Paresh Rawal: ಮೂತ್ರವನ್ನು ಬಿಯರ್‌ನಂತೆ ಕುಡಿದೆ... ಶಾಕಿಂಗ್ ಸಂಗತಿ ಬಿಚ್ಚಿಟ್ಟ ನಟ ಪರೇಶ್ ರಾವಲ್
80-90ರ ದಶಕದ ಆರಂಭದಲ್ಲೇ ಪರೇಶ್ ರಾವಲ್ ಚಿತ್ರರಂಗ ಪ್ರವೇಶಿಸಿದ್ದು ಲೀಡ್ ಮತ್ತು ಪೋಷಕ ಪಾತ್ರದಿಂದನೆ ಜನ ಮನ ಗೆದ್ದಿದ್ದಾರೆ. ತಮ್ಮ ಅದ್ಭುತ ಅಭಿನಯದಿಂದಲೇ ರಾಷ್ಟ್ರಪ್ರಶಸ್ತಿಯನ್ನು ಕೂಡ ಮುಡಿಗೇರಿಸಿಕೊಂಡಿದ್ದಾರೆ. 240ಕ್ಕೂ ಅಧಿಕ ಸಿನಿಮಾ ಗಳಲ್ಲಿ ಪೋಷಕ ನಟರಾಗಿ ನಟಿಸಿದ್ದ ಅವರು ಮುಂಜಾನೆ ಎದ್ದ ಕೂಡಲೇ ನೀರು, ಟೀ ಕಾಫಿ ಕುಡಿಯದೇ ಬದಲಿಗೆ ತಮ್ಮದೇ ಮೂತ್ರವನ್ನು ಸೇವಿಸುತ್ತಿದ್ದೆ ಎಂಬ ಅಚ್ಚರಿಯ ಹೇಳಿಕೆ ಒಂದನ್ನು ಸಂದರ್ಶನ ಒಂದರಲ್ಲಿ ಹೇಳಿದ್ದಾರೆ.


ನವದೆಹಲಿ : ಹೀರಾ ಫೇರಿ, ಫಿರ್ ಹೀರಾ ಫೇರಿ ಸಿನಿಮಾ ಖ್ಯಾತಿಯ ಬಾಲಿವುಡ್ ನ ಹಿರಿಯ ನಟ ಪರೇಶ್ ರಾವಲ್ (Paresh Rawal) ಹಾಸ್ಯ ಪ್ರಧಾನ ಸಿನಿಮಾದಿಂದಲೇ ಬಹುತೇಕ ಅಭಿಮಾನಿಗಳ ಮನಗೆದ್ದಿದ್ದಾರೆ. ಈಗಲೂ ಬಾಬು ರಾವ್ ಎಂಬ ಹೆಸರು ಕೇಳಿದಾಗ ಪರೇಶ್ ರಾವಲ್ ಅವರ ಮುಗ್ದ ಅಭಿನಯದ ನೆನಪಾಗೋ ಮಟ್ಟಕ್ಕೆ ಜನರ ಮೆಚ್ಚುಗೆ ಪಡೆದಿದ್ದನ್ನು ಕಾಣಬಹುದು. 240ಕ್ಕೂ ಅಧಿಕ ಸಿನಿಮಾಗಳಲ್ಲಿ ಪೋಷಕ ನಟರಾಗಿ ನಟಿಸಿದ್ದ ಅವರು ಮುಂಜಾನೆ ಎದ್ದ ಕೂಡಲೇ ನೀರು, ಟೀ ಕಾಫಿ ಕುಡಿಯದೆ ಬದಲಿಗೆ ತಮ್ಮದೇ ಮೂತ್ರವನ್ನು ಸೇವಿಸುತ್ತಿದ್ದೆ ಎಂಬ ಅಚ್ಚರಿಯ ಹೇಳಿಕೆ ಒಂದನ್ನು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಬಾಲಿವುಡ್‌ನ ಈ ಫೇಮಸ್ ನಟನಿಗೆ ಈ ಅಭ್ಯಾಸ ಯಾಕೆ ಬಂತು ಇದಕ್ಕೆ ಕಾರಣ ಏನಿರಬಹುದು ಎಂಬ ಬಗ್ಗೆ ಸ್ವತಃ ಅವರೇ ವಿವರಿಸಿದ್ದಾರೆ.
80-90ರ ದಶಕದ ಆರಂಭದಲ್ಲೇ ಪರೇಶ್ ರಾವಲ್ ಚಿತ್ರರಂಗ ಪ್ರವೇಶಿಸಿದ್ದು ಲೀಡ್ ಮತ್ತು ಪೋಷಕ ಪಾತ್ರದಿಂದಲೇ ಜನ ಮನ ಗೆದ್ದವರು. ತಮ್ಮ ಅದ್ಭುತ ಅಭಿನಯದಿಂದಲೇ ರಾಷ್ಟ್ರಪ್ರಶಸ್ತಿಯನ್ನು ಕೂಡ ಮುಡಿಗೇರಿಸಿಕೊಂಡಿದ್ದಾರೆ. ಸಿನಿಮಾ ಶೂಟಿಂಗ್ ವೇಳೆ ಅಚಾನಕ್ ಅವಘಡ ಆಗೋದು ಸಹಜ ಅಂತೆಯೇ ಪರೇಶ್ ರಾವಲ್ ಕೂಡ ಚಿತ್ರೀಕರಣದ ವೇಳೆ ಮೊಣಕಾಲಿಗೆ ಗಾಯ ಆಗಿದ್ದು, ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆದುಕೊಂಡಿದ್ದರಂತೆ. ರಾಜ್‌ಕುಮಾರ್ ಸಂತೋಷಿ ಅವರ ಘಾತಕ್ ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ಮೊಣಕಾಲಿನ ಗಾಯದಿಂದ ಬಳಲುತ್ತಿದ್ದು ಅದರಿಂದ ಚೇತರಿಸಿಕೊಳ್ಳಲು ತಮ್ಮ ಮೂತ್ರ ತಾವೇ ಕುಡಿದಿದ್ದರಿಂದ ಗಾಯ ವಾಸಿಯಾಗಲು ಸಹಾಯವಾಯಿತು ಎಂದು ಇತ್ತೀಚೆಗೆ ಈ ಬಗ್ಗೆ ಪರೇಶ್ ರಾವಲ್ ಹೇಳಿಕೊಂಡಿದ್ದಾರೆ.
ಘಾತಕ್ ಚಿತ್ರದಲ್ಲಿ ರಾಕೇಶ್ ಪಾಂಡೆ ಅವರೊಂದಿಗಿನ ಸಿನಿಮಾ ಚಿತ್ರೀಕರಣದ ಸಮಯದಲ್ಲಿ ಸಾಹಸ ದೃಶ್ಯವೊಂದನ್ನು ಚಿತ್ರೀಕರಿಸುವಾಗ ತಮ್ಮ ಕಾಲಿಗೆ ಗಾಯವಾಗಿದೆ ಎಂದು ಅವರು ಬಹಿರಂಗಪಡಿಸಿದರು. ಹೀಗಾಗಿ ಅವರನ್ನು ಟಿನು ಆನಂದ್ ಮತ್ತು ಡ್ಯಾನಿ ಡೆನ್ಜೋಂಗ್ಪಾ ತತ್ ಕ್ಷಣ ಆಸ್ಪತ್ರೆಗೆ ಕರೆದೊಯ್ದರು. ಮೊಣಕಾಲಿನ ನೋವಿನಿಂದಾಗಿ ತನ್ನ ವೃತ್ತಿ ಜೀವನ ಅಲ್ಲೇ ಮುಗಿಯಿತು ಎಂದು ಪರೇಶ್ ರಾವಲ್ ತುಂಬಾ ಭಯಭೀತವಾಗಿದ್ದರಂತೆ. ನಾನು ನಾನಾವತಿ ಆಸ್ಪತ್ರೆಯಲ್ಲಿದ್ದಾಗ, ಅಜಯ್ ದೇವಗನ್ ಅವರ ತಂದೆ ವೀರು ದೇವಗನ್ ನನ್ನನ್ನು ಕಾಣಲು ಬಂದರು ನನ್ನ ಕಾಲಿನ ಗಾಯದ ಬಗ್ಗೆ ತಿಳಿದು ಮದ್ಯ, ಮಟನ್ , ತಂಬಾಕು ಸೇವಿಸಬೇಡಿ, ಮೂತ್ರ ಸೇವನೆ ಮಾಡುವಂತೆ ಈ ಸಲಹೆ ನೀಡಿದ್ದರು. ಅವರ ಸಲಹೆಯ ಮೇರೆಗೆ ಪರೇಶ್ ರಾವಲ್ ಮೂತ್ರ ಕುಡಿಯಲು ಪ್ರಾರಂಭಿಸಿದರು ಎಂದು ತಿಳಿಸಿದ್ದಾರೆ.
ಇದನ್ನು ಓದಿ: Kuladalli keelyavudo Movie: ‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದ ಶೀರ್ಷಿಕೆ ಗೀತೆ ಅನಾವರಣ ಮಾಡಿದ ಶತಾಯುಷಿ ಸಾಲುಮರದ ತಿಮ್ಮಕ್ಕ
ಬೆಳಿಗ್ಗೆ ಎದ್ದ ಕೂಡಲೇ ನಾನು ನನ್ನದೇ ಮೂತ್ರವನ್ನು ಬಿಯರ್ ರೀತಿ ಸಿಪ್ ಮಾಡುತ್ತಿದ್ದೆ. ಚಿಕಿತ್ಸೆಗಾಗಿ ಇದನ್ನು 15 ದಿನಗಳ ಕಾಲ ಮಾಡಿದೆ. ಗಾಯವು ಗುಣವಾಗಲು ಸುಮಾರು 2.5 ತಿಂಗಳು ತೆಗೆದುಕೊಳ್ಳುತ್ತದೆ, ಆದರೆ ಒಂದೂವರೆ ತಿಂಗಳಲ್ಲಿ ಗುಣಮುಖನಾದೆ. ನನ್ನ ಎಕ್ಸ್ರೇ ರಿಪೋರ್ಟ್ ಕಂಡು ವೈದ್ಯರೇ ಅಚ್ಚರಿಗೊಳಗಾದರು ಎಂದು ಇತ್ತೀಚಿನ ಸಂದರ್ಶನ ಒಂದರಲ್ಲಿ ಅವರು ತಿಳಿಸಿದ್ದಾರೆ. ಸದ್ಯ ಅವರು ಪ್ರಸ್ತುತ ಪ್ರಿಯದರ್ಶನ್ ಅವರ 'ಭೂತ್ ಬಂಗ್ಲಾ' ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು ಇತ್ತೀಚಿನ ಸಂದರ್ಶನದಲ್ಲಿ ಈ ಎಲ್ಲ ವೈಯಕ್ತಿಕ ಮಾಹಿತಿಯನ್ನು ಪರೇಶ್ ರಾವಲ್ ಮುಕ್ತವಾಗಿ ಹಂಚಿ ಕೊಂಡಿದ್ದಾರೆ.