Alia Bhatt: ಪೆಟ್ ಡೇ ಆಚರಿಸಿದ ಆಲಿಯಾ; ಫೋಟೊ ಕ್ರೆಡಿಟ್ ಯಾರದ್ದು ಗೊತ್ತ?
ಸೋಶಿಯಲ್ ಮೀಡಿಯಾದಲ್ಲೂ ಸಖತ್ ಆ್ಯಕ್ಟೀವ್ ಇರುವ ಆಲಿಯಾ ಭಟ್ ಅವರಿಗೆ ವಿಶೇಷ ಫ್ಯಾನ್ ಬೇಸ್ ಇದೆ. ಉತ್ತರದಿಂದ ದಕ್ಷಿಣದ ತನಕ ಸಿಕ್ಕಾಪಟ್ಟೆ ಅಭಿಮಾನಿಗಳಿದ್ದಾರೆ. ಇದೀಗ ನಟಿ ಆಲಿಯಾ ಭಟ್ ಸಾಕುಪ್ರಾಣಿಗಳ ದಿನ ಆಚರಿಸಿಕೊಂಡಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಶೇಷ ಎಂದು ಈ ಫೋಟೊ ಕ್ಲಿಕ್ ಮಅಡಿದ್ದು ಅವರ ಮಗಳು 3 ವರ್ಷದ ರಾಹಾ ಅಂತೆ.

Alia Bhatt

ನವದೆಹಲಿ: ಬಾಲಿವುಡ್‌ನ ಖ್ಯಾತ ನಟಿ ಆಲಿಯಾ ಭಟ್ (Alia Bhatt) ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇದ್ದಾರೆ. ವೃತ್ತಿ ಬದುಕಿನಲ್ಲಿ ಮಾತ್ರವಲ್ಲದೆ ವೈಯಕ್ತಿಕ ವಿಚಾರದಲ್ಲೂ ಹೆಚ್ಚು ಪ್ರಚಲಿತದಲ್ಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಸಖತ್ ಆ್ಯಕ್ಟೀವ್ ಇರುವ ಆಲಿಯಾ ಭಟ್ ಅವರಿಗೆ ವಿಶೇಷ ಫ್ಯಾನ್ ಬೇಸ್ ಇದ್ದು, ಉತ್ತರದಿಂದ ದಕ್ಷಿಣ ತನಕ ಸಿಕ್ಕಾಪಟ್ಟೆ ಅಭಿಮಾನಿಗಳಿದ್ದಾರೆ. ಇದೀಗ ನಟಿ ಆಲಿಯಾ ಭಟ್ ಸಾಕು ಪ್ರಾಣಿಗಳ ದಿನವನ್ನು ಆಚರಿಸಿಕೊಂಡಿರುವ ಫೋಟೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ವೈರಲ್ ಆಗಿದೆ. ನಟಿಯ ಪುತ್ರಿ 3 ವರ್ಷದ ರಾಹಾ ಈ ಫೋಟೊವನ್ನು ಕ್ಲಿಕ್ಕಿಸಿದ ಬಗ್ಗೆ ಸ್ವತಃ ಆಲಿಯಾ ಭಟ್ ಅವರೇ ತಿಳಿಸಿದ್ದಾರೆ.
ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಬಾಲಿವುಡ್‌ನ ಕ್ಯೂಟ್ ಕಪಲ್, ಮದುವೆಯಾಗಿ ಕೆಲವೇ ತಿಂಗಳಲ್ಲಿ ಆಲಿಯಾ ಭಟ್ ತನ್ನ ಮುದ್ದಾದ ಮಗಳು ರಾಹಾಗೆ ಜನ್ಮ ನೀಡಿದ್ದರು. ತಮ್ಮ ಮಗಳ ಜತೆಗೆ ಕಳೆದ ಸುಮಧುರ ಕ್ಷಣಗಳ ಫೋಟೋ ಗಳನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಆಗಾಗ ಅಪ್‌ಲೋಡ್ ಮಾಡುತ್ತಿರುತ್ತಾರೆ. ಇದೀಗ ಆಲಿಯಾ ಭಟ್ ತನ್ನ ಮನೆಯಲ್ಲಿ ಸಾಕು ಪ್ರಾಣಿಗಳ ದಿನ ಆಚರಣೆ ಮಾಡಿದ್ದಾರೆ. ಆಲಿಯಾ ಮನೆಯಲ್ಲಿ ಎಡ್ವರ್ಡ್ ಮತ್ತು ಜುನಿಪರ್ ಎಂಬ ಪರ್ಶಿಯನ್ ಬೆಕ್ಕುಗಳಿದ್ದು, ಅವುಗಳೊಂದಿಗೆ ನಟಿ ಸಾಕುಪ್ರಾಣಿಗಳ ದಿನವನ್ನು ಸಂಭ್ರಮಿಸಿದ್ದಾರೆ. ಎಡ್ವರ್ಡ್ ಎಂಬ ಬಿಳಿಯ ಪರ್ಷಿಯನ್ ಬೆಕ್ಕನ್ನು ತಮ್ಮ ತೋಳಲ್ಲಿ ಹಿಡಿದುಕೊಂಡು ಮುದ್ದಾಡಿಸಿದ್ದ ಫೋಟೊ ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿದ್ದು, ಫೋಟೊ ಕ್ರೆಡಿಟ್ ಅನ್ನು ತನ್ನ ಮಗಳಾದ ರಾಹಾಗೆ ನೀಡಿದ್ದಾರೆ.
ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರಿಂದ ಎಡ್ವರ್ಡ್ ಎನ್ನುವ ಬೆಕ್ಕನ್ನು ನಟಿ ಆಲಿಯಾ ಭಟ್ ಹುಟ್ಟುಹಬ್ಬದ ಉಡುಗೊರೆಯಾಗಿ ಪಡೆದಿದ್ದರು ಎನ್ನಲಾಗಿತ್ತು. ಬಳಿಕ ಜುನಿಪರ್ ಎಂಬ ಬೆಕ್ಕನ್ನು ಖರೀದಿ ಮಾಡಿದ್ದು ಸದ್ಯ ಈ ಎರಡು ಬೆಕ್ಕುಗಳು ಆಲಿಯಾ ಕುಟುಂಬ ಸದಸ್ಯರಂತಿವೆ. ಇದೀಗ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗಿದ್ದು ಇನ್‌ಸ್ಟಾಗ್ರಾಮ್‌ನಲ್ಲಿ 8.4 ಕೋಟಿಗೂ ಅಧಿಕ ವೀವ್ಸ್ ಪಡೆದಿದೆ. ನಟಿ ಆಲಿಯಾ ಭಟ್ ಯಾವುದೇ ಮೇಕಪ್ ಇಲ್ಲದೆ ಸಿಂಪಲ್ ಆಗಿ ತಮ್ಮ ಮುದ್ದಿನ ಪರ್ಷಿಯನ್ ಕ್ಯಾಟ್ ಜತೆ ಫೋಟೊಕ್ಕೆ ಪೋಸ್ ನೀಡಿದ್ದಾರೆ. ಎ ಪಿಕ್ಚರ್ ವಿತ್ ಮೈ ಪ್ರಿನ್ಸೆಸ್, ಕ್ಲಿಕ್ಡ್ ಬೈ ಮೈ ಪ್ರಿನ್ಸಸ್ ಎಂಬ ಶೀರ್ಷಿಕೆ ಅಡಿಯಲ್ಲಿ ಈ ಫೋಟೊ ಹಂಚಿ ಕೊಂಡಿದ್ದಾರೆ. ಈ ಪೋಸ್ಟ್ ಇದೀಗ ಬಹಳಷ್ಟು ವೈರಲ್ ಆಗಿದ್ದು ಈ ಬಗ್ಗೆ ನೆಟ್ಟಿಗರು ನಾನಾಬಗೆಯ ಕಾಮೆಂಟ್ ಮಾಡಿದ್ದಾರೆ. ಬಳಕೆದಾರರೊಬ್ಬರು ಮೋಸ್ಟ್ ಬ್ಯುಟಿಫುಲ್ ಪಿಕ್ ಎಂದಿದ್ದಾರೆ.
ಇದನ್ನು ಓದಿ: Saif Ali Khan: ಸೈಫ್ ಅಲಿ ಖಾನ್ ಮೇಲೆ ಹಲ್ಲೆ ಪ್ರಕರಣ; ನನ್ನ ವಿರುದ್ಧ ಸುಳ್ಳು ಕೇಸ್ ಮಾಡಲಾಗಿದೆ ಎಂದ ಆರೋಪಿ
ನಟಿ ಆಲಿಯಾ ಭಟ್ ʼಆಲ್ಫಾʼ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಫೀಮೇಲ್ ಲೀಡ್ ಕ್ಯಾರೆಕ್ಟರ್ ಇರಲಿದ್ದು ಶಾರ್ವರಿ ಜತೆ ಆಲಿಯಾ ತೆರೆ ಹಂಚಿಕೊಳ್ಳಲಿದ್ದಾರೆ. ಇದರ ಜತೆಗೆ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಲವ್ & ವಾರ್ ಚಿತ್ರದಲ್ಲಿಯೂ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ರಣಬೀರ್ ಕಪೂರ್ ಮತ್ತು ವಿಕ್ಕಿ ಕೌಶಲ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರವು 2026ರ ಮಾರ್ಚ್ 20ರಂದು ಬೆಳ್ಳಿ ಪರದೆಗೆ ಬರಲಿದೆ.