Toxic Teaser: ಯಶ್ ಜೊತೆ ಕಾರಿನಲ್ಲಿ ಕಂಡ ಆ ʻಮದನ ಮನಮೋಹಿನಿʼ ಯಾರು ಗೊತ್ತಾ? ಇಲ್ಲಿದೆ ನೋಡಿ ಫುಲ್ ಮಾಹಿತಿ!
Who is Natalia Burn?: ರಾಕಿಂಗ್ ಸ್ಟಾರ್ ಯಶ್ ಅವರ 'ಟಾಕ್ಸಿಕ್' (Toxic) ಟೀಸರ್ ಬಿಡುಗಡೆಯಾದ ಕ್ಷಣದಿಂದ ಸಾಮಾಜಿಕ ಜಾಲತಾಣದಲ್ಲಿ ಒಂದೇ ಪ್ರಶ್ನೆ ಕೇಳಿಬರುತ್ತಿತ್ತು - "ಯಶ್ ಜೊತೆಗಿನ ಆ ಬೋಲ್ಡ್ ದೃಶ್ಯಗಳಲ್ಲಿರುವ ನಟಿ ಯಾರು?". ಈಗ ಆ ಕುತೂಹಲಕ್ಕೆ ತೆರೆ ಬಿದ್ದಿದ್ದು, ಆ ನಟಿಯ ಹೆಸರು ನಟಾಲಿಯಾ ಬರ್ನ್. ಇವರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
-
ʻಟಾಕ್ಸಿಕ್ʼ ಸಿನಿಮಾದ ಟೀಸರ್ ರಿಲೀಸ್ ಆಗುತ್ತಿದ್ದಂತೆಯೇ ಯಶ್ ಫ್ಯಾನ್ಸ್ ಅಚ್ಚರಿಯಾಗಿದ್ದಾರೆ. ಕಾರಣ, ಇದೇ ಮೊದಲ ಬಾರಿಗೆ ತುಂಬಾ ಬೋಲ್ಡ್ ಸೀನ್‌ಗಳಲ್ಲಿ ಯಶ್ ಕಾಣಿಸಿಕೊಂಡಿದ್ದು, ಟೀಸರ್ ನೋಡಿದ ಫ್ಯಾನ್ಸ್ ಮೂಗಿನ ಬೆರಳಿಟ್ಟುಕೊಂಡಿದ್ದಾರೆ. ಈ ನಡುವೆ ಎಲ್ಲರ ಗಮಸೆಳೆದಿರುವುದು ಆ ಟೀಸರ್‌ನಲಿ ಯಶ್ ಜೊತೆ ರೊಮ್ಯಾಂಟಿಕ್ ಸೀನ್‌ಗಳಲ್ಲಿ ಆ ನಟಿ ಯಾರು ಎಂಬುದು? ಅದಕ್ಕೀಗ ಉತ್ತರ ಸಿಕ್ಕಿದೆ.
ಯಶ್ ಜೊತೆ ಹಾಲಿವುಡ್ ನಟಿ ರೊಮ್ಯಾನ್ಸ್
ಹೌದು, ಟಾಕ್ಸಿಕ್ ಸಿನಿಮಾದಲ್ಲಿ ಯಶ್ ಜೊತೆ ಬೋಲ್ಡ ಸೀನ್‌ಗಳಲ್ಲಿ ಕಾಣಿಸಿಕೊಂಡಿರುವ ಆ ನಟಿ ಹೆಸರು ನಟಾಲಿಯಾ ಬರ್ನ್! ಅಕ್ಷರಶಃ ಟೀಸರ್ ಬರ್ನ್ ಆಗುವಂತೆ ಮಾಡಿದ್ದಾರೆ ಇವರು. ಮೂಲತಃ ಉಕ್ರೇನ್ ಮೂಲದ ಈ 40ರ ಹರೆಯದ ನಟಿ ನಟಾಲಿಯಾ ಬರ್ನ್ ಕಳೆದ 20 ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ನಟಾಲಿಯಾ ಬರ್ನ್ ಉಕ್ರೇನ್‌ನ ಕೈವ್‌ನಲ್ಲಿ ಜನಿಸಿದರು.
Toxic: 'ಟಾಕ್ಸಿಕ್' ಸಿನಿಮಾ ನಾಯಕಿಯ ಫಸ್ಟ್ ಲುಕ್ ರಿಲೀಸ್; Nadia ಪಾತ್ರದಲ್ಲಿ ಮಿಂಚಿದ ಕಿಯಾರಾ ಅಡ್ವಾಣಿ
ಬಾಲ್ಯದಲ್ಲಿ ಅವರು ಮಾಸ್ಕೋದ ಬೊಲ್ಶೋಯ್ ಬ್ಯಾಲೆ ಶಾಲೆ ಮತ್ತು ನಂತರ ಲಂಡನ್‌ನ ರಾಯಲ್ ಬ್ಯಾಲೆ ಶಾಲೆಯಲ್ಲಿ ಶಿಕ್ಷಣ ಪಡೆದರು. ಅವರು ತಮ್ಮ ವೃತ್ತಿಜೀವನವನ್ನು ನಟಿ ಮತ್ತು ಮಾಡೆಲ್ ಆಗಿ ಪ್ರಾರಂಭಿಸಿ, ನಂತರ ಲೇಖಕಿ ಮತ್ತು ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದಾರೆ. ಅಲ್ಲದೇ, '7ಹೆವನ್ ಪ್ರೊಡಕ್ಷನ್ಸ್' ಎಂಬ ನಿರ್ಮಾಣ ಸಂಸ್ಥೆಯನ್ನೂ ಕೂಡ ಈ ನಟಿ ಹೊಂದಿದ್ದಾರೆ ಎನ್ನಲಾಗಿದೆ. 2014ರಲಿ 'ದಿ ಎಕ್ಸ್‌ಪೆಂಡಬಲ್ಸ್ 3' ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದಲ್ಲದೆ 'ಡೆವಿಲ್ಸ್ ಹೋಪ್' ಚಿತ್ರಕ್ಕೆ ನಿರ್ಮಾಪಕಿ ಆಗಿ ಕೆಲಸ ಮಾಡಿರುವ ನಟಾಲಿಯಾ, 'ಅವೇಕ್' ಎಂಬ ಆಕ್ಷನ್ ಚಿತ್ರಕ್ಕೆ ಕಥೆ ಬರೆದು, ನಟಿಸಿ, ನಿರ್ಮಾಣ ಮಾಡಿದ್ದಾರೆ. 'ಕ್ರಿಮಿನಲ್', 'ಮೆಕ್ಯಾನಿಕ್: ರಿಸರೆಕ್ಷನ್' ಮುಂತಾದ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.
ಟ್ರೆಂಡಿಂಗ್‌ನಲ್ಲಿರುವ ನಟಿ
ಸದ್ಯ ʻಟಾಕ್ಸಿಕ್ʼ ಟೀಸರ್ ರಿಲೀಸ್ ಆಗುತ್ತಿದ್ದಂತೆಯೇ ನಟಾಲಿಯಾ ಬರ್ನ್ ಟ್ರೆಂಡ್ ಆಗುತ್ತಿದ್ದಾರೆ. ಯಶ್ ಜೊತೆಗೆ ಇರುವ ನಟಿ ಯಾರು ಎಂದೆಲ್ಲಾ ಗೂಗಲ್‌ನಲ್ಲಿ ಸರ್ಚ್ ಮಾಡಲಾಗಿದೆ. ಅಂತಿಮವಾಗಿ ನಟಾಲಿಯಾ ಬರ್ನ್ ಎಂಬುದು ಗೊತ್ತಾಗಿ, ಅವರೀಗ ಟ್ರೆಂಡ್ ಆಗಿದ್ದಾರೆ. ಅವರು ಕೂಡ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಟಾಕ್ಸಿಕ್ ಟೀಸರ್ ಅನ್ನು ಶೇರ್ ಮಾಡಿಕೊಂಡಿದ್ದಾರೆ.
ಮಾರ್ಚ್ 19ರಂದು ಟಾಕ್ಸಿಕ್ ಸಿನಿಮಾ ವಿಶ್ವಾದ್ಯಂತ ತೆರೆಗೆ ಬರುತ್ತಿದ್ದು, ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಏಕಕಾಲಕ್ಕೆ ರೆಡಿಯಾಗಿದೆ. ರವಿ ಬಸ್ರೂರು ಅವರು ಸಂಗೀತ ನೀಡಿದ್ದು, ಗೀತು ಮೋಹನ್‌ದಾಸ್ ಅವರು ನಿರ್ದೇಶನ ಮಾಡಿದ್ದಾರೆ. ಇದರ ಸ್ಕ್ರಿಪ್ಟ್‌ಗೆ ಯಶ್ ಕೂಡ ಕೈಜೋಡಿಸಿರುವುದು ವಿಶೇಷ.