ಇಬ್ಬರು ಅಭಿಯಂತರರು ಲೋಕಾಯುಕ್ತ ಬಲೆಗೆ
ಕೆಬಿಜೆಎನ್ ಎಲ್ ವ್ಯಾಪ್ತಿಯಲ್ಲಿ ನಡೆದಿದ್ದ ಕಾಮಗಾರಿಯೊಂದಕ್ಕೆ ಸಂಬಂದಿಸಿದಂತೆ ಬಾಕಿ ಇದ್ದ 3 ಲಕ್ಷ 71 ಸಾವಿರ ರೂ ಬಿಲ್ ಬಿಡುಗಡೆಗೆ ಈ ಅಧಿಕಾರಿಗಳು ಒಟ್ಟು 18 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಪೈಕಿ ಕೆಬಿಜೆಎನ್ ಎಲ್ ಉಪವಿಭಾಗ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಸೇವುಲಾಲ ಚವ್ಹಾಣ ತಮ್ಮ ಪಾಲಿನ ಹತ್ತು ಸಾವಿರ ಹಾಗೂ ಮತ್ತೊಂದು ವಿಭಾಗದ ಕಿರಿಯ ಅಭಿಯಂತರ ಸಾತಲಿಂಗಪ್ಪ ರೋಡಗಿ ಎಂಟು ಸಾವಿರ ಲಂಚದ ಹಣವನ್ನು ಪಡೆಯು ತ್ತಿದ್ದರು.
-
ಇಂಡಿ: ವಿಜಯಪುರ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ ಕಾಲುವೆ ಕಾಮಗಾರಿಯೊಂದರ ಬಿಲ್ ಪಾವತಿ ಮಾಡಲು ಗುತ್ತಿಗೆದಾರರಿಂದ ಲಂಚ ಸ್ವೀಕರಿಸುವ ಇಬ್ಬರು ಅಧಿಕಾರಿಗಳನ್ನು ಲೋಕಾ ಯುಕ್ತ ಪೊಲೀಸರು ಹಣ ಸಮೇತ ಬಂದಿಸಿದ್ದಾರೆ. ಇಂಡಿ ತಾಲೂಕಿನ ಸಾಲೋಟಗಿ ಗ್ರಾಮದ ಕಚೇರಿಗೆ ಜಂಟಿ ಲೋಕಾಯುಕ್ತ ದಾಳಿ ನಡೆದಿದೆ.
ಇದನ್ನೂ ಓದಿ: Lokayukta Raid: ಬೆಂಗಳೂರಿನಲ್ಲಿ 5 ಸಾವಿರ ಲಂಚ ಪಡೆಯುತ್ತಿದ್ದಾಗಲೇ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿಬಿದ್ದ ಸರ್ಕಾರಿ ವಕೀಲೆ!
ಕೆಬಿಜೆಎನ್ ಎಲ್ ವ್ಯಾಪ್ತಿಯಲ್ಲಿ ನಡೆದಿದ್ದ ಕಾಮಗಾರಿಯೊಂದಕ್ಕೆ ಸಂಬಂದಿಸಿದಂತೆ ಬಾಕಿ ಇದ್ದ 3 ಲಕ್ಷ 71 ಸಾವಿರ ರೂ ಬಿಲ್ ಬಿಡುಗಡೆಗೆ ಈ ಅಧಿಕಾರಿಗಳು ಒಟ್ಟು 18 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಪೈಕಿ ಕೆಬಿಜೆಎನ್ ಎಲ್ ಉಪವಿಭಾಗ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಸೇವುಲಾಲ ಚವ್ಹಾಣ ತಮ್ಮ ಪಾಲಿನ ಹತ್ತು ಸಾವಿರ ಹಾಗೂ ಮತ್ತೊಂದು ವಿಭಾಗದ ಕಿರಿಯ ಅಭಿಯಂತರ ಸಾತಲಿಂಗಪ್ಪ ರೋಡಗಿ ಎಂಟು ಸಾವಿರ ಲಂಚದ ಹಣವನ್ನು ಪಡೆಯು ತ್ತಿದ್ದರು.
ಅಧಿಕಾರಿಗಳ ಲಂಚಕ್ಕೆ ಬೇಸತ್ತ ನಾನಾಸಾಹೇಬ ರೂಡಗಿ ಎಂಬುವವರು ಈ ಕುರಿತು ವಿಜಯಪುರ ಲೋಕಾಯುಕ್ತ ಕಚೇರಿಗೆ ಅಧಿಕೃತವಾಗಿ ದೂರು ನೀಡಿದ್ದರು. ದೂರಿನ ಪ್ರಕಾರ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು.
ಈ ಕುರಿತು ವಿಜಯಪುರ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.