ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Cauvery Aarti: ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿ ಜತೆಗೆ ಸಾಹಸ ಹಾಗೂ ಜಲ ಕ್ರೀಡೆ ಆಯೋಜನೆ

DK Shivakumar: ಗಂಗಾರತಿ ಮಾದರಿಯಲ್ಲಿ ತಾಯಿ ಕಾವೇರಿಗೆ ಪೂಜೆ ಸಲ್ಲಿಸುವ ವರ್ಣರಂಜಿತ ಧಾರ್ಮಿಕ ಕಾರ್ಯಕ್ರಮದ ಜತೆಗೆ ಕರ್ನಾಟಕ ಸರ್ಕಾರವು ಪ್ರವಾಸಿಗರಿಗಾಗಿ ಕೆಆರ್‌ಎಸ್ ಅಣೆಕಟ್ಟಿನಲ್ಲಿ ಕ್ರೀಡಾ ಉತ್ಸವಗಳನ್ನು ಆಯೋಜಿಸುತ್ತಿದೆ. ಹೀಗಾಗಿ ಪ್ರವಾಸಿಗರು ಹಾಗೂ ರಾಜ್ಯದ ಜನ ಈ ವಾರಾಂತ್ಯದಲ್ಲಿ ಕೆಆರ್‌ಎಸ್‌ಗೆ ಆಗಮಿಸಿ ಈ ಆಕರ್ಷಕ ಕಣ್ತುಂಬಿಕೊಳ್ಳಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಕರೆ ನೀಡಿದ್ದಾರೆ.

ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿ ಜತೆಗೆ ಸಾಹಸ ಹಾಗೂ ಜಲ ಕ್ರೀಡೆ ಆಯೋಜನೆ

-

Profile Siddalinga Swamy Sep 26, 2025 10:04 PM

ಮಂಡ್ಯ: ಈ ಬಾರಿಯ ದಸರಾದಲ್ಲಿ ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದುವಾಗುತ್ತಿರುವ ಕಾವೇರಿ ಆರತಿ ಕಾರ್ಯಕ್ರಮ (Cauvery Aarti) ಈಗ ಸಾಹಸ ಕ್ರೀಡೆ ಹಾಗೂ ಜಲ ಕ್ರೀಡೆಗಳನ್ನು ಒಳಗೊಳ್ಳುವ ಮೂಲಕ ಪ್ರವಾಸಿಗರಿಗೆ ರಸದೌತಣ ಉಣಬಡಿಸಲು ಸಿದ್ಧವಾಗಿದೆ. ಗಂಗಾರತಿ ಮಾದರಿಯಲ್ಲಿ ತಾಯಿ ಕಾವೇರಿಗೆ ಪೂಜೆ ಸಲ್ಲಿಸುವ ವರ್ಣರಂಜಿತ ಧಾರ್ಮಿಕ ಕಾರ್ಯಕ್ರಮದ ಜತೆಗೆ ಕರ್ನಾಟಕ ಸರ್ಕಾರವು ಪ್ರವಾಸಿಗರಿಗಾಗಿ ಕೆಆರ್‌ಎಸ್ ಅಣೆಕಟ್ಟಿನಲ್ಲಿ ಕ್ರೀಡಾ ಉತ್ಸವಗಳನ್ನು ಆಯೋಜಿಸುತ್ತಿದೆ.

Cauvery Aarti

ರಾಜ್ಯ ಸರ್ಕಾರ ಈ ವರ್ಷ ಪ್ರಾಯೋಗಿಕವಾಗಿ ಕಾವೇರಿ ಆರತಿ ಕಾರ್ಯಕ್ರಮವನ್ನು ಮಾಡುತ್ತಿದೆಯಾದರೂ ಪ್ರವಾಸಿಗರ ನಿರೀಕ್ಷೆಗೂ ಮೀರಿದ ರೀತಿಯಲ್ಲಿ ವರ್ಣರಂಜಿತವಾಗಿ ಕಾರ್ಯಕ್ರಮ ಆಯೋಜಿಸಿದೆ.

ವಿಶೇಷವಾಗಿ ಮಕ್ಕಳನ್ನು ಆಕರ್ಷಿಸಲು ಸುಮಾರು 80 ಆಟಗಳನ್ನು ಪರಿಚಯಿಸಲಾಗಿದ್ದು, ವಾರಾಂತ್ಯದಲ್ಲಿ ಕುಟುಂಬ ಸಮೇತರಾಗಿ ಬಂದು ಅಮೂಲ್ಯ ಕ್ಷಣಗಳನ್ನು ಆನಂದಿಸುವ ವಾತಾವರಣ ಕಲ್ಪಿಸಲಾಗಿದೆ.

ಹೀಗಾಗಿ ಪ್ರವಾಸಿಗರು ಹಾಗೂ ರಾಜ್ಯದ ಜನ ಈ ವಾರಾಂತ್ಯದಲ್ಲಿ ಕೆಆರ್‌ಎಸ್‌ಗೆ ಆಗಮಿಸಿ ಈ ಆಕರ್ಷಕ ಕಣ್ತುಂಬಿಕೊಳ್ಳಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕರೆ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ | Navaratra Namasya: ತಾಯಿ ಹೃದಯ ಇಲ್ಲದವರು ಗುರುವಾಗಲು ಸಾಧ್ಯವಿಲ್ಲ: ರಾಘವೇಶ್ವರ ಶ್ರೀ