ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mirai Movie: ಮಿರಾಯ್ ಚಿತ್ರದ ಟ್ರೈಲರ್ ರಿಲೀಸ್- ಯೋಧನಾಗಿ ಎಂಟ್ರಿ ನೀಡಿದ ತೇಜ ಸಜ್ಜಾ

Mirai Movie Trailer: ಬಹು ನಿರೀಕ್ಷಿತ ಮಿರಾಯ್ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ನಿರ್ದೇಶಕ ಕಾರ್ತಿಕ್ ಘಟ್ಟಮನೇನಿ ಪ್ರೇಕ್ಷಕರಿಗೆ ಭರ್ಜರಿ ವಿಷ್ಯುವಲ್ ಟ್ರೀಟ್ ನೀಡಿದ್ದಾರೆ. ಮೂರು ನಿಮಿಷ ಏಳು ಸೆಕೆಂಡ್ ಇರುವ ಟ್ರೇಲರ್ ಸಿನಿಮಾ ಮೇಲಿನ ನಿರೀಕ್ಷೆ ಇನ್ನಷ್ಟು ಹೆಚ್ಚಿಸಿದೆ.

ತೇಜ ಸಜ್ಜಾ ನಟನೆಯ ಮಿರಾಯ್ ಚಿತ್ರದ ಟ್ರೈಲರ್ ರಿಲೀಸ್

-

Profile Pushpa Kumari Aug 29, 2025 4:03 PM

ಬೆಂಗಳೂರು: ಹನುಮಾನ್ ಚಿತ್ರದ ಮೂಲಕ ಬಾಕ್ಸ್ ಆಫೀಸ್ ಶೇಕ್ ಮಾಡಿದ್ದ ತೇಜ ಸಜ್ಜಾ (Teja Sajja) ಈಗ ಸೂಪರ್ ಯೋಧನಾಗಿ ಮತ್ತೆ ಎಂಟ್ರಿ‌ ಕೊಟ್ಟಿದ್ದಾರೆ. ಬಹು ನಿರೀಕ್ಷಿತ ಮಿರಾಯ್ ಸಿನಿ ಮಾದ ಟ್ರೇಲರ್ ರಿಲೀಸ್(Mirai Movie Trailer) ಆಗಿದೆ. ನಿರ್ದೇಶಕ ಕಾರ್ತಿಕ್ ಘಟ್ಟಮನೇನಿ ಪ್ರೇಕ್ಷಕರಿಗೆ ಭರ್ಜರಿ ವಿಷ್ಯು ವಲ್ ಟ್ರೀಟ್ ನೀಡಿದ್ದಾರೆ. ಮೂರು ನಿಮಿಷ ಏಳು ಸೆಕೆಂಡ್ ಇರುವ ಟ್ರೇಲರ್ ಸಿನಿಮಾ ಮೇಲಿನ ನಿರೀಕ್ಷೆ ಇನ್ನಷ್ಟು ಹೆಚ್ಚಿಸಿದೆ.

ಸೂಪರ್ ಯೋಧನಾಗಿ ಜನರನ್ನು ರಕ್ಷಿಸಲು ತೇಜ ಸಜ್ಜಾ ಹೋರಾಟ ಮಾಡ್ತಾರೆ. ಅವರ ವಿರುದ್ಧ ಮಂಚು ಮನೋಜ್ ಖಳನಾಯಕನಾಗಿ ಅಬ್ಬರಿಸಿದ್ದಾರೆ. ಭರ್ಜರಿ ಆಕ್ಷನ್ ಜೊತೆಗೆ ಪುರಾಣದ ಕಥೆ ಯನ್ನು ಸೊಗಸಾಗಿ ಟ್ರೇಲರ್ ನಲ್ಲಿ ಕಟ್ಟಿ ಕೊಡಲಾಗಿದೆ. ಧರ್ಮ ರಕ್ಷಕನಾಗಿ ತೇಜ ಸಜ್ಜಾ ಹೋರಾಟ ನಡೆಸುತ್ತಾರೆ. ಟ್ರೇಲರ್ ಕೊನೆಯಲ್ಲಿ ಬರುವ ಭಗವಾನ್ ಶ್ರೀರಾಮ ಝಲಕ್ ಪ್ರೇಕ್ಷಕರಿಗೆ ರೋಮಾಂಚನ ನೀಡಲಿದೆ.



ದಕ್ಷಿಣ ಭಾರತದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಮೀಡಿಯಾ ಫ್ಯಾಕ್ಟರಿಯಡಿ ಟಿ.ಜಿ.ವಿಶ್ವಪ್ರಸಾದ್ ಚಿತ್ರ ನಿರ್ಮಾಣ ಮಾಡಿದ್ದಾರೆ. ರಿತಿಕಾ ನಾಯಕ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ನಿರ್ದೇಶಕ ಕಾರ್ತಿಕ್ ಘಟ್ಟಮನೇನಿ ಮಿರಾಯ್ಗೆ ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಮಣಿಬಾಬು ಕರಣಂ ಸಂಭಾಷಣೆ ಬರೆದಿದ್ದಾರೆ. ಶ್ರೀ ನಾಗೇಂದ್ರ ತಂಗಳ ಕಲಾ ನಿರ್ದೇಶನ ಚಿತ್ರಕ್ಕಿದ್ದು, ವಿವೇಕ್ ಕೂಚಿಭೋಟ್ಲ ಸಹ ನಿರ್ಮಾಪಕರು. ಪ್ರಸಾದ್ ಕ್ರಿಯೇಟಿವ್ ನಿರ್ಮಾಪಕರಾಗಿದ್ದು, ಸುಜಿತ್ ಕುಮಾರ್ ಕೊಲ್ಲಿ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.

ಇದನ್ನು ಓದಿ:Su From So Movie: ಬಾಕ್ಸ್ ಆಫೀಸ್‌ನಲ್ಲಿ ರಕ್ಷಿತ್‌ ಶೆಟ್ಟಿ ಸಿನಿಮಾ ಹಿಂದಿಕ್ಕಿದ ʼಸು ಫ್ರಮ್ ಸೋʼ

ಸೆಪ್ಟೆಂಬರ್ 12ರಂದು ಮಿರಾಯ್ ಸಿನಿಮಾ 2D ಮತ್ತು 3D ಫಾರ್ಮಾಟ್ ನಲ್ಲಿ ಏಳು ಭಾಷೆಯಲ್ಲಿ ರಿಲೀಸ್ ಆಗಲಿದೆ. ಕನ್ನಡದಲ್ಲಿ ಈ ಚಿತ್ರವನ್ನು ವಿಕೆ‌ ಫಿಲ್ಮ್ ಬ್ಯಾನರ್ ನಡಿ ಹೊಂಬಾಳೆ ಫಿಲ್ಮ್ ರಿಲೀಸ್ ಮಾಡುತ್ತಿದೆ.ಸದ್ಯ ಚಿತ್ರದ ಬಗ್ಗೆ ನಿರೀಕ್ಷೆ ಕೂಡ ಹೆಚ್ಚಾಗಿದೆ.