ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

'ಮಾ ಇಂಟಿ ಬಂಗಾರಂ' ಸಿನಿಮಾ ಮೂಲಕ ಮತ್ತೆ ಸಿನಿ ಜರ್ನಿಗೆ ಕಂಬ್ಯಾಕ್ ಮಾಡಿದ ನಟಿ ಸಮಂತಾ!

Samantha Ruth Prabhu: ತೆಲುಗು, ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ ಸಮಂತಾ ಅವರು ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿರುತ್ತಾರೆ. ಯೇ ಮಾಯಾ ಚೇಸಾವೆ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಇವರು ಇದುವರೆಗೆ ಅನೇಕ ಸೂಪರ್ ಹಿಟ್ ಸಿನಿಮಾದಲ್ಲಿ ವಿಭಿನ್ನ ಪಾತ್ರಗಳಿಗೆ ಜೀವ ತುಂಬಿ ನಟಿಸಿದ್ದು ಕೋಟ್ಯಾಂತರ ಅಭಿಮಾನಿಗಳ ಮನಗೆದ್ದಿದ್ದಾರೆ. ಇತ್ತೀಚೆಗೆ ವೆಬ್ ಸೀರಿಸ್ ನಲ್ಲಿ ಕಾಣಿಸಿಕೊಂಡ ಇವರು ಇದೀಗ ಬಹಳ ಸಮಯದ ಬಳಿಕ ಸಿನಿಮಾ ಒಂದರಲ್ಲಿ ಅಭಿನ ಯಿಸುವ ಮೂಲಕ ಮತ್ತೆ ತೆರೆ ಮೇಲೆ ಮಿಂಚಲಿದ್ದು ಅವರ ಮುಂದಿನ ಸಿನಿಮಾ 'ಮಾ ಇಂಟಿ ಬಂಗಾರಂ' ಚಿತ್ರದ ಫಸ್ಟ್ ಲುಕ್ ಫೋಟೊ ಹರಿದಾಡುತ್ತಿದೆ.

ಮಾ ಇಂಟಿ ಬಂಗಾರಂ ಸಿನಿಮಾದಲ್ಲಿ ನಟಿ ಸಮಂತಾ ಅವರ ಫಸ್ಟ್ ಲುಕ್ ಹೇಗಿದೆ ನೋಡಿ!

ನಟಿ ಸಮಂತಾ -

Profile
Pushpa Kumari Jan 7, 2026 1:08 PM

ನವದೆಹಲಿ, ಜ. 7: ತೆಲುಗು, ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ ಸಮಂತಾ (Samantha) ಅವರು ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿರುತ್ತಾರೆ. ಯೇ ಮಾಯಾ ಚೇಸಾವೆ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಇವರು ಇದುವರೆಗೆ ಅನೇಕ ಸೂಪರ್ ಹಿಟ್ ಸಿನಿಮಾದಲ್ಲಿ ವಿಭಿನ್ನ ಪಾತ್ರಗಳಿಗೆ ಜೀವ ತುಂಬಿ ನಟಿಸಿದ್ದು ಕೋಟ್ಯಂತರ ಅಭಿಮಾನಿಗಳ ಮನಗೆದ್ದಿದ್ದಾರೆ. ಪ್ರೇಯಸಿ, ಗೃಹಿಣಿ, ತಾಯಿ ಹೀಗೆ ಎಲ್ಲ ವಯೋಮಾನಕ್ಕೂ ಹೋಲುವ ಪಾತ್ರಕ್ಕೆ ತಕ್ಕಂತೆ ಅಭಿನಯಿಸಿದ್ದ ಇವರಿಗೆ ಪ್ಯಾನ್ ಇಂಡಿಯಾ ಮಟ್ಟದಲ್ಲೂ ಅಭಿಮಾನಿ ಬಳಗವಿದೆ. ಆದರೆ ಇತ್ತೀಚಿನ ಕೆಲ ವರ್ಷದಿಂದ ಇವರಿಗೆ ಸಿನಿಮಾ ಅವಕಾಶಗಳು ಬರುವ ಪ್ರಮಾಣ ಕಡಿಮೆಯಾಗಿದೆ. ಇತ್ತೀಚೆಗೆ ವೆಬ್ ಸೀರಿಸ್ ನಲ್ಲಿ ಕಾಣಿಸಿಕೊಂಡ ಇವರು ಇದೀಗ ಬಹಳ ಸಮಯದ ಬಳಿಕ ಸಿನಿಮಾ ಒಂದರಲ್ಲಿ ಅಭಿನಯಿಸುವ ಮೂಲಕ ಮತ್ತೆ ತೆರೆ ಮೇಲೆ ಮಿಂಚಲಿದ್ದು ಅವರ ಮುಂದಿನ ಸಿನಿಮಾ 'ಮಾ ಇಂತಿ ಬಂಗಾರಂ' ಚಿತ್ರದ ಫಸ್ಟ್ ಲುಕ್ ಫೋಟೊ ಹರಿದಾಡುತ್ತಿದೆ.

ನಟಿ ಸಮಂತಾ ರುತ್ ಪ್ರಭು ಅಭಿನಯದ ಯಶೋಧಾ, ಖುಷಿ, ಶುಭಂ ಸಿನಿಮಾಗಳು ಅಂದು ಕೊಂಡ ಮಟ್ಟಕ್ಕೆ ಯಶಸ್ಸು ಸಿಗಲಿಲ್ಲ. ಈ ನಡುವೆ ಅವರು ಅಮೆಜಾನ್ ಪ್ರೈಮ್ ಸಿರೀಸ್ ಗಳಾದ ದಿ ಫ್ಯಾಮಿಲಿ ಮ್ಯಾನ್ 2 ಮತ್ತು ಸಿಟಾಡೆಲ್‌ನಲ್ಲಿ ಕೂಡ ಅಭಿನಯಿಸಿದ್ದು ಈ ಸೀರಿಸ್ ಆಕ್ಷನ್ ಪಾತ್ರಗಳಲ್ಲಿ ಅವರು ಮಿಂಚುವ ಮೂಲಕ ಪ್ರೇಕ್ಷಕರ ಮನಗೆದ್ದಿದ್ದರು. ಅಲ್ಲಿಂದ ಲವರ್ ಗರ್ಲ್ ಆದ ನಟಿ ಸಮಂತಾ ರುತ್ ಪ್ರಭು ಆಕ್ಷನ್ ನಟಿಯಾಗಿ ಸಾಕಷ್ಟು ಪ್ರಸಿದ್ಧರಾಗಿದ್ದಾರೆ. ಹೀಗಾಗಿ ಅವರ ಮುಂದಿನ ಸಿನಿಮಾ 'ಮಾ ಇಂತಿ ಬಂಗಾರಂ' ಚಿತ್ರದಲ್ಲಿ ಕೂಡ ಆ್ಯಕ್ಸನ್ ಪ್ರಿನ್ಸ್ ಆಗಿ ಮಿಂಚುವ ನಿರೀಕ್ಷೆ ಇದೆ.

ನಟಿ ಸಮಂತಾ ರುತ್ ಪ್ರಭು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ 'ಮಾ ಇಂತಿ ಬಂಗಾರಂ' ಚಿತ್ರದ ಫಸ್ಟ್ ಲುಕ್ ಹಂಚಿಕೊಂಡಿದ್ದಾರೆ. ಆ ಫೋಟೊ ವೈರಲ್ ಆಗಿದ್ದು ನಟಿ ಡಾರ್ಕ್ ಕ್ರೀಮ್ ಸೀರೆ ಉಟ್ಟು ಬಸ್‌ನಲ್ಲಿ ನಿಂತಿದ್ದ ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಫಸ್ಟ್ ಲುಕ್ ಜೊತೆಗೆ, ಅವರು ಟ್ರೇಲರ್ ಬಿಡುಗಡೆ ದಿನಾಂಕವನ್ನು ಸಹ ಘೋಷಿಸಿದ್ದಾರೆ. ಈ ಸಿನಿಮಾದ ಟ್ರೈಲರ್ ಜನವರಿ 9 ರಂದು ಬೆಳಗ್ಗೆ 10 ಗಂಟೆಗೆ ಬಿಡುಗಡೆಯಾಗಲಿದೆ ಎಂದು ಬರೆದುಕೊಂಡಿದ್ದು ಆ ಪೋಸ್ಟ್ ಜೊತೆಗೆ ಸಿನಿಮಾ ನಿರ್ದೇಶಕರನ್ನು , ನಿರ್ಮಾಪಕರನ್ನು ಟ್ಯಾಗ್ ಮಾಡಿದ್ದಾರೆ‌.

Vrusshabha Movie: ಮೋಹನ್ ಲಾಲ್ ಜೊತೆ ಗಮನ ಸೆಳೆದ ಸಮರ್ಜಿತ್ ಲಂಕೇಶ್! 'ವೃಷಭ' ಚಿತ್ರದ ಆ ಪಾತ್ರ ಯಾವುದು?

ಮಾ ಇಂಟಿ ಬಂಗಾರಂ ಸಿನಿಮಾಕ್ಕೆ ನಂದಿನಿ ರೆಡ್ಡಿ ಅವರು ಆ್ಯಕ್ಷನ್ ಕಟ್ ಹೇಳಿದ್ದಾರೆ. ರಾಜ್ ನಿಧಿ ಮೋರ್, ಹಿಮಾಂಕ್ ದಾವೂರು ಜೊತೆಗೆ ಈ ಸಿನಿಮಾಕ್ಕೆ ಸಮಂತಾ ಕೂಡ ಹಣ ಹೂಡಿಕೆ ಮಾಡಿ ದ್ದಾರೆ. ಈ ಸಿನಿಮಾದಲ್ಲಿ ಗುಲ್ಶನ್ ದೇವಯ್ಯ, ಧಿಗಂತ್, ಗೌತಮಿ ಸೇರಿದಂತೆ ಇನ್ನು ಅನೇಕ ಸ್ಟಾರ್ ನಟ ನಟಿಯರು ಈ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ. ನಟಿ ಸಮಂತಾ ಅವರು ಓಹ್! ಬೇಬಿ ಸಿನಿಮಾ ನಂತರ ಈಗ ಮತ್ತೊಮ್ಮೆ ನಿರ್ದೇಶಕಿ ನಂದಿನಿ ರೆಡ್ಡಿ ಜೊತೆಗೆ ಮಾ ಇಂಟಿ ಬಂಗಾರಂ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ. ಒಟ್ಟಾರೆಯಾಗಿ ಈ ಸಿನಿಮಾ ನಟಿ ಸಮಂತಾ ಅವರ ಸಿನಿ ಜರ್ನಿಗೆ ಟರ್ನಿಂಗ್ ಪಾಂಯ್ಟ್ ಆಗಿದೆಯಾ ಎಂದು ಕಾದುನೋಡಬೇಕು.

ಈ ಸಿನಿಮಾ ಬಗ್ಗೆ ಅವರು ಇತ್ತೀಚೆಗಷ್ಟೇ ಸಂದರ್ಶನ ಒಂದರಲ್ಲಿ ಮಾತನಾಡಿದ್ದು , ಮಾ ಇಂಟಿ ಬಂಗಾರಂ ಸಿನಿಮಾವು ಪ್ರೀತಿ, ಅನ್ಯೋನ್ಯತೆಯನ್ನು ಆಧರಿಸಿದ್ದಾಗಿದ್ದು ಕಥೆ ನನಗೆ ಬಹಳ ಇಷ್ಟ ವಾಗಿದೆ. ನಾನು ನಂದಿನಿ ರೆಡ್ಡಿ ಅವರೊಂದಿಗೆ ಈ ಹಿಂದೆ ಓಹ್ ಬೇಬಿ ಸಿನಿಮಾದಲ್ಲಿ ಅಭಿನಯಿಸಿ ದ್ದೆನು. ಈಗ ಮತ್ತೊಮ್ಮೆ ಈ ಸಿನಿಮಾ ಮೂಲಕ ಅವರೊಂದಿಗೆ ನಾನು ಕೆಲಸ ಮಾಡುತ್ತಿದ್ದೇನೆ. ತ್ರಲಾಲಾ ಮೂವಿಂಗ್ ಪಿಕ್ಚರ್ಸ್ ಅಡಿಯಲ್ಲಿ ಅದನ್ನು ನಿರ್ಮಿಸುವುದು ಮತ್ತು ನಟಿಸುವುದು ತುಂಬಾ ಖುಷಿಯ ವಿಚಾರವಾಗಿದೆ ಎಂದು ಹೇಳಿಕೆ ಕೂಡ ನೀಡಿದ್ದರು..