ವೀಕೆಂಡ್ (Weekend) ಬಂತು ಅಂದರೆ ಒಟಿಟಿ (OTT Movies) ಪ್ರಿಯರಿಗೆ ಹಬ್ಬ. ಈ ವಾರ ಹಾರರ್ (Horror), ಕಾಮಿಡಿ ಜೊತೆಗೆ ಒಂದೊಳ್ಳೆ ಥ್ರಿಲ್ಲರ್ (Thriller Movies) ಸಿನಿಮಾಗಳು ಒಟಿಟಿಗೆ ಬಂದಿವೆ. ವಿಶೇಷ ಅಂದರೆ ಸಿರೀಸ್ ಜೊತೆಗೆ ರಶ್ಮಿಕಾ ನಟನೆಯ ಎರಡು ಸಿನಿಮಾಗಳು ಒಟಿಟಿಗೆ ಏಂಟ್ರಿ ಕೊಟ್ಟಿದೆ. Amazon Prime Video, Netflix ಮತ್ತು SonyLIV ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ OTT ನಲ್ಲಿ ಹಲವಾರು ಹೊಸ ಚಲನಚಿತ್ರಗಳು (Cinema) ಮತ್ತು ವೆಬ್ ಸರಣಿಗಳು ಲಭ್ಯವಿದೆ. ಹಾಗಾದ್ರೆ ಯಾವೆಲ್ಲ ಸಿನಿಮಾಗಳು ಬಂದಿವೆ? ಸ್ಟ್ರೀಮಿಂಗ್ ಎಲ್ಲಿ?
ದಿ ಅಬಾಂಡನ್ಸ್ (The Abandons) (ಇಂಗ್ಲಿಷ್)
1854 ರಲ್ಲಿ ವಾಷಿಂಗ್ಟನ್ ಪ್ರಾಂತ್ಯದಲ್ಲಿ ನಡೆಯುವ ಈ ಕಥೆ. ಲೆನಾ ಹೆಡೆ, ಗಿಲಿಯನ್ ಆಂಡರ್ಸನ್, ನಿಕ್ ರಾಬಿನ್ಸನ್ ತಾರಾಗಣ ಇದೆ. ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.
ಕುಟ್ರಂ ಪುರಿಂಧವನ್ ಸಿರೀಸ್ (Kuttram Purindhavan: The Guilty One)
ಕಾಲಿವುಡ್ ಸಿರೀಸ್. ಪಶುಪತಿ, ವಿದಾರ್ಥ್, ಲಕ್ಷ್ಮಿ ಪ್ರಿಯಾ ಚಂದ್ರಮೌಳಿ ಸಿನಿಮಾದಲ್ಲಿ ಇದ್ದಾರೆ. ಸಖತ್ ಥ್ರಿಲ್ಲರ್, ಕ್ರೈಂ ಸಿರೀಸ್ ಸೋನಿ ಲಿವ್‌ನಲ್ಲಿ ಸ್ಟ್ರೀಮಿಂಗ್ ಆಗ್ತಿದೆ.
ಇದನ್ನೂ ಓದಿ: BRAT OTT: ಸದ್ದಿಲ್ಲದೇ ಒಟಿಟಿಗೆ ಬಂದೇ ಬಿಡ್ತು ಡಾರ್ಲಿಂಗ್ ಕೃಷ್ಣ ನಟನೆಯ 'ಬ್ರ್ಯಾಟ್ ʼ! ಸ್ಟ್ರೀಮಿಂಗ್ ಎಲ್ಲಿ?
'ದಿ ಗರ್ಲ್‌ಫ್ರೆಂಡ್'
ರಾಹುಲ್ ರವೀಂದ್ರನ್ ನಿರ್ದೇಶನದ ರಶ್ಮಿಕಾ ಮಂದಣ್ಣ ಅವರ ಇತ್ತೀಚಿನ ತೆಲುಗು ರೊಮ್ಯಾಂಟಿಕ್ ಸಿನಿಮಾ 'ದಿ ಗರ್ಲ್‌ಫ್ರೆಂಡ್' . ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಮತ್ತು ದೀಕ್ಷಿತ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ, ಅನು ಇಮ್ಯಾನುಯೆಲ್, ರಾಹುಲ್ ರವೀಂದ್ರನ್, ರಾವ್ ರಮೇಶ್ ಮತ್ತು ರೋಹಿಣಿ ಮೊಲ್ಲೇಟಿ ಬೆಂಬಲ ನೀಡಿದ್ದಾರೆ.
ಡಿಸೆಂಬರ್ 5, 2025 ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಚಿತ್ರ ಸ್ಟ್ರೀಮ್ ಆಗಲಿದೆ. ಈ ಚಿತ್ರವು ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಸ್ಟ್ರೀಮ್ ಆಗುತ್ತಿದೆ. ಬಿಡುಗಡೆ ಯಾದ 23 ದಿನಗಳಲ್ಲಿ ಭಾರತದಲ್ಲಿ ಇದರ ಒಟ್ಟು ಕಲೆಕ್ಷನ್ 18.56 ಕೋಟಿ ರೂ.ಗಳಾಗಿದ್ದರೆ, ವಿಶ್ವಾದ್ಯಂತ ಇದರ ಕಲೆಕ್ಷನ್ 28.94 ಕೋಟಿ ರೂ.ಗಳಾಗಿದೆ.
ಇಲ್ಲಿಯವರೆಗೆ, ಚಿತ್ರದ ವಿದೇಶಗಳಲ್ಲಿ 7.2 ಕೋಟಿ ರೂ.ಗಳ ಕಲೆಕ್ಷನ್ ದಾಖಲಾಗಿದೆ. ಅನು ಎಮ್ಯಾನ್ಯುಲ್, ರಾವ್ ರಮೇಶ್ ಮುಂತಾದವರು ಈ ಚಿತ್ರದಲ್ಲಿದ್ದಾರೆ. ʻದಿ ಗರ್ಲ್‌ಫ್ರೆಂಡ್ʼ ಸಿನಿಮಾವನ್ನು ಸುಮಾರು 25 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣ ಮಾಡಿರುವ ಬಗ್ಗೆ ಮಾಹಿತಿ ಇದೆ.
ಥಾಮಾ
ರಶ್ಮಿಕಾ ನಟಿಸಿ, ಬಾಕ್ಸ್ ಆಫೀಸ್ನಲ್ಲಿ ಸೂಪರ್ ಹಿಟ್ ಆಗಿದ್ದ ‘ಥಾಮಾʼ ಸಿನಿಮಾ ಇದೀಗ ಒಟಿಟಿಗೆ ಬಂದಿದೆ. ಆಯುಷ್ಮಾನ್ ಖುರಾನಾ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಅಕ್ಟೋಬರ್ 21, 2025 ರಂದು ಬಿಡುಗಡೆಯಾದ ಚಿತ್ರ ಈಗ OTT ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ. ಡಿಸೆಂಬರ್ 2ರಿಂದ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಥಾಮಾ ಸ್ಟ್ರೀಮಿಂಗ್ ಆಗುತ್ತಿದೆ.
ಸಿನಿಮಾ ನೋಡಲು ಇಚ್ಛಿಸುವವರು ರೆಂಟ್ (ಬಾಡಿಗೆ) 349 ರೂ. ಹಣ ನೀಡಿ ನೋಡಬಹುದು. ನಂತರ ಡಿಸೆಂಬರ್ 16, 2025 ರಂದು ಎಲ್ಲಾ ಪ್ರೈಮ್ ವಿಡಿಯೋ ಚಂದಾದಾರರು ನೋಡಬಹುದಾಗಿದೆ ಎನ್ನಲಾಗಿದೆ.ಸಿನಿಮಾ ಹಾರರ್ ಕಾಮಿಡಿ ಶೈಲಿಯಲ್ಲಿ ಮೂಡಿ ಬಂದಿದೆ. ಇದರ ಜೊತೆಗೆ ಒಂದು ಲವ್ ಸ್ಟೋರಿ ಕೂಡ ಇದೆ.
ಈ ಸಿನಿಮಾ ಬುಕ್ ಮೈ ಶೋ ನಲ್ಲಿ ಒಳ್ಳೆಯ ರೇಟಿಂಗ್ ಕೂಡ ಪಡೆದುಕೊಂಡಿತ್ತು.. 'ಥಾಮಾ' ಚಿತ್ರದಲ್ಲಿ ನವಾಜುದ್ದೀನ್ ಸಿದ್ದಿಕಿ, ಪರೇಶ್ ರಾವಲ್, ಫೈಸಲ್ ಮಲಿಕ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಚಿನ್-ಜಿಗರ್ ಸಂಗೀತ ಸಂಯೋಜಿಸಿದ್ದಾರೆ.
ಡೈಸ್ ಇರೇ (Diés Iraé)
ಈ ವರ್ಷ ಮಲಯಾಳಂನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳಲ್ಲಿ ಒಂದಾದ ನಂತರ, ಪ್ರಣವ್ ಮೋಹನ್ (Pranav Mohan Lal) ಲಾಲ್ ಅಭಿನಯದ ಈ ಚಿತ್ರವು ಈಗ OTTಗೆ ಬರುತ್ತಿದೆ.ಡಿಸೆಂಬರ್ 5 ರಿಂದ ಜಿಯೋಹಾಟ್‌ಸ್ಟಾರ್‌ನಲ್ಲಿ ಡೈಸ್ ಇರೇ ಸ್ಟ್ರೀಮ್ ಆಗಲಿದೆ. ಒಟಿಟಿ ಪ್ಲಾಟ್‌ಫಾರ್ಮ್‌ನ ಅಧಿಕೃತ ಹ್ಯಾಂಡಲ್‌ನಲ್ಲಿ, "ಕೋಪದ ದಿನ ಬಂದಿದೆ.
ಇದನ್ನೂ ಓದಿ: Mass Jathara OTT Release: ಒಟಿಟಿಗೆ ಎಂಟ್ರಿ ಕೊಡ್ತಿದೆ ಶ್ರೀಲೀಲಾ - ರವಿತೇಜ ಸಿನಿಮಾ, ಯಾವಾಗ? ಸ್ಟ್ರೀಮಿಂಗ್ ಎಲ್ಲಿ?
ಡಿಸೆಂಬರ್ 5 ರಿಂದ ಜಿಯೋಹಾಟ್‌ಸ್ಟಾರ್‌ನಲ್ಲಿ ಮಾತ್ರ ಡೈಸ್ ಇರೇ ಸ್ಟ್ರೀಮ್ ಆಗಲಿದೆ" ಎಂದು ಬರೆದಿದೆ. ಬಿಡುಗಡೆಯ ಪ್ರಚಾರಕ್ಕಾಗಿ ಪ್ರಣವ್ ಪಾತ್ರವು ದ ನಿದ್ರೆಯಲ್ಲಿರುವ ವೀಡಿಯೊವನ್ನು ಸಹ ಪೋಸ್ಟ್ ಮಾಡಿದ್ದಾರೆ, ಅದರಲ್ಲಿ ನಿಗೂಢ ಕೈಯೊಂದು ತಲೆಯನ್ನು ಸವರುತ್ತಾ ಇರೋದು ಇದೆ.
ಲ್ಯಾಟಿನ್ ಭಾಷೆಯಲ್ಲಿ 'ಕ್ರೋಧದ ದಿನ' ಎಂದು ಅನುವಾದಿಸುವ ಡೈಸ್ ಇರೇ, ರಾಹುಲ್ ಸದಾಶಿವನ್ ಬರೆದು ನಿರ್ದೇಶಿಸಿದ್ದಾರೆ ಮತ್ತು ನೈಟ್ ಶಿಫ್ಟ್ ಸ್ಟುಡಿಯೋಸ್ ಮತ್ತು ವೈಎನ್‌ಒಟಿ ಸ್ಟುಡಿಯೋಸ್ ಅಡಿಯಲ್ಲಿ ಚಕ್ರವರ್ತಿ ರಾಮಚಂದ್ರ ಮತ್ತು ಎಸ್ ಶಶಿಕಾಂತ್ ನಿರ್ಮಿಸಿದ್ದಾರೆ. ಈ ಚಿತ್ರವು ಕೇರಳದ ವಿಲ್ಲಾವೊಂದರಲ್ಲಿ ಆರಾಮದಾಯಕ ಜೀವನವನ್ನು ನಡೆಸುವ ರೋಹನ್ (ಪ್ರಣವ್) ಎಂಬ ಶ್ರೀಮಂತ ಇಂಡೋ-ಅಮೇರಿಕನ್ ವಾಸ್ತುಶಿಲ್ಪಿಯ ಕಥೆಯನ್ನು ಹೇಳುತ್ತದೆ.