ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bigg Boss Kannada 13: ಮಂಜನಿಗೆ ಕಚಡ, ಹಂದಿ ಎಂದ ಕಿರಣ್ ಶಾಸ್ತ್ರಿ; ಕೊನೆಗೆ ಗೋಳೋ ಅಂತ ಅತ್ತ ಸ್ಪರ್ಧಿ

Bigg Boss Kannada 13: ಕೆಲವು ಸ್ಪರ್ಧಿಗಳು ಇನ್ನೂ ಫ್ಲೈಟ್‌ನಲ್ಲಿಯೇ ಇದ್ದಾರೆ. ನಾಮಿನೇಷನ್‌ ಪ್ರಕ್ರಿಯೆ ಕೂಡ ನಡೆದಿದೆ. ಬಹುತೇಕರು ಟಾರ್ಗೆಟ್‌ ಮಾಡಿದ್ದು ಮಹಾಕವಿ ಮಂಜು ಅವರನ್ನ. ಸದ್ಯ ಹೆಚ್ಚಾಗಿ ಸೌಂಡ್‌ ಮಾಡುತ್ತಿರೋದು ಕಾಮನ್‌ ಮ್ಯಾನ್‌ಗಳು. ನಿನ್ನೆಯ ಎಪಿಸೋಡ್‌ನಲ್ಲಿ ಮಂಜ ಹಾಗೂ ಕಿರಣ್‌ ಶಾಸ್ತ್ರಿ ನಡುವೆ ಮಾತಿನ ಚಕಮಕಿ ನಡೆದಿದೆ. ಕಿರಣ್ ಶಾಸ್ತ್ರಿ ಅವರು ಕಚಡ, ಹಂದಿ ಎಂಬಿತ್ಯಾದಿ ಪದಗಳನ್ನು ಬಳಸಿದ್ದಾರೆ.

ಬಿಗ್‌ ಬಾಸ್‌ ಕನ್ನಡ

ಬಿಗ್‌ಬಾಸ್‌ ಕನ್ನಡ ಸೀಸನ್‌ 13ನ್ನ (Bigg Boss Kannada 13) ಫ್ಲೈಟ್‌ ಮತ್ತು ಅಂತಾರಾಷ್ಟ್ರೀಯ ಥೀಮ್‌ನಲ್ಲಿ ಆಯೋಜಿಸಲಾಗಿದೆ. ಹಾಗಾಗಿ ನಿನ್ನೆ ವೇದಿಕೆಗೆ ಬಂದ ಸ್ಪರ್ಧಿಗಳು ಇನ್ನೂ ಫ್ಲೈಟ್‌ನಲ್ಲಿಯೇ ಇದ್ದಾರೆ. ನಾಮಿನೇಷನ್‌ (Nomination) ಪ್ರಕ್ರಿಯೆ ಕೂಡ ನಡೆದಿದೆ. ಬಹುತೇಕರು ಟಾರ್ಗೆಟ್‌ ಮಾಡಿದ್ದು ಮಹಾಕವಿ ಮಂಜು (Mahakavi Manja) ಅವರನ್ನ. ಸದ್ಯ ಹೆಚ್ಚಾಗಿ ಸೌಂಡ್‌ ಮಾಡುತ್ತಿರೋದು ಕಾಮನ್‌ ಮ್ಯಾನ್‌ಗಳು. ನಿನ್ನೆಯ ಎಪಿಸೋಡ್‌ನಲ್ಲಿ ಮಂಜ ಹಾಗೂ ಕಿರಣ್‌ ಶಾಸ್ತ್ರಿ (Kiran Shastri) ನಡುವೆ ಮಾತಿನ ಚಕಮಕಿ ನಡೆದಿದೆ. ಕಿರಣ್ ಶಾಸ್ತ್ರಿ ಅವರು ಕಚಡ, ಹಂದಿ ಎಂಬಿತ್ಯಾದಿ ಪದಗಳನ್ನು ಬಳಸಿದ್ದಾರೆ.

ಮಂಜ ಅವರನ್ನೇ ಟಾರ್ಗೆಟ್‌

ಹೌದು ನಿನ್ನೆ ಬಹುತೇಕರು ನಾಮಿನೇಶನ್‌ ಪ್ರಕ್ರಿಯೆಯಲ್ಲಿಯೂ ಮಂಜ ಅವರನ್ನೇ ಟಾರ್ಗೆಟ್‌ ಮಾಡಿದರು. ಅಷ್ಟೇ ಅಲ್ಲ ಮಂಜ ಅವರು ಖಾಇ ಡಬ್ಬ ಎಂದೆಲ್ಲ ಹೇಳಿದರು. ಅಗ್ನಿ ಪರೀಕ್ಷೆ ಮೂಲಕ ಬಿಗ್​ ಬಾಸ್ ಮನೆಗೆ ಬಂದಿರುವ ಕಿರಣ್ ಶಾಸ್ತ್ರಿ ಮತ್ತು ಮಂಜ ನಡುವೆ ಕಿರಿಕ್ ಶುರುವಾಗಿದೆ. ಇಬ್ಬರ ಮಾತು ಜಾಸ್ತಿ ಆಗಿದೆ.

ಇದನ್ನೂ ಓದಿ: Bigg Boss Kannada 13: ಹುಚ್ಚು ಅನ್ನೋಕೆ ನೀವ್ಯಾರು? ಕಿರಣ್ ಶಾಸ್ತ್ರಿಯನ್ನ ತರಾಟೆಗೆ ತೆಗೆದುಕೊಂಡ ವೈಷ್ಣವಿ

ಕಿರಣ್ ಶಾಸ್ತ್ರಿ ಅವರಿಗೆ ಮಂಜ 'ನಿನಗೆ ಯೋಗತೈ ಇಲ್ಲವೆಂದಿದ್ದಾರೆ. ಇದಕ್ಕೆ ಕಿರಣ್ ಇದ್ದಕ್ಕಿದ್ದಂತೆ ಗರಂ ಆಗಿದ್ದು, 'ನೀನು ಹಂದಿ, ಕಚಡಾ.. ಎಂದು ಬಾಯಿಗೆ ಬಂದಂತೆ ಬೈಯ್ದಿದ್ದಾರೆ. ಆ ಬಳಿಕ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟಿದ್ದಾರೆ. ಧನು , ಕಿರಣ್‌ ಅವರನ್ನು ಸಮಾಧಾನ ಮಾಡಿದರು.

ಇನ್ನೊಂದು ಕಡೆ ಮಾಡರ್ನ್ ಮಹಾಕವಿ ಮಂಜ ಎಲ್ಲರ ಕಣ್ಣಿಗೆ ಗುರಿಯಾಗಿದ್ದಾರೆ. ಮಂಜನ ಮಾತು ಕೆಲವರಿಗೆ ತೊಂದರೆ ಆಗಿದ್ದು, ಇನ್ನು ಕೆಲವರಿಗೆ ಮಂಜನ ವರ್ತನೆ ಇಷ್ಟವಾಗಿಲ್ಲ. ಆದರೆ ಮಂಜ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ, 'ನಾನು 50 ಲಕ್ಷ ರೂಪಾಯಿ ಗೆಲ್ಲೋಕೆ ಬಂದಿದ್ದೇನೆ, ಫ್ರೆಂಡ್ಸ್ ಮಾಡ್ಕೊಂಡು ಇರೋಕೆ ಬಂದಿಲ್ಲ' ಎಂದಿದ್ದಾರೆ.



ಇಷ್ಟವಾಗದಿರುವ ಪ್ಯಾಸೆಂಜರ್‌ನ ಫೋಟೋವನ್ನು ಸೂಟ್‌ಕೇಸ್‌ಗೆ ಅಂಟಿಸಿ ಅದನ್ನು ಕಾಲಿನಿಂದ ಒದ್ದು ವಿಮಾನದಿಂದ ಕೆಳಗೆ ಹಾಕುವ ಟಾಸ್ಕ್‌ವೊಂದನ್ನು ಸದಸ್ಯರಿಗೆ ನೀಡಲಾಗಿದೆ.

ಈ ಬಾರಿ ವಿಮಾನಯಾನದ ಥೀಮ್​ನಲ್ಲಿ ‘ಬಿಗ್ ಬಾಸ್ ಕನ್ನಡ’ ಶೋ ನಡೆಯುತ್ತಿದೆ. ಎಲ್ಲ ಸ್ಪರ್ಧಿಗಳು ಇನ್ನೂ ಪೂರ್ತಿಯಾಗಿ ಮನೆಯನ್ನು ಎಂಜಾಯ್ ಮಾಡಲು ಸಾಧ್ಯವಾಗಿಲ್ಲ. ಬಹುತೇಕ ಸಮಯವನ್ನು ವಿಮಾನದ ಸೆಟ್ ಒಳಗೆ ಕಳೆಯುವಂತಾಗಿದೆ. ಅದರಲ್ಲೂ ವೈಷ್ಣವಿ ಹಾಗೂ ಕಿರಣ್‌ ಮಧ್ಯೆ ಜಗಳ ತಾರಕಕ್ಕೇರಿದೆ.

ಮನೆಯೊಳಗೆ ಸಂಗೀತಾ, ಗಗನ್‌, ಆಸಿಯಾ, ತಾಂಡವ್‌, ಓಂ ಪ್ರಕಾಶ್‌, ಜಗದೀಶ್‌, ಕಾವ್ಯ ಹೂ ಮಾಳೆ ಸಿಕ್ಕು ಮನೆಯೊಳಗೆ ಹೋಗಿದ್ದಾರೆ. ಲಿಖಿತ್‌, ಪ್ರಥಮಾ. ಕಿರಣ್‌, ಮಂಜ, ಧನು, ಸೌಂದರ್ಯ, ಅವಿನಾಶ್‌ ಫ್ಲೈಟ್‌ನಲ್ಲೇ ಇದ್ದಾರೆ.

ಇದನ್ನೂ ಓದಿ: Bigg boss Kannada 13: ಮಗುನಾ ನಗಿಸೋ ಟಾಸ್ಕ್‌ನಲ್ಲಿ ಗೆದ್ರಾ ಸಂಗೀತ - ಓಂಪ್ರಕಾಶ್?

ಸೆಲೆಬ್ರಿಟಿಗಳಿಗಿಂತ ಕಾಮನರ್ ಸ್ಪರ್ಧಿಗಳೇ ಹೆಚ್ಚಾಗಿ ಸದ್ದು ಮಾಡುತ್ತಿದ್ದಾರೆ. ಅಗ್ನಿ ಪರೀಕ್ಷೆ ಮೂಲಕ ಬಿಗ್​ ಬಾಸ್ ಮನೆಗೆ ಬಂದಿರುವ ಕಿರಣ್ ಶಾಸ್ತ್ರಿ ಹೆಚ್ಚಾಗಿ ಕೂಗಾಡುತ್ತಿದ್ದಾರೆ.

Yashaswi Devadiga

View all posts by this author