ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Lakshmi Nivasa Serial : ಎರಡನೇ ಬಾರಿ ತಂದೆಯಾದ ಲಕ್ಷ್ಮೀ ನಿವಾಸ ʻವೆಂಕಿʼ; ಫೋಟೋಶೂಟ್‌ ವೈರಲ್‌

chandrashekar shastry: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ದೊಡ್ಡ ತಾರಾ ಬಳಗವೇ ಇದೆ. ಈ ಧಾರಾವಾಹಿಯಲ್ಲಿ ಹಲವು ಪಾತ್ರಗಳು ಜನರಿಗೆ ಇಷ್ಟವಾಗುತ್ತಿದ್ದರೂ, ತನ್ನ ಮುಗ್ಧಪಾತ್ರದಿಂದ ಗಮನ ಸೆಳೆದದ್ದು ಅಂದ್ರೆ ವೆಂಕಿ ಪಾತ್ರಧಾರಿ. ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಶ್ರೀನಿವಾಸ್‌ ಹಾಗೂ ಲಕ್ಷ್ಮೀ ದಂಪತಿಯ ದತ್ತು ಪುತ್ರ ವೆಂಕಿ ಪಾತ್ರದಲ್ಲಿ ನಟ ಚಂದ್ರಶೇಖರ್‌ ಶಾಸ್ತ್ರೀ ಅವರು ನಟಿಸುತ್ತಿದ್ದಾರೆ. ಈಗ ಇವರು ಗುಡ್‌ನ್ಯೂಸ್‌ ಕೊಟ್ದಿದ್ದಾರೆ.

ಲಕ್ಷ್ಮೀ ನಿವಾಸ ಧಾರಾವಾಹಿ

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ (Lakshmi Nivasa) ದೊಡ್ಡ ತಾರಾ ಬಳಗವೇ ಇದೆ. ಈ ಧಾರಾವಾಹಿಯಲ್ಲಿ ಹಲವು ಪಾತ್ರಗಳು ಜನರಿಗೆ ಇಷ್ಟವಾಗುತ್ತಿದ್ದರೂ, ತನ್ನ ಮುಗ್ಧಪಾತ್ರದಿಂದ ಗಮನ ಸೆಳೆದದ್ದು ಅಂದ್ರೆ ವೆಂಕಿ (Venki) ಪಾತ್ರಧಾರಿ. ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಶ್ರೀನಿವಾಸ್‌ ಹಾಗೂ ಲಕ್ಷ್ಮೀ ದಂಪತಿಯ ದತ್ತು ಪುತ್ರ ವೆಂಕಿ ಪಾತ್ರದಲ್ಲಿ ನಟ ಚಂದ್ರಶೇಖರ್‌ ಶಾಸ್ತ್ರೀ ಅವರು ನಟಿಸುತ್ತಿದ್ದಾರೆ. ಈಗ ಇವರು ಗುಡ್‌ನ್ಯೂಸ್‌ (Good News) ಕೊಟ್ದಿದ್ದಾರೆ.

ಎರಡನೇ ಬಾರಿಗೆ ತಂದೆ

ಲಕ್ಷ್ಮೀ ನಿವಾಸ ಧಾರಾವಾಹಿ ನಟ ಚಂದ್ರಶೇಖರ್‌ ಅವರಿಗೆ ಮದುವೆಯಾಗಿ, ಮಗ ಕೂಡ ಇದ್ದಾನೆಚಂದ್ರಶೇಖರ್‌ ಅವರ ಪತ್ನಿ ಹೆಸರು ಸೌಮ್ಯಾ ಶಾಸ್ತ್ರೀ. ಚಂದ್ರಶೇಖರ್‌ ಅವರು ಎರಡನೇ ಬಾರಿಗೆ ತಂದೆ ಆಗುತ್ತಿದ್ದಾರೆ. ಚಂದ್ರಶೇಖರ್‌ ಹಾಗೂ ಸೌಮ್ಯಾ ಅವರು ಬೇಬಿಬಂಪ್‌ ಫೋಟೋಶೂಟ್‌ ಮಾಡಿಸಿಕೊಂಡಿದ್ದಾರೆ. ಚಂದ್ರಶೇಖರ್‌ ಅವರು ಈ ಹಿಂದೆ ಲಕ್ಷ್ಮೀ ಬಾರಮ್ಮ, ದಾಸ ಪುರಂದರ, ಉಘೇ ಉಘೇ ಮಾದೇಶ್ವರ, ನಮ್ಮ ಲಚ್ಚಿ ಧಾರಾವಾಹಿಗಳಲ್ಲಿ ಕೂಡ ನಟಿಸಿದ್ದರು.

ಇದನ್ನೂ ಓದಿ: S P Venkatesh: ʻಹೃದಯ ಸಮುದ್ರ ಕಲಕಿʼ ಹಾಡಿನ ಮಾಂತ್ರಿಕ ಎಸ್​​ಪಿ ವೆಂಕಟೇಶ್ ಇನ್ನಿಲ್ಲ

ಲಕ್ಷ್ಮೀ ನಿವಾಸದಲ್ಲಿ ಮನೆಗಾಗಿ ಮನೆಯವರಿಗಾಗಿ ಮರುಗುವ ಮುಗ್ಧ ಪಾತ್ರ ವೆಂಕಿಯದ್ದು, ತಮ್ಮನವರಿಂದ ಸದಾ ಹೀಯಳಿಸಲ್ಪಟ್ಟ, ಹಾಗೂ ಇಬ್ಬರು ಮುದ್ದಿನ ತಂಗಿಯರ ಪ್ರೀತಿಯ ಅಣ್ಣ ವೆಂಕಿ. ಒಂದು ಅಕ್ಷರ ಮಾತನಾಡದೇ ಇದ್ದರೂ ತಮ್ಮ ಅಭಿನಯದ ಮೂಲಕವೇ ವೀಕ್ಷಕರ ಕಣ್ನಂಚನ್ನು ಇದ್ದೆ ಮಾಡಿದ ಮಹಾನ್ ನಟ ಚಂದ್ರಶೇಖರ್ ಶಾಸ್ತ್ರಿ.

ಮೂಲತಃ ಶಿವಮೊಗ್ಗದವರಾದ ವೆಂಕಿ ಪಾತ್ರದ ಮೂಲಕ ಜನಪ್ರಿಯತೆ ಪಡೆದ ನಟ ಚಂದ್ರಶೇಖರ್ ಶಾಸ್ತ್ರಿ ಕಳೆದ ಹಲವು ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ. ಶಾಸ್ತ್ರಿ ರಂಗಭೂಮಿ ಕಲಾವಿದರು ಆಗಿದ್ದು, ನಾಟಕಗಳಲ್ಲಿ ಅಭಿನಯಿಸಿದ್ದರಿಂದಲೆ ಇವರ ಅಭಿನಯ ಅಮೋಘವಾಗಿ ಮೂಡಿ ಬರುತ್ತಿದೆ. ಉಘೇ ಉಘೇ ಮಾದೇಶ್ವರ ಧಾರಾವಾಹಿಯಲ್ಲೂ ಶಾಸ್ತ್ರಿ ನಟಿಸಿದ್ದರು.



ಲಕ್ಷ್ಮೀ ನಿವಾಸದಲ್ಲಿ ಪಾತ್ರ ಸಿಕ್ಕಿದ್ದೇಗೆ?

ಈ ಬಗ್ಗೆ ನಟ ಸಂದರ್ಶನವೊಂದರಲ್ಲಿ ಮಾತನಾಡಿ, ನಾನು ಮೊದಲಿಗೆ ಸಂತೋಷ್‌ ಪಾತ್ರಕ್ಕೆ ಆಡಿಷನ್‌ ಕೊಟ್ಟಿದ್ದೆ. ಲಕ್ಷ್ಮೀ ಶ್ರೀನಿವಾಸರ ಹಿರಿಯ ಮಗ ಜಿಪುಣ, ಸ್ವಾರ್ಥಿ ಸಂತೋಷ್ ಪಾತ್ರಕ್ಕೆ . ಆದರೆ ಅದಕ್ಕೆ ನನು ಸೂಟ್‌ ಆಗಿಲ್ಲ. ಆಡಿಷನ್‌ ತೆಗೆದುಕೊಳ್ಳೋರಿಗೂ ಅಷ್ಟು ಸರಿ ಅನ್ನಿಸಿಲ್ಲ ಅದು ಕೂಡ ನಾನು ಗಮನಿಸಿದೆ. ವೆಂಕಿ ಪಾತ್ರದ ಡೈಲಾಗ್ ಕೊಟ್ಟು ನಟಿಸುವಂತೆ ಹೇಳಿದರು. ಮನಾನು ಮೈಕ್‌ ಹಿಡಿದು ನಟಿಸಲು ಶುರು ಮಾಡಿದೆ. ಆದರೆ ಆಡಿಶನ್ ತೆಗೊಳಿತ್ತಿದ್ದವರು ನಕ್ಕು, ನಾವು ಡೈಲಾಗ್ ಕೊಟ್ಟಿದ್ದು, ನಿಮ್ಮ ರಿಯಾಕ್ಷನ್ ಗೆ ಮಾತ್ರ, ನೀವು ಇದರಲ್ಲಿ ಮೂಗ ಎಂದು ಬಿಟ್ಟರು.

ಇದನ್ನೂ ಓದಿ: Sangeethaa Sringeri: ನೋಡಿದ ಮೊದಲ ಬಾರಿಯಲ್ಲಿ ಅವರಿಗೆ ಪ್ರೀತಿಯಾಗಿತ್ತು! ಲವ್ ಬಗ್ಗೆ ಮಾತನಾಡಿದ ಸಂಗೀತಾ ಶೃಂಗೇರಿ

ಬಳಿಕ ನಾನು ಅರ್ಥೈಸಿಕೊಂಡು ಸನ್ನೆಗಳನ್ನು ಮಾಡಿದೆ. ವೆಂಕಿ ಪಾತ್ರ ಮಾಡುವಾಗ ಕ್ಷಣಾರ್ಧದಲ್ಲಿ ನಾನು ಈ ಪಾತ್ರ ಮಾಡಬಲ್ಲೇ ಎಂದು ಅನ್ನಿಸತ್ತು ಎಂದು ಹೇಳಿಕೊಂಡಿದ್ದರು.

Yashaswi Devadiga

View all posts by this author