ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bigg Boss: ಹಿಂದಿ ಬಿಗ್ ಬಾಸ್ ಮನೆಗೆ ಲಲಿತ್ ಮೋದಿ ಎಂಟ್ರಿ?

Bigg Boss: ಐಪಿಎಲ್ ಸಂಸ್ಥಾಪಕ ಮತ್ತು ಉದ್ಯಮಿ ಲಲಿತ್ ಮೋದಿ (Lalit Modi) ಮುಂಬರುವ ರಿಯಾಲಿಟಿ ಶೋ ಬಿಗ್ ಬಾಸ್‌ನಲ್ಲಿ ಭಾಗವಹಿಸುತ್ತಿದ್ದಾರೆ ಎಂದು ವರದಿ ಆಗಿದೆ. ಆದರೆ ಈ ಬಗ್ಗೆ ಇನ್ನು ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಲಲಿತ್ ಮೋದಿ ಈಗ ಈ ಸುದ್ದಿ ಫೆಕ್‌ ಎಂದು ಕ್ಲಾರಿಟಿ ಕೊಟ್ಟಿದ್ದಾರೆ. ಕಾರ್ಯಕ್ರಮಕ್ಕಾಗಿ ತಮ್ಮನ್ನು ಸಂಪರ್ಕಿಸಿಲ್ಲ ಮತ್ತು ಅದರಲ್ಲಿ ಭಾಗವಹಿಸುವ ಯಾವುದೇ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದರು.

ಹಿಂದಿ ಬಿಗ್ ಬಾಸ್ ಮನೆಗೆ  ಲಲಿತ್ ಮೋದಿ ಎಂಟ್ರಿ?

ಲಲಿತ್‌ ಮೋದಿ -

Yashaswi Devadiga
Yashaswi Devadiga Aug 15, 2026 8:40 AM

ಐಪಿಎಲ್ ಸಂಸ್ಥಾಪಕ ಮತ್ತು ಉದ್ಯಮಿ ಲಲಿತ್ ಮೋದಿ (Lalit Modi) ಮುಂಬರುವ ರಿಯಾಲಿಟಿ ಶೋ ಬಿಗ್ ಬಾಸ್‌ನಲ್ಲಿ ಭಾಗವಹಿಸುತ್ತಿದ್ದಾರೆ ಎಂದು ವರದಿ ಆಗಿದೆ. ಆದರೆ ಈ ಬಗ್ಗೆ ಇನ್ನು ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಲಲಿತ್ ಮೋದಿ ಈಗ ಈ ಸುದ್ದಿ ಫೆಕ್‌ ಎಂದು ಕ್ಲಾರಿಟಿ ಕೊಟ್ಟಿದ್ದಾರೆ. ಕಾರ್ಯಕ್ರಮಕ್ಕಾಗಿ ತಮ್ಮನ್ನು ಸಂಪರ್ಕಿಸಿಲ್ಲ (Bigg Boss 20) ಮತ್ತು ಅದರಲ್ಲಿ ಭಾಗವಹಿಸುವ ಯಾವುದೇ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದರು.

ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್ ಬಾಸ್‌ನ 20 ನೇ ಸೀಸನ್ ಮುಂದಿನ ತಿಂಗಳು ಬರಲಿದೆ. ಸ್ಪರ್ಧಿಗಳ ಪಟ್ಟಿಯನ್ನು ಇನ್ನೂ ಅಧಿಕೃತವಾಗಿ ಘೋಷಿಸಲಾಗಿಲ್ಲ, ಆದರೆ ಟೀಸರ್ ಒಂದು ವಿಶಿಷ್ಟ ಪರಿಕಲ್ಪನೆಯ ಬಗ್ಗೆ ಸುಳಿವು ನೀಡಿದೆ. ಇದರ ಮಧ್ಯೆ, ಈ ವಾರ ಕೆಲವು ವರದಿಗಳು ಲಲಿತ್ ಮೋದಿ ಈ ವರ್ಷ ಸ್ಪರ್ಧಿಗಳಲ್ಲಿ ಒಬ್ಬರು ಎಂದು ಹೇಳಿಕೊಂಡಿವೆ.

ಇದಕ್ಕೆ ಪ್ರತಿಕ್ರಿಯಿಸಿದ ಲಲಿತ್ ಮೋದಿ, ಬಿಗ್ ಬಾಸ್ 20 ಕ್ಕೆ ನನ್ನನ್ನು ಯಾರೂ ಸಂಪರ್ಕಿಸಿಲ್ಲ. ನಾನು ಬಿಗ್ ಬಾಸ್ 20 ರಲ್ಲಿ ಭಾಗವಹಿಸುತ್ತಿಲ್ಲ ಸಂಪೂರ್ಣವಾಗಿ ಕಟ್ಟುಕಥೆಯು ಸಂಬಂಧಪಟ್ಟ ವ್ಯಕ್ತಿಯನ್ನು ಯಾರೂ ಕೇಳದೆ "ಸುದ್ದಿ"ಯಾಗುವುದು ಹೇಗೆ ಎಂಬುದು ಆಶ್ಚರ್ಯಕರವಾಗಿದೆ" ಎಂದು ಬರೆದಿದ್ದಾರೆ.

ಲಲಿತ್ ಮೋದಿ ಅವರ ವಕೀಲರು ನೀಡಿರುವ ನೋಟಿಸ್‌ನಲ್ಲಿ, ಬಿಗ್ ಬಾಸ್ 20 ಗಾಗಿ ಅವರು ಸಹಿ ಹಾಕಿದ್ದಾರೆಂದು ಹೇಳಲಾದ ಸುದ್ದಿ ವರದಿಗಳನ್ನು ಉಲ್ಲೇಖಿಸಲಾಗಿದೆ. "ನಮ್ಮ ಕಕ್ಷಿದಾರರು ಈ ಮೂಲಕ ಸ್ಪಷ್ಟಪಡಿಸುತ್ತಾರೆ, ಈ ವರದಿಗಳು ಸುಳ್ಳು, ಆಧಾರರಹಿತ ಮತ್ತು ದುರುದ್ದೇಶಪೂರಿತವಾಗಿವೆ. ನಿರ್ಮಾಪಕರು, ಪ್ರಸಾರಕರು, ಚಾನೆಲ್ ಅಥವಾ ಸದರಿ ಕಾರ್ಯಕ್ರಮದ ಯಾವುದೇ ಪ್ರತಿನಿಧಿ ನಮ್ಮ ಕಕ್ಷಿದಾರರನ್ನು ಸಂಪರ್ಕಿಸಿಲ್ಲ; ನಮ್ಮ ಕಕ್ಷಿದಾರರನ್ನು ಪ್ರತಿನಿಧಿಸಲು ಅಥವಾ ಅದಕ್ಕೆ ಸಂಬಂಧಿಸಿದಂತೆ ಅವರ ಪರವಾಗಿ ನಿಲ್ಲಲು ಯಾವುದೇ ವ್ಯಕ್ತಿಗೆ ಅಧಿಕಾರವಿಲ್ಲ; ಮತ್ತು ನಮ್ಮ ಕಕ್ಷಿದಾರರು ಸದರಿ ಕಾರ್ಯಕ್ರಮದಲ್ಲಿ ಯಾವುದೇ ರೀತಿಯಲ್ಲಿ ಭಾಗವಹಿಸಲು ಅಥವಾ ಸಂಬಂಧ ಹೊಂದಲು ಒಪ್ಪಿಗೆ ನೀಡಿಲ್ಲ ಮತ್ತು ಉದ್ದೇಶವನ್ನು ಹೊಂದಿಲ್ಲ" ಎಂದು ಅದು ಸ್ಪಷ್ಟಪಡಿಸಿದೆ.



ಅಥವಾ ಪ್ರತಿನಿಧಿಸಲು ಅರ್ಹರಲ್ಲ".

"ಪತ್ರಿಕಾ ಸಂಸ್ಥೆಗಳು, ಮಾಧ್ಯಮ ಸಂಸ್ಥೆಗಳು, ಡಿಜಿಟಲ್ ವೇದಿಕೆಗಳು ಮತ್ತು ಸಾರ್ವಜನಿಕರು ಈ ಸ್ಪಷ್ಟೀಕರಣವನ್ನು ಗಮನಿಸಬೇಕು, ಅಂತಹ ಯಾವುದೇ ವರದಿಗಳನ್ನು ಪ್ರಕಟಿಸುವುದು, ಪ್ರಸಾರ ಮಾಡುವುದು, ಪುನರಾವರ್ತಿಸುವುದು ಅಥವಾ ಪುನರುತ್ಪಾದಿಸುವುದನ್ನು ತಡೆಯಬೇಕು ಮತ್ತು ಈಗಾಗಲೇ ಪ್ರಕಟವಾದ ಅಂತಹ ಯಾವುದೇ ವಿಷಯವನ್ನು ಮರುಪಡೆಯಲು, ಹಿಂತೆಗೆದುಕೊಳ್ಳಲು ಅಥವಾ ತೆಗೆದುಹಾಕಲು ವಿನಂತಿಸಲಾಗಿದೆ" ಎಂದು ಬರೆದಕೊಂಡಿದೆ.

ಲಲಿತ್ ಮೋದಿ ಅವರು ಕ್ರಿಕೆಟ್ ಅಷ್ಟೇ ಅಲ್ಲದೆ ವೈಯಕ್ತಿಕ ಜೀವನದಿಂದಲೂ ಸುದ್ದಿಯಲ್ಲಿದ್ದಾರೆ. ನಟಿ ಸುಶ್ಮಿತಾ ಸೇನ್ ಜೊತೆಗಿನ ಲವ್ ಸ್ಟೋರಿ ಸಾಕಷ್ಟು ಸದ್ದು ಮಾಡಿತ್ತು.

ಬಿಗ್ ಬಾಸ್ ಸೀಸನ್ 20 ಸೆಪ್ಟೆಂಬರ್ 6 ರಂದು ಜಿಯೋಹಾಟ್‌ಸ್ಟಾರ್ ಮತ್ತು ಕಲರ್ಸ್‌ನಲ್ಲಿ ಪ್ರಥಮ ಪ್ರದರ್ಶನಗೊಳ್ಳುತ್ತದೆ ನಿಯಾ ಶರ್ಮಾ, ಅರ್ಜುನ್ ಬಿಜ್ಲಾನಿ, ಕರಣ್ ಪಟೇಲ್ ಮತ್ತು ಜನ್ನತ್ ಜುಬೈರ್ ಸಂಭಾವಯ ಪಟ್ಟಿಯಲ್ಲಿದೆ.