ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Lakshmi Nivasa: ಲಕ್ಷ್ಮೀ ನಿವಾಸ ಧಾರಾವಾಹಿ ನಿರ್ಮಾಣಕ್ಕೆ ಹಣ ಪಡೆದು ಸೃಜನ್‌ ಲೋಕೇಶ್‌ಗೆ ಕೋಟಿಯ ವಂಚನೆ

ಸೃಜನ್‌ ಲೋಕೇಶ್‌ ಅವರ ಲೋಕೇಶ್‌ ಪ್ರೊಡಕ್ಷನ್ಸ್‌ ಸಂಸ್ಥೆಯಿಂದ ನಿರ್ಮಾಪಕ ಸತ್ಯ ಮತ್ತು ಅವರ ಪತ್ನಿ ನಿರ್ಮಾಲಾ 1 ಕೋಟಿ ರೂಪಾಯಿ ಹಣವನ್ನು ಸಾಲವಾಗಿ ಪಡೆದಿದ್ದರು. ಇದೀಗ ಹಣ ಪಡೆದು ವಾಪಸ್ ನೀಡಿಲ್ಲ ಎಂದು ಆರೋಪ ಮಾಡಲಾಗುತ್ತಿದೆ. ಸಾಯಿ ನಿರ್ಮಲಾ ಪ್ರೊಡಕ್ಷನ್ಸ್‌ ಎಂಬ ಕಂಪೆನಿ ಹೆಸರಿನಲ್ಲಿ ಇವರು ಸೀರಿಯಲ್‌ ನಿರ್ಮಾಣ ಮಾಡುತ್ತಿದ್ದಾರೆ.

ಧಾರಾವಾಹಿ ನಿರ್ಮಾಣಕ್ಕೆ ಹಣ ಪಡೆದು ಕೋಟಿ ವಂಚನೆ

Nirmala Sathya and Srujan Lokesh -

Profile Vinay Bhat Sep 3, 2025 3:12 PM

ಧಾರಾವಾಹಿ (Kannada Serial) ನಿರ್ಮಾಣಕ್ಕಾಗಿ ಹಣ ಪಡೆದು ವಂಚನೆ ಮಾಡಿದ ಆರೋಪ ನಟ ಸತ್ಯ ಮತ್ತು ನಟಿ ನಿರ್ಮಲಾ ದಂಪತಿ ವಿರುದ್ಧ ಕೇಳಿ ಬಂದಿದೆ. ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿಯ ನಿರ್ಮಾಣಕ್ಕಾಗಿ ಸೃಜನ್‌ ಲೋಕೇಶ್‌ ಅವರ ಲೋಕೇಶ್‌ ಪ್ರೊಡಕ್ಷನ್ಸ್‌ ಸಂಸ್ಥೆಯಿಂದ ನಿರ್ಮಾಪಕ ಸತ್ಯ ಮತ್ತು ಅವರ ಪತ್ನಿ ನಿರ್ಮಾಲಾ 1 ಕೋಟಿ ರೂಪಾಯಿ ಹಣವನ್ನು ಸಾಲವಾಗಿ ಪಡೆದಿದ್ದರು. ಇದೀಗ ಹಣ ಪಡೆದು ವಾಪಸ್ ನೀಡಿಲ್ಲ ಎಂದು ಆರೋಪ ಮಾಡಲಾಗುತ್ತಿದೆ. ಸಾಯಿ ನಿರ್ಮಲಾ ಪ್ರೊಡಕ್ಷನ್ಸ್‌ ಎಂಬ ಕಂಪೆನಿ ಹೆಸರಿನಲ್ಲಿ ಇವರು ಸೀರಿಯಲ್‌ ನಿರ್ಮಾಣ ಮಾಡುತ್ತಿದ್ದಾರೆ.

2023ರ ನವೆಂಬರ್‌ನಲ್ಲಿ ಒಪ್ಪಂದ ಮಾಡಿಕೊಂಡಿದ್ದ ಆರೋಪಿಗಳು, 2024ರ ಏಪ್ರಿಲ್‌ 1ರಿಂದ ಪ್ರತಿ ತಿಂಗಳು 5 ಲಕ್ಷ ರೂಪಾಯಿ ಕಂತುಗಳಲ್ಲಿ ಹಣವನ್ನ ವಾಪಾಸ್‌ ಕೊಡೋದಾಗಿ ಅಗ್ರಿಮೆಂಟ್‌ ಮಾಡಿಕೊಂಡಿದ್ದರು. ಆದರೆ ಇದುವರೆಗೂ ಯಾವುದೇ ಹಣ ಪಾವತಿಸದ ಹಿನ್ನೆಲೆ, MOUನಲ್ಲಿರುವ ಷರತ್ತು ಉಲ್ಲಂಘನೆ ಮಾಡಿರೋದಾಗಿ ದೂರು ದಾಖಲಾಗಿದೆ. ಇದುವರೆಗೂ ಯಾವುದೇ ಹಣ ನೀಡಿಲ್ಲ ಎಂದು ಸೃಜನ್ ಲೋಕೇಶ್ ಪರ ಅಗ್ನಿ ಯು ಸಾಗರ್ ದೂರು ನೀಡಿದ್ದಾರೆ. ಬೆಂಗಳೂರಿನ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಸಿ.ಕೆ‌ ಅಚ್ಚುಕಟ್ಟು ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟನೆ ಮಾಡಿರುವ ದಂಪತಿಗೆ ಸಂಕಷ್ಟ ಎದುರಾಗಿದೆ. ಸಿ ಕೆ ಅಚ್ಚುಕಟ್ಟು ಪೊಲೀಸರು ಎಫ್ಐಆರ್ ದಾಖಲಿಸಿ‌ ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

Bhagya Lakshmi Serial: ಕಾಲೇಜ್ ಬಂಕ್ ಮಾಡಿ ಸಸ್ಪೆಂಡ್ ಆದ ತನ್ವಿ: ಭಾಗ್ಯಾಗೆ ಮತ್ತೊಂದು ಸಂಕಷ್ಟ

ಈ ಹಿಂದೆ ನಟಿ ಅಶ್ವಿನಿ ಗೌಡ ಅವರಿಗೆ ನಟನೆ ಸಂಭಾವನೆ ಕೊಟ್ಟಿಲ್ಲ ಎಂದು ಅವರು ನಿರ್ಮಲಾ ಚೆನ್ನಪ್ಪ ವಿರುದ್ಧ ಕೂಗಾಡಿದ ವಿಡಿಯೋವೊಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಇವರ ಸಾಯಿ ನಿರ್ಮಲಾ ಪ್ರೊಡಕ್ಷನ್ಸ್‌ ಮೂಲಕ ಈಗಾಗಲೇ ಪದ್ಮಾವತಿ ಧಾರಾವಾಹಿ, ಕನ್ನಡ ಕೋಗಿಲೆ ಶೋಗಳನ್ನು ನಿರ್ಮಾಣ ಮಾಡಿದ್ದಾರೆ. ನಿರ್ಮಲಾ ಚೆನ್ನಪ್ಪ ಅವರು ಕೆಲ ವಾಹಿನಿಯಲ್ಲಿ ಫಿಕ್ಷನ್‌, ನಾನ್‌ ಫಿಕ್ಷನ್‌ ಎರಡೂ ವರ್ಗಗಳಲ್ಲಿ ಕೆಲಸ ಮಾಡಿದ್ದಾರೆ. ಫಿಕ್ಷನ್‌, ನಾನ್‌ ಫಿಕ್ಷನ್‌ ಎರಡರಲ್ಲೂ ನಿರ್ದೇಶನ ಮಾಡಿ ಮೊದಲ ಮಹಿಳಾ ನಿರ್ದೇಶಕಿ ಎಂಬ ಗೌರವ ಕೂಡ ಸಿಕ್ಕಿತ್ತು.