ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss: ಬಿಗ್​​ಬಾಸ್ ವಿರುದ್ಧ ಕೇಳಿ ಬಂತು ಅಪಸ್ವರ, ಶೋ ನಿಲ್ಲಿಸುವಂತೆ ಒತ್ತಾಯ

ಬಿಗ್‌ ಬಾಸ್‌ ರಿಯಾಲಿಟಿ (Bigg Boss Relaity Show) ಶೋ ಹಲವು ಭಾಷೆಗಳಲ್ಲಿ ಪ್ರಸಾರ ಕಾಣುತ್ತಿದೆ. ಈಗಾಗಲೇ ಹಿಂದಿ, ತಮಿಳು ಸೇರಿದಂತೆ ಕನ್ನಡದಲ್ಲಿಯೂ ಟಿಆರ್‌ಪಿ ಪಡೆದು ಮುನ್ನುಗ್ಗುತ್ತಿದೆ. ಮಲಯಾಳಂ (Malayalam Bigg Boss) ಬಿಗ್‌ ಬಾಸ್‌ ಮುಗಿದು ವಿನ್ನರ್‌ (winner) ಕೂಡ ಅನೌನ್ಸ್‌ ಆಗಿದೆ. ಹೀಗಿರುವಾಗ ಇದೀಗ ರಾಜಕೀಯ ಪಕ್ಷವೊಂದು ಬಿಗ್​​ಬಾಸ್ ಶೋ ವಿರುದ್ಧ ಪ್ರತಿಭಟನೆ (Protest) ನಡೆಸಿದೆ. ಬಿಗ್​ಬಾಸ್ ಶೋ ಬಂದ್ ಮಾಡುವಂತೆ ಒತ್ತಾಯಿಸಿದೆ. ಏನಿದು ಪ್ರಕರಣ?

ಬಿಗ್​​ಬಾಸ್ ವಿರುದ್ಧ ಕೇಳಿ ಬಂತು ಅಪಸ್ವರ, ಶೋ ನಿಲ್ಲಿಸುವಂತೆ ಒತ್ತಾಯ

Bigg Boss Tamil season 9 -

Yashaswi Devadiga
Yashaswi Devadiga Nov 11, 2025 7:30 PM

ಬಿಗ್ ಬಾಸ್ ತಮಿಳು ಸೀಸನ್ 9 (Bigg Boss Tamil 9) ಪ್ರಸಾರವಾದ ಒಂದು ವಾರದ ನಂತರ ವಿವಾದಕ್ಕೆ ಸಿಲುಕಿದೆ. ತಮಿಳು ಸಂಸ್ಕೃತಿಯನ್ನು ಅಗೌರವಿಸುತ್ತದೆ ಎಂದು ಆರೋಪಿಸಿ, ರಾಜಕೀಯ ಪಕ್ಷ ತಮಿಳುನಾಡಿನಲ್ಲಿ ರಿಯಾಲಿಟಿ ಶೋ ಅನ್ನು ನಿಷೇಧಿಸಬೇಕೆಂದು ಕರೆ ನೀಡಿದೆ.

ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ತಮಿಳು ನಾಗರಿಕರ "ಸಂಸ್ಕೃತಿ, ನೈತಿಕತೆ ಮತ್ತು ಮೌಲ್ಯಗಳನ್ನು ನಾಶಪಡಿಸುತ್ತಿದೆ" ಎಂದು ಆರೋಪಿಸಿ, ತಮಿಳಗ ವಾಜ್ವುರಿಮೈ ಕಚ್ಚಿ (ಟಿವಿಕೆ) ಚೆನ್ನೈನಲ್ಲಿ ಬೃಹತ್ ಪ್ರತಿಭಟನೆ ನಡೆಸಿತ್ತು .

ತಮಿಳು ಸಮುದಾಯಕ್ಕೆ ಹಾನಿ ಉಂಟುಮಾಡುತ್ತಿರುವ ಕಾರ್ಯಕ್ರಮವನ್ನು ವಿರೋಧಿಸಿ ಪ್ರತಿಭಟನಾಕಾರರು ವಿಜಯ್ ಸೇತುಪತಿ ಅವರ ಪ್ರತಿಕೃತಿಗಳನ್ನು ಹೊಡೆಯಲು ಮುಂದಾದಾಗ, ಸುರಕ್ಷತೆಗಾಗಿ 100 ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳನ್ನು ವೆಲ್ಸ್ ಫಿಲ್ಮ್ ಸಿಟಿ ಬಳಿ ನಿಯೋಜಿಸಲಾಗಿತ್ತು. ಟಿವಿಕೆ ಆಡಳಿತ ಪಕ್ಷವಾದ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ನ ಮಿತ್ರ ಪಕ್ಷವಾಗಿದೆ.

ಇದನ್ನೂ ಓದಿ: Bigg Boss Kannada 12: ಮಾಳು ನೇರನುಡಿ ಮನೆಯವರಿಗೆ ಅರಗಿಸಿಕೊಳ್ಳೋಕೆ ಆಗ್ತಿಲ್ವಾ? ರಾಶಿಕಾ ಕಣ್ಣೀರು, ಅಶ್ವಿನಿ ಗರಂ

ಹಣವೇ ಮುಖ್ಯವೇ?

ರಾಜಕೀಯ ಪಕ್ಷದ ನಾಯಕ ಮತ್ತು ಶಾಸಕ ವೇಲುಮುರುಗನ್ ಈ ಬಗ್ಗೆ ಮಾತನಾಡಿ, ಈ ಕಾರ್ಯಕ್ರಮದಲ್ಲಿ " ಚುಂಬನ ದೃಶ್ಯಗಳು ಮತ್ತು ಮಲಗುವ ಕೋಣೆ ದೃಶ್ಯಗಳು" ಪ್ರಸಾರವಾಗುತ್ತಿವೆ ಎಂದು ಹೇಳಿದರು. ʻಹಣವೇ ಮುಖ್ಯ ಎಂಬ ಆಧಾರದ ಮೇಲೆ ಅವರು ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ" ಎಂದು ಅವರು ಹೇಳಿದರು. ಬಿಗ್ ಬಾಸ್ ತಮಿಳು ಕಾರ್ಯಕ್ರಮದ ವಿಷಯವು ಎಲ್ಲಾ ವರ್ಗದ ಪ್ರೇಕ್ಷಕರಿಗೆ ಸ್ನೇಹಪರವಾಗಿಲ್ಲ ಎಂದು ಟೀಕಿಸಿದರು.



ಶೋನಲ್ಲಿ ಲೈಂಗಿಕತೆ ದೃಶ್ಯವನ್ನು ತೋರಿಸುವುದನ್ನು ಹೊರತುಪಡಿಸಿ ಇನ್ನೆಲ್ಲವನ್ನೂ ತೋರಿಸಲಾಗುತ್ತಿದೆ. ಯುವಕರು ಮತ್ತು ಮಕ್ಕಳ ಸಮ್ಮುಖದಲ್ಲಿ ಈ ಶೋ ನೋಡಲಾಗುವುದಿಲ್ಲ ಎಂದು ಅವರು ಹೇಳಿದರು. ಇಂತಹ ಅಸಹ್ಯಕರ, ಕೀಳು, ಅಸಭ್ಯ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಹಣ ಗಳಿಸಬೇಕೇ ಎಂಬುದು ನನ್ನ ಪ್ರಶ್ನೆ ಎಂದು ಹೇಳಿರುವುದಾಗಿ ವರದಿಯಾಗಿದೆ.

ಪ್ರತಿಭಟನೆ ಮಾಡುತ್ತೇವೆ

"ವಿಧಾನಸಭೆ ಅಧ್ಯಕ್ಷ ಅಪ್ಪನ್ ಅವರಿಗೆ ಪತ್ರ ಬರೆದಿದ್ದು, ಶೋ ಮೇಲೆ ನಿಷೇಧ ಹೇರಬೇಕು ಎಂದು ಮನವಿ ಮಾಡಿದ್ದೇನೆ. ಸ್ಪೀಕರ್ ಈ ಪ್ರಸ್ತಾವನೆಯನ್ನು ಚರ್ಚೆಗೆ ಒಪ್ಪಿಕೊಳ್ಳದಿದ್ದರೆ ಮತ್ತು ಮುಖ್ಯಮಂತ್ರಿ ಹಾಗೂ ಐಟಿ ಮತ್ತು ಪ್ರಸಾರ ಇಲಾಖೆಗಳು ಅದನ್ನು ನಿಷೇಧಿಸದಿದ್ದರೆ, ನಾವು ಬಿಗ್ ಬಾಸ್ ಒಳಗೆ ಸಾವಿರಾರು ಮಹಿಳೆಯರೊಂದಿಗೆ ನುಗ್ಗಿ ಪ್ರತಿಭಟನೆ ನಡೆಸುತ್ತೇವೆ" ಎಂದು ಅವರು ಹೇಳಿದರು.

ಇದನ್ನೂ ಓದಿ: Bigg Boss Kannada: ಮನೆಯವರಿಗೆ ಬಕ್ರಾ ಮಾಡಿರೋ ಕಿಲಾಡಿ ಜೋಡಿಯ ಸಂಚು ರಿವೀಲ್‌! ಗಿಲ್ಲಿ ಹೇಳಿದ್ದು ಕೊನೆಗೂ ಸತ್ಯವಾಯ್ತು

ವಿಜಯ್ ಸೇತುಪತಿ ಸತತ ಎರಡನೇ ಬಾರಿಗೆ ನಿರೂಪಕ

ಬಿಗ್ ಬಾಸ್ ತಮಿಳು ಸೀಸನ್ 9 ಪ್ರಸ್ತುತ ವಿಜಯ್ ಟಿವಿಯಲ್ಲಿ ಪ್ರಸಾರವಾಗುತ್ತಿದೆ. ಈ ಕಾರ್ಯಕ್ರಮವು 24 ಸ್ಪರ್ಧಿಗಳೊಂದಿಗೆ ಪ್ರಾರಂಭವಾಯಿತು. ಆರು ಸದಸ್ಯರನ್ನು ಈಗಾಗಲೇ ಹೊರಹಾಕಲಾಗಿದ್ದು, ಒಬ್ಬ ಮನೆಯ ಸದಸ್ಯ ಕಾರ್ಯಕ್ರಮದಿಂದ ಹೊರನಡೆದಿದ್ದಾರೆ. ಈ ಸೀಸನ್‌ಗೆ ವಿಜಯ್ ಸೇತುಪತಿ ಸತತ ಎರಡನೇ ಬಾರಿಗೆ ನಿರೂಪಕರಾಗಿ ಮರಳಿದ್ದರು.

ಬಿಗ್ ಬಾಸ್ ತಮಿಳು ಸೀಸನ್ 9 ಅನ್ನು ಈ ಹಿಂದೆ ಕಮಲ್ ಹಾಸನ್ ನಿರೂಪಣೆ ಮಾಡಿದ್ದರು ಮತ್ತು ವಿಜಯ್ ಸೇತುಪತಿ ಸೀಸನ್ 8 ರಲ್ಲಿ ಅಧಿಕಾರ ವಹಿಸಿಕೊಂಡರು. ಸ್ಪರ್ಧಿಗಳಲ್ಲಿ ನಟರು, ಪ್ರಭಾವಿಗಳು, ಮಾಡೆಲ್‌ಗಳು, ಹಾಸ್ಯನಟರು ಮತ್ತು ದೂರದರ್ಶನ ನಿರೂಪಕರು ಕೂಡ ಸೇರಿದ್ದಾರೆ.