ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Krishna Rukku Serial: 19 ವರ್ಷಗಳ ಬಳಿಕ ಕಿರುತೆರೆ ಲೋಕಕ್ಕೆ ಕಮ್‌ಬ್ಯಾಕ್‌ ಆದ್ರು ನಟಿ ಸುಚಿತ್ರಾ !

Krishna Rukku Kannada Serial: ಕಿರುತೆರೆ ಲೋಕದಲ್ಲಿ ಒಂದು ಕಾಲದಲ್ಲಿ ಬ್ಲಾಕ್ ಬಸ್ಟರ್ ಹಿಟ್ ಕೊಟ್ಟ ಧಾರಾವಾಹಿ ಅಂದ್ರೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಮಾಂಗಲ್ಯ . ನಟಿ ಸುಚಿತ್ರಾ ಈ ಧಾರಾವಾಹಿಯಲ್ಲಿ ಮಿಂಚಿದವರು. ಇದೀಗ 19 ವರ್ಷದ ಬಳಿಕ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ‘ಕೃಷ್ಣ ರುಕ್ಕು’ ಧಾರಾವಾಹಿಯ ಮೂಲಕ ಮತ್ತೆ ಜೀ ಕನ್ನಡಕ್ಕೆ ಬರ್ತಾ ಇದ್ದಾರೆ.

ಕೃಷ್ಣ ರುಕ್ಕು ಧಾರಾವಾಹಿ

ಕಿರುತೆರೆ ಲೋಕದಲ್ಲಿ ಒಂದು ಕಾಲದಲ್ಲಿ ಬ್ಲಾಕ್ ಬಸ್ಟರ್ ಹಿಟ್ ಕೊಟ್ಟ ಧಾರಾವಾಹಿ (Kannada serial) ಅಂದ್ರೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಮಾಂಗಲ್ಯ (Mangalya). ನಟಿ ಸುಚಿತ್ರಾ ಈ ಧಾರಾವಾಹಿಯಲ್ಲಿ ಮಿಂಚಿದವರು. ಇದೀಗ 19 ವರ್ಷದ ಬಳಿಕ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ‘ಕೃಷ್ಣ ರುಕ್ಕು’ (Krishna Rukku) ಧಾರಾವಾಹಿಯ ಮೂಲಕ ಮತ್ತೆ ಜೀ ಕನ್ನಡಕ್ಕೆ ಬರ್ತಾ ಇದ್ದಾರೆ.

ಸುಮಾರು 7-8 ವರ್ಷಗಳವರೆಗೆ ಪ್ರಸಾರವಾಗುತ್ತಿದ್ದಂತಹ ಧಾರಾವಾಹಿಯಲ್ಲಿ ಇವರ ನಟನೆಯನ್ನು ಜನ ಇಷ್ಟಪಟ್ಟಿದ್ದರು. ಸುಚಿತ್ರಾ ಅವರು ಕನ್ನಡಿ, ಅಕ್ಕ, ಮಾಂಗಲ್ಯ, ಕಾವ್ಯಾಂಜಲಿ ಮತ್ತು ಈಶ್ವರಿ ಸೇರಿ ಹಲವಾರು ಕನ್ನಡ , ತಮಿಳು, ತೆಲುಗು ಸೀರಿಯಲ್ ಗಳಲ್ಲೂ ನಟಿಸಿದ್ದಾರೆ.

ಇದನ್ನೂ ಓದಿ: Annayya serial: ಒಲಿದು ಬಂತು ಕಂಕಣ ಭಾಗ್ಯ; ತವರು ತೊರೆದ ತಂಗೀರ ಅಳಲು

ನನ್ನಲ್ , ಭಾಗ್ಯಲಕ್ಷ್ಮೀ , ಮಾಂಗಲ್ಯ ದೋಷಮ್ ಇವರು ನಟಿಸಿದ ಜನಪ್ರಿಯ ಇತರ ಭಾಷೆಯ ಧಾರವಾಹಿಗಳು. ಇದಲ್ಲದೇ ಟಿವಿ ಶೋ, ಕ್ವಿಜ್ ಶೋಗಳ ನಿರೂಪಣೆ ಕೂಡ ಮಾಡಿದ್ದಾರೆ. ಇತ್ತೀಚೆಗೆ ಉದಯ ಟಿವಿಯಲ್ಲಿ ಪ್ರಸಾರವಾದಂತಹ ‘ಸಿಂಧು ಭೈರವಿ’ ಧಾರಾವಾಹಿಯಲ್ಲಿ ಆರಂಭದ ಕೆಲವು ಎಪಿಸೋಡ್ ಗಳಲ್ಲೂ ನಟಿಸಿದ್ದರು.

ಸುಚಿತ್ರಾ ಪ್ರಮುಖ ಪಾತ್ರ

2006–07ರ ಅವಧಿಯಲ್ಲಿ ಪ್ರಸಾರವಾಗಿದ್ದ ‘ಅಕ್ಕ’ ಧಾರಾವಾಹಿಯಲ್ಲಿ ಸುಚಿತ್ರಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸುಚಿತ್ರಾ ದ್ವಿಪಾತ್ರದಲ್ಲಿ — ನಾಯಕಿ ಹಾಗೂ ಖಳನಾಯಕಿ ಪಾತ್ರಗಳನ್ನು ನಿರ್ವಹಿಸಿ ಪ್ರೇಕ್ಷಕರ ಮೆಚ್ಚುಗೆ ಪಡೆದಿದ್ದರು. ಈ ಧಾರಾವಾಹಿಯ ಮೂಲಕ ಕಿರುತೆರೆ ಪ್ರೇಕ್ಷಕರ ಮನಸ್ಸಿನಲ್ಲಿ ತನ್ನದೇ ಆದ ಗುರುತು ಮೂಡಿಸಿದ್ದ ಸುಚಿತ್ರಾ, ನಂತರ ಕೆಲವು ಧಾರಾವಾಹಿಗಳು ಮತ್ತು ಸಿನಿಮಾಗಳಲ್ಲಿಯೂ ಕಾಣಿಸಿಕೊಂಡಿದ್ದರು.

ಸುಚಿತ್ರಾ, ‘ಕೃಷ್ಣರುಕ್ಕು’ ಧಾರಾವಾಹಿಯಲ್ಲಿ ಪ್ರಮುಖ ಹಾಗೂ ಪ್ರಭಾವಶಾಲಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಕಥೆಯಲ್ಲಿ ಮಹತ್ವದ ತಿರುವು ತರಬಲ್ಲ ಪಾತ್ರವೊಂದನ್ನು ಅವರು ನಿರ್ವಹಿಸುತ್ತಿದ್ದಾರೆ.



ಇಂದಿನಿಂದ ಕೃಷ್ಣ ರುಕ್ಕು

ʻಕೃಷ್ಣ ರುಕ್ಕು’ ಧಾರಾವಾಹಿಯಲ್ಲಿ ಮೌನ ಗುಡ್ಡೇಮನೆ ರುಕ್ಕು ಆಗಿ ನಟಿಸಿದರೆ, ಅಕ್ಷಯ್ ನಾಯಕ್ ಕೃಷ್ಣನ ಪಾತ್ರ ಮಾಡುತ್ತಿದ್ದಾರೆ. ಎಸ್ ನಾರಾಯಣ್ ನಾಯಕನ ತಂದೆಯ ಪಾತ್ರದಲ್ಲಿ ನಟಿಸಿದ್ರೆ. ಖ್ಯಾತ ನಟಿ ಸುಚಿತ್ರ, ನಾಯಕನ ಅತ್ತೆಯಾಗಿ ನಟಿಸುತ್ತಿದ್ದಾರೆ. ಗಾಯಕ ನವೀನ ಸಜ್ಜು ಕೂಡ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ: Amruthadhaare Serial: ಮಲ್ಲಿಗಾಗಿ ಮಹತ್ವದ ತ್ಯಾಗ ಮಾಡಿದ್ದಾರೆ ಗೌತಮ್-ಭೂಮಿಕಾ!

ಪ್ರೀತಿ, ದ್ವೇಷ ಮತ್ತು ವಿಧಿಯಾಟದ ನಡುವೆ ಕೃಷ್ಣ-ರುಕ್ಕುವಿನ ಜೀವನ ಹೀಗೆ ಸಾಗಲಿದೆ ಎನ್ನುವುದು ಈ ಧಾರಾವಾಹಿಯ ಮತ್ತೊಂದು ಕುತೂಹಲಕಾರಿ ಅಂಶ. ಧೃತಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ದಿಲೀಪ್ ರಾಜ್ ಹಾಗೂ ಶ್ರೀ ವಿದ್ಯಾ ನಿರ್ಮಿಸಿರುವ ಕೃಷ್ಣ ರುಕ್ಕು ಧಾರಾವಾಹಿಯಲ್ಲಿ ಮನಸೆಳೆಯುವ ಕಥೆ ಮತ್ತು ಭಾವನಾತ್ಮಕ ಅಭಿನಯಗಳು ಪ್ರೇಕ್ಷಕರಿಗೆ ಕಾಣಸಿಗಲಿದೆ. ಮಾರ್ಚ್ 9 ರಿಂದ ಸಂಜೆ 6:30 ಕ್ಕೆ, ಜೀ಼ ಕನ್ನಡ ವಾಹಿನಿಯಲ್ಲಿ 'ಕೃಷ್ಣ ರುಕ್ಕು' ಪ್ರಸಾರ ಕಾಣಲಿದೆ.

Yashaswi Devadiga

View all posts by this author