ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Lakshmi Nivasa Serial: ಹೊಸ ಗೆಟಪ್‌ನಲ್ಲಿ ಜಯಂತ್; ಇನ್ನು ಚಿನ್ನುಮರಿ ಕಥೆ ಅಷ್ಟೇ!

Chinnumari: ಜಯಂತ್‌ ಲುಕ್‌ ಚೇಂಜ್‌ ಆಗಿದೆ. ಚಿನ್ನುಮರಿನ ಹುಡುಕೋಕೆ ಹೊಸ ಪ್ರಯತ್ನ ಮಾಡಿದ್ದಾನೆ ಜಯಂತ್‌. ತಾತನ ಗೆಟಪ್‌ನಲ್ಲಿ ಕಾಣಿಸಿಕೊಳ್ತಿದ್ದಾನೆ ಜಯಂತ್. ಜಾಹ್ನವಿ ಸತ್ತಿಲ್ಲ ಬದುಕಿದ್ದಾಳೆ ಅನ್ನೋದು ಜಯಂತ್‌ಗೆ ಗೊತ್ತಾಗಿದೆ. ಜಯಂತ್‌ , ಜಾಹ್ನವಿ ಬಗ್ಗೆಯೇ ಸಿಕ್ಕಾಪಟ್ಟೆ ತಲೆ ಕೆಡಿಸಿಕೊಂಡಿದ್ದಾನೆ. ವಿಶ್ವ ಆಕೆಯನ್ನು ಎಲ್ಲಾ ರೀತಿಯಿಂದಲೂ ರಕ್ಷಣೆ ಮಾಡುತ್ತಿದ್ದಾರೆ. ಆಕೆಯನ್ನು ಕಣ್ಣಲ್ಲಿ ಕಣ್ಣು ಇಟ್ಟು ನೋಡಿಕೊಳ್ತಿದ್ದಾನೆ. ಆದರೂ ಜಯಂತ್‌ ಈಗ ಹೊಸ ಪ್ಲ್ಯಾನ್‌ಗೆ ಚಿನ್ನುಮರಿ ಸಿಕ್ಕಿ ಹಾಕಿಕೊಳ್ಳೋದು ಫಿಕ್ಸ್‌ ಅಂತಿದ್ದಾರೆ ವೀಕ್ಷಕರು.

ಲಕ್ಷ್ಮೀ ನಿವಾಸ ಧಾರಾವಾಹಿ

ಜೀ ಕನ್ನಡ ವಾಹಿನಿಯಲ್ಲಿ (Zee Kannada Serial) ಪ್ರಸಾರ ಕಾಣುತ್ತಿರುವ ಲಕ್ಷ್ಮೀ ನಿವಾಸ (Lakshmi Nivasa) ದಲ್ಲಿ ಸೈಕೋ ಜಯಂತ್‌ ಹಾವಳಿ ಜೋರಾಗಿದೆ. ಗೂಬೆ ಎನ್ನುವ ಫ್ರೆಂಡ್‌ನಿಂದ ಜಾಹ್ನವಿ (Jhanvi) ಸೇಫ್‌ ಆಗ್ತಿರೋ ವಿಚಾರ ಜಯಂತ್‌ಗೆ (Jayanth) ಗೊತ್ತಾಗಿದೆ. ಅಲ್ಲಿಂದ ಜಯಂತ್‌ , ಜಾಹ್ನವಿ ಬಗ್ಗೆಯೇ ಸಿಕ್ಕಾಪಟ್ಟೆ ತಲೆ ಕೆಡಿಸಿಕೊಂಡಿದ್ದಾನೆ. ವಿಶ್ವ ಆಕೆಯನ್ನು ಎಲ್ಲಾ ರೀತಿಯಿಂದಲೂ ರಕ್ಷಣೆ ಮಾಡುತ್ತಿದ್ದಾರೆ. ಆಕೆಯನ್ನು ಕಣ್ಣಲ್ಲಿ ಕಣ್ಣು ಇಟ್ಟು ನೋಡಿಕೊಳ್ತಿದ್ದಾನೆ. ಆದರೂ ಜಯಂತ್‌ ಈಗ ಹೊಸ ಪ್ಲ್ಯಾನ್‌ಗೆ ಚಿನ್ನುಮರಿ (Chinnumari) ಸಿಕ್ಕಿ ಹಾಕಿಕೊಳ್ಳೋದು ಫಿಕ್ಸ್‌ ಅಂತಿದ್ದಾರೆ ವೀಕ್ಷಕರು.

ಜಯಂತ್‌ ಲುಕ್‌ ಚೇಂಜ್‌

ಜಯಂತ್‌ ಲುಕ್‌ ಚೇಂಜ್‌ ಆಗಿದೆ. ಚಿನ್ನುಮರಿನ ಹುಡುಕೋಕೆ ಹೊಸ ಪ್ರಯತ್ನ ಮಾಡಿದ್ದಾನೆ ಜಯಂತ್‌. ತಾತನ ಗೆಟಪ್‌ನಲ್ಲಿ ಕಾಣಿಸಿಕೊಳ್ತಿದ್ದಾನೆ ಜಯಂತ್. ಜಾಹ್ನವಿ ಸತ್ತಿಲ್ಲ ಬದುಕಿದ್ದಾಳೆ ಅನ್ನೋದು ಜಯಂತ್‌ಗೆ ಗೊತ್ತಾಗಿದೆ.

ಇದನ್ನೂ ಓದಿ: Lakshmi Nivasa: ಲಕ್ಷ್ಮೀ ನಿವಾಸ ಧಾರಾವಾಹಿ ನಿರ್ಮಾಣಕ್ಕೆ ಹಣ ಪಡೆದು ಸೃಜನ್‌ ಲೋಕೇಶ್‌ಗೆ ಕೋಟಿಯ ವಂಚನೆ

ಕೈಗೆ ಸಿಕ್ಕ ಪತ್ನಿ ವಿಶ್ವನ ಕಾರಣದಿಂದ ಪದೇ ಪದೇ ತಪ್ಪಿಸಿಕೊಳ್ಳುತ್ತಿರುವುದು ಜಯಂತ್‌ಗೆ ಗೊತ್ತಾಗಿದೆ. ಸದ್ಯ ತಾತನ ಗೆಟಪ್‌ನಲ್ಲಿ ಜಯಂತ್‌, ಶಾಂತಮ್ಮನ ಮುಂದೆ ನಿಂತಿದ್ದಾನೆ. ಶಾಂತಮ್ಮನಿಗೆ ಗುರುತೇ ಸಿಗದಷ್ಟು ಬದಲಾಗಿದ್ದಾನೆ ಜಯಂತ್‌. ಹೀಗಾಗಿ ಚಿನ್ನುಮರಿ ಸಿಕ್ಕಾಕೊಳ್ಳೋದು ಫಿಕ್ಸ್., ಪ್ರೋಮೋ ನೋಡಿದ ಮೇಲೆ ಹೋಪ್ಸ್‌ ಹೋಯ್ತು ಅಂತ ಕಮೆಂಟ್‌ ಮಾಡ್ತಿದ್ದಾರೆ ವೀಕ್ಷಕರು.

ಸೈಕೋ ಜಯಂತ ವೇಷ ಬದಲಿಸಿಕೊಂಡು ವೃದ್ಧನಂತೆ ನಾಟಕವಾಡುತ್ತಾ ಸಹಾಯ ಕೇಳಿಕೊಂಡು ವಿಶ್ವನ ಮನೆಗೆ ಹೋಗಿದ್ದಾನೆ. ಈ ಮೂಲಕ ವಿಶ್ವನ ಮನೆಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಾ ಚಿನ್ನುಮರಿಯನ್ನು ಹುಡುಕುವುದಕ್ಕೆ ಮುಂದಾಗಿದ್ದಾನೆ.ಕೆಲಸಕ್ಕೆ ಸೇರಿಕೊಂಡ ದಿನವೇ ಚಿನ್ನುಮರಿ ತನ್ನ ಸೈಕೋ ಗಂಡನ ಕಣ್ಣಿಗೆ ಸಿಕ್ಕಿಬೀಳುತ್ತಾಳೆ. ಮುಂದೇನು ಆಗುತ್ತೆ ಎನ್ನೋದೆ ಕುತೂಹಲ.

ಜೀ ಕನ್ನಡ ವಾಹಿನಿ ಪ್ರೋಮೋ



ಪಣ ತೊಟ್ಟಿರುವ ಜಯಂತ್‌

ಈಗಾಗಲೇ ಕೋಮದಲ್ಲಿರುವ ಅಜ್ಜಿ ಮುಂದೆ ಜಯಂತ್‌ ಚಿನ್ನುಮರಿಯನ್ನ ಕಂಡುಹಿಡಿದೇ ತೀರುತ್ತೇನೆ ಎನ್ನುವ ಪಣ ತೊಟ್ಟಿದ್ದಾನೆ.ಜಯಂತ್​ ಕಣ್ಣುಗಳಿಂದ ವಿಶ್ವ ಜಾಹ್ನವಿಯನ್ನು ಹಲವಾರು ಬಾರಿ ಬಚಾವ್​ ಮಾಡಿದ್ದಾನೆ.

ಆದರೆ ಇದಾಗಲೇ ವಿಶ್ವನ ಭಾವಿ ಪತ್ನಿ ತನುಗೆ ಜಾಹ್ನವಿ ಮತ್ತು ವಿಶ್ವನ ಮೇಲೆ ಡೌಟ್​ ಬಂದಿದೆ. ಜಯಂತ್‌ ಈಗ ಎಲ್ಲ ಸತ್ಯವನ್ನ ಮಲಗಿರುವ ಅಜ್ಜಿ ಮುಂದೆ ಹೇಳಿದ್ದಾನೆ ಚಿನ್ನುಮರಿ ಬದುಕಿರೋದು ಸತ್ಯ. ಅಮ್ಮನ ಕನಸಲ್ಲಿ ಬಂದಿದಲ್ಲ ನಿಜವಾಗಿಯೂ ಚಿನ್ನುಮರಿ ಬದುಕಿದ್ದಾರೆ. ಸ್ವರ್ಗದಲ್ಲಿ ಇದ್ದಾಳೆ ಅಂತ ಅಂದುಕೊಂಡಿದ್ದಾರೆ. ಒಂದಲ್ಲ ಒಂದು ದಿನ ಅವರ ಮುಂದೆ ಕರೆದುಕೊಂಡು ಬಂದು ನಿಲ್ಲಿಸುತ್ತೇನೆ. ಚಿನ್ನುಮರಿಯನ್ನ ಪಡೆದುಕೊಳ್ಳುತ್ತೇನೆ. ನಿಮ್ಮಲ್ಲಿಯೇ ಆಶೀರ್ವಾದ ಪಡೆದುಕೊಳ್ಳುತ್ತೇನೆ ಎಂದಿದ್ದಾನೆ ಜಯಂತ್‌.

ಇದನ್ನೂ ಓದಿ: Lakshmi Nivasa Serial: ಲಕ್ಷ್ಮೀ ನಿವಾಸದ ಹೊಸ ಲಕ್ಷ್ಮೀ ಮಾಧುರಿ ಯಾರು ಗೊತ್ತೇ?: ಸಿನಿಮಾದಿಂದ ದೂರ ಇಳಿದಿದ್ದೇಕೆ?

ಪತ್ನಿಯನ್ನು ಸಾಯಿಸದಿದ್ದರೂ ವಿಶ್ವನನ್ನು ಸುಮ್ಮನೇ ಬಿಡಲ್ಲ ಜಯಂತ್​. ಮುಂದೇನಾಗುತ್ತೆ ಎಂದು ವೀಕ್ಷಕರು ಊಹಿಸೋದು ಕಷ್ಟವಾಗಿದೆ.

Yashaswi Devadiga

View all posts by this author