Nora Fatehi: ಫ್ಯಾಷನ್ ಶೋನಲ್ಲಿ ಹಾಟ್ ಆಗಿ ಮಿಂಚಿದ ನೋರಾ ಫತೇಹಿ; ಫ್ಯಾನ್ಸ್ ಫುಲ್ ಫಿದಾ
Nora Fatehi Look: ಇತ್ತೀಚೆಗೆ ನೋರಾ ಫತೇಹಿ ದುಬೈನಲ್ಲಿ ಆಯೋಜನೆ ಮಾಡಿದ್ದ ಫ್ಯಾಷನ್ ಶೋ ಕಾರ್ಯಕ್ರಮವೊಂದಕ್ಕೆ ಭಾಗವಹಿಸಿದ್ದು ತಮ್ಮ ಸ್ಟೈಲಿಶ್ ಉಡುಗೆ ಧರಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಸದ್ಯ ಅವರ ಈ ಬ್ಯೂಟಿ ಲುಕ್ ನ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿವೆ.

Nora Fatehi -

ನವದೆಹಲಿ: ಬಾಲಿವುಡ್‌ನಲ್ಲಿ ಇತ್ತೀಚೆಗೆ ಬಹಳಷ್ಟು ಸದ್ದು ಮಾಡುತ್ತಿರುವ ನಟಿಯರಲ್ಲಿ ನೋರಾ ಫತೇಹಿ (Nora Fatehi) ಕೂಡ ಒಬ್ಬರಾಗಿದ್ದಾರೆ. ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಇರುವ ಅವರು ನಟಿಸಿದ ಸಾಕಷ್ಟು ಸಿನಿಮಾಗಳು ಹಿಟ್‌ಗಳಿಸಿದೆ. 'ರೋರ್: ಟೈಗರ್ಸ್ ಆಫ್ ದಿ ಸುಂದರ ಬನ್ಸ್' ಸಿನಿಮಾ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ನೋರಾ ಫತೇಹಿ ತೆಲುಗು, ತಮಿಳು ಹಾಗೂ ಮಲ ಯಾಳಂ ಸಿನಿಮಾಗಳಲ್ಲಿ ಕೂಡ ಅಭಿಯಿಸಿದ್ದಾರೆ. ಇತ್ತೀಚೆಗೆ ನೋರಾ ಫತೇಹಿ ದುಬೈನಲ್ಲಿ ಆಯೋಜನೆ ಮಾಡಿದ್ದ ಫ್ಯಾಷನ್ ಶೋ ಕಾರ್ಯಕ್ರಮವೊಂದಕ್ಕೆ ಭಾಗವಹಿಸಿದ್ದು ತಮ್ಮ ಸ್ಟೈಲಿಶ್ ಉಡುಗೆ ಧರಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಸದ್ಯ ಅವರ ಈ ಬ್ಯೂಟಿ ಲುಕ್ ನ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿವೆ.
ನಟಿ ದುಬೈನಲ್ಲಿ ಫ್ಯಾಷನ್ ಶೋ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಡಿಸೈನರ್ ರಾಹುಲ್ ಮಿಶ್ರಾ ತಯಾರಿಸಿದ ಪ್ಲಾಯ್ಡೆಡ್ ರೆಡ್ ಕಾರ್ಸೆಟ್ ಗೌನ್ ಮತ್ತು ಚೆಕ್ಸ್ ಜಾಕೆಟ್ ಧರಿಸಿ ಕ್ಯಾಟ್ ವಾಕ್ ಮಾಡಿದ್ದು ಎಲ್ಲರ ಗಮನ ಸೆಳೆದಿದ್ದಾರೆ. ಈ ಡ್ರೆಸ್ ನ ವಿನ್ಯಾಸವು ಬಹಳ ವಿಭಿನ್ನವಾಗಿದ್ದು ನಟಿಯ ಫಿಟ್ ಫಿಗರ್ ಗೆ ಬಹಳ ಡಿಪ್ರೆಂಟ್ ಆಗಿ ಕಂಡಿದೆ.. ಹಾಲಿವುಡ್ ನ ಜೆಂಡಾಯಾ, ಕಾರ್ಡಿ ಬಿ, ಮತ್ತು ಗಿಗಿ ಹಡಿದ್ ಅವರಂತಹ ಐಕಾನ್‌ಗಳಿಗೆ ವಸ್ತ್ರ ವಿನ್ಯಾಸ ಮಾಡಿರುವ ರಾಹುಲ್ ಮಿಶ್ರಾ ನೋರಾ ಲುಕ್ ಅನ್ನು ಸಂಪೂರ್ಣ ಮಾಡಿದ್ದಾರೆ. ಈ ಫೋಟೋಗಳನ್ನು ಹಂಚಿಕೊಂಡ ನೋರಾ, "ಫಿಲಿಂಗ್ ಲೈಕ್ ಐಮ್ ಜಸ್ಟ್ ಎ ಗರ್ಲ್" ಎಂದು ಶೀರ್ಷಿಕೆ ನೀಡಿದ್ದಾರೆ.
ಈ ಫ್ಯಾಷನ್ ಶೋನ ಮತ್ತೊಂದು ಮುಖ್ಯಾಂಶವೆಂದರೆ ನೋರಾ ತಮ್ಮ ಮುಂಬರುವ ಹಾಡನ್ನು ಘೋಷಣೆ ಮಾಡಿದ್ದಾರೆ. ಅವರು "ಶೇಕ್ ಇಟ್ ಟು ದಿ ಮ್ಯಾಕ್ಸ್" ಖ್ಯಾತಿಯ ಜಮೈಕನ್-ಅಮೆರಿಕನ್ ಸ್ಟಾರ್ ಶೆನ್ಸೀ ಅವರೊಂದಿಗೆ ಮೂಡಿಬರುತ್ತಿರುವ ಜಸ್ಟ್ ಎ ಗರ್ಲ್ ಹಾಡನ್ನು ಘೋಷಿಸಿದರು. ಈ ಮೂಲಕ ನೋರಾ ತಮ್ಮನ್ನು ನಟಿಯಾಗಿ ಮಾತ್ರವಲ್ಲದೆ, ಗ್ಲೋಬಲ್ ಪಾಪ್ ಗಾಯಕಿಯಾಗಿಯೂ ಹೆಸರು ಮಾಡಲಿದ್ದಾರೆ.
ಇದನ್ನು ಓದಿ:Nora Fatehi: ಹೊಸ ಆಲ್ಬಂ ಸಾಂಗ್ ಮೂಲಕ ಸೆಕ್ಸಿ ಲುಕ್‌ನಲ್ಲಿ ಪಡ್ಡೆ ಹುಡುಗರ ನಿದ್ದೆ ಕದ್ದ ನಟಿ ನೋರಾ ಫತೇಹಿ
ತಮ್ಮ ಫ್ಯಾಷನ್‌ನ ಜೊತೆಗೆ, ನೋರಾ ತಮ್ಮ ನಟನೆಯನ್ನು ಮುಂದುವರೆಸಿದ್ದಾರೆ. ಸದ್ಯಕ್ಕೆ ಅವರು ತಮಿಳಿನ ಜನಪ್ರಿಯ ಹಾರರ್-ಕಾಮಿಡಿ ಸಿನಿಮಾವಾದ 'ಕಾಂಚನಾ 4' ಚಿತ್ರದಲ್ಲಿ ಮುಖ್ಯ ಪಾತ್ರ ವಹಿಸುತ್ತಿದ್ದಾರೆ. ಇವರು ಬಾಹುಬಲಿ ಸಿನಿಮಾದ ಮನೋಹರಿ ಐಟಂ ಸಾಂಗ್ ನಲ್ಲಿ ಪಡ್ಡೆ ಹುಡು ಗರ ನಿದ್ದೆ ಕದ್ದಿದ್ದರು. ಅಷ್ಟೇ ಅಲ್ಲದೆ ಕಿಕ್ 2, ಲೋಫರ್ ಮತ್ತು ಊಪಿರಿ ಸೇರಿದಂತೆ ಅನೇಕ ಸಿನಿಮಾದಲ್ಲಿ ನಟಿಸಿದ್ದಾರೆ.