OTT Release Movie: ಸೆಪ್ಟೆಂಬರ್ ನಲ್ಲಿ ಒಟಿಟಿಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಸಿನಿಮಾಗಳು ಇವೇ ನೋಡಿ!
OTT Release Movie: ಸೆಪ್ಟೆಂಬರ್ ತಿಂಗಳಿನಲ್ಲಿ ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ಹಲವಾರು ದೊಡ್ಡ ಬಜೆಟ್ ನ ಚಲನಚಿತ್ರಗಳು ಬಿಡುಗಡೆಗೆ ಸಾಲುಗಟ್ಟಿ ನಿಂತಿವೆ. ಸ್ಟಾರ್ ಚಿತ್ರಗಳಿಂದ ಹಿಡಿದು ಆಕ್ಷನ್ ಥ್ರಿಲ್ಲರ್ಗಳವರೆಗೆ, ಪ್ರೇಕ್ಷಕರು ಚಿತ್ರಮಂದಿರಗಳಲ್ಲಿ ನೋಡದೆ ಇರುವ ಚಿತ್ರವನ್ನು ಓಟಿಟಿ ಸ್ಟ್ರೀಮಿಂಗ್ ನಲ್ಲಿ ವೀಕ್ಷಿಸಬಹುದು. ಈ ತಿಂಗಳು ಒಟಿಟಿಯಲ್ಲಿ ಬಿಡುಗಡೆಯಾಗುತ್ತಿರುವ ಐದು ಬಹುನಿರೀಕ್ಷಿತ ಸಿನಿಮಾಗಳ ಮಾಹಿತಿ ಇಲ್ಲಿದೆ.

-


ಸೈಯಾರಾ:
ಮೋಹಿತ್ ಸೂರಿ ನಿರ್ದೇಶಿಸಿದ ಮತ್ತು ಯಶ್ ರಾಜ್ ಫಿಲ್ಮ್ಸ್ ಅಡಿಯಲ್ಲಿ ನಿರ್ಮಿಸಲಾದ ಸೈಯಾರಾ ಸಿನಿಮಾವು ಒಟಿಟಿಗೆ ಲಗ್ಗೆ ಇಡಲಿದೆ. ಅಹಾನ್ ಪಾಂಡೆ ಮತ್ತು ಅನೀತ್ ಪಡ್ಡಾ ಅವರ ಈ ಚಿತ್ರವು ಬಾಕ್ಸ್ ಆಫೀಸ್ನಲ್ಲಿ ಸಂಚಲನ ಮೂಡಿಸಿತ್ತು. 2025 ರಲ್ಲಿ ಇದುವರೆಗೆ ಎರಡನೇ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿ ಹೆಸರು ಮಾಡಿತ್ತು. ಅಭಿಮಾನಿಗಳು ಈಗ ಸೆಪ್ಟೆಂಬರ್ 12 ರಿಂದ ನೆಟ್ಫ್ಲಿಕ್ಸ್ನಲ್ಲಿ ಇದನ್ನು ವೀಕ್ಷಿಸಬಹುದು.

ಮಲಿಕ್:
ಪುಲ್ಕಿತ್ ನಿರ್ದೇಶಿಸಿದ ಮತ್ತು ಕುಮಾರ್ ತೌರಾನಿ ಮತ್ತು ಜೇ ಶೇವಕ್ರಮಣಿ ನಿರ್ಮಿಸಿದ ಈ ಆಕ್ಷನ್ ಥ್ರಿಲ್ಲರ್ನಲ್ಲಿ, ರಾಜ್ಕುಮಾರ್ ರಾವ್, ಪ್ರೊಸೆನ್ಜಿತ್ ಚಟರ್ಜಿ ಮತ್ತು ಮಾನುಷಿ ಚಿಲ್ಲರ್ ನಟಿಸಿದ್ದಾರೆ. ಇದು ಚಿತ್ರಮಂದಿರಗಳಲ್ಲಿ ಸಾಧಾರಣವಾಗಿ ಪ್ರದರ್ಶನಗೊಂಡರೂ, ಒಟಿಟಿ ಸ್ಟ್ರೀಮಿಂಗ್ ನಲ್ಲಿ ಈ ಚಿತ್ರವು ಹೆಚ್ಚಿನ ಪ್ರೇಕ್ಷಕರನ್ನು ಪಡೆಯುವ ನಿರೀಕ್ಷೆಯಿದೆ. ಇದು ಸೆಪ್ಟೆಂಬರ್ 5 ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಲಿದೆ.

ಕೂಲಿ:
ಲೋಕೇಶ್ ಕನಕರಾಜ್ ಬರೆದು ನಿರ್ದೇಶಿಸಿದ ಪ್ಯಾನ್ ಇಂಡಿಯಾ ತಮಿಳು-ಭಾಷೆಯ ಆಕ್ಷನ್ ಥ್ರಿಲ್ಲರ್ ಕೂಲಿ ಚಿತ್ರವನ್ನು ಸಿನಿ ಪ್ರಿಯರು ಒಟಿಟಿಯಲ್ಲಿ ನೋಡಬಹುದು. ರಜನಿಕಾಂತ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಾಗಾರ್ಜುನ ಅಕ್ಕಿನೇನಿ, ಶ್ರುತಿ ಹಾಸನ್, ಸೌಬಿನ್ ಶಾಹಿರ್, ಸತ್ಯರಾಜ್, ಉಪೇಂದ್ರ ಮತ್ತು ರಚಿತಾ ರಾಮ್ ಕೂಡ ಈ ಸಮೂಹದ ತಾರಾಗಣದಲ್ಲಿದ್ದಾರೆ, ಜೊತೆಗೆ ಅಮೀರ್ ಖಾನ್ ಮತ್ತು ಪೂಜಾ ಹೆಗ್ಡೆ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಚಿತ್ರ ಸೆಪ್ಟೆಂಬರ್ 11 ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಲಿದೆ.

ಆಂಖೋಂ ಕಿ ಗುಸ್ತಖಿಯಾನ್:
ಜೀ ಸ್ಟುಡಿಯೋಸ್ ಮತ್ತು ಮಿನಿ ಫಿಲ್ಮ್ಸ್ ನಿರ್ಮಿಸಿದ ಈ ಚಿತ್ರವನ್ನು ಸಂತೋಷ್ ಸಿಂಗ್ ನಿರ್ದೇಶಿ ಸಿದ್ದಾರೆ. ವಿಕ್ರಾಂತ್ ಮಾಸ್ಸಿ ಮತ್ತು ಶನಯಾ ಕಪೂರ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರ ಸೆಪ್ಟೆಂಬರ್ 5 ರಂದು ಸ್ಟ್ರೀಮಿಂಗ್ಗೆ ಲಭ್ಯವಿರುತ್ತದೆ.

ಇನ್ಸ್ಪೆಕ್ಟರ್ ಝೆಂಡೆ:
ಚಿನ್ಮಯ್ ಮಾಂಡ್ಲೇಕರ್ ನಿರ್ದೇಶಿಸಿ ಬರೆದ ಈ ಹಾಸ್ಯ ಥ್ರಿಲ್ಲರ್ ಚಿತ್ರದಲ್ಲಿ ಮನೋಜ್ ಬಾಜ್ಪೇಯಿ ಇನ್ಸ್ಪೆಕ್ಟರ್ 'ಮಧುಕರ್ ಝೆಂಡೆ' ಪಾತ್ರದಲ್ಲಿ ನಟಿಸಿದ್ದಾರೆ, ಜಿಮ್ ಸರ್ಭ್ ಕುಖ್ಯಾತ ಸರಣಿ ಕೊಲೆ ಗಾರ ಚಾರ್ಲ್ಸ್ ಸೋಭರಾಜ್ನಿಂದ ಸ್ಫೂರ್ತಿ ಪಡೆದ 'ಕಾರ್ಲ್ ಭೋಜರಾಜ್' ಪಾತ್ರವನ್ನು ನಿರ್ವಹಿಸಿ ದ್ದಾರೆ. ಈ ಚಿತ್ರವು ಸೆಪ್ಟೆಂಬರ್ 5 ರಂದು ನೆಟ್ಫ್ಲಿಕ್ಸ್ನಲ್ಲಿ ತೆರೆಕಾಣಲಿದೆ.