ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Nupur Sanon: ನಟಿ ನೂಪುರ್ ಸನೋನ್ ಬಟ್ಟೆ ಬ್ರ್ಯಾಂಡ್‌ಗೆ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಟೀಕೆ; ಕಾರಣ ಏನು?

ಬಾಲಿವುಡ್‌ ನಟಿ ಕೃತಿ ಸನೂನ್‌ ಅವರ ಸಹೋದರಿ ನೂಪುರ್ ಸನೂನ್‌ ಮತ್ತು ಅವರ ತಾಯಿ ಗೀತಾ ಸನೂನ್‌ ʼನೋ ಬೌಂಡರಿಸ್ʼ ನೋಬೋ ಬಟ್ಟೆ ಬ್ರ್ಯಾಂಡ್ ಉದ್ಯಮ ಸ್ಥಾಪಿಸಿದ್ದು ಇದು ಜಾಗತಿಕ ಮಟ್ಟದಲ್ಲಿ ಜನಪ್ರಿಯವಾಗಿದೆ. ಕ್ಲಾಸಿಕಲ್, ಮಾಡರ್ನ್, ವೆಸ್ಟರ್ನ್, ಪಾರ್ಟಿ ವೇರ್ ಸೇರಿದಂತೆ ಅನೇಕ ವಿನ್ಯಾಸದ ಬಟ್ಟೆ ತಯಾರಿಗಕೆಗೆ ನೋಬೋ ಕಂಪನಿ ಹೆಸರುವಾಸಿ. ಆದರೆ ಇತ್ತೀಚೆಗೆ ನೋಬೋ ಬಟ್ಟೆಯ ಬೆಲೆಯ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ನಟಿ ನೂಪುರ್ ಹೊಸ ಬಟ್ಟೆ ಬ್ರ್ಯಾಂಡ್‌ಗೆ ವ್ಯಾಪಕ ಟೀಕೆ; ಕಾರಣ ಏನು?

Nupur Sanon

Profile Pushpa Kumari Jun 17, 2025 5:40 PM

ಮುಂಬೈ: ಬಾಲಿವುಡ್ ನಟಿ ಕೃತಿ ಸನೂನ್‌ ಅವರ ತಂಗಿ, ನಟಿ ನೂಪುರ್ ಸನೂನ್‌ (Nupur Sanon) ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿರುತ್ತಾರೆ. ಸಿನಿಮಾ ಮಾತ್ರವಲ್ಲದೆ ವೈಯಕ್ತಿಕ ಜೀವನದಲ್ಲಿಯೂ ನಟಿ ನೂಪುರ್ ಸುದ್ದಿಯಲ್ಲಿದ್ದು, 2024ರಲ್ಲಿ ನೋಬೋ ಎನ್ನುವ ಬಟ್ಟೆಯ ಬ್ರ್ಯಾಂಡ್ ಸ್ಥಾಪಿಸಿದ್ದಾರೆ. ಆ ಮೂಲಕ ಉದ್ಯಮ ಕ್ಷೇತ್ರದಲ್ಲಿಯೂ ಗಣನೀಯ ಸಾಧನೆ ಮಾಡಿದ್ದಾರೆ. ನೂಪುರ್ ಸನೂನ್‌ ಮತ್ತು ಅವರ ತಾಯಿ ಗೀತಾ ಸನೂನ್‌ ನೋ ಬೌಂಡರಿಸ್ ಎನ್ನುವ ಅರ್ಥದಲ್ಲಿ ನೋಬೋ ಬಟ್ಟೆ ಬ್ರ್ಯಾಂಡ್ ಉದ್ಯಮ ಸ್ಥಾಪಿಸಿದ್ದು ಇದು ಜಾಗತಿಕ ಮಟ್ಟದಲ್ಲಿ ಕೂಡ ಜನಪ್ರಿಯವಾಗಿದೆ. ಕ್ಲಾಸಿಕಲ್,ಮಾಡರ್ನ್, ವೆಸ್ಟರ್ನ್, ಪಾರ್ಟಿ ವೇರ್ ಸೇರಿದಂತೆ ಅನೇಕ ವಿನ್ಯಾಸದ ಬಟ್ಟೆ ತಯಾರಿಯಲ್ಲಿ ನೋಬೋ ಕಂಪೆನಿ ಪ್ರಸಿದ್ಧಿ ಪಡೆದಿದೆ‌. ಆದರೆ ಇತ್ತೀಚೆಗೆ ನೋಬೋ ಬಟ್ಟೆಯ ಬೆಲೆಯ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಸಿನಿಮಾ ಕ್ಷೇತ್ರದಲ್ಲಿ ಇರುವ ಅನೇಕರು ಉದ್ಯಮ ಕ್ಷೇತ್ರದಲ್ಲಿ ಮಿಂಚುವುದು ಸಾಮಾನ್ಯವಾಗಿದೆ. ರೆಸಾರ್ಟ್, ಹೊಟೇಲ್, ಫ್ಯಾಷನ್ ಡಿಸೈನಿಂಗ್, ಫ್ಯಾಷನ್ ವೇರ್ಸ್ ಬ್ರ್ಯಾಂಡ್ ಮೂಲಕ ಅನೇಕ ಸಿನಿಮಾ ಸೆಲೆಬ್ರಿಟಿಗಳು ಪ್ರಸಿದ್ಧಿ ಪಡೆದಿದ್ದಾರೆ. ಇದೀಗ ನೋಬೋ ಬ್ರ್ಯಾಂಡ್ ಬಟ್ಟೆಗಳ ಮೂಲಕ ಉದ್ಯಮ ರಂಗಕ್ಕೆ ಕಾಲಿಟ್ಟ ನಟಿ ನೂಪುರ್ ಸನೂನ್‌ ಟ್ರೋಲ್‌ಗೆ ಗುರಿಯಾಗಿದ್ದಾರೆ. ತಮ್ಮ ಬ್ರ್ಯಾಂಡ್‌ನ ಬಟ್ಟೆಗಳ ಬೆಲೆಯನ್ನು ಸುಮಾರು 27,000 ರೂ.ಗಳಿಗೆ ನಿಗದಿಪಡಿಸಿದ್ದಾರೆ. ಈ ಬ್ರ್ಯಾಂಡ್‌ನ ಬಟ್ಟೆಗಳ ಬೆಲೆ ಕುರಿತಂತೆ ಸೋಶಿಯಲ್ ಮಿಡಿಯಾದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಅದೇ ರೀತಿ ಬಟ್ಟೆಗಳ ಗುಣಮಟ್ಟದ ಕೊರತೆಯ ಬಗ್ಗೆ ಇಂಟರ್‌ನೆಟ್‌ನಲ್ಲಿ ಸಾಕಷ್ಟು ವಿಚಾರ ಚರ್ಚೆಯಾಗುತ್ತಿದೆ.

ಬನಾರಸಿ ಬಟ್ಟೆಯಿಂದ ಕ್ಲಾಸಿಕಲ್ ಲೆಹೆಂಗಾ ಸೆಟ್ ಅನ್ನು ಬಹಳ ಸಿಂಪಲ್ ವಿನ್ಯಾಸದಲ್ಲಿ ರಚಿಸಿದ್ದು ಈ ಬಟ್ಟೆಗೆ 21,000 ರೂ. ಮೌಲ್ಯ ನಿಗದಿ ಪಡಿಸಲಾಗಿದೆ. ಸಿಂಪಲ್ ಸೂಟ್‌ನ ಬೆಲೆ 7,700 ರೂ.ಯಿಂದ ಆರಂಭವಾಗಿ 26,500 ರೂ.ಗಳ ತನಕ ದುಬಾರಿ ಬೆಲೆ ನಿಗದಿ ಪಡಿಸಲಾಗಿದೆ. ಇನ್ನು ಮಹಿಳೆಯರ ಸ್ಕರ್ಟ್ ಮತ್ತು ಕ್ರಾಪ್ ಟಾಪ್ ಸೆಟ್ ಬೆಲೆ 20,000 ರೂ. ತನಕ ಇದೆ. ಶಾರ್ಟ್ಸ್ ಬೆಲೆ 2,400 ರೂ. ಆಗಿದ್ದು, ಇವರ ಬ್ರ್ಯಾಂಡ್‌ನಲ್ಲಿ ಸಿಗುವ ಅತೀ ಅಗ್ಗದ ಬಟ್ಟೆ ಎನಿಸಿಕೊಂಡಿದೆ.

ಈ ಬೆಲೆಗಳ ಬಗ್ಗೆ ಸೋಶಿಯಲ್ ಮಿಡಿಯಾದಲ್ಲಿ ವ್ಯಾಪಕವಾಗಿ ಚರ್ಚೆಗಳಾಗುತ್ತಿವೆ. ಬಳಕೆದಾರರು ಈ ಬಗ್ಗೆ ನಾನಾ ತರನಾಗಿ ಕಾಮೆಂಟ್ ಮಾಡುತ್ತಿದ್ದಾರೆ. ನೋಬೋ ಎಂದರೆ ಯಾರೂ ಅದನ್ನು ಖರೀದಿ ಮಾಡೊಲ್ಲ ಎಂಬರ್ಥದಂತಿದೆ ಎಂದು ಒಬ್ಬರು ಟೀಕಿಸಿದ್ದಾರೆ. ಮತ್ತೊಬ್ಬರು ಬಟ್ಟೆಯ ಗುಣಮಟ್ಟಕ್ಕೆ ಹೋಲಿಸಿದರೆ ಈ ಬೆಲೆ ಬಹಳ ದುಬಾರಿಯಾಯ್ತು ಎಂದು ವ್ಯಂಗ್ಯವಾಗಿ ತಿಳಿಸಿದ್ದಾರೆ.

ಇದನ್ನು ಓದಿ: The Rajasaab Movie: ಪ್ರಭಾಸ್‌ ನಟನೆಯ ‘ದಿ ರಾಜಾಸಾಬ್’ ಚಿತ್ರದ ಟೀಸರ್‌ ಔಟ್‌

ನೂಪುರ್ 2019ರಲ್ಲಿ ಅಕ್ಷಯ್ ಕುಮಾರ್ ಜತೆ ʼಫಿಲ್ಹಾಲ್ʼ ಎಂಬ ಮ್ಯೂಸಿಕಲ್ ವಿಡಿಯೊ ಮೂಲಕ ಸಿನಿ ರಂಗಕ್ಕೆ ಪಾದಾರ್ಪಣೆ ಮಾಡಿದರು. 2023ರಲ್ಲಿ ʼಟೈಗರ್ ನಾಗೇಶ್ವರ ರಾವ್ʼ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟರು. 2024ರಲ್ಲಿ ನೂರಾನಿ ʼಚೆಹ್ರಾʼ ಸಿನಿಮಾದ ಮೂಲಕ ಬಾಲಿವುಡ್‌ಗೆ ಪಾದರ್ಪಣೆ ಮಾಡಿದ್ದಾರೆ. ಇದರ ಜತೆಗೆ ಮ್ಯೂಸಿಕ್ ಅಲ್ಬಂ ಸಾಂಗ್ ಹಾಗೂ ವೆಬ್ ಸೀರಿಸ್ ಮೂಲಕ ಜನಪ್ರಿಯರಾಗಿದ್ದಾರೆ. ಗಾಯಕ ಸ್ಟೆಬಿನ್ ಬೆನ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಕೂಡ ಇತ್ತೀಚೆಗಷ್ಟೇ ವೈರಲ್ ಆಗಿತ್ತು. ಇದೀಗ ಸ್ವಂತ ಬ್ರ್ಯಾಂಡ್ ಗೆ ಅತ್ಯಂತ ದುಬಾರಿ ಬೆಲೆ ನಿಗದಿ ಪಡಿಸಿದ್ದಕ್ಕೆ ಟೀಕೆಗೆ ಗುರಿಯಾಗಿದ್ದಾರೆ.