ನಟ ʻಕಿಚ್ಚʼ ಸುದೀಪ್ ಅವರ ʻಮಾರ್ಕ್ʼ ಸಿನಿಮಾವು ಇದೇ ಡಿಸೆಂಬರ್ 25ರಂದು ತೆರೆಗೆ ಬರುತ್ತಿದೆ. ಈ ಚಿತ್ರವನ್ನು ಗ್ರ್ಯಾಂಡ್ ಆಗಿ ಬಹುಭಾಷೆಯಲ್ಲಿ ತೆರೆಗೆ ತರುವುದಕ್ಕೆ ಸಿದ್ಧತೆಗಳು ಆರಂಭವಾಗಿವೆ. ಈ ನಡುವೆ ಹುಬ್ಬಳ್ಳಿಯಲ್ಲಿ ಚಿತ್ರದ ಪ್ರೀ-ರಿಲೀಸ್ ಇವೆಂಟ್ ಅನ್ನು ಚಿತ್ರತಂಡ ಮಾಡಿದೆ. ಈ ವೇಳೆ ಸುದೀಪ್ ಹೇಳಿದ ಮಾತುಗಳು ಎಲ್ಲರ ಗಮನಸೆಳೆದಿವೆ.
ನನಗೆ ಬಾಯಿ ಇಲ್ಲ ಅಂತಲ್ಲ
"ಈ ಜರ್ನಿಯಲ್ಲಿ ಡಿಸೆಂಬರ್ 25ಕ್ಕೆ ಥಿಯೇಟರ್ನಲ್ಲಿ ಒಂದು ಸಿನಿಮಾ ಬಿಡುಗಡೆ ಆಗುತ್ತೆ. ಆದರೆ ಹೊರಗಡೆ ಒಂದು ಪಡೆ ಯುದ್ಧಕ್ಕೆ ರೆಡಿ ಆಗ್ತಿದೆ, ಈ ವೇದಿಕೆ ಮೇಲೆ ನಿಂತು ಹೇಳ್ತಾ ಇದ್ದೀನಿ, ಯುದ್ಧಕ್ಕೆ ಸಿದ್ಧ. ಯಾಕೆಂದರೆ ನಾವು ನಮ್ಮ ಮಾತಿಗೆ ಬದ್ಧ. ಕೆಲವೊಮ್ಮೆ ನನಗೆ ಅನ್ನಿಸುತ್ತದೆ, ಸೈಲೆಂಟ್ ಆಗಿರೋದು ಒಳ್ಳೆಯದೋ ಕೆಟ್ಟದ್ದೋ ಗೊತ್ತಿಲ್ಲ. ಆದರೆ ನಿಮಗಾಗಿ, ನನ್ನ ಸ್ನೇಹಿತರು ಚೆನ್ನಾಗಿರಬೇಕು ಎಂಬ ಉದ್ದೇಶದಿಂದ, ನಾವೆಲ್ಲರೂ ಚೆನ್ನಾಗಿರಬೇಕು, ನಾವೆಲ್ಲರೂ ಒಳ್ಳೆಯ ಹೆಸರು ಪಡೆಯಬೇಕು ಎಂಬ ಒಂದೇ ಕಾರಣಕ್ಕೆ ನಾನು ಬಾಯಿ, ಎಲ್ಲವನ್ನು ಮುಚ್ಚಿಕೊಂಡು ಇದ್ದೇ ಹೊರತು, ನನಗೆ ಬಾಯಿ ಇಲ್ಲ ಅಂತಲ್ಲ" ಎಂದು ಸುದೀಪ್ ಅವರು ಹೇಳಿದ್ದಾರೆ.
BBK 12: ಸೀಕ್ರೆಟ್ ರೂಮ್‌ನ ಸೀಕ್ರೆಟ್ ಬಯಲಾಗೋದು ಯಾವಾಗ? ʻಕಿಚ್ಚʼ ಸುದೀಪ್ ಎದುರು ಗೋಳಾಡಿದ ರಕ್ಷಿತಾ!
ತಡಿಯೋ ತನಕ ತಡ್ಕೊಂಡಿರಿ
"ಬಹಳಷ್ಟು ಕಲ್ಲಿನ ತೂರಾಟ, ನಿನ್ನ ಸಹನೆಯಿಂದಾಗಿ ನಿಮ್ಮ ಮೇಲೆ ಬೀಳುತ್ತಲೇ ಇರುತ್ತೆ. ಅದನ್ನು ತಾವು ತಡೆದುಕೊಂಡು ಬರ್ತಾನೇ ಇದ್ದೀರಿ. ಈಗ ಹೇಳ್ತಾ ಇದ್ದೀನಿ, ಅದನ್ನು ತಡಿಯೋ ತನಕ ತಡ್ಕೊಂಡಿರಿ, ಮಾತಾಡೋ ಟೈಮಲ್ಲಿ ಮಾತಾಡಿ. ಮಾರ್ಕ್ ಒಂದು ಅದ್ಭುತವಾದ ಸಿನಿಮಾ. ವಿಜಯ್ ಕಾರ್ತಿಕೇಯ ನಿಮಗೆ ದೊಡ್ಡ ಥ್ಯಾಂಕ್ಯೂ. ನಿರ್ಮಾಪಕರಿಗೆ ಧನ್ಯವಾದ. ಡಿಸೆಂಬರ್ 25 ರಂದು ಸಿನಿಮಾ ರಿಲೀಸ್ ಆಗ್ತಿದೆ. ಹುಬ್ಬಳ್ಳಿ ಥಿಯೇಟರ್ನಲ್ಲಿ ಕೇಳಿ ಬರುವ ಕೂಗು ನನಗೆ ಬೆಂಗಳೂರಿನಲ್ಲಿ ಕೇಳಿಸಬೇಕು" ಎಂದು ಸುದೀಪ್ ಹೇಳಿದಾರೆ.
Mark Trailer : ಕಿಚ್ಚ ಸುದೀಪ್ ಫ್ಯಾನ್ಸ್‌ಗೆ ಗುಡ್ ನ್ಯೂಸ್! ಬರ್ತಿದೆ ‘ಮಾರ್ಕ್’ ಟ್ರೈಲರ್, ಯಾವಾಗ?
ಸುದೀಪ್ ಅವರ ಭಾಷಣದ ವಿಡಿಯೋ ಇಲ್ಲಿದೆ
ಸದ್ಯ ಸುದೀಪ್ ಅವರು ಹೀಗೆಲ್ಲಾ ಮಾತನಾಡಿದ್ದೇಕೆ? ಯಾರನ್ನು ಗುರಿಯಾಗಿಸಿಕೊಂಡು ಈ ಮಾತನ್ನು ಹೇಳಿದರು? ಮಾರ್ಕ್ ಸಿನಿಮಾ ರಿಲೀಸ್ ದಿನ ಯುದ್ಧ ಮಾಡಲು ರೆಡಿಯಾಗಿರುವವರು ಯಾರು ಎಂಬ ಬಗ್ಗೆ ಚರ್ಚೆಗಳು ಶುರುವಾಗಿವೆ.
ನಿರೀಕ್ಷೆ ಹುಟ್ಟುಹಾಕಿರುವ ಮಾರ್ಕ್
ಸತ್ಯಜ್ಯೋತಿ ಫಿಲ್ಮ್ಸ್ 39 ವರ್ಷಗಳ ನಂತರ ಕನ್ನಡದಲ್ಲಿ ಮಾರ್ಕ್ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಸುದೀಪ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಮ್ಯಾಕ್ಸ್ ಡೈರೆಕ್ಟರ್ ವಿಜಯ್ ಕಾರ್ತಿಕೇಯ ಅವರು ನಿರ್ದೇಶನ ಮಾಡಿದ್ದಾರೆ. ನವೀನ್ ಚಂದ್ರ, ಯೋಗಿ ಬಾಬು, ನಿಶ್ವಿಕಾ ನಾಯ್ಡು, ರೋಶಿಣಿ ಪ್ರಕಾಶ್, ಅಶ್ವಿನ್ ಹಾಸನ್, ಮಹಾಂತೇಶ್ ಹಿರೇಮಠ್ ಮುಂತಾದವರು ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತವನ್ನು ನೀಡಿದ್ದಾರೆ.