ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Parineeti Chopra: ಗಂಡು ಮಗುವಿಗೆ ಜನ್ಮ ನೀಡಿದ ಪರಿಣಿತಿ ಚೋಪ್ರಾ; ದೀಪಾವಳಿ ಮುನ್ನವೇ ಗುಡ್‌ನ್ಯೂಸ್‌

ಬಾಲಿವುಡ್ ನಟಿ ಪರಿಣೀತಿ ಚೋಪ್ರಾ-ರಾಜಕಾರಣಿ ರಾಘವ್ ಚಡ್ಡಾ ದಂಪತಿ ಗುಡ್‌ನ್ಯೂಸ್ ಶೇರ್ ಮಾಡಿದ್ದು, ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ್ದಾರೆ. ಈ ದಂಪತಿಗೆ ಭಾನುವಾರ ಗಂಡು ಮಗು ಜನಿಸಿದೆ. ದಂಪತಿಗಳು ಮಗುವಿನ ಆಗಮನದ ಕುರಿತು ಖುಷಿಯನ್ನು ಹಂಚಿಕೊಂಡಿದ್ದಾರೆ. ಫ್ಯಾನ್ಸ್, ಸೆಲೆಬ್ರಿಟಿಗಳು ಶುಭ ಹಾರೈಸುತ್ತಿದ್ದಾರೆ.

ಪರಿಣಿತಿ ಚೋಪ್ರಾ-ರಾಘವ್ ಚಡ್ಡಾ ದಂಪತಿಗೆ ಗಂಡು ಮಗು

Parineeti Chopra And Raghav Chadha -

Profile Pushpa Kumari Oct 19, 2025 6:03 PM

ಮುಂಬೈ: ದೀಪಾವಳಿಯ ಶುಬ ಸಂದರ್ಭದಲ್ಲಿ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ (Parineeti Chopra) ಗುಡ್‌ನ್ಯೂಸ್‌ ಹಂಚಿಕೊಂಡಿದ್ದಾರೆ. ಪರಿಣಿತಿ ಚೋಪ್ರಾ - ರಾಜಕಾರಣಿ ರಾಘವ್ ಚಡ್ಡಾ (Raghav Chadha) ದಂಪತಿಗೆ ಗಂಡು ಮಗು ಜನಿಸಿದೆ. ಮೊದಲ ಮಗುವನ್ನು ಸ್ವಾಗತಿಸಿರುವ ವಿಚಾರವನ್ನು ದಂಪತಿ ಶೇರ್‌ ಮಾಡಿದ್ದಾರೆ. ಸದ್ಯ ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ದಂಪತಿಗೆ ಶುಭಾಸಯ ತಿಳಿಸುತ್ತಿದ್ದಾರೆ.

2023ರ ಸೆಪ್ಟೆಂಬರ್ 24ರಂದು ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿತು. ಉದಯ್‌ಪುರ್‌ನಲ್ಲಿ ವಿವಾಹ ಮಹೋತ್ಸವ ಅತ್ಯಂತ ಅದ್ಧೂರಿಯಾಗಿ ನೆರವೇರಿತು. ಬಾಲಿವುಡ್ ತಾರೆಯರು, ರಾಜ ಕಾರಣಿಗಳು, ವಿವಿಧ ಕ್ಷೇತ್ರಗಳ ಗಣ್ಯರು ಮದುವೆಯಲ್ಲಿ ಭಾಗಿಯಾಗಿದ್ದರು. ಇದೀಗ ಮದುವೆಯಾದ 2 ವರ್ಷಗಳೊಳಗೆ ದಂಪತಿ ಗಂಡು ಮಗುವನ್ನು ಬರ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿರುವ ದಂಪತಿ, ʼʼಅವನು ಕೊನೆಗೂ ಬಂದಿದ್ದಾನೆ. ನಮ್ಮ ಮುದ್ದಾದ ಮಗ...ಅವನಿಲ್ಲದ ಜೀವನವನ್ನು ನಾವು ನೆನಪಿಸಿಕೊಳ್ಳಲು ಸಾಧ್ಯವಿಲ್ಲ. ನಮ್ಮ ತೋಳುಗಳು ತುಂಬಿಕೊಂಡಿವೆ, ಹೃದಯಗಳು ಇನ್ನಷ್ಟು ಸಂತೋಷದಲ್ಲಿ ತುಂಬಿವೆ...ಮೊದಲು ನಮಗೆ ನಾವಿದ್ದೆವು...ಈಗ ನಮ್ಮ ಬಳಿ ಎಲ್ಲವೂ ಇದೆʼʼ ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನು ಓದಿ:Wild Tiger Safari Movie: ʼವೈಲ್ಡ್‌ ಟೈಗರ್‌ ಸಫಾರಿʼ ಚಿತ್ರದ ವಿಲನ್‌ ಪಾತ್ರದ ಫಸ್ಟ್‌ ಲುಕ್‌ ರಿವೀಲ್‌

ರಾಘವ್ ಚಡ್ಡಾ ಮತ್ತು ಪರಿಣಿತಿ ಚೋಪ್ರಾ ಕೆಲವು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿ ಬಳಿಕ ಮದುವೆಯಾಗಿದ್ದರು. ಪರಿಣಿತಿ ಚೋಪ್ರಾ ಈ ವರ್ಷದ ಆಗಸ್ಟ್‌ನಲ್ಲಿ ತಾನು ಗರ್ಭಿಣಿ ಎನ್ನುವುದನ್ನು ಘೋಷಿಸಿದ್ದರು.

ಪರಿಣಿತಿ ಚೋಪ್ರಾ ಹಲವು ಹಿಟ್ ಸಿನಿಮಾದಲ್ಲಿ ನಟಿಸಿದ್ದಾರೆ. 2011ರಲ್ಲಿ ತೆರೆಕಂಡ 'ಲೇಡೀಸ್ ವರ್ಸಸ್ ರಿಕಿ ಬಹ್ಲ್'‌ ಚಿತ್ರದ ಮೂಲಕ ಅವರು ಬಾಲಿವುಡ್‌ಗೆ ಕಾಲಿಟ್ಟರು. ಪರಿಣಿತಿ ಕೊನೆಯದಾಗಿ ಇಮ್ತಿಯಾಜ್ ಅಲಿ ಅವರ 'ಅಮರ್ ಸಿಂಗ್ ಚಮ್ಕೀಲಾ' ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದರು. ಸದ್ಯ ತಾಯಿಯಾಗಿರುವ ಸಂಭ್ರಮದಲ್ಲಿರುವ ನಟಿ ಮುಂಬರುವ ದಿನಗಳಲ್ಲಿ ಚಿತ್ರರಂಗಕ್ಕೆ ಮತ್ತೆ ಎಂಟ್ರಿ ನೀಡುತ್ತರಾ ಅನ್ನುವುದನ್ನು ಕಾದು ನೋಡಬೇಕಿದೆ.