ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Imanvi: "ಪಾಕ್‌ ಜೊತೆ ಈಕೆಗೆ ನಂಟು ಸಿನಿಮಾದಿಂದ ಕಿತ್ತೊಗೆಯಿರಿ" ; ಪ್ರಭಾಸ್‌ ಹೊಸ ಸಿನಿಮಾ ನಾಯಕಿ ಮೇಲೆ ಏನಿದು ಆರೋಪ?

ಪಹಲ್ಗಾಮ್‌ನಲ್ಲಿ ಸೋಮವಾರ ನಡೆದ ಉಗ್ರರ ಭೀಕರ ದಾಳಿಗೆ ಈ ವರೆಗೆ 26 ಮಂದಿ ಮೃತಪಟ್ಟಿದ್ದಾರೆ. ಈ ಹಿನ್ನೆಲೆ ಪಾಕ್ ಕಲಾವಿದರನ್ನು ಭಾರತದ ಸಿನಿಮಾದಿಂದ ಹೊರಗಿಡುವ ಕುರಿತು ಚರ್ಚೆ ಶುರುವಾಗಿದೆ. ಇದರ ನಡುವೆ ಶೂಟಿಂಗ್‌ ನಡೆಯುತ್ತಿರುವ ಪ್ರಭಾಸ್‌ ನಟನೆಯ ಫೌಝಿ ಸಿನಿಮಾ ನಾಯಕಿ ಇಮಾನ್ವಿ ಅವರನ್ನು ಚಿತ್ರದಿಂದ ಕೈಬಿಡುವಂತೆ ಎಲ್ಲಡೆ ಕೂಗು ಕೇಳಿ ಬರುತ್ತಿದೆ.

ಮುಂಬೈ: ಪಹಲ್ಗಾಮ್‌ನಲ್ಲಿ ಸೋಮವಾರ ನಡೆದ ಉಗ್ರರ ಭೀಕರ ದಾಳಿಗೆ ಈ ವರೆಗೆ 26 ಮಂದಿ ಮೃತಪಟ್ಟಿದ್ದಾರೆ. ಈ ಹಿನ್ನೆಲೆ ಪಾಕ್ ಕಲಾವಿದರನ್ನು ಭಾರತದ ಸಿನಿಮಾದಿಂದ ಹೊರಗಿಡುವ ಕುರಿತು ಚರ್ಚೆ ಶುರುವಾಗಿದೆ. ಇದರ ನಡುವೆ ಶೂಟಿಂಗ್‌ ನಡೆಯುತ್ತಿರುವ ಪ್ರಭಾಸ್‌ ನಟನೆಯ ಫೌಝಿ ಸಿನಿಮಾ ನಾಯಕಿ ಇಮಾನ್ವಿ (Imanvi) ಅವರನ್ನು ಚಿತ್ರದಿಂದ ಕೈಬಿಡುವಂತೆ ಎಲ್ಲಡೆ ಕೂಗು ಕೇಳಿ ಬರುತ್ತಿದೆ. ಚಿತ್ರದ ನಾಯಕಿ ಇಮಾನ್ವಿ (Imanvi) ಪಾಕಿಸ್ತಾನಿ, ಅವರನ್ನು ಚಿತ್ರದಿಂದ ತೆಗೆದು ಹಾಕುವಂತೆ ನೆಟ್ಟಿಗರು ಪಟ್ಟು ಹಿಡಿದಿದ್ದಾರೆ. ಸದ್ಯ ನಟಿ ಈ ಕುರಿತು ಪ್ರತಿಕ್ರಿಯೆ ನೀಡಿ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್‌ ಹಾಕಿದ್ದಾರೆ.

ಮುಂಬರಲಿರುವ ಪ್ರಭಾಸ್‌ ಅವರ ಚಿತ್ರ ಫೌಝಿ ಶೂಟಿಂಗ್‌ ಪ್ರಾರಂಭವಾಗಿದೆ. ಅದರ ನಾಯಕಿ ಇಮಾನ್ವಿ ಪಾಕಿಸ್ತಾನದವರು ಎಂದು ಎಲ್ಲಡೆ ಕೇಳಿಬರುತ್ತಿದೆ. ಇಮಾನ್ವಿ ಅವರ ತಂದೆ ಮಾಜಿ ಪಾಕಿಸ್ಥಾನಿ ಆರ್ಮಿ ಆಫೀಸರ್ ಆಗಿದ್ದರು ಎಂದು ಕೆಲವರು ಹೇಳಿದ್ದಾರೆ. ಇದೀಗ ಈ ಕುರಿತು ಇಮಾನ್ವಿ ಅವರೇ ಪ್ರತಿಕ್ರಿಯೆ ನೀಡಿದ್ದಾರೆ. ಅವರು, ನನಗೂ ಹಾಗೂ ನನ್ನ ಕುಟುಂಬಕ್ಕೂ ಪಾಕಿಸ್ತಾನದ ಜೊತೆ ನಂಟಿಲ್ಲ ಎಂದು ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಇಮಾನ್ವಿ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ, ಪಹಲ್ಗಾಮ್‌ನಲ್ಲಿ ನಡೆದ ದುರಂತದಲ್ಲಿ ಮೃತಪಟ್ಟವರಿಗೆ ‘ಫೌಜಿ’ ನಟಿ ಸಂತಾಪ ಸೂಚಿಸಿದ್ದಾರೆ. ಕಲಾವಿದೆಯಾಗಿ ನನಗೆ ಪ್ರೀತಿ ಹಂಚುವುದು ಗೊತ್ತೇ ಹೊರತು, ದ್ವೇಷವಲ್ಲ. ಕಳೆದ ಎರಡ್ಮೂರು ದಿನಗಳಿಂದ ಕೇಳಿ ಬರುತ್ತಿರುವ ಆರೋಪಗಳೆಲ್ಲಾ ಶುದ್ಧ ಸುಳ್ಳು. ನಾನು ಪಾಕಿಸ್ತಾನಿಯಲ್ಲ, ನನಗೆ ಅಥವಾ ನನ್ನ ಕುಟುಂಬಕ್ಕೆ ಪಾಕ್ ಸೇನೆಯೊಂದಿಗೆ ನಂಟಿಲ್ಲ ಎಂದಿದ್ದಾರೆ. ದ್ವೇಷ ಹರಡುವವರ ಬಗ್ಗೆ ನಟಿ ಕಿಡಿ ಕಾರಿದ್ದಾರೆ.

Imanvi (1)

ಈ ಸುದ್ದಿಯನ್ನೂ ಓದಿ: Pahalgam Terror Attack: ''ಹಂದಿಗೆ ಲಿಪ್‌ಸ್ಟಿಕ್ ಹಚ್ಚಿದರೂ ಅದು ಹಂದಿಯೇ'': ಪಹಲ್ಗಾಮ್ ದಾಳಿಯ ಬಗ್ಗೆ ಅಮೆರಿಕ ಮಾಜಿ ಅಧಿಕಾರಿ ಕಿಡಿ

ನಾನು ಹಿಂದಿ, ತೆಲುಗು, ಗುಜರಾತಿ ಮತ್ತು ಇಂಗ್ಲಿಷ್ ಮಾತನಾಡುವ ಹೆಮ್ಮೆಯ ಭಾರತೀಯ ಅಮೆರಿಕನ್. ನನ್ನ ಹೆತ್ತವರು ಅಮೆರಿಕಕ್ಕೆ ಕಾನೂನುಬದ್ಧವಾಗಿ ವಲಸೆ ಹೋಗಿದ್ದರು. ನಾನು ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‌ನಲ್ಲಿ ಹುಟ್ಟಿದೆ. ಭಾರತೀಯ ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡುವ ಅವಕಾಶ ಪಡೆದಿರೋದರ ಬಗ್ಗೆ ಖುಷಿಯಿದೆ. ಇಲ್ಲಿನ ಸಂಸ್ಕೃತಿ, ಸಂಪ್ರದಾಯದ ಬಗ್ಗೆ ಗೌರವವಿದೆ ಹಾಗೂ ನಂಟಿದೆ. ಈ ರೀತಿ ಸುಳ್ಳು ಸುದ್ದಿಗಳನ್ನು ದಯವಿಟ್ಟು ಯಾರು ಹರಡಬೇಡಿ ಎಂದು ಅವರು ವಿನಂತಿಸಿಕೊಂಡಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ ಡ್ಯಾನ್ಸ್ ವಿಡಿಯೋ ಹಂಚಿಕೊಳ್ಳುತ್ತಿದ್ದ ಅವರ ನೃತ್ಯ ಹಿಡಿಸಿ ನಿರ್ದೇಶಕ ರಘು ಹನುಪುಡಿ ಅವರು ಇಮಾನ್ವಿಗೆ ಸಿನಿಮಾ ಅವಕಾಶ ನೀಡಿದ್ದಾರೆ.