Operation Sindoor : ʼಕಾಶ್ಮೀರದಲ್ಲಿ ನನ್ನ ತಂದೆಯನ್ನು ಭಯೋತ್ಪಾದಕರು ಹತ್ಯೆ ಮಾಡಿದರುʼ; ಭಾವುಕ ಕ್ಷಣಗಳು ಹಂಚಿಕೊಂಡ ನಟಿ
ಪಹಲ್ಗಾಮ್ ದಾಳಿಯ ನಂತರ ಭಾರತ ಆಪರೇಷನ್ ಸಿಂದೂರ್ ಮೂಲಕ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿ ಪ್ರತೀಕಾರ ತೆಗೆದುಕೊಂಡಿದೆ. ಯುದ್ಧದ ಪರಿಸ್ಥಿತಿಯಲ್ಲಿ ಇಡೀ ದೇಶವೇ ಸೈನಿಕ ಜೊತೆ ನಿಂತಿದೆ. ಸೈನ್ಯಕ್ಕೆ ಒಳಿತಾಗಲಿ ಎಂದು ಎಲ್ಲೆಡೆ ಪೂಜೆಗಳನ್ನು ನೆರವೇರಿಸಲಾಗುತ್ತಿದೆ. ಕ್ರೀಡಾಪಟುಗಳು, ಬಾಲಿವುಡ್ ನಟ ನಟಿಯರು ಸೇರಿದಂತೆ ಎಲ್ಲರೂ ದೇಶಕ್ಕೆ ಬೆಂಬಲ ಸೂಚಿಸಿದ್ದಾರೆ. ಇದೀಗ ಬಾಲಿವುಡ್ ನಟಿ ನಿಮ್ರತ್ ಕೌರ್ ಪೋಸ್ಟ್ ಒಂದನ್ನು ಹಾಕಿದ್ದು, ಮನಕಲಕುವಂತೆ.


ಮುಂಬೈ: ಪಹಲ್ಗಾಮ್ ದಾಳಿಯ ನಂತರ ಭಾರತ ಆಪರೇಷನ್ ಸಿಂದೂರ್ (Operation Sindoor) ಮೂಲಕ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿ ಪ್ರತೀಕಾರ ತೆಗೆದುಕೊಂಡಿದೆ. ಯುದ್ಧದ ಪರಿಸ್ಥಿತಿಯಲ್ಲಿ ಇಡೀ ದೇಶವೇ ಸೈನಿಕ ಜೊತೆ ನಿಂತಿದೆ. ಸೈನ್ಯಕ್ಕೆ ಒಳಿತಾಗಲಿ ಎಂದು ಎಲ್ಲೆಡೆ ಪೂಜೆಗಳನ್ನು ನೆರವೇರಿಸಲಾಗುತ್ತಿದೆ. ಕ್ರೀಡಾಪಟುಗಳು, ಬಾಲಿವುಡ್ ನಟ ನಟಿಯರು ಸೇರಿದಂತೆ ಎಲ್ಲರೂ ದೇಶಕ್ಕೆ ಬೆಂಬಲ ಸೂಚಿಸಿದ್ದಾರೆ. ಇದೀಗ ಬಾಲಿವುಡ್ ನಟಿ ನಿಮ್ರತ್ ಕೌರ್ (Nimrat Kaur) ಪೋಸ್ಟ್ ಒಂದನ್ನು ಹಾಕಿದ್ದು, ಮನಕಲಕುವಂತೆ. ತನ್ನ ತಂದೆ ದಿವಂಗತ ಮೇಜರ್ ಭೂಪೇಂದರ್ ಸಿಂಗ್ ಅವರ ಕುರಿತು ನಟಿ ಬರೆದುಕೊಂಡಿದ್ದಾರೆ.
1994 ರಲ್ಲಿ ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ, ಧೈರ್ಯಶಾಲಿ ಸೇನಾಧಿಕಾರಿಯಾಗಿದ್ದ ದಿವಂಗತ ಮೇಜರ್ ಭೂಪೇಂದರ್ ಸಿಂಗ್ ಅವರ ಮಗಳು ನಿಮ್ರತ್. ನಿಮ್ರತ್ ಹಳೆಯ ಸಂದರ್ಶನವೊಂದರಲ್ಲಿ ಭಯೋತ್ಪಾದಕರು ತನ್ನ ತಂದೆಯನ್ನು ಹೇಗೆ ಕೊಂದರು ಎಂಬುದರ ಬಗ್ಗೆ ಮಾತನಾಡಿದ್ದಾರೆ. (ಮೇಜರ್ ಭೂಪೇಂದರ್ ಸಿಂಗ್,) ಒಬ್ಬ ಯುವ ಸೇನಾ ಮೇಜರ್, ವೆರಿನಾಗ್ ಎಂಬ ಸ್ಥಳದಲ್ಲಿ ಸೇನೆಯ ಗಡಿ ರಸ್ತೆಗಳಲ್ಲಿ ನಿಯೋಜಿಸಲ್ಪಟ್ಟ ಎಂಜಿನಿಯರ್. ತಾನು ಹಾಗೂ ತನ್ನ ಪಂಜಾಬಿನಲ್ಲಿ ವಾಸಿಸುತ್ತಿದ್ದೆವು. ನನ್ನ ತಂದೆ ಕಾಶ್ಮೀರದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ನಾವು 1994 ರ ಜನವರಿಯಲ್ಲಿ ಚಳಿಗಾಲದ ರಜೆಯಲ್ಲಿ ಕಾಶ್ಮೀರದಲ್ಲಿರುವ ನಮ್ಮ ತಂದೆಯನ್ನು ಭೇಟಿ ಮಾಡಲು ಹೋಗಿದ್ದೆವು. ಆಗ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯವರು ಅವರನ್ನು ಅವರ ಕೆಲಸದ ಸ್ಥಳದಿಂದ ಅಪಹರಿಸಿ ಏಳು ದಿನಗಳ ನಂತರ ಹತ್ಯೆಗೈದರು" ಎಂದು ನಿಮ್ರತ್ ಕೌರ್ ಹೇಳಿದರು.
ತನ್ನ ತಂದೆಯ ಹತ್ಯೆಯ ಹಿಂದಿನ ಹೃದಯವಿದ್ರಾವಕ ಕಾರಣವನ್ನು ಹಂಚಿಕೊಂಡ ನಿಮ್ರತ್ ಕೌರ್, ಭಯೋತ್ಪಾದಕರು ಕೆಲವು "ಹಾಸ್ಯಾಸ್ಪದ ಬೇಡಿಕೆಗಳನ್ನು" ಇಟ್ಟಿದ್ದರು - ಕೆಲವು ವ್ಯಕ್ತಿಗಳ ಬಿಡುಗಡೆಗಾಗಿ - ಆದರೆ ಅವರ ತಂದೆ ತಮ್ಮ ಕರ್ತವ್ಯಕ್ಕೆ ಬದ್ಧರಾಗಿ, ಅದನ್ನು ಪಾಲಿಸಲು ನಿರಾಕರಿಸಿದರು. ಮೇಜರ್ ಭೂಪಿಂದರ್ ಸಿಂಗ್ ನಿಧನರಾದಾಗ ಕೇವಲ 44 ವರ್ಷ ವಯಸ್ಸಿನವರಾಗಿದ್ದರು. ನಮಗೆ ಸುದ್ದಿ ತಿಳಿದು ಅವರ ಶವದೊಂದಿಗೆ ದೆಹಲಿಗೆ ವಿಮಾನದಲ್ಲಿ ಹಿಂತಿರುಗಿದೆವು ಮತ್ತು ನಾನು ಅವರ ಶವವನ್ನು ಮೊದಲ ಬಾರಿಗೆ ದೆಹಲಿಯಲ್ಲಿ ಮಾತ್ರ ನೋಡಿದೆ ಎಂದು ನಟಿ ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: India-Pakistan Conflict: ಪಾಕಿಸ್ತಾನ ಹೇಳಿರುವ ಏಳು ದೊಡ್ಡ ಸುಳ್ಳು ಸುದ್ದಿಗಳಿಗೆ ಸಾಕ್ಷಿ ನೀಡಿದ ಭಾರತ
ಮೇಜರ್ ಭೂಪೇಂದರ್ ಸಿಂಗ್ ಅವರಿಗೆ ಮರಣೋತ್ತರವಾಗಿ ಭಾರತದ ಅತ್ಯುನ್ನತ ಶೌರ್ಯ ಪ್ರಶಸ್ತಿಗಳಲ್ಲಿ ಒಂದಾದ ಶೌರ್ಯ ಚಕ್ರವನ್ನು ನೀಡಿ ಗೌರವಿಸಲಾಗಿದೆ. ನಿಮ್ರತ್ ಕೌರ್ ಹಲವು ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.