ಡಾಲಿ ಪಿಕ್ಚರ್ಸ್‌ನ 6ನೇ ಸಿನಿಮಾ ಘೋಷಿಸಿದ ನಟ ಧನಂಜಯ; ʻಹೆಗ್ಗಣ ಮುದ್ದುʼ ಸಿನಿಮಾಗೆ ಅರುಣ್ ಸಾಗರ್ ಪುತ್ರಿ ನಾಯಕಿ
Heggana Muddu Movie: ನಟ ಧನಂಜಯ ಅವರ ಡಾಲಿ ಪಿಕ್ಚರ್ಸ್ ಬ್ಯಾನರ್‌ನಡಿ 6ನೇ ಚಿತ್ರವಾಗಿ 'ಹೆಗ್ಗಣ ಮುದ್ದು' ಸಿದ್ಧವಾಗುತ್ತಿದೆ. 'ಬಡವ ರಾಸ್ಕಲ್', 'ಹೆಡ್ ಬುಷ್' ಮತ್ತು 'ಟಗರು ಪಲ್ಯ' ಸಿನಿಮಾಗಳ ನಂತರ ಧನಂಜಯ ಅವರು ಈ ಸಿನಿಮಾ ಮಾಡಿದ್ದಾರೆ. ಕಲಾ ನಿರ್ದೇಶಕ ಅರುಣ್ ಸಾಗರ್ ಪುತ್ರಿ ಅದಿತಿ ಮೊದಲ ಬಾರಿಗೆ ಪೂರ್ಣಪ್ರಮಾಣದ ನಾಯಕಿಯಾಗಿ ನಟಿಸುತ್ತಿರುವುದು ಈ ಚಿತ್ರದ ವಿಶೇಷ.
-
'ಹೆತ್ತವರಿಗೆ ಹೆಗ್ಗಣ ಮುದ್ದು' ಎನ್ನುವ ಗಾದೆ ಎಲ್ಲರಿಗೂ ಗೊತ್ತಿದೆ. ಇದೀಗ ಆ ಬಗ್ಗೆ ಯಾಕೆ ಮಾತು? ಯೆಸ್.. 'ಹೆಗ್ಗಣ ಮುದ್ದು' ಎನ್ನುವ ಹೆಸರಿನಲ್ಲೇ ಈಗ ಸ್ಯಾಂಡಲ್‌ವುಡ್‌ನಲ್ಲಿ ಒಂದು ಸಿನಿಮಾ ಬರುತ್ತಿದೆ. ʻಡಾಲಿʼ ಧನಂಜಯ ಅವರ ಡಾಲಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಮತ್ತೊಂದು ವಿಭಿನ್ನ ಸಿನಿಮಾ ಮೂಡಿಬರುತ್ತಿದ್ದು, ಆ ಸಿನಿಮಾಕ್ಕೆ ʻಹೆಗ್ಗಣ ಮುದ್ದುʼ ಎಂದು ಶೀರ್ಷಿಕೆ ಇಡಲಾಗಿದೆ. ಹೊಸ ಸಿನಿಮಾ ಮೂಲಕ ಡಾಲಿ ಪಿಕ್ಚರ್ಸ್ ತಂಡ ಹೊಸ ವರ್ಷಕ್ಕೆ ಸಿನಿಪ್ರಿಯರಿಗೆ ಭರ್ಜರಿ ಸುದ್ದಿ ನೀಡಿದ್ದಾರೆ.
ನಾಯಕಿಯಾದ ಅರುಣ್ ಸಾಗರ್ ಪುತ್ರಿ
ಅಂದಹಾಗೆ, ʻಹೆಗ್ಗಣ್ಣ ಮುದ್ದುʼ ಸಿನಿಮಾಗೆ ಪೂರ್ಣಚಂದ್ರ ಮೈಸೂರು ಅವರು ಹೀರೋ. ಅವಿನಾಶ್ ಬಳೆಕ್ಕಳ ನಿರ್ದೇಶನದ ಮೊದಲ ಸಿನಿಮಾ ಇದಾಗಿದ್ದು, ಪೂರ್ಣಚಂದ್ರಗೆ ಜೋಡಿಯಾಗಿ ನಟ ಹಾಗೂ ಕಲಾ ನಿರ್ದೇಶಕ ಅರುಣ್ ಸಾಗರ್ ಪುತ್ರಿ ಅದಿತಿ ಸಾಗರ್ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಶಿವರಾಜ್‌ಕುಮಾರ್ ಅವರ ವೇದ ಸಿನಿಮಾದಲ್ಲಿ ನಟಿಸಿದ್ದ ಅದಿತಿ ಸಾಗರ್ ಇದೀಗ ಹೆಗ್ಗಣ ಮುದ್ದು ಚಿತ್ರದ ಮೂಲಕ ಮೊದಲ ಬಾರಿಗೆ ಪೂರ್ಣಪ್ರಮಾಣದ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.
ಶಿವಣ್ಣ-ಧನಂಜಯ್-ಹೇಮಂತ್ ರಾವ್ ಕಾಂಬಿನೇಷನ್‌ನ ʼ666 ಆಪರೇಷನ್ ಡ್ರೀಮ್ ಥಿಯೇಟರ್ʼ ಚಿತ್ರಕ್ಕಾಗಿ ಬೃಹತ್ ಸೆಟ್ ರೆಡಿ
ಗಾದೆ ಮಾತಿನಿಂದ ಸ್ಫೂರ್ತಿ ಪಡೆದ ಚಿತ್ರತಂಡ
'ಹೆತ್ತವರಿಗೆ ಹೆಗ್ಗಣ ಮುದ್ದು' ಎಂಬ ಗಾದೆ ಮಾತಿನಿಂದ ಸ್ಫೂರ್ತಿ ಪಡೆದು ಇಟ್ಟಿರುವ ಟೈಟಲ್ ಇದಾಗಿದ್ದು, ಟೈಟಲ್‌ನಿಂದಲೇ ಈ ಸಿನಿಮಾದ ಕಥಾಹಂದರದ ಕುರಿತು ಕುತೂಹಲ ಹೆಚ್ಚಾಗಿದೆ. ಇದೊಂದು ಡ್ರಾಮಾ ಥ್ರಿಲ್ಲರ್ ಸಿನಿಮಾವಾಗಿದೆ. ಈ ಬಗ್ಗೆ ಮಾತನಾಡಿರುವ ನಿರ್ದೇಶಕ ಅವಿನಾಶ್ ಬಳೆಕ್ಕಳ, "ಇದೊಂದು ಸಂಬಂಧಗಳ ಬಗ್ಗೆ ಇರುವ ಸಿನಿಮಾವಾಗಿದ್ದು, ಹೆತ್ತವರಿಗೆ ಹೆಗ್ಗಣ ಮುದ್ದು ಅಂತ ಹೇಗೆ ಹೇಳ್ತಿವೋ ಹಾಗೆ ಈ ಸಿನಿಮಾದಲ್ಲಿ ನನಗೆ ನಾನೇ ಮುದ್ದು ಎನ್ನುವುದನ್ನು ಹೇಳಲಾಗಿದೆ" ಎನ್ನುತ್ತಾರೆ.
Daali Dhananjay Birthday: ಡಾಲಿ ಧನಂಜಯ್‌ಗೆ ಹುಟ್ಟುಹಬ್ಬದ ಸಂಭ್ರಮ; ಹೊರಬಿತ್ತು ʼಜಿಂಗೋʼ ಚಿತ್ರದ ಪೋಸ್ಟರ್
ಈಗಾಗಲೇ ಶೂಟಿಂಗ್ ಮುಕ್ತಾಯ
ಸದ್ದಿಲ್ಲದೇ ಶೂಟಿಂಗ್ ಮುಗಿಸಿರುವ ʻಹೆಗ್ಗಣ ಮುದ್ದುʼ ಚಿತ್ರತಂಡ, ಸದ್ಯ ರಿಲೀಸ್‌ಗೆ ತಯಾರಿ ಮಾಡಿಕೊಳ್ಳುತ್ತಿದೆ. ಟೈಟಲ್ ಮತ್ತು ಮೋಷನ್ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಕುತೂಹಲ ಹೆಚ್ಚಿಸಿರುವ ʻಹೆಗ್ಗಣ ಮುದ್ದುʼ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿದೆ.
ʻಹೆಗ್ಗಣ ಮುದ್ದುʼ ಚಿತ್ರಕ್ಕೆ ಕಾರ್ತಿಕ್ ಚೆನ್ನೂಜಿ ರಾವ್ ಮತ್ತು ರೋಣದ ಬಕ್ಕೆಶ್ ಸಂಗೀತ ನಿರ್ದೇಶನ ಮಾಡಿದ್ದಾರೆ. ನಚಿಕೇತ್ ಬಲೆಕ್ಕಳ ಅವರ ಛಾಯಾಗ್ರಹಣ ಮಾಡಿದ್ದಾರೆ. ಸದ್ಯ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್‌ನಲ್ಲಿ ಬ್ಯುಸಿಯಾಗಿರುವ ʻಹೆಗ್ಗಣ ಮುದ್ದುʼ ಬಿಡುಗಡೆ ಯಾವಾಗ? ಈಗಾಗಲೇ ಡಾಲಿ ಪಿಕ್ಚರ್ಸ್ ಬ ಬ್ಯಾನರ್‌ನಿಂದ ʻಜೆಸಿʼ ಎಂಬ ಸಿನಿಮಾ ರೆಡಿಯಾಗಿದ್ದು, ಅದು ತೆರೆಕಂಡ ಮೇಲೆ ʻಹೆಗ್ಗಣ ಮುದ್ದುʼ ರಿಲೀಸ್ ಆಗಿದೆ.