ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನಟ ಪವನ್ ಕಲ್ಯಾಣ್ ವೈವಾಹಿಕ ಜೀವನದಲ್ಲಿ ಬಿರುಕು; 3ನೇ ಪತ್ನಿಗೂ ವಿಚ್ಛೇದನ ನೀಡಿದ ಆಂಧ್ರ ಡಿಸಿಎಂ

Pawan Kalyan Divorce: ಟಾಲಿವುಡ್‌ನ ಜನಪ್ರಿಯ ನಟ ಹಾಗೂ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್‌ ಕಲ್ಯಾಣ್‌ ಅವರ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದೆ. ಪವನ್‌ ಕಲ್ಯಾಣ್‌ ಮತ್ತು ಅವರ ಮೂರನೇ ಪತ್ನಿ ಅನ್ನಾ ಕೊನಿಡೆಲಾ ತಮ್ಮ 13 ವರ್ಷಗಳ ವೈವಾಹಿಕ ಜೀವನವನ್ನು ಕೊನೆಗೊಳಿಸಿದ್ದಾರೆ.

ಪವನ್ ಕಲ್ಯಾಣ್ ವೈವಾಹಿಕ ಜೀವನದಲ್ಲಿ ಬಿರುಕು

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Nov 10, 2026 8:46 AM

ಹೈದರಾಬಾದ್‌: ಟಾಲಿವುಡ್‌ನ ಜನಪ್ರಿಯ ನಟ ಹಾಗೂ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್‌ ಕಲ್ಯಾಣ್‌ ಅವರ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದೆ. ಪವನ್‌ ಕಲ್ಯಾಣ್‌ (Pawan Kalyan) ಮತ್ತು ಅವರ ಮೂರನೇ ಪತ್ನಿ ಅನ್ನಾ ಕೊನಿಡೆಲಾ (Anna Konidala) ತಮ್ಮ 13 ವರ್ಷಗಳ ವೈವಾಹಿಕ ಜೀವನವನ್ನು ಕೊನೆಗೊಳಿಸಿದ್ದಾರೆ. ಇಬ್ಬರೂ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆಯುತ್ತಿರುವುದಾಗಿ ಜಂಟಿ ಪ್ರಕಟಣೆಯ ಮೂಲಕ ಅಧಿಕೃತವಾಗಿ ಸ್ಪಷ್ಟಪಡಿಸಿದ್ದಾರೆ.

ಕಳೆದ ಕೆಲವು ಸಮಯದಿಂದ ಇಬ್ಬರ ನಡುವಿನ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂಬ ವದಂತಿಗಳು ಹರಿದಾಡುತ್ತಿದ್ದವು. ಇದೀಗ ಈ ಎಲ್ಲಾ ಊಹಾಪೋಹಗಳಿಗೆ ದಂಪತಿ ಜಂಟಿ ಹೇಳಿಕೆಯ ಮೂಲಕ ತೆರೆ ಎಳೆದಿದ್ದಾರೆ.



ವೈವಾಹಿಕ ಸಂಬಂಧ ಮುರಿದುಬಿದ್ದಿದ್ದರೂ, ಮುಂದಿನ ದಿನಗಳಲ್ಲಿ ತಾವಿಬ್ಬರೂ ಉತ್ತಮ ಸ್ನೇಹಿತರಾಗಿ ಮುಂದುವರಿಯುವುದಾಗಿ ದಂಪತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. "ನಮ್ಮ ದಾಂಪತ್ಯ ಜೀವನವನ್ನು ಕೊನೆಗೊಳಿಸಲು ನಾವು ಜಂಟಿಯಾಗಿ ನಿರ್ಧರಿಸಿದ್ದೇವೆ. ಆದರೆ ಒಬ್ಬರಿಗೊಬ್ಬರು ಗೌರವ ನೀಡುವ ಆತ್ಮೀಯ ಸ್ನೇಹಿತರಾಗಿ ನಮ್ಮ ಬಾಂಧವ್ಯ ಮುಂದುವರಿಯಲಿದೆ" ಎಂದು ಅವರು ಹೇಳಿದ್ದಾರೆ.

ಮಕ್ಕಳ ಯೋಗಕ್ಷೇಮಕ್ಕೆ ಮೊದಲ ಆದ್ಯತೆ
ತಮ್ಮ ವೈಯಕ್ತಿಕ ನಿರ್ಧಾರವು ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರದಂತೆ ಜಾಗ್ರತೆ ವಹಿಸುವುದಾಗಿ ಇಬ್ಬರೂ ತಿಳಿಸಿದ್ದಾರೆ. "ನಮ್ಮ ಮಕ್ಕಳ ಸಂತೋಷ, ಯೋಗಕ್ಷೇಮ ಮತ್ತು ಅವರ ಭವಿಷ್ಯವೇ ನಮಗೆ ಅತ್ಯಂತ ಮುಖ್ಯವಾಗಿದೆ. ಅವರಿಗೆ ಜವಾಬ್ದಾರಿಯುತ ಪೋಷಕರಾಗಿ ನಾವು ಸದಾ ಜೊತೆಯಾಗಿ ನಿಲ್ಲಲಿದ್ದೇವೆ" ಎಂದು ದಂಪತಿ ವಿವರಿಸಿದ್ದಾರೆ. ಇದೇ ವೇಳೆ, ಇದು ತಮಗೆ ಅತ್ಯಂತ ಸೂಕ್ಷ್ಮ ಸಮಯವಾಗಿದ್ದು, ಅಭಿಮಾನಿಗಳು ಹಾಗೂ ಮಾಧ್ಯಮಗಳು ತಮ್ಮ ವೈಯಕ್ತಿಕ ಗೌಪ್ಯತೆಯನ್ನು ಗೌರವಿಸಬೇಕು ಎಂದು ಅವರು ವಿನಂತಿಸಿಕೊಂಡಿದ್ದಾರೆ.

Pawan Kalyan: ಪವನ್ ಕಲ್ಯಾಣ್ ಮೂರನೇ ವಿಚ್ಛೇದನಕ್ಕೆ ನೆಟ್ಟಿಗರ ಪ್ರತಿಕ್ರಿಯೆ ಹೇಗಿತ್ತು?

1997 ರಲ್ಲಿ ನಂದಿನಿ ಎಂಬುವವರನ್ನು ಮೊದಲ ಬಾರಿಗೆ ವಿವಾಹವಾಗಿದ್ದ ಪವನ್, 2008 ರಲ್ಲಿ ಅವರಿಂದ ಕಾನೂನುಬದ್ಧವಾಗಿ ಬೇರೆಯಾಗಿದ್ದರು. ನಂತರ 2009 ರಲ್ಲಿ ತಮ್ಮದೇ ಸಿನಿಮಾಗಳ ನಟಿ ರೇಣು ದೇಸಾಯಿ ಅವರನ್ನು ಎರಡನೇ ಮದುವೆಯಾಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದು, 2012 ರಲ್ಲಿ ಇವರೂ ಸಹ ವಿಚ್ಛೇದನ ಪಡೆದರು. ತದನಂತರ 'ತೀನ್ ಮಾರ್' ಚಿತ್ರದ ಚಿತ್ರೀಕರಣದ ವೇಳೆ ಪರಿಚಯವಾಗಿದ್ದ ರಷ್ಯಾ ಮೂಲದ ಮಾಡೆಲ್ ಮತ್ತು ನಟಿ ಅನ್ನಾ ಲೆಜ್ನೆವಾ ಅವರನ್ನು ಪವನ್ ಕಲ್ಯಾಣ್ 2013 ರಲ್ಲಿ ಮೂರನೇ ವಿವಾಹವಾಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.