ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Amruthadhaare Serial: ಐಪಿಎಸ್ ಮಲ್ಲಿ ರಾಕ್‌ ಜೈದೇವ್‌ ಶಾಕ್‌! ಮನದರಸಿ ಭೂಮಿಗಾಗಿ ಗೌತಮ್‌ ಚೌಕಾಸಿ

Amruthadhaare Serial:ಅಮೃತಧಾರೆ ಸೀರಿಯಲ್‌ನ ಐಪಿಎಸ್ ಮಲ್ಲಿ, ಕುಡಿದು ಕಿರಿಕ್ ಮಾಡುತ್ತಿದ್ದ ಮಾಜಿ ಗಂಡ, ಕೆಡಿ ಜೈದೇವ್‌ಗೆ (Jaidev) ದಬಾಯಿಸಿದ್ದಾಳೆ. ಮಲ್ಲಿ ತಾನೆಷ್ಟು ಖಡಕ್ ಎಂಬುದನ್ನು ತೋರಿಸುತ್ತಿದ್ದಾಳೆ. ಇನ್ನೊಂದು ಕಡೆ ಬಿಸ್ನೆಸ್ ಮ್ಯಾಗ್ನೆಟ್ ಗೌತಮ್ ದಿವಾನ್ (Gowtham Diwan) ಈಗ.. ಮನದರಸಿ ಭೂಮಿಗಾಗಿ ಚೌಕಾಸಿ ಮಾಡೋಕು ಸೈ ಆಗಿದ್ದಾರೆ.

Amruthadhaare: ಐಪಿಎಸ್ ಮಲ್ಲಿ ರಾಕ್‌ ಜೈದೇವ್‌ ಶಾಕ್‌!

ಅಮೃತಧಾರೆ ಧಾರಾವಾಹಿ -

Yashaswi Devadiga
Yashaswi Devadiga Jul 28, 2026 11:15 AM

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (Amruthadhaare Serial) ಟ್ವಿಸ್ಟ್‌ ಪಡೆದು ಸಾಗುತ್ತಿದೆ. ಅಮೃತಧಾರೆ ಸೀರಿಯಲ್‌ನ ಐಪಿಎಸ್ ಮಲ್ಲಿ, ಕುಡಿದು ಕಿರಿಕ್ ಮಾಡುತ್ತಿದ್ದ ಮಾಜಿ ಗಂಡ, ಕೆಡಿ ಜೈದೇವ್‌ಗೆ (Jaidev) ದಬಾಯಿಸಿದ್ದಾಳೆ. ಮಲ್ಲಿ ತಾನೆಷ್ಟು ಖಡಕ್ ಎಂಬುದನ್ನು ತೋರಿಸುತ್ತಿದ್ದಾಳೆ. ಇನ್ನೊಂದು ಕಡೆ ಬಿಸ್ನೆಸ್ ಮ್ಯಾಗ್ನೆಟ್ ಗೌತಮ್ ದಿವಾನ್ (Gowtham Diwan) ಈಗ.. ಮನದರಸಿ ಭೂಮಿಗಾಗಿ ಚೌಕಾಸಿ ಮಾಡೋಕು ಸೈ ಆಗಿದ್ದಾರೆ.

ಜೈದೇವ್, ಮೊದಲ ಬಾರಿಗೆ ಮಾಜಿ ಪತ್ನಿಯ ಹೊಸ್ ಲುಕ್‌ಗೆ ಶಾಕ್‌ ಆಗಿದ್ದಾನೆ. ಮಧ್ಯರಾತ್ರಿ ಕುಡಿದು ಕಾರ್ ಚಲಾಯಿಸುತ್ತಿದ್ದ ಜೈದೇವ್‌ನನ್ನು ಹಿಡಿಯಲಾಗಿತ್ತು. ಪೊಲೀಸ್ ಜೀಪ್ ಮೇಲೆಯೇ ಕುಳಿತು ನ್ಯಾಯ ಬೇಕೆಂದು ಕೂಗುತ್ತಿದ್ದ ಜೈದೇವ್‌ಗೆ ಮಲ್ಲಿ ಲಾಠಿ ಏಟು ನೀಡಿದ್ದಾಳೆ. ನಂತರ ಆತನನ್ನು ಸ್ಟೇಶನ್‌ಗೆ ಶಿಫ್ಟ್ ಮಾಡಲಾಗಿದೆ. ಇಷ್ಟಾದ್ರೂ ಜೈದೇವ್ ಸೊಕ್ಕು ಮಾತ್ರ ಕಡಿಮೆಯಾಗಿಲ್ಲ. ನಿನ್ನನ್ನು ನೋಡಿಕೊಳ್ಳುವೆ ಎಂಬ ಸನ್ನೆ ಮಾಡಿ ಜೈದೇವ್‌ ಅಲ್ಲಿಂದ ತೆರಳಿದ್ದಾನೆ.

ಇದನ್ನೂ ಓದಿ: Jr NTR : ಜ್ಯೂ ಎನ್​ಟಿಆರ್​ ಭುಜಕ್ಕೆ ಗಾಯ; ಬಿಗ್‌ ಅಪ್‌ಡೇಟ್‌ ಕೊಟ್ಟ ಟೀಮ್‌!

ಇನ್ನೊಂದು ಕಡೆ ಭೂಮಿಯ ಕೇರ್‌ ಈಗ ಗೌತಮ್‌ ಮೇಲಿದೆ. ಕ್ಯಾನ್ಸರ್ ರೋಗಕ್ಕೆ ತುತ್ತಾಗಿರುವ ಮಡದಿ ಭೂಮಿಕಾಳ ಆಸೆಯನ್ನು ಈಡೇರಿಸಲು ಗೌತಮ್ ಮುಂದಾಗಿದ್ದಾನೆ. ಪತ್ನಿ ಭೂಮಿಕಾ ಜೊತೆ ಮಾರುಕಟ್ಟೆಗೆ ಬಂದಿರುವ ಗೌತಮ್, ಚೌಕಾಸಿ ಮಾಡಿ ತರಕಾರಿ ಖರೀದಿಸುತ್ತಿದ್ದಾನೆ. ಈ ಮುಂಚೆಗ ಹೇಗೆ ಚೌಕಾಸಿ ಮಾಡಬೇಕು ಎಂಬುದನ್ನು ಗೌತಮ್‌ಗೆ ಭೂಮಿಕಾ ಹೇಳಿಕೊಟ್ಟಿದ್ದಳು ಅಂದರಂತೆ ಮಾಡುತ್ತಿದ್ದಾನೆ. ಮತ್ತೊಂದು ಕಡೆ ಭೂಮಿ ತಮ್ಮ ಕೂಡ ಜೈದೇವ್‌ ಬೆನ್ನ ಹಿಂದೆ ಬಿದ್ದಿದ್ದಾನೆ.

ಜೈದೇವ್​ ಮತ್ತು ಶಕುಂತಲಾ ಗೌತಮ್​ ಫ್ಯಾಮಿಲಿಯನ್ನು ಬೀದಿಗೆ ತರುವ ಹುನ್ನಾರ ಮಾಡುತ್ತಿದ್ದಾರೆ. ಇಲ್ಲಿಯವರೆಗೆ ಅವರಿಬ್ಬರೂ ಹೇಗೋ ತಪ್ಪಿಸಿಕೊಂಡಿದ್ದರು. ಅದರಲ್ಲಿಯೂ ಜೈದೇವ ದಿಯಾಳ ಕೊಲೆ ಮಾಡಿದ್ದು, ಇನ್ನೂ ಯಾರಿಗೂ ಗೊತ್ತಿಲ್ಲ. ಇದೀಗ ಮಲ್ಲಿ ಇನ್ಸ್​ಪೆಕ್ಟರ್​ ಆಗಿರುವ ಹಿನ್ನೆಲೆಯಲ್ಲಿ, ಜೈದೇವ್​ಗೆ ಮುಹೂರ್ತ ಫಿಕ್ಸ್​ ಆಗುವಂತಿದೆ. ಅದೇ ರೀತಿ, ಶಕುಂತಲಾ ಕುತಂತ್ರ ಕೂಡ ಬಯಲು ಮಾಡಿ ಆಕೆಗೂ ಮಗನ ಜೊತೆಗೇ ಜೈಲೂಟ ಹಾಕಿಸುತ್ತಾಳೆ. ಅಲ್ಲಿಗೆ ಜೈದೇವ್​ ಮತ್ತು ಶಕುಂತಲಾರ ಕೆಟ್ಟ ದಿನ ಶುರುವಾದಂತಿದೆ.

ಇದನ್ನೂ ಓದಿ: Amruthdhaare Serial: ಮಲ್ಲಿಯ ಖಡಕ್‌ ಎಂಟ್ರಿ! ಜೈದೇವ್ ಸಿಕ್ಕಿ ಬೀಳ್ತಾನಾ?

ಅಮೃತಧಾರೆʼ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ.