Naga Chaitanya: ಕ್ರಿಮಿನಲ್ ತರಹ ಏಕೆ ಟ್ರೀಟ್ ಮಾಡ್ತೀರಿ? ಡಿವೋರ್ಸ್ ನೀಡುವ ಮುನ್ನ ಹಲವು ಬಾರಿ ಯೋಚಿಸಿದ್ದೆ-ನಾಗಚೈತನ್ಯ ಹೀಗಂದಿದ್ದೇಕೆ?
ತೆಲುಗು ನಟ ನಾಗ ಚೈತನ್ಯ ಅವರು ಸಮಂತಾ ಜೊತೆಗಿನ ಡಿವೋರ್ಸ್ ಬಳಿಕ ಯಾವತ್ತೂ ವಿಚ್ಛೇದನ ಬಗ್ಗೆ ಹೆಚ್ಚು ಮಾತನಾಡಿಲ್ಲ. ಸಮಂತಾ ಅವರು ಅಲ್ಲೊಂದು ಇಲ್ಲೊಂದು ಮಾತಾಡಿದರೂ ಕೂಡಾ ಇಬ್ಬರೂ ನೇರವಾಗಿ ಎಂದೂ ಈ ಬಗ್ಗೆ ಮಾತನಾಡಿಲ್ಲ. ಇದೀಗ ನಟ ನಾಗಚೈತನ್ಯ ಅವರು ಮೊದಲ ಮದುವೆ ಹಾಗೂ ಡಿವೋರ್ಸ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
![ಸಮಂತಾ ಜೊತೆ ಡಿವೋರ್ಸ್ ಬಗ್ಗೆ ನಾಗಚೈತನ್ಯ ಫಸ್ಟ್ ರಿಯಾಕ್ಷನ್!](https://cdn-vishwavani-prod.hindverse.com/media/original_images/naga_chaithanya.jpg)
naga chaithanya
![Profile](https://vishwavani.news/static/img/user.png)
ಹೈದರಾಬಾದ್: ತೆಲುಗು ನಟ ನಾಗಚೈತನ್ಯ (Naga Chaitanya) ಮತ್ತು ಲೇಡಿ ಸೂಪರ್ ಸ್ಟಾರ್ ಸಾಯಿ ಪಲ್ಲವಿ ಕಾಂಬಿನೇಷನ್ ನ ತಾಂಡೇಲ್ ಸಿನೆಮಾ ಇತ್ತೀಚೆಗಷ್ಟೆ ತೆರೆ ಕಂಡಿದ್ದು ಸಿನೆಮಾ ಪ್ರಮೋಶನ್ ಗಾಗಿ ನಟ ನಾಗಚೈತನ್ಯ ಅನೇಕ ಸಂದರ್ಶನಗಳಲ್ಲಿ ಭಾಗಿಯಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಂದರ್ಶನ ಒಂದರಲ್ಲಿ ಪಾಲ್ಗೊಂಡಿದ್ದ ನಾಗ ಚೈತನ್ಯ ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡಿದ್ದು ಸಮಂತಾ ಜೊತೆ ಡಿವೋರ್ಸ್ ಪಡೆದ ಬಗ್ಗೆ ಫಸ್ಟ್ ರಿಯಾಕ್ಷನ್ ಕೊಟ್ಟಿದ್ದಾರೆ. ಈ ವೇಳೆ ನಾಗ ಚೈತನ್ಯ ಪರೋಕ್ಷವಾಗಿ ಡಿವೋರ್ಸ್ ಕಾರಣ ಹಾಗೂ ಇತರ ಸಂಗತಿಗಳ ಬಗ್ಗೆ ಮಾತನಾಡಿದ್ದಾರೆ. ಅಲ್ಲದೇ ನನ್ನನ್ನು ಏಕೆ ಕ್ರಿಮಿನಲ್ ತರಹ ನಡೆಸಿಕೊಳ್ಳಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ತೆಲುಗು ನಟ ನಾಗ ಚೈತನ್ಯ ಅವರು ಸಮಂತಾ ಜೊತೆಗಿನ ಡಿವೋರ್ಸ್ ಬಳಿಕ ಯಾವತ್ತೂ ವಿಚ್ಛೇದನ ಬಗ್ಗೆ ಹೆಚ್ಚು ಮಾತನಾಡಿಲ್ಲ. ಸಮಂತಾ ಅವರು ಅಲ್ಲೊಂದು ಇಲ್ಲೊಂದು ಮಾತಾಡಿದರೂ ಕೂಡಾ ಇಬ್ಬರೂ ನೇರವಾಗಿ ಎಂದೂ ಈ ಬಗ್ಗೆ ಮಾತನಾಡಿಲ್ಲ. ಇದೀಗ ನಟ ನಾಗಚೈತನ್ಯ ಅವರು ಮೊದಲ ಮದುವೆ ಹಾಗೂ ಡಿವೋರ್ಸ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ತಾವು ಪರಸ್ಪರ ಇಬ್ಬರು ಒಪ್ಪಿಗೆಯ ಮೇರೆಗೆ ಗೌರವದಿಂದ ಬೇರ್ಪಟ್ಟಿದ್ದೆವು ಎನ್ನುವುದನ್ನು ನಾಗಚೈತನ್ಯ ರಿವೀಲ್ ಮಾಡಿದ್ದಾರೆ.
ನಾನು ಕೂಡ ಒಂದು ಬ್ರೋಕನ್ ಫ್ಯಾಮಿಲಿಯಿಂದ ಬಂದ ಕಾರಣ ವಿಚ್ಛೇದನದ ಬಗ್ಗೆ ನನಗೆ ಅರಿವಿದೆ ಎಂದು ಸ್ಪಷ್ಟ ಪಡಿಸಿದ್ದಾರೆ. ಇದು ಒಂದು ರಾತ್ರಿಯ ನಿರ್ಧಾರವಲ್ಲ, ಡಿವೋರ್ಸ್ ಪಡೆಯುವ ಮುನ್ನ ಹಲವು ಭಾರಿ ಯೋಚನೆ ಮಾಡಿದ್ದೇನೆ. ಇಬ್ಬರು ಒಪ್ಪಿಯೇ ಈ ವಿವಾಹ ಸಂಬಂಧದಿಂದ ಬೇರ್ಪಟ್ಟಿದ್ದೇವೆ. ನಮ್ಮ ವಿಚ್ಛೇದನವನ್ನು ಬಹಳ ಗೌರವಯುತವಾಗಿ ಸ್ವೀಕಾರ ಮಾಡಿದ್ದೇವೆ ಎಂದಿದ್ದಾರೆ.
ಬಳಿಕ ಮಾತನಾಡಿ, ಈ ವಿಚಾರ ಗೌಪ್ಯವಾಗಿ ಇಡಲು ನಾವೆಷ್ಟೇ ನೋಡಿದರೂ ಇಲ್ಲ ಸಲ್ಲದ ಗಾಸಿಪ್ ಆಗಾಗ ಹರಿದಾಡುವಂತಾಗಿದೆ. ನಾವು ನಮ್ಮ ಖಾಸಗಿತನಕ್ಕೆ ಗೌರವ ನೀಡಿ ಎಂದು ಕೋರಿದ್ದೆವು. ಆದರೆ, ಇದುವೇ ಗಾಸಿಪ್ಗೆ ಎಡೆ ಮಾಟಿಕೊಟ್ಟಿತ್ತು ಎಂದು ಅವರು ಬೇಸರ ಹೊರಹಾಕಿದ್ದಾರೆ. ನಮ್ಮ ನಿಲುವಿನ ಬಗ್ಗೆ ನಮಗೆ ಸ್ಪಷ್ಟತೆ ಇದೆ. ಸುಮ್ಮನೆ ನಮ್ಮ ವೈಯಕ್ತಿಕ ಬದುಕಿನ ಅವಲೋಕನ ಮಾಡುತ್ತಾ ಕಾಲಹರಣ ಮಾಡದೆ ಅವರವರ ಬದುಕು ಅವರು ನೋಡಿಕೊಂಡರೆ ಉತ್ತಮ ಎಂದು ಕೊಂಚ ಖಾರವಾಗಿಯೇ ಹೇಳಿದ್ದಾರೆ.
ಮೊದಲ ಮದುವೆ ಡಿವೋರ್ಸ್ ಆದ ಬಳಿಕ ಅಕ್ಕಿನೇನಿ ನಾಗಚೈತನ್ಯ ಅವರು ನಟಿ ಶೋಭಿತಾ ಅವರನ್ನು ವಿವಾಹವಾಗಿದ್ದು ಇದು ಕೂಡ ಲವ್ ಮ್ಯಾರೇಜ್ ಎಂಬ ಸತ್ಯ ಹೊರಬಿದ್ದಿದೆ. ಇನ್ಸ್ ಸ್ಟಾ ಗ್ರಾಂನಲ್ಲಿ ಶೋಭಿತಾ ಪರಿಚಯವಾಗಿದ್ದು ಬಳಿಕ ಈ ಸಂಬಂಧ ಪ್ರೀತಿಯಾಗಿ ಬದಲಾಗಿದೆ. ಮನೆಯವರ ಸಮ್ಮುಖದಲ್ಲಿ ನಿಶ್ಚಿತಾರ್ಥ, ಮದುವೆ ಮಾಡಿಕೊಂಡು ಈಗ ಹೊಸ ಜೀವನದಲ್ಲಿ ನಾನು ಬಹಳ ಖುಷಿಯಲ್ಲಿ ಇದ್ದೇನೆ. ಆದರೆ ನನ್ನ ಈ ನಿರ್ಧಾರಕ್ಕೆ ಅನೇಕರು ವ್ಯಂಗ್ಯ ಮಾಡುತ್ತಿದ್ದಾರೆ. ಆ ಬಗ್ಗೆ ಬಹಳಷ್ಟು ಬೇಸರವಿದೆ. ಮದುವೆ, ವಿಚ್ಛೇದನ, ಪ್ರೀತಿ ಎಲ್ಲವೂ ಅವರವರ ವೈಯಕ್ತಿಕ ನಿಲುವಾಗಿರುತ್ತದೆ. ಅದನ್ನು ಪ್ರತಿಯೊಬ್ಬರು ಗೌರವಿಸುವುದನ್ನು ಕಲಿಯಬೇಕು ಎಂದು ಹೇಳಿದ್ದಾರೆ.
ಇದನ್ನು ಓದಿ:Viral News: ಆಟೋದೊಳಗೊಂದು ಲೈವ್ ಅಕ್ವೇರಿಯಂ! ಈ ಪ್ರಯಾಣ ನಿಜಕ್ಕೂ ಸುಖಕರ
ಈಗಾಗಲೇ ನಾಗ ಚೈತನ್ಯ ನಟನೆಯ ತಾಂಡೆಲ್ ಚಿತ್ರ ತೆರೆಕಂಡಿದ್ದು ಸಾಯಿ ಪಲ್ಲವಿ ಮತ್ತು ನಾಗಚೈತನ್ಯ ಅಭಿನಯಕ್ಕೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸಿನೆಮಾದ ಕ್ಲೈಮ್ಯಾಕ್ಸ್ ಅತ್ಯದ್ಭುತವಾಗಿದೆ ಎಂಬ ಪಾಸಿಟಿವ್ ರೆಸ್ಪಾನ್ಸ್ ಕೂಡ ಕೇಳಿಬರುತ್ತಿದ್ದು ಗಲ್ಲಾ ಪೆಟ್ಟಿಗೆಯಲ್ಲಿ ದಾಖಲೆ ಮಾಡುತ್ತಾ ಎಂಬುದನ್ನು ಕಾದು ನೋಡಬೇಕಿದೆ.