IND vs ZIM: ಜಿಂಬಾಬ್ವೆ ಎದುರು ಸಂಜು ಸ್ಯಾಮ್ಸನ್ ಆಡ್ತಾರಾ? ಬ್ಯಾಟಿಂಗ್ ಕೋಚ್ ಸಿತಾಂಶು ಕೊಟಕ್ ಸ್ಪಷ್ಟನೆ!
ಆರಂಭಿಕ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದಾರೆ. ಹಾಗಾಗಿ ಅವರನ್ನು ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೆ ಪರಿಗಣಿಸುವ ಬಗ್ಗೆ ಇನ್ನೂ ಯಾವುದೇ ಖಚಿತತೆ ಇಲ್ಲ. ಇವರ ಬದಲು ಸಂಜು ಸ್ಯಾಮ್ಸನ್‌ಗೆ ಇನಿಂಗ್ಸ್ ಆರಂಭಿಸಲು ಅವಕಾಶ ನೀಡಬಹುದು. ಈ ಬಗ್ಗೆ ಭಾರತ ತಂಡದ ಬ್ಯಾಟಿಂಗ್ ಕೋಚ್ ಸಿತಾಂಶು ಕೊಟಕ್ ಮಾಹಿತಿ ನೀಡಿದ್ದಾರೆ.
ಭಾರತ ತಂಡದ ಪ್ಲೇಯಿಂಗ್ XIನಲ್ಲಿ ಬದಲಾವಣೆ ಸಂಭವಿಸಬಹುದೆಂದ ಬ್ಯಾಟಿಂಗ್ ಕೋಚ್. -
ಚೆನ್ನೈ: ಜಿಂಬಾಬ್ವೆ ವಿರುದ್ಧದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ(IND vs ZIM) ಭಾರತ ತಂಡದ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಇರುವ ಬಗ್ಗೆ ಟೀಮ್ ಇಂಡಿಯಾ ಬ್ಯಾಟಿಂಗ್ ಕೋಚ್ ಸಿತಾಂಶು ಕೊಟಕ್ (Sitanshu Kotak) ಸುಳಿವು ನೀಡಿದ್ದಾರೆ. ಸೂರ್ಯಕುಮಾರ್ ಯಾದವ್ (Suryakumar yadav) ನಾಯಕತ್ವದ ಭಾರತ, ಸಿಕಂದರ್ ರಾಜಾ ನೇತೃತ್ವದ ಜಿಂಬಾಬ್ವೆ ತಂಡವನ್ನು ಫೆಬ್ರವರಿ 26ರಂದು ಗುರುವಾರ ಇಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಎದುರಿಸಲಿದೆ. ಸೂಪರ್-8ರ ತನ್ನ ಮೊದಲನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಭಾರೀ ಸೋಲಿನ ನಂತರ ಟೀಮ್ ಇಂಡಿಯಾ ಒತ್ತಡದಲ್ಲಿದೆ.
ಚೆನ್ನೈ ಪಂದ್ಯಕ್ಕೂ ಒಂದು ದಿನ ಮುನ್ನ ಮಾತನಾಡಿದ ಕೊಟಕ್, ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಮಾಡುವ ಕುರಿತು ಚರ್ಚೆಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ. ಜೊತೆಗೆ ಸಂಜು ಸ್ಯಾಮ್ಸನ್ ಅವರಿಗೆ ಅವಕಾಶ ನೀಡುವ ಬಗ್ಗೆ ಆಲೋಚನೆ ನಡೆಯುತ್ತಿದೆ ಎಂದರು. ಭಾರತ ತಂಡದಲ್ಲಿ ಎಡಗೈ ಬ್ಯಾಟರ್‌ಗಳ ಸಂಖ್ಯೆ ಹೆಚ್ಚಿರುವ ಕಾರಣ ಈ ಟೂರ್ನಿಯಲ್ಲಿ ಸವಾಲುಗಳನ್ನು ಹೆಚ್ಚಾಗಿವೆ. ಇಶಾನ್ ಕಿಶನ್ ಹೊರತುಪಡಿಸಿ ಅಭಿಷೇಕ್ ಶರ್ಮಾ ಮತ್ತು ತಿಲಕ್ ವರ್ಮಾ ಇಬ್ಬರೂ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ. ಪರಿಣಾಮವಾಗಿ, ಮಧ್ಯಮ ಓವರ್‌ಗಳಲ್ಲಿ ಸ್ಪಿನ್ ದಾಳಿಗೆ ಎದುರಿಸಲು ಭಾರತ ತಂಡ ಕಷ್ಟ ಅನುಭವಿಸಿದೆ.
IND vs ZIM: ʻವಿರಾಟ್ ಕೊಹ್ಲಿ ತರ ಆಡಿʼ- ತಿಲಕ್ ವರ್ಮಾಗೆ ಮಹತ್ವದ ಸಲಹೆ ನೀಡಿದ ಮೊಹಮ್ಮದ್ ಕೈಫ್!
ಪ್ಲೇಯಿಂಗ್ XIನಲ್ಲಿ ಬದಲಾವಣೆ ಸಂಭವಿಸಬಹುದು
ಆಫ್‌ಸ್ಪಿನ್ ಬೌಲಿಂಗ್ ಭಾರತ ತಂಡದ ಅಗ್ರ ಕ್ರಮಾಂಕದ ದುರ್ಬಲತೆಯನ್ನು ಬಹಿರಂಗಪಡಿಸಿದೆ. ಅಗ್ರ ಬ್ಯಾಟ್ಸ್‌ಮನ್‌ಗಳು ಇನಿಂಗ್ಸ್‌ನ ಬಹುತೇಕ ಸಮಯ ತೊಂದರೆ ಅನುಭವಿಸುವಂತೆ ಮಾಡಿದೆ. ಈ ಸಮಸ್ಯೆಯನ್ನು ಟೀಮ್ ಮ್ಯಾನೇಜ್‌ಮೆಂಟ್ ಗಮನಿಸಿದೆ ಎಂದು ಬ್ಯಾಟಿಂಗ್ ಕೋಚ್ ಸಿತಾಂಶು ಕೊಟಕ್ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಅಗತ್ಯ ಬದಲಾವಣೆಗಳ ಕುರಿತು ಚರ್ಚೆಗಳು ನಡೆಯುತ್ತಿದ್ದು, ಮುಂದಿನ ಪಂದ್ಯದಲ್ಲಿ ಸೂಕ್ತ ಪರಿಷ್ಕರಣೆಗಳನ್ನು ಮಾಡುವ ಬಗ್ಗೆ ಆಲೋಚನೆ ಮುಂದುವರಿದಿದೆ.
"ಹೌದು, ಬದಲಾವಣೆಗಳು ಸಂಭವಿಸಬಹುದು. ಇಂತಹ ವಿಚಾರಗಳನ್ನು ನಾವು ಚರ್ಚಿಸುವುದು ಸಹಜ. ನಮ್ಮ ಬಳಿ ಇಬ್ಬರು ಎಡಗೈ ಓಪನರ್‌ಗಳು ಇದ್ದಾರೆ ಮತ್ತು ಮೂರನೇ ಕ್ರಮದಲ್ಲೂ ಎಡಗೈ ಬ್ಯಾಟರ್ ಇದ್ದಾರೆ. ಎದುರಾಳಿ ತಂಡಗಳು ಆಫ್‌ಸ್ಪಿನ್ನರ್‌ಗಳನ್ನು ಬಳಸುತ್ತಿವೆ. ವೈಯಕ್ತಿಕವಾಗಿ ನನಗೆ ಇದರಲ್ಲಿ ಯಾವುದೇ ಸಮಸ್ಯೆ ಇದೆ ಎಂದು ಅನಿಸಿಲ್ಲ. ಆದರೆ, ಮೂರು ಪಂದ್ಯಗಳಲ್ಲಿ ಮೊದಲ ಓವರ್‌ನಲ್ಲೇ ವಿಕೆಟ್ ಕಳೆದುಕೊಂಡಿರುವುದರಿಂದ, ಯಾವುದೇ ತಂಡವೂ ಯೋಚನೆ ಮಾಡುವುದು ಸಹಜ,” ಎಂದು ಸಿತಾಂಶು ಕೊಟಕ್ ಜಿಂಬಾಬ್ವೆ ಪಂದ್ಯಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
IND vs ZIM: ಭಾರತ ತಂಡದಲ್ಲಿ ರಿಂಕು ಸಿಂಗ್ ಸ್ಥಾನಕ್ಕೆ ಸೂಕ್ತ ಆಟಗಾರರನ್ನು ಹೆಸರಿಸಿದ ರವಿಶಾಸ್ತ್ರಿ!
“ಖಂಡಿತವಾಗಿಯೂ ನಾವು ಆಲೋಚನೆ ಮಾಡುತ್ತಿದ್ದೇವೆ. ತಂಡದ ಮೀಟಿಂಗ್‌ನಲ್ಲಿ ಏನು ನಡೆಯುತ್ತದೆ ಎಂಬುದನ್ನು ನೋಡೋಣ. ನಾವು ತಂಡದ ಅಂತಿಮ ತೀರ್ಮಾನವನ್ನು ಮುಂಚಿತವಾಗಿ ಕೈಗೊಳ್ಳುವುದಿಲ್ಲ. ನಮ್ಮ ಯೋಜನೆಯನ್ನು ಮುಂಚೆಯೇ ಬಹಿರಂಗಪಡಿಸುವುದು ನ್ಯಾಯಸಮ್ಮತವಲ್ಲ. ಆದರೆ ಖಂಡಿತವಾಗಿಯೂ ವಿವಿಧ ಆಯ್ಕೆಗಳ ಬಗ್ಗೆ ಚಿಂತನೆ ನಡೆಯುತ್ತಿದೆ,” ಎಂದು ಅವರು ತಿಳಿಸಿದ್ದಾರೆ.
ಅಭಿಷೇಕ್ ಶರ್ಮಾ ಬಗ್ಗೆ ಬ್ಯಾಟಿಂಗ್ ಕೋಚ್ ಹೇಳಿಕೆ
ಔಟ್ ಆಫ್ ಫಾರ್ಮ್ ಅಭಿಷೇಕ್ ಶರ್ಮಾ ಬಗ್ಗೆ ಮಾತನಾಡಿದ ಸಿತಾಂಶು ಕೊಟಕ್, ಸಂಪೂರ್ಣ ಬ್ಯಾಟಿಂಗ್ ಕ್ರಮದಲ್ಲಿ ಒಬ್ಬ ಆಟಗಾರನ ಮೇಲೆ ಮಾತ್ರ ಗಮನ ಕೆಂದ್ರೀಕರಿಸುವುದು ತಮಗೆ ಇಷ್ಟವಿಲ್ಲ ಎಂದು ಹೇಳಿದ್ದಾರೆ. ಅಭಿಷೇಕ್ ಶರ್ಮಾ ಅನಾರೋಗ್ಯದಿಂದ ಮರಳಿದ ನಂತರ ಲಯ ಕಂಡುಕೊಳ್ಳಲು ನಿರಂತರವಾಗಿ ಕಷ್ಟಪಟ್ಟಿದ್ದಾರೆ ಎಂದು ಒಪ್ಪಿಕೊಂಡರೂ, ಈಗಾಗಲೇ ಒತ್ತಡದಲ್ಲಿರುವ ಆಟಗಾರನ ಮೇಲೆ ಮತ್ತಷ್ಟು ಒತ್ತಡ ಹಾಕಲು ಇಷ್ಟವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಗೌತಮ್ ಗಂಭೀರ್ ರಾಜಕೀಯದಿಂದ ಭಾರತ ತಂಡದ ವರ್ಚಸ್ಸಿಗೆ ಧಕ್ಕೆ: ಅಹ್ಮದ್ ಶೆಹಜಾದ್!
“ಅಭಿಷೇಕ್ ಮೂರು ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. ಅವರಿಗೆ ಆರೋಗ್ಯದ ಸಮಸ್ಯೆ ಇತ್ತು. ಇದಾದ ಬಳಿಕ ಅವರು ಲಯ ಕಂಡುಕೊಳ್ಳಲು ಆಗಲಿಲ್ಲ. ಆದರೆ ಕಳೆದ ಪಂದ್ಯದಲ್ಲಿ ಅವರು ಉತ್ತಮವಾಗಿ ಕಾಣಿಸಿಕೊಂಡರು. ಒಬ್ಬ ಆಟಗಾರನ ಬಗ್ಗೆ ಅತಿಯಾಗಿ ಚಿಂತಿಸುವುದು ನನಗೆ ಇಷ್ಟವಿಲ್ಲ. ನಾವು ಆರು ಬ್ಯಾಟರ್‌ಗಳು ಮತ್ತು ಇಬ್ಬರು ಆಲ್‌ರೌಂಡರ್‌ಗಳೊಂದಿಗೆ ಆಡುತ್ತಿದ್ದೇವೆ. ಒಬ್ಬರ ಮೇಲಷ್ಟೇ ಹೆಚ್ಚು ಗಮನ ಹರಿಸಲಾಗುವುದಿಲ್ಲ. ಹಾಗೆ ಮಾಡಿದರೆ ಆ ಆಟಗಾರ ಇನ್ನಷ್ಟು ಒತ್ತಡಕ್ಕೆ ಒಳಗಾಗುತ್ತಾರೆ. ಅವರು 20 ಚೆಂಡುಗಳಲ್ಲಿ 70-80 ರನ್‌ಗಳು, 40-50 ಚೆಂಡುಗಳಲ್ಲಿ ಶತಕ ಗಳಿಸುತ್ತಿದ್ದಾಗ ಯಾರೂ ಈ ವಿಚಾರವನ್ನು ಚರ್ಚಿಸಲಿಲ್ಲ,” ಎಂದು ಸಿತಾಂಶು ಕೊಟಕ್ ಹೇಳಿದರು.