ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Maa Inti Bangaaram: ಸಮಂತಾ ಗಂಡನಾಗಿ ದೂದ್ ಪೇಡಾ ದಿಗಂತ್‌! ʻಮಾ ಇಂಟಿ ಬಂಗಾರಂʼ ಟೀಸರ್‌ನಲ್ಲಿ ಸ್ಯಾಮ್‌ ಬೆಂಕಿ ಅವತಾರ

Diganth: ನಟಿ ಸಮಂತಾ ರುತ್ ಪ್ರಭು ತಮ್ಮ ಮುಂಬರುವ ಚಿತ್ರ 'ಮಾ ಇಂಟಿ ಬಂಗಾರಂ' ಮೂಲಕ ಮತ್ತೆ ದೊಡ್ಡ ಪರದೆಗೆ ಮರಳಲು ಸಜ್ಜಾಗಿದ್ದಾರೆ. ಶುಕ್ರವಾರ (ಜನವರಿ 9), ನಟಿ ಸಮಂತಾ ಅವರ ರೋಮಾಂಚಕ ಟೀಸರ್ ಟ್ರೇಲರ್ ಔಟ್‌ ಆಗಿದೆ. ಆಕ್ಷನ್-ಪ್ಯಾಕ್ಡ್ ಅವತಾರದಲ್ಲಿ ಸಮಂತಾ ಮಿಂಚಿದ್ದಾರೆ. ಸಮಂತಾ ಪತಿಯ ಪಾತ್ರದಲ್ಲಿ ನಮ್ಮ ಕನ್ನಡದ ಪ್ರತಿಭೆ ದಿಗಂತ್ ಮಂಚಾಲೆ ನಟಿಸಿದ್ದಾರೆ.

ಸಮಂತಾ ದಿಗಂತ್‌

ನಟಿ ಸಮಂತಾ ರುತ್ ಪ್ರಭು ತಮ್ಮ ಮುಂಬರುವ ಚಿತ್ರ 'ಮಾ ಇಂಟಿ ಬಂಗಾರಂ'(Maa Inti Bangaaram teaser) ಮೂಲಕ ಮತ್ತೆ ದೊಡ್ಡ ಪರದೆಗೆ ಮರಳಲು ಸಜ್ಜಾಗಿದ್ದಾರೆ. ಶುಕ್ರವಾರ (ಜನವರಿ 9), ನಟಿ ಸಮಂತಾ ಅವರ ರೋಮಾಂಚಕ ಟೀಸರ್ (Teaser) ಟ್ರೇಲರ್ ಔಟ್‌ ಆಗಿದೆ. ಆಕ್ಷನ್-ಪ್ಯಾಕ್ಡ್ ಅವತಾರದಲ್ಲಿ ಸಮಂತಾ ಮಿಂಚಿದ್ದಾರೆ. ಸಮಂತಾ ಪತಿಯ ಪಾತ್ರದಲ್ಲಿ ನಮ್ಮ ಕನ್ನಡದ ಪ್ರತಿಭೆ ದಿಗಂತ್ (Diganth) ಮಂಚಾಲೆ ನಟಿಸಿದ್ದಾರೆ.

ಮಾ ಇಂಟಿ ಬಂಗಾರಂ ಟೀಸರ್‌!

ಬಹುನಿರೀಕ್ಷಿತ ಟೀಸರ್ ಅನ್ನು ಸಮಂತಾ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರು ತಮ್ಮ ಪತಿಯೊಂದಿಗೆ ತಮ್ಮ ಅತ್ತೆ-ಮಾವನ ಮನೆಗೆ ಆಗಮಿಸಿ, ಒಂದು ವಾರದೊಳಗೆ ಅವರನ್ನು ಗೆಲ್ಲುವ ವಿಶ್ವಾಸದಿಂದ ಭರವಸೆ ನೀಡುತ್ತಾರೆ. 'ಪರಿಪೂರ್ಣ ಸೊಸೆ' ಆಗಲು ಕಾಯುತ್ತಿರುತ್ತಾರೆ. ಹಗಲು ಥೇಟ್ ಗೌರಮ್ಮನಂತೆ ಸಮಂತಾ ಕಾಣಿಸಿಕೊಂಡ್ರೆ, ರಾತ್ರಿ ಕಾಳಿಯ ಸ್ವರೂಪ ತಾಳುವ ಸಮಂತಾ ನೋಡಿ ಫ್ಯಾನ್ಸ್ ಬೆಚ್ಚಿಬಿದ್ದಿದ್ದಾರೆ.

ಇದನ್ನೂ ಓದಿ: ಡಾಲಿ ಪಿಕ್ಚರ್ಸ್‌ನ 6ನೇ ಸಿನಿಮಾ ಘೋಷಿಸಿದ ನಟ ಧನಂಜಯ; ʻಹೆಗ್ಗಣ ಮುದ್ದುʼ ಸಿನಿಮಾಗೆ ಅರುಣ್‌ ಸಾಗರ್‌ ಪುತ್ರಿ ನಾಯಕಿ

ಟೀಸರ್‌ನಲ್ಲಿ ಸಮಂತಾ ಉಗ್ರ ಆಕ್ಷನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಗೂಂಡಾಗಳನ್ನು ಒಂಟಿಯಾಗಿ ಹೊಡೆದುರುಳಿಸುವುದು, ಗುಂಡಿನ ಚಕಮಕಿಯಲ್ಲಿ ತೊಡಗುವುದು ಮತ್ತು ನಂತರ ಸ್ವತಃ ಶವಗಳನ್ನು ವಿಲೇವಾರಿ ಮಾಡುವ ಮೂಲಕ ರಕ್ತಪಾತದಲ್ಲಿ ಮಿಂದೆದಿದ್ದಾರೆ. ಮುಚ್ಚಿಹಾಕುವುದು ಕಂಡುಬರುತ್ತದೆ. ಟೀಸರ್ ಅನ್ನು ಹಂಚಿಕೊಂಡ ಸಮಂತಾ, "ರಕ್ತಸಿಕ್ತವಾಗಿದೆ" ಎಂದು ಬರೆದಿದ್ದಾರೆ.



ರಕುಲ್ ಪ್ರೀತ್ ಸಿಂಗ್ ಟೀಸರ್ ಅನ್ನು ಹೊಗಳುತ್ತಾ, "ಉಫ್ಫ್ಫ್ ಫ್ಯಾಬ್ ಫ್ಯಾಬ್ ಫ್ಯಾಬ್" ಎಂದು ಕಾಮೆಂಟ್ ಮಾಡಿದ್ದಾರೆ. "ಆಕ್ಷನ್ ಸೀಕ್ವೆನ್ಸ್‌ಗಳು ಅತ್ಯುತ್ತಮವಾಗಿವೆ" ಎಂದು ಕಾಮೆಂಟ್ ಮಾಡಿದ್ದಾರೆ. ಒಬ್ಬ ಅಭಿಮಾನಿ, "ಟೀಸರ್ ನನಗೆ ನಿರಂತರ ರೋಮಾಂಚನವನ್ನುಂಟುಮಾಡಿತು. ಅವರ ಆಕ್ಷನ್ ದೃಶ್ಯಗಳು ಮತ್ತೊಂದು ಮಟ್ಟದಲ್ಲಿವೆ ಎಂದು ಬರೆದುಕೊಂಡಿದ್ದಾರೆ.

ಮಾ ಇಂಟಿ ಬಂಗಾರಂ ಬಗ್ಗೆ

ಈ ಚಿತ್ರವನ್ನು ರಾಜ್ ನಿಧಿಮೋರು , ಸಮಂತಾ ರುತ್ ಪ್ರಭು ಮತ್ತು ಹಿಮಂಕ್ ದುವ್ವುರು ನಿರ್ಮಿಸಿದ್ದಾರೆ , ಮತ್ತು ಅವರ ಬಹುನಿರೀಕ್ಷಿತ ಹಿಟ್ 'ಓಹ್! ಬೇಬಿ' ನಂತರ ಸಮಂತಾ ನಿರ್ದೇಶಕಿ ನಂದಿನಿ ರೆಡ್ಡಿ ಅವರೊಂದಿಗೆ ಮತ್ತೆ ಒಂದಾಗಿದ್ದಾರೆ . ಸಮಂತಾ ಜೊತೆಗೆ, ಚಿತ್ರದಲ್ಲಿ ಗುಲ್ಶನ್ ದೇವಯ್ಯ ಮತ್ತು ದಿಗಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ, ಹಿರಿಯ ನಟರಾದ ಗೌತಮಿ ಮತ್ತು ಮಂಜುಷಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಬಿಡುಗಡೆ ದಿನಾಂಕವನ್ನು ಇನ್ನೂ ಘೋಷಿಸಲಾಗಿಲ್ಲ.

ಅಂದಹಾಗೆ `ಮಾ ಇಂಟಿ ಬಂಗಾರಂ’ ಸಿನಿಮಾಗೆ ಕಥೆ ಬರೆದು ನಿರ್ಮಾಣ ಮಾಡಿದ್ದಾರೆ ರಾಜ್ ನಿಧಿಮೋರು, ಇನ್ನು ಈ ಸಿನಿಮಾಗೆ ಸಮಂತಾ ಸಹ ಬಂಡವಾಳ ಹೂಡಿ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾಗೆ ನಂದಿನಿ ರೆಡ್ಡಿ ನಿರ್ದೇಶನ ಮಾಡಿದ್ದಾರೆ.ನಟಿ ಸಮಂತಾ ರುತ್ ಪ್ರಭು ಅಭಿನಯದ ಯಶೋಧಾ, ಖುಷಿ, ಶುಭಂ ಸಿನಿಮಾಗಳು ಅಂದು ಕೊಂಡ ಮಟ್ಟಕ್ಕೆ ಯಶಸ್ಸು ಸಿಗಲಿಲ್ಲ.

ಇದನ್ನೂ ಓದಿ: 'ಮಾ ಇಂಟಿ ಬಂಗಾರಂ' ಸಿನಿಮಾ ಮೂಲಕ ಮತ್ತೆ ಸಿನಿ ಜರ್ನಿಗೆ ಕಂಬ್ಯಾಕ್ ಮಾಡಿದ ನಟಿ ಸಮಂತಾ!

ಈ ನಡುವೆ ಅವರು ಅಮೆಜಾನ್ ಪ್ರೈಮ್ ಸಿರೀಸ್ ಗಳಾದ ದಿ ಫ್ಯಾಮಿಲಿ ಮ್ಯಾನ್ 2 ಮತ್ತು ಸಿಟಾಡೆಲ್‌ನಲ್ಲಿ ಕೂಡ ಅಭಿನಯಿಸಿದ್ದು ಈ ಸೀರಿಸ್ ಆಕ್ಷನ್ ಪಾತ್ರಗಳಲ್ಲಿ ಅವರು ಮಿಂಚುವ ಮೂಲಕ ಪ್ರೇಕ್ಷಕರ ಮನಗೆದ್ದಿದ್ದರು. ಅಲ್ಲಿಂದ ಲವರ್ ಗರ್ಲ್ ಆದ ನಟಿ ಸಮಂತಾ ರುತ್ ಪ್ರಭು ಆಕ್ಷನ್ ನಟಿಯಾಗಿ ಸಾಕಷ್ಟು ಪ್ರಸಿದ್ಧರಾಗಿದ್ದಾರೆ.

Yashaswi Devadiga

View all posts by this author