ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ʻಟಾಕ್ಸಿಕ್ʼ ಸಿನಿಮಾದಿಂದ ಯಶ್‌ಗೆ ಸಿಗುವ ಹಣವೆಷ್ಟು? ರಾಕಿ ಭಾಯ್‌ಗೆ ಸಿಕ್ತಿರುವ ಪಾಲು ಎಷ್ಟು ಎಂಬುದು ಗೊತ್ತಾದ್ರೆ ಅಚ್ಚರಿಯಾಗೋದು ಖಚಿತ!

Yash Toxic Movie: ನಾಲ್ಕು ವರ್ಷಗಳ ನಂತರ ತೆರೆಗೆ ಬರುತ್ತಿರುವ ನಟ ಯಶ್ ಅವರ 'ಟಾಕ್ಸಿಕ್' ಸಿನಿಮಾ ಸಂಭಾವನೆ ವಿಚಾರದಲ್ಲಿ ಹೊಸ ದಾಖಲೆ ಬರೆಯುತ್ತಿದೆ. ಚಿತ್ರದ ನಾಯಕನಷ್ಟೇ ಅಲ್ಲದೆ, ಸಹ-ನಿರ್ಮಾಪಕರೂ ಆಗಿರುವ ಯಶ್ ಅವರಿಗೆ 50 ಕೋಟಿ ರೂ.ಗಳ ಸಂಭಾವನೆ ನಿಗದಿಯಾಗಿದೆಯಂತೆ. ಹಾಗಾದ್ರೆ, ಲಾಭದಲ್ಲಿ ಸಿಗುವ ಪಾಲೆಷ್ಟು? ಇಲ್ಲಿದೆ ಮಾಹಿತಿ.

'ಟಾಕ್ಸಿಕ್' ಸಿನಿಮಾದಿಂದ ಯಶ್‌ಗೆ ಸಿಗಲಿರುವ ಲಾಭ ಎಷ್ಟು?

-

Avinash GR
Avinash GR Feb 25, 2026 7:25 PM

'ಕೆಜಿಎಫ್: ಚಾಪ್ಟರ್ 2' ನಂತರ ಸುಮಾರು ನಾಲ್ಕು ವರ್ಷಗಳ ಸುದೀರ್ಘ ಗ್ಯಾಪ್ ಪಡೆದಿರುವ ನಟ ಯಶ್, ಈಗ 'ಟಾಕ್ಸಿಕ್' ಸಿನಿಮಾ ಮೂಲಕ ಅಬ್ಬರಿಸಲು ಸಿದ್ಧರಾಗಿದ್ದಾರೆ. ಗೀತು ಮೋಹನ್ ದಾಸ್ ನಿರ್ದೇಶನದ ಈ ಚಿತ್ರದ ವಿತರಣೆ ಮತ್ತು ಸಂಭಾವನೆ ಕುರಿತಾದ ಆಸಕ್ತಿದಾಯಕ ಮಾಹಿತಿಗಳು ಈಗ ಹೊರಬಿದ್ದಿವೆ. ಈ ಚಿತ್ರದಿಂದ ಯಶ್‌ ಅವರು ದುಬಾರಿ ಮೊತ್ತದ ಹಣವನ್ನು ತಮ್ಮ ಖಾತೆಗೆ ಜಮಾ ಮಾಡಿಕೊಳ್ಳಲಿದ್ದಾರೆ.

ನಿರ್ಮಾಪಕರಾಗಿದ್ದರೂ ಯಶ್‌ಗೆ ಸಿಗಲಿದೆ ಸಂಭಾವನೆ

ಟಾಕ್ಸಿಕ್‌ ಸಿನಿಮಾಗೆ ಯಶ್‌ ಕೂಡ ನಿರ್ಮಾಪಕರು. ಅವರ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಕೂಡ ಹಣ ಹಾಕಿದೆ. ಆದರೂ ಅವರಿಗೆ ಸಂಭಾವನೆ ರೂಪದಲ್ಲಿ 50 ಕೋಟಿ ರೂ. ಸಿಗಲಿದೆಯಂತೆ. ಅದರ ಜೊತೆಗೆ ಚಿತ್ರದ ಲಾಭದಲ್ಲೂ ದೊಡ್ಡ ಪಾಲನ್ನು ಯಶ್‌ ಮನೆಗೆ ತೆಗೆದುಕೊಂಡು ಹೋಗಲಿದ್ದಾರೆ. ಚಿತ್ರಕ್ಕೆ ಹೂಡಿಕೆ ಆಗಿರುವ ಬಜೆಟ್‌ ಮೊತ್ತ ವಾಪಸಾದ ಮೇಲೆ ಬರುವಂತಹ ಶೇ.60 ರಷ್ಟು ಲಾಭಾಂಶದ ಹಣ ಯಶ್‌ ಅವರಿಗೆ ಸಿಗಲಿದೆಯಂತೆ. ಇದಕ್ಕೆ ನಿರ್ಮಾಣ ಸಂಸ್ಥೆಯಾದ ಕೆವಿಎನ್‌ ಪ್ರೊಡಕ್ಷನ್ಸ್‌ ಕೂಡ ಒಪ್ಪಿಕೊಂಡಿದೆಯಂತೆ.

Toxic: ರಾಯನ ಅಖಾಡಕ್ಕೆ ಎಂಟ್ರಿ ಕೊಟ್ಟ ಮಾಲಿವುಡ್‌ನ ಸುದೇವ್‌ - ಬಾಲಿವುಡ್‌ನ ಅಕ್ಷಯ್ ಒಬೆರಾಯ್! ಇವರ ಪಾತ್ರಗಳೇನು?

ಚಿತ್ರೀಕರಣದ ದಿನಗಳು ಹೆಚ್ಚಾದ ಕಾರಣ ಮತ್ತು ಕೆಲವು ದೃಶ್ಯಗಳನ್ನು ಮರುಚಿತ್ರೀಕರಣ ಮಾಡಿದ್ದರಿಂದ ಸಿನಿಮಾದ ಬಜೆಟ್ ನಿರೀಕ್ಷೆಗಿಂತ ಹೆಚ್ಚಾಗಿದೆ. ಅಲ್ಲದೆ, ಸಿನಿಮಾ ಸುಮಾರು ಒಂದು ವರ್ಷ ವಿಳಂಬವಾಗಿ ತೆರೆಕಾಣುತ್ತಿದೆ. ಆದರೂ, ಚಿತ್ರದ ಮೇಲಿರುವ ಭಾರಿ ನಿರೀಕ್ಷೆ ಮತ್ತು ಪ್ರಿ-ರಿಲೀಸ್ ಬಿಸಿನೆಸ್ ನೋಡಿದರೆ, ಸಿನಿಮಾ ಬಿಡುಗಡೆಗೆ ಮುನ್ನವೇ ಯಶ್ ಭರ್ಜರಿ ಲಾಭ ಗಳಿಸುವುದು ಖಚಿತ ಎನ್ನಲಾಗುತ್ತಿದೆ.

Toxic: ʻಟಾಕ್ಸಿಕ್‌ʼನಿಂದ ಹೊರ ಬಿತ್ತು ಮತ್ತೊಂದು ಪೋಸ್ಟರ್‌! ಪಾತ್ರದ ಸುಳಿವು ಬಿಟ್ಟುಕೊಟ್ರಾ ಯಶ್‌?

ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್, ಬಾಲಾಜಿ ಮನೋಹರ್‌, ಸುದೇವ್‌ ನಾಯರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 'ಟಾಕ್ಸಿಕ್' ಸಿನಿಮಾ ಮಾರ್ಚ್ 19 ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ವಿಶೇಷವೆಂದರೆ, ಅದೇ ದಿನ ಹಿಂದಿಯ ಬಹುನಿರೀಕ್ಷಿತ ಚಿತ್ರ 'ಧುರಂಧರ್: ದಿ ರಿವೇಂಜ್' ಕೂಡ ತೆರೆಕಾಣುತ್ತಿದ್ದು, ಬಾಕ್ಸ್ ಆಫೀಸ್‌ನಲ್ಲಿ ಭಾರಿ ಪೈಪೋಟಿ ಏರ್ಪಡುವ ಸಾಧ್ಯತೆಯಿದೆ.