ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಥಿಯೇಟರ್‌ನಲ್ಲಿ ʻಕರಿಕಾಡʼ ಅಬ್ಬರ: ಸಿನಿಮಾ ನೋಡಿದ ಕನ್ನಡ ಪ್ರೇಕ್ಷಕರು ಹೇಳಿದ್ದೇನು? ಹೀರೋ ನಟರಾಜ್‌ ಖುಷಿಯಾದ್ರಾ?

Karikada Movie Response: ಇಂದು (ಫೆ.6) ತೆರೆಕಂಡ ಕರಿಕಾಡ ಸಿನಿಮಾಗೆ ಪ್ರೇಕ್ಷಕರಿಂದ ಸಕಾರಾತ್ಮಕವಾಗಿ ಕೇಳಿಬರುತ್ತಿದೆ. ಅರೆ ಮಲೆನಾಡು ಭಾಗದ ನೈಜ ಘಟನೆ ಮತ್ತು ಹಂದಿ ಬೇಟೆಯ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಪ್ರೇಕ್ಷಕರು ಮನಸೋತಿದ್ದಾರೆ. ನಟರಾಜ್ ಅವರ ಆಕ್ಷನ್ ಮತ್ತು ಚಿತ್ರದ ಅನಿರೀಕ್ಷಿತ ಕ್ಲೈಮ್ಯಾಕ್ಸ್ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದ್ದು, ಹೊಸ ಅನುಭವ ನೀಡಿದೆ ಎಂದು ಪ್ರೇಕ್ಷಕರು ಹೇಳಿದ್ದಾರೆ.

ಕರಿಕಾಡ ಪಬ್ಲಿಕ್ ರಿವ್ಯೂ: ಕ್ಲೈಮ್ಯಾಕ್ಸ್‌ ಬಗ್ಗೆ ಆಡಿಯೆನ್ಸ್‌ ಹೇಳಿದ್ದೇನು?

-

Avinash GR
Avinash GR Feb 6, 2026 7:19 PM

ನಟರಾಜ್‌, ನಿರೀಕ್ಷಾ ಶೆಟ್ಟಿ ಅಭಿನಯದ ʻಕರಿಕಾಡʼ ಸಿನಿಮಾವು ಇಂದು (ಫೆ.6) ತೆರೆಕಂಡಿದೆ. ಕಾಡ ನಟರಾಜ್‌ ಅವರೇ ಕಥೆ ಬರೆದು, ನಿರ್ಮಾಣ ಮಾಡಿರುವ ಈ ಸಿನಿಮಾವನ್ನು ವೆಂಕಟೇಶ್‌ ನಿರ್ದೇಶನ ಮಾಡಿದ್ದಾರೆ. ಟ್ರೇಲರ್‌ ಮೂಲಕ ಗಮನಸೆಳೆದ ಈ ಸಿನಿಮಾವನ್ನು ಪ್ರೇಕ್ಷಕರು ಇಷ್ಟಪಟ್ರಾ? ಜನರ ಪ್ರತಿಕ್ರಿಯೆ ಕಂಡು ನಟರಾಜ್‌ ಏನಂದ್ರು? ಮುಂದೆ ಓದಿ.

ನೈಜ ಘಟನೆ ಆಧರಿಸಿ ಮಾಡಿದ ಸಿನಿಮಾ

"ಪ್ರೇಕ್ಷಕರ ಜೊತೆ ಕುಳಿತು ಸಿನಿಮಾ ನೋಡೋದಕ್ಕೆ ತುಂಬಾ ಖುಷಿ ಆಗ್ತಿದೆ. ಪ್ರೇಕ್ಷಕರ ಪ್ರತಿಕ್ರಿಯೆ ಅತ್ಯುತ್ತಮವಾಗಿದೆ. ಕಥೆ, ಮೇಕಿಂಗ್‌ ಎಲ್ಲವನ್ನು ಅವರು ಸ್ವೀಕರಿಸಿದ್ದಾರೆ. ನಾನು ಕೂಡ ತುಂಬಾ ಖುಷಿಯಾಗಿದ್ದೇನೆ. ಅರೆ ಮಲೆನಾಡು ಭಾಗದಲ್ಲಿ ಹಂದಿ ಬೇಟೆಯನ್ನು ನಾವು ಇಲ್ಲಿ ಇನ್ನಷ್ಟು ಆಕ್ಷನ್‌ನೊಂದಿಗೆ ತೋರಿಸಿದ್ದೇವೆ. ಇದನ್ನು ಆಡಿಯೆನ್ಸ್‌ ಇಷ್ಟಪಟ್ಟಿದ್ದಾರೆ. ಈ ಸಿನಿಮಾವು ಒಂದು ನೈಜ ಘಟನೆಯನ್ನು ಆಧರಿಸಿ ಮಾಡಲಾಗಿದೆ. ಹಾಡುಗಳು ಮತ್ತು ಕ್ಲೈಮ್ಯಾಕ್ಸ್‌ಗೆ ಜಾಸ್ತಿ ಮೆಚ್ಚುಗೆ ಸಿಗುತ್ತಿದೆ" ಎಂದು ನಟರಾಜ್‌ ಅವರು ಹೇಳಿದ್ದಾರೆ.

Karikaada Trailer: ಬಿಡುಗಡೆ ಆಯ್ತು ‘ಕರಿಕಾಡ’ ಟ್ರೈಲರ್‌; ತೆರೆಗೆ ಯಾವಾಗ?

ಯಾರೂ ನಿರೀಕ್ಷೆ ಮಾಡದ ಕ್ಲೈಮ್ಯಾಕ್ಸ್‌ ಇದೆ

"ಕ್ಲೈಮ್ಯಾಕ್ಸ್‌ ಅನ್ನು ಯಾರೂ ಊಹಿಸಲು ಸಾಧ್ಯವಿಲ್ಲ. ಅಷ್ಟೊಂದು ವಿಭಿನ್ನವಾಗಿ ಮೂಡಿಬಂದಿದೆ. ಅಲ್ಲಿರುವ ಟ್ವಿಸ್ಟ್‌ಗಳು ಆಡಿಯೆನ್ಸ್‌ಗೆ ಖುಷಿ ನೀಡುತ್ತವೆ. ಸಿಜಿ ಕೆಲಸದ ಬಗ್ಗೆ ಸಾಕಷ್ಟು ಮೆಚ್ಚುಗೆ ಕೇಳಿಬರುತ್ತಿದೆ. 100ಕ್ಕೂ ಅಧಿಕ ಥಿಯೇಟರ್‌ಗಳಲ್ಲಿ ನಮ್‌ ಸಿನಿಮಾ ತೆರೆಕಂಡಿದೆ. ಇನ್ಮೇಲೆ ಬಾಯಿಂದ ಬಾಯಿಗೆ ಪ್ರೇಕ್ಷಕರ ಪ್ರಚಾರದಿಂದಲೇ ನಮ್ಮ ಸಿನಿಮಾ ರೀಚ್‌ ಆಗಬೇಕಿದೆ" ಎಂದು ಕಾಡ ನಟರಾಜ್‌ ಅವರು ಹೇಳಿದ್ದಾರೆ.

ಫೆಬ್ರವರಿ 6ಕ್ಕೆ 'ಕರಿಕಾಡ' ಅಬ್ಬರ; ಐದು ಭಾಷೆಗಳಲ್ಲಿ ಅದ್ದೂರಿಯಾಗಿ ಬಿಡುಗಡೆಗೆ ಸಿದ್ಧವಾದ ಕಾಡಿನ ಕಥೆ

ಪ್ರೇಕ್ಷಕರಿಂದ ಬಂದ ಕಾಮೆಂಟ್‌ಗಳೇನು?

  • ಇದೊಂದು ಅದ್ದೂರಿ ಆಕ್ಷನ್‌ ಸಿನಿಮಾ, ಉತ್ತಮ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇಂತಹ ಪ್ರಯತ್ನಗಳು, ಪ್ರಯೋಗಳು ಆಗಬೇಕು.
  • ಇದು ಆಕ್ಷನ್‌ ಥ್ರಿಲ್ಲರ್‌.. ಈ ಸಿನಿಮಾದ ಮೇಕಿಂಗ್‌ ಚೆನ್ನಾಗಿದೆ. ಕ್ಲೈಮ್ಯಾಕ್ಸ್‌ ನೋಡಿದಾಗ ಮೈ ಎಲ್ಲಾ ಜುಂ ಎನಿಸುತ್ತದೆ.
  • ಛಾಯಾಗ್ರಹಣ, ಹಿನ್ನೆಲೆ ಸಂಗೀತ ಉತ್ತಮವಾಗಿದ್ದು, ಎಲ್ಲಾ ಕುಟುಂಬಸಮೇತ ಬಂದು ನೋಡಬಹುದಾದ ಸಿನಿಮಾ.
  • ಸಸ್ಪೆನ್ಸ್‌ ಜೊತೆಗೆ ಎಮೋಷನ್ಸ್‌ ಇದೆ. ಹಾಡುಗಳು ಕೂಡ ಉತ್ತಮವಾಗಿ ಮೂಡಿಬಂದಿವೆ. ಕಥೆ ಕೂಡ ವಿಭಿನ್ನವಾಗಿದೆ.
  • ಮಲೆನಾಡು ಭಾಗದವರಿಗೆ ಈ ಸಿನಿಮಾ ಹೆಚ್ಚು ಕನೆಕ್ಟ್‌ ಆಗುತ್ತದೆ. ಅದ್ದೂರಿಯಾದ ಮೇಕಿಂಗ್‌ ಇದೆ.
  • ಎಲ್ಲರೂ ಈ ಸಿನಿಮಾ ನೋಡಬೇಕು. ಹೊಸಬರನ್ನು ಬೆಳೆಸಬೇಕು, ಹೀರೋ ಅಭಿನಯ ಉತ್ತಮವಾಗಿದೆ.