200 ಸಂಚಿಕೆಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಭವ್ಯಾ ಗೌಡ ಅವರು ಖುಷಿ ಹಂಚಿಕೊಂಡಿದ್ದಾರೆ. "ನಿಧಿ ಪಾತ್ರಕ್ಕೆ ನೀವು ನೀಡಿದ ಪ್ರೀತಿ ಮತ್ತು ಬೆಂಬಲಕ್ಕೆ ನಾನು ಸದಾಕಾಲ ಚಿರಋಣಿ" ಎಂದು ಭವ್ಯಾ ಗೌಡ ಹೇಳಿಕೊಂಡಿದ್ದಾರೆ.

Karna Serial: ಅಪ್ಪನ ಮುಂದೆ ಪ್ರೀತಿ ಬಿಚ್ಚಿಟ್ಟ ಕರ್ಣ: ನಿಧಿ-ಕರ್ಣ ಪ್ರೇಮ ಸಂಗಮಕ್ಕೆ ರಮೇಶನೆ ಸೇತುವೆ

ಇದು ನಮ್ಮೆಲ್ಲರಿಗೂ ಒಂದು ದೊಡ್ಡ ಮೈಲಿಗಲ್ಲು

"ಕರ್ಣ ಧಾರಾವಾಹಿಯಲ್ಲಿ 'ನಿಧಿ' ಪಾತ್ರಕ್ಕೆ ನೀವು ತೋರುತ್ತಿರುವ ಪ್ರೀತಿ ಕಂಡು ನನ್ನ ಬಳಿ ಪದಗಳೇ ಇಲ್ಲ, ನಾನು ಚಿರಋಣಿ. ನಿಮ್ಮ ಬೆಂಬಲ, ಸಂದೇಶಗಳು ಮತ್ತು ನಿರಂತರ ಪ್ರೋತ್ಸಾಹವೇ ನನಗೆಲ್ಲವೂ.. ನಾವು ಅಧಿಕೃತವಾಗಿ 200 ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿದ್ದೇವೆ. ಇದು ನಮ್ಮೆಲ್ಲರಿಗೂ ಒಂದು ದೊಡ್ಡ ಮೈಲಿಗಲ್ಲು ಮತ್ತು ಹೆಮ್ಮೆಯ ಕ್ಷಣ. ಈ ಸುಂದರ ಪ್ರಯಾಣವನ್ನು ಯಶಸ್ವಿಗೊಳಿಸಲು ತೆರೆಯ ಹಿಂದೆ ಮತ್ತು ತೆರೆಯ ಮುಂದೆ ದಣಿವರಿಯದೆ ಶ್ರಮಿಸಿದ ನಮ್ಮ ಇಡೀ ತಂಡಕ್ಕೆ ಅಭಿನಂದನೆಗಳು" ಎಂದು ಭವ್ಯಾ ಗೌಡ ಬರೆದುಕೊಂಡಿದ್ದಾರೆ.

ಭವ್ಯಾ ಗೌಡ ಹಂಚಿಕೊಂಡ ಪೋಸ್ಟ್‌



ಮುಂದಿನ ಸಂಚಿಕೆಗಳನ್ನು ತಪ್ಪದೇ ವೀಕ್ಷಿಸಿ

"ನನ್ನನ್ನು ನಂಬಿ ಈ ಅದ್ಭುತ ಅವಕಾಶವನ್ನು ನೀಡಿದ ಪ್ರತಿಯೊಬ್ಬ ಕಲಾವಿದರಿಗೆ, ನಮ್ಮ ವಾಹಿನಿಗೆ, ನಮ್ಮ ಸುಂದರ ಪ್ರೊಡಕ್ಷನ್ ಹೌಸ್‌ಗೆ ಮತ್ತು ನಮ್ಮ ಪ್ರೀತಿಯ ವೀಕ್ಷಕರಿಗೆ ಹೃದಯಪೂರ್ವಕ ಧನ್ಯವಾದಗಳು. ನಮ್ಮ ಮೇಲೆ ಅಪಾರ ಪ್ರೀತಿ ಮತ್ತು ಅಮೂಲ್ಯವಾದ ಪ್ರತಿಕ್ರಿಯೆಗಳನ್ನು ಮಳೆಗರೆದಿದ್ದಕ್ಕಾಗಿ ಹಾಗೂ ಈ ಪ್ರಯಾಣದ ಪ್ರತಿ ಹಂತದಲ್ಲೂ ನಮ್ಮ ಜೊತೆಗೆ ಇದ್ದಿದ್ದಕ್ಕಾಗಿ ಧನ್ಯವಾದಗಳು. ದಯವಿಟ್ಟು ನಿಮ್ಮ ಬೆಂಬಲ ಹೀಗೆಯೇ ಮುಂದುವರಿಯಲಿ ಮತ್ತು ಮುಂದಿನ ಸಂಚಿಕೆಗಳನ್ನು ತಪ್ಪದೇ ವೀಕ್ಷಿಸಿ... ಮುಂದೆ ಇನ್ನು ಕುತೂಹಲಕಾರಿ ಸನ್ನಿವೇಶಗಳು ಬರಲಿವೆ" ಎಂದು ಭವ್ಯಾ ಗೌಡ ಹೇಳಿದ್ದಾರೆ.

Karna Serial Kannada: ಸೀರಿಯಲ್‌ನಿಂದ ಹೊರ ಬಂದಿದ್ಯಾಕೆ ಟಿಎಸ್ ನಾಗಾಭರಣ? ಕರ್ಣನ ಮುಂದಿನ ಹೆಜ್ಜೆ ಏನು?

ʻಕರ್ಣʼ ಧಾರಾವಾಹಿಯು ಮೂಲತಃ ಹಿಂದಿ ಧಾರಾವಾಹಿಯೊಂದರ ರಿಮೇಕ್ ಆಗಿದ್ದರೂ, ಕನ್ನಡದ ನೆಟಿವಿಟಿಗೆ ತಕ್ಕಂತೆ ಕಥೆಯಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದೆ. ಮೂಲ ಕಥೆಯಲ್ಲಿ ಇಲ್ಲದ ನಿಧಿ-ಕರ್ಣನ ಲವ್ ಟ್ರ್ಯಾಕ್‌ಗೆ ಹೆಚ್ಚಿನ ಒತ್ತು ನೀಡಲಾಗಿದೆ. ಇದು ವೀಕ್ಷಕರಲ್ಲಿ ಕುತೂಹಲ ಹೆಚ್ಚಿಸಿದೆ.