Karna Serial: ಅಪ್ಪನ ಮುಂದೆ ಪ್ರೀತಿ ಬಿಚ್ಚಿಟ್ಟ ಕರ್ಣ: ನಿಧಿ-ಕರ್ಣ ಪ್ರೇಮ ಸಂಗಮಕ್ಕೆ ರಮೇಶನೆ ಸೇತುವೆ
ಕರ್ಣನು ತೆಪ್ಪದ ಮೇಲೆ ಕುಳಿತು, ಐ ಲವ್ ಯೂ ನಿಧಿ ಎಂದು ಹೇಳಿದ್ದಾನೆ. ಇದೀಗ ಹೊಸದಾಗಿ ರಿಲೀಸ್ ಆಗಿರುವ ಪ್ರೊಮೋದಲ್ಲಿ ತೋರಿಸಿರುವಂತೆ ಕರ್ಣ ಹಿಂದಿನ ದಿನದ ಕ್ಷಣಗಳನ್ನು ನೆನೆಸಿಕೊಂಡು, ಅಯ್ಯೋ ಮತ್ತಿನ ಅಮಲಿನಲ್ಲಿ ಪ್ರಪೋಸ್ ಮಾಡಿದ್ದೇನೆ. ಈಗ ಪ್ರೀತಿಯನ್ನು ಒಪ್ಪುವುದೋ, ಬಿಡೋದೋ ಎಂದು ಯೋಚನೆ ಮಾಡುತ್ತಿದ್ದಾನೆ.

Karna Serial Sep 18th -

ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕರ್ಣ ಧಾರಾವಾಹಿಯ (Karna Serial) ಪ್ರತಿ ಎಪಿಸೋಡ್ ರೋಚಕತೆ ಸೃಷ್ಟಿಸಿದೆ. ಇದಕ್ಕೆ ಈ ಧಾರಾವಾಹಿ ಕಿರುತೆರೆ ಲೋಕದಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ. ಒಂದುಕಡೆ ಕರ್ಣ-ನಿಧಿ ಪ್ರೀತಿಯ ಎಪಿಸೋಡ್ ಸಾಗುತ್ತಿದ್ದರೆ ಮತ್ತೊಂದೆಡೆ ಕರ್ಣನ ಜನ್ಮ ರಹಸ್ಯ ಕುತೂಹಲ ಮೂಡಿಸಿದೆ. ಕಿರಣ್ ರಾಜ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಈ ಧಾರಾವಾಹಿಯಲ್ಲಿ ಭವ್ಯಾ ಗೌಡ ಹಾಗೂ ನಮ್ರತಾ ಗೌಡ ಕೂಡ ಇದ್ದಾರೆ.
ಕರ್ಣ ಧಾರಾವಾಹಿಯಲ್ಲಿ ಒಂದೊಂದೆ ಟ್ವಿಸ್ಟ್ ನೀಡಲಾಗುತ್ತಿದೆ. ಕರ್ಣ ಕೊನೆಗೂ ನಿಧಿಗೆ ಪ್ರಪೋಸ್ ಮಾಡಿಯೇ ಬಿಟ್ಟಿದ್ದಾನೆ. ಅದೂ ನದಿಯ ಮಧ್ಯೆ ಎಂಬುದು ವಿಶೇಷ. ನಿಧಿಗೆ (ಭವ್ಯಾ ಗೌಡ) ಕರ್ಣನನ್ನು ಎಲ್ಲಿಲ್ಲದ ಪ್ರೀತಿ. ಅದನ್ನು ಕರ್ಣನಿಗೆ ಆಕೆ ಹೇಳಿದ್ದಾಳೆ ಕೂಡ. ಆದರೆ, ಕರ್ಣ ಇದಕ್ಕೆ ಉತ್ತರಿಸಿರಲಿಲ್ಲ.. ಹಾಗಂತ ನಿಧಿಯನ್ನು ತಿರಸ್ಕರಿಯೂ ಇಲ್ಲ. ಆದರೆ ಕರ್ಣನು ತೆಪ್ಪದ ಮೇಲೆ ಕುಳಿತು, ಐ ಲವ್ ಯೂ ನಿಧಿ ಎಂದು ಹೇಳಿದ್ದಾನೆ. ಆ ಬಳಿಕ ಮಗುವಿನಂತೆ ನಿಧಿ ಮಡಿಲಲ್ಲಿ ಕರ್ಣ ಮಲಗಿದ್ದಾನೆ.
ಆದರೆ, ಕರ್ಣ ಇಲ್ಲಿ ಪ್ರಪೋಸ್ ಮಾಡಿರುವುದು ಮತ್ತಿನ ಅಮಲಿನಲ್ಲಿ ಆಗಿರುತ್ತದೆ. ಇದೀಗ ಹೊಸದಾಗಿ ರಿಲೀಸ್ ಆಗಿರುವ ಪ್ರೊಮೋದಲ್ಲಿ ತೋರಿಸಿರುವಂತೆ ಕರ್ಣ ಹಿಂದಿನ ದಿನದ ಕ್ಷಣಗಳನ್ನು ನೆನೆಸಿಕೊಂಡು, ಅಯ್ಯೋ ಮತ್ತಿನ ಅಮಲಿನಲ್ಲಿ ಪ್ರಪೋಸ್ ಮಾಡಿದ್ದೇನೆ. ಈಗ ಪ್ರೀತಿಯನ್ನು ಒಪ್ಪುವುದೋ, ಬಿಡೋದೋ ಎಂದು ಯೋಚನೆ ಮಾಡುತ್ತಿದ್ದಾನೆ. ಏಕೆಂದರೆ ತಾನು ಮದುವೆಯಾಗುವುದಿಲ್ಲ ಎಂದು ಕರ್ಣ ತನ್ನ ತಂದೆಗೆ ಪ್ರಾಮಿಸ್ ಮಾಡಿರುತ್ತಾನೆ.
ಹೀಗೆ ಗೊಂದಲದಲ್ಲಿರುವಾಗ ಅಲ್ಲಿಗೆ ಅಪ್ಪ ರಮೇಶ್ ಬಂದಿದ್ದಾನೆ. ರಮೇಶ್ ಬಳಿ ಕರ್ಣ ತಾನು ನಿಧಿಯನ್ನು ಪ್ರೀತಿ ಮಾಡುತ್ತಿರುವುದಾಗಿಯೂ, ಆದರೆ ಈಗಾಗಲೇ ಅಪ್ಪನಿಗೆ ಮಾತು ನೀಡಿರುವುದನ್ನು ಮೀರಲು ಸಾಧ್ಯವಿಲ್ಲವೆಂತಲೂ ಹೇಳುತ್ತಾನೆ. ಕರ್ಣನ ಮಾತನ್ನು ಕೇಳಿ ಅಪ್ಪ ರಮೇಶ್, ನಿನಗೆ ನಾನು ಈವಾಗ ಮಾತು ಕೊಡುತ್ತೇನೆ, ನೀವಿಬ್ಬರು ಒಂದಾಗುತ್ತೀರಿ, ಒಂದಾಗಬೇಕು ಎನ್ನುತ್ತಾ ನಿಧಿ ಮತ್ತು ಕರ್ಣನ ಮದುವೆಗೆ ಒಪ್ಪಿಗೆ ಸೂಚಿಸುತ್ತಾರೆ.
ಸದ್ಯ ಇರುವ ಕುತೂಹಲ ಎಂದರೆ ಕರ್ಣನ ಅಪ್ಪ ರಮೇಶ್ ನಿಜಕ್ಕೂ ಈ ಮದುವೆಗೆ ಒಪ್ಪುತ್ತಾರ ಎಂಬುದು. ಯಾಕೆಂದರೆ ಕರ್ಣ ಹುಟ್ಟಿನಿಂದಲೂ ಇಲ್ಲಿವರೆಗೂ ಬರೀ ದ್ವೇಷವನ್ನು ಸಾಧಿಸಿಕೊಂಡು ಬಂದಿದ್ದ ರಮೇಶ್, ಅಮ್ಮ ಮನೆಯಿಂದ ಹೊರಹಾಕಿದ ನಂತರ, ಕರ್ಣನ ಬಳಿ ಸಾರಿ ಕೇಳಿ ಮತ್ತೆ ಮನೆಗೆ ಕಾಲಿಟ್ಟಿದ್ದರು. ನಂತರ ದಿನಗಳಲ್ಲಿ ಒಳ್ಳೆತನವನ್ನು ತೋರಿಸುತ್ತಿದ್ದಾರೆ. ಆದರೆ, ನಿಜವಾಗಿಯೂ ರಮೇಶ್ ಬದಲಾಗಿದ್ದಾರೆಯೇ ಎನ್ನುವ ಸಂಶಯ ವೀಕ್ಷಕರಲ್ಲಿದೆ. ನಿರ್ದೇಶಕರು ಇದನ್ನು ಸಸ್ಪೆನ್ಸ್ ಆಗಿಯೇ ಇಟ್ಟಿದ್ದಾರೆ. ಸದ್ಯ ಕರ್ಣ-ನಿಧಿ ಮದುವೆ ಆಗುತ್ತ ಎಂಬುದು ನೋಡಬೇಕಿದೆ.
Niranjan Yashaswini: ಎಂಟು ವರ್ಷಗಳ ಬಳಿಕ ಗುಡ್ ನ್ಯೂಸ್ ಕೊಡಲು ಮುಂದಾದ ನಿರಂಜನ್ ದಂಪತಿ