Master Anand: ಮಧ್ಯರಾತ್ರಿ ಐಸ್ ಕ್ರೀಮ್ ತಿನ್ನೋಕೆ ಬಾ ಅಂದ್ರೆ ನಾನ್ಯಾಕೆ ಹೋಗಲಿ: ಮಾಸ್ಟರ್ ಆನಂದ್
ಖ್ಯಾತ ನಟ ಹಾಗೂ ಕಿರುತೆರೆಯ ಜನಪ್ರಿಯ ನಿರೂಪಕ ಮಾಸ್ಟರ್ ಆನಂದ್ ಅವರು ವಿಶ್ವವಾಣಿ ಜೊತೆಗಿನ ಸಂದರ್ಶನದಲ್ಲಿ ಕೆಲ ಕುತೂಹಲಕಾರಿ ವಿಚಾರ ಬಹಿರಂಗ ಪಡಿಸಿದ್ದಾರೆ. ಮುಖ್ಯವಾಗಿ ತನ್ನ ಪತ್ನಿ ಯಶಸ್ವಿನಿ ಬಗ್ಗೆ ಅನೇಕ ವಿಚಾರ ಹಂಚಿಕೊಂಡಿದ್ದಾರೆ. ನನ್ನ ಹೆಂಡತಿ ಮಧ್ಯ ರಾತ್ರಿ ಐಸ್ ಕ್ರೀಮ್ ತಿನ್ನೋಕೆ ಬಾ ಅಂದ್ರೆ ನಾನು ಹೋಗಲ್ಲ ಎಂದು ಹೇಳಿದ್ದಾರೆ.

Master Ananda

ಖ್ಯಾತ ನಟ ಹಾಗೂ ಕಿರುತೆರೆಯ ಜನಪ್ರಿಯ ನಿರೂಪಕ ಮಾಸ್ಟರ್ ಆನಂದ್ ಅವರು ವಿಶ್ವವಾಣಿ ಜೊತೆಗಿನ ಸಂದರ್ಶನದಲ್ಲಿ ಕೆಲ ಕುತೂಹಲಕಾರಿ ವಿಚಾರ ಬಹಿರಂಗ ಪಡಿಸಿದ್ದಾರೆ. ಮುಖ್ಯವಾಗಿ ತನ್ನ ಪತ್ನಿ ಯಶಸ್ವಿನಿ ಬಗ್ಗೆ ಅನೇಕ ವಿಚಾರ ಹಂಚಿಕೊಂಡಿದ್ದಾರೆ. ನನ್ನ ಹೆಂಡತಿ ಮಧ್ಯ ರಾತ್ರಿ ಐಸ್ ಕ್ರೀಮ್ ತಿನ್ನೋಕೆ ಬಾ ಅಂದ್ರೆ ನಾನು ಹೋಗಲ್ಲ ಎಂದು ಹೇಳಿದ್ದಾರೆ. ಒಂದು ನಾಲ್ಕು ಜನ ಬರ್ತಾರೆ.. ಇವ್ರು ಹೋಗ್ತಾರೆ ನಾನು ಹೋಗಲ್ಲ.. ಇವ್ಳು ರಾತ್ರಿ 2 ಗಂಟೆಗೆ ಐಸ್ ಕ್ರೀಮ್ ತಿಂದು ಪೋಸ್ಟ್ ಹಾಕ್ತಾಳೆ.. ಅದಕ್ಕೆ ಯಾರೊ ಒಬ್ಬ ಆನಂದ್ ಸರ್ ಎಲ್ಲಿ ಅಂತ ಕಮೆಂಟ್ ಹಾಕ್ತಾನೆ. ಅವರಿಗೆ ಯಾಕೆ ಆನ್ಸರ್ ಮಾಡ್ತೀಯ ನೀನು.. ನಾನೇ ಬಿಟ್ಟಿದ್ದಿನಿ ಹೋಗು ಅಂತ ಎಂದಿದ್ದಾರೆ.
ನಾನು ರಾತ್ರಿ ಯಶಸ್ವಿನಿನ ಎಲ್ಲಿಗೆ ಬೇಕಾದ್ರು ಹೋಗೋಕೆ ಬಿಡ್ತೀನಿ.. ಆದ್ರೆ ಡ್ರೈವ್ ಮಾಡಬಾರದು.. ಜೊತೆಲಿ ಯಾರಾದ್ರು ನಿನ್ ಫ್ರೆಂಡೋ ಅಥವಾ ಅವಳ ಬಾಯ್ ಫ್ರೆಂಡ್ ಇದ್ರೆ ಅವನು ಡ್ರೈವ್ ಮಾಡಲಿ ಅಂತ ಹೇಳ್ತೇನೆ.. ಹೋಗೋ ಮುಂಚೆ ಯಾರೆಲ್ಲ ಹೋಗ್ತಾ ಇರೋದು ಅಂತ ಕೇಳ್ತೇನೆ.. ಎಲ್ಲರೂ ಸೀತೆಯರೇ ಅಂತ ಆದ್ರೆ ಹೋಗ್ಬೇಡಿ ಅಂತೀನಿ. ಯಾರಾದ್ರು ಒಬ್ಬ ಲಕ್ಷ್ಮಣ ಜೊತೆಲಿ ಇದ್ರೆ ಹೋಗು ಅಂತೀನಿ ಎಂದು ತಮಾಷೆಯಾಗಿ ಮಾತನಾಡಿದ್ದಾರೆ.
ಇನ್ನು ನನ್ನಮ್ಮ ಸೂಪರ್ ಸ್ಟಾರ್ ಶೋನಲ್ಲಿ ಭಾಗವಹಿಸಿದ ನಂತರ ಯಶಸ್ವಿನಿ ಬದಲಾದ್ರು, ಬಟ್ಟೆ ಬದಲಾಯ್ತು ಅಂತ ಸೋಶಿಯಲ್ ಮೀಡಿಯಾದಲ್ಲಿ ಮಾತು ಕೇಳಿಬಂದಿತ್ತು. ಈ ಬಗ್ಗೆ ಕೂಡ ಇವರು ಸ್ಪಷ್ಟನೆ ನೀಡಿದ್ದಾರೆ. ಡ್ರೆಸ್ ನೋಡಿ ಬದಲಾದ್ರು ಅಂತ ಹೇಳೋಕೆ ಆಗಲ್ಲ, ನನ್ನ ಪತ್ನಿ ಯಶಸ್ವಿನಿ ಈ ಹಿಂದೆ ತಲೆ ಬಾಚಿಕೊಳ್ತಿದ್ರು, ಕುಂಕುಮ ಇಟ್ಟುಕೊಳ್ತಿದ್ರು ಎಂದು ಮಾಸ್ಟರ್ ಆನಂದ್ ಹೇಳಿದ್ದಾರೆ. ಕಾಲೇಜಿನಲ್ಲಿ ಸ್ಕರ್ಟ್, ಜೀನ್ಸ್ ಹಾಕಿದೀನಿ, ಎಲ್ಲ ಥರದಲ್ಲೂ ನಾನು ಡ್ರೆಸ್ ಹಾಕಿದೀನಿ. ಮದುವೆಯಾಗಿ ಮಕ್ಕಳಾದಮೇಲೆ ದಪ್ಪ ಆಗ್ತೀವಿ. ಆ ಡ್ರೆಸ್‌ಗಳನ್ನು ನಾವು ಆಗ ಹಾಕೋಕೆ ಆಗಲಿಲ್ಲ ಎಂದು ಯಶಸ್ವಿನಿ ಹೇಳಿದ್ದಾರೆ.
ಹಾಗೆಯೆ ಮಾಸ್ಟರ್ ಆನಂದ್ - ಯಶಸ್ವಿನಿ ಡಿವೋರ್ಸ್ ವಿಚಾರ ಕೂಡ ಕಳೆದ ಡಿಸೆಂಬರ್ನಲ್ಲಿ ವೈರಲ್ ಆಗಿತ್ತು. ಮಾಧ್ಯಮದಲ್ಲಿ ಇದು ದೊಡ್ಡ ಸುದ್ದಿ ಆಯಿತು. ಈ ಕುರಿತು ಆನಂದ್ ಪ್ರತಿಕ್ರಿಯೆ ನೀಡಿದ್ದಾರೆ. ಡಿವೋರ್ಸ್ ಅನ್ನುವ ಒಂದೇ ಒಂದು ಪದ ಇಟ್ಟುಕೊಂಡು ಈ ವಿಚಾರಕ್ಕೆ ಇನ್ನೂ ಏನೇನೋ ತಿರುವು ಕೊಟ್ಟರು. ಅವರು ಯಾರು ಮತ್ತು ಅವರ ಕಾಂಟ್ಯಾಕ್ ಡೀಟೇಲ್ಸ್ ಎಲ್ಲವನ್ನು ನಾನು ಕಲೆಕ್ಟ್ ಮಾಡಿದೆ. ಸುಳ್ಳು ಸುದ್ದಿ ಹಬ್ಬಿಸಿದ ಪೇಜ್‌ಗಳ ಅಡ್ಮಿನ್ ನಂಬರ್‌ಗಳು ನನ್ನ ಬಳಿ ಇದೆ. ದೊಡ್ಡ ದೊಡ್ಡ ವಕೀಲರು ನನಗೆ ಪರಿಚಯ ಇದ್ದಾರೆ. ನಮ್ಮ ಹೆಸರನ್ನು ಬಳಸಿಕೊಂಡು ಎಷ್ಟೋ ಜನ ಊಟ ಮಾಡುತ್ತಿದ್ದಾರೆ. ಮಾಡಲಿ ಬಿಡಿ ಪಾಪಾ ಅಂತ ಸುಮ್ಮನಾದೆ ಎಂದಿದ್ದಾರೆ.