ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪ್ರಿಯಕರ, ಸಹೋದರಿಯೊಂದಿಗೆ ಸೇರಿ ಪತಿಗೆ ಸ್ಕೆಚ್‌; ಚಿತ್ರಹಿಂಸೆ ಕೊಟ್ಟು ಗಂಡನನ್ನೇ ಕೊಂದ ಪತ್ನಿ

Wife kills husband: ಪತಿಗೆ ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದಲ್ಲದೆ ನಂತರ ಅದನ್ನು ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿದ ಆರೋಪದ ಮೇಲೆ ಮಹಿಳೆ, ಆಕೆಯ ಪ್ರಿಯಕರ, ಆಕೆಯ ಸಹೋದರಿ ಹಾಗೂ ಮತ್ತೊಬ್ಬ ಸಹಚರನನ್ನು ಬಂಧಿಸಲಾಗಿದೆ. ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

ಪತಿಯನ್ನು ಕ್ರೂರವಾಗಿ, ಚಿತ್ರಹಿಂಸೆ ನೀಡಿ ಕೊಂದ ಪತ್ನಿ

ಸಾಂದರ್ಭಿಕ ಚಿತ್ರ -

Priyanka P
Priyanka P May 26, 2026 1:24 PM

ಲಖನೌ, ಮೇ 26: ಪತಿಗೆ ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದಲ್ಲದೆ ನಂತರ ಅದನ್ನು ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿದ ಆರೋಪದ ಮೇಲೆ ಮಹಿಳೆ, ಆಕೆಯ ಪ್ರಿಯಕರ, ಆಕೆಯ ಸಹೋದರಿ ಹಾಗೂ ಮತ್ತೊಬ್ಬ ಸಹಚರನನ್ನು ಬಂಧಿಸಲಾಗಿದೆ. ಉತ್ತರ ಪ್ರದೇಶದ (Uttar Pradesh) ಮೊರಾದಾಬಾದ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಮಜೋಲಾ ಪ್ರದೇಶದಲ್ಲಿ ವಾಸಿಸುತ್ತಿದ್ದ ಮಹಿಳೆ ತನ್ನ ಪತಿಯನ್ನು ಹತ್ಯೆ ಮಾಡಿದ್ದಾಳೆ. ಮೃತ ವ್ಯಕ್ತಿಯನ್ನು ಪವನ್ ಎಂದು ಗುರುತಿಸಲಾಗಿದೆ. ಪತಿಯನ್ನು ಸುಮಾರು ಮೂರು ಗಂಟೆಗಳ ಕಾಲ ಒತ್ತೆಯಾಳಾಗಿ ಇರಿಸಿಕೊಂಡು ಕ್ರೂರವಾಗಿ ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿದೆ (crime news).

ಪವನ್‌ಗೆ ತನ್ನ ಪತ್ನಿ ಆಂಚಲ್ (24) ಮತ್ತು ಆಕೆಯ ಸಂಬಂಧಿ ಅಂಕಿತ್ (21) ನಡುವೆ ವಿವಾಹೇತರ ಸಂಬಂಧವಿದೆ ಎಂಬುದು ತಿಳಿದುಬಂತು. ಇದು ಪತಿ-ಪತ್ನಿ ನಡುವೆ ತೀವ್ರ ಕಲಹಕ್ಕೆ ಕಾರಣವಾಯಿತು. ಪವನ್ ಮತ್ತು ಆಂಚಲ್ ಆರು ವರ್ಷಗಳ ಹಿಂದೆ ಮದುವೆಯಾಗಿದ್ದರು. ಅವರಿಗೆ 3 ವರ್ಷದ ಮಗಳೂ ಇದ್ದಾಳೆ. ಪತ್ನಿಯ ಅಕ್ರಮ ಸಂಬಂಧ ಗೊತ್ತಾಗಿದ್ದೇ ಪತಿ ಪವನ್‌ಗೆ ಮುಳುವಾಯಿತು.

ಪವನ್‍ ಕೊಲೆ ಪೂರ್ವನಿಯೋಜಿತವಾಗಿತ್ತು. ಆಂಚಲ್‌ಳ ಸಹೋದರಿ ಶಿಖಾ (18) ಘಟನೆ ನಡೆಯುವ ನಾಲ್ಕು ದಿನಗಳ ಮೊದಲು ದಂಪತಿಗಳ ಮನೆಗೆ ಬಂದು ಈ ಕೃತ್ಯಕ್ಕೆ ಸಹಾಯ ಮಾಡಿದ್ದಾಳೆ. ಅಪರಾಧಕ್ಕೆ ಸಹಾಯ ಮಾಡಲು ಶಿಖಾ ತನ್ನ ಗೆಳೆಯ ಅಜಯ್ (19) ಸಹಾಯವನ್ನು ಪಡೆದಿದ್ದಾಳೆ. ಮೊದಲಿಗೆ ಪವನ್‌ಗೆ ವಿಷ ಸೇವಿಸುವಂತೆ ಒತ್ತಾಯಿಸಲಾಯಿತು. ಅವನು ವಿರೋಧಿಸಿದಾಗ, ಆರೋಪಿಗಳು ಅವನನ್ನು ಕಟ್ಟಿಹಾಕಿ ಕ್ರೂರವಾಗಿ ಥಳಿಸಿದ್ದಾರೆ.

ಅನೈತಿಕ ಸಂಬಂಧ ಶಂಕೆ: ನಿದ್ರಿಸುತ್ತಿದ್ದ ಪತಿಯ ಖಾಸಗಿ ಅಂಗವನ್ನೇ ಕತ್ತರಿಸಿದ ಪತ್ನಿ

ಸುಮಾರು ಮೂರು ಗಂಟೆಗಳ ಕಾಲ ಕರೆಂಟ್ ಶಾಕ್ ನೀಡಿದ್ದಾರೆ. ಹೀಗಾಗಿ ಆತನ ಸ್ಥಿತಿ ಹದಗೆಟ್ಟಿತು. ನಂತರ ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸಿದ್ದಾರೆ. ಅಪರಾಧವನ್ನು ಮತ್ತಷ್ಟು ಮುಚ್ಚಿಹಾಕುವ ಸಲುವಾಗಿ, ಆರೋಪಿಗಳು ಆತನ ದೇಹವನ್ನು ಮೆಟ್ಟಿಲುಗಳ ಕೆಳಗೆ ತಳ್ಳಿದರು. ನಂತರ, ಪವನ್ ವಿಷ ಸೇವಿಸಿ, ಮೆಟ್ಟಿಲಿನಿಂದ ಬಿದ್ದು ಮೃತಪಟ್ಟಿದ್ದಾನೆ ಎಂದು ನೆರೆಹೊರೆಯವರಿಗೆ ಮಾಹಿತಿ ನೀಡಿದರು.

ಪವನ್‌ಗೆ ಜೀವ ಬೆದರಿಕೆ ಇತ್ತು ಎಂದು ಆತನ ಕುಟುಂಬ ಹೇಳಿದೆ. ಸುಮಾರು ಮೂರು ತಿಂಗಳ ಹಿಂದೆ ತನ್ನ ಸಹೋದರಿಗೆ ಕರೆ ಮಾಡಿ ತನಗೆ ಏನಾದರೂ ಆಗಬಹುದೆಂದು ಅನುಮಾನ ವ್ಯಕ್ತಪಡಿಸಿದ್ದನು. ಆದರೆ ಆ ಸಮಯದಲ್ಲಿ ಕಳವಳಗಳನ್ನು ಯಾರೂ ಅಷ್ಟಾಗಿ ಗಂಭೀರವಾಗಿ ಪರಿಗಣಿಸಲಿಲ್ಲ.

ಆಂಚಲ್, ಆಕೆಯ ಪ್ರಿಯಕರ ಅಂಕಿತ್, ಆಂಚಲ್ ಸಹೋದರಿ ಶಿಖಾ ಮತ್ತು ಶಿಖಾಳ ಗೆಳೆಯ ಅಜಯ್ ಎಂಬ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.