ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

The Raja Saab: 'ಪ್ಯಾನ್‌ ಇಂಡಿಯಾ ಸ್ಟಾರ್‌' ಪ್ರಭಾಸ್‌ಗಾಗಿ ರೆಬೆಲ್‌ ಸಾಂಗ್‌ ಹಾಡಿದ 'ಕನ್ನಡಿಗ' ಸಂಜಿತ್ ಹೆಗ್ಡೆ; ಹಾಡು ಕೇಳಿದ್ಮೇಲೆ ‌'ಡಾರ್ಲಿಂಗ್‌' ಫ್ಯಾನ್ಸ್‌ ಥ್ರಿಲ್

Rebel Saab Song: ಪ್ರಭಾಸ್ ನಟನೆಯ ಬಹುನಿರೀಕ್ಷಿತ `ದಿ ರಾಜಾ ಸಾಬ್' ಸಿನಿಮಾದ ಮೊದಲ ಹಾಡು 'ರೆಬೆಲ್‌ ಸಾಬ್‌' ಬಿಡುಗಡೆಯಾಗಿದೆ. ಇದು ಪಕ್ಕಾ ಟಪ್ಪಾಂಗುಚ್ಚಿ ಸ್ಟೈಲ್‌ನಲ್ಲಿದ್ದು, ಪ್ರಭಾಸ್ ಸಖತ್ ಸ್ಟೈಲಿಶ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಈ ಹಾಡಿನ ಕನ್ನಡ ಮತ್ತು ಮೂಲ ತೆಲುಗು ವರ್ಷನ್‌ಗಳಿಗೆ ಕನ್ನಡಿಗ ಸಂಜಿತ್ ಹೆಗ್ಡೆ ದ್ವನಿ ನೀಡಿರುವುದು ವಿಶೇಷ.

ಈ ವರ್ಷ ಪ್ರಭಾಸ್‌ ಅವರ ಪೂರ್ಣಪ್ರಮಾಣದ ಸಿನಿಮಾಗಳ್ಯಾವುವು ಬಂದಿಲ್ಲ. ಬಾಹುಬಲಿ ದಿ ಎಪಿಕ್‌ ರೀ- ರಿಲೀಸ್‌ ಲೆಕ್ಕ! ಕಣ್ಣಪ್ಪದಲ್ಲಿ ಅತಿಥಿ ಪಾತ್ರ. ಮಿರಾಯ್‌ ಸಿನಿಮಾದಲ್ಲಿ ವಾಯ್ಸ್‌ ಓವರ್! ಕಳೆದ ವರ್ಷ ತೆರೆಕಂಡಿದ್ದ ʻಕಲ್ಕಿ 2898 ಎಡಿʼ ಸಿನಿಮಾ ಹಿಟ್‌ ಆಗಿತ್ತು. ಈ ವರ್ಷ ಪ್ರಭಾಸ್‌ ನಟನೆಯ ಯಾವುದೇ ಸಿನಿಮಾ ಬಾರದೇ ಇರುವ ಕಾರಣ, ಮುಂದಿನ ವರ್ಷದ ಆರಂಭದಲ್ಲಿಯೇ ರಿಲೀಸ್‌ ಆಗುವ ದಿ ರಾಜಾ ಸಾಬ್‌ ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಇದೆ. ಸದ್ಯ ʻಡಾರ್ಲಿಂಗ್‌ʼ ಪ್ರಭಾಸ್‌ ಅವರ ʻದಿ ರಾಜಾ ಸಾಬ್ʼ ಸಿನಿಮಾದ ಮೊದಲ ಹಾಡು ರಿಲೀಸ್‌ ಆಗಿದೆ.

ʻರೆಬೆಲ್‌ ಸಾಬ್ʼ ಸಾಂಗ್‌ ರಿಲೀಸ್‌

ಪ್ರಭಾಸ್‌ ನಾಯಕನಾಗಿ ನಟಿಸಿರುವ ʻದಿ ರಾಜಾ ಸಾಬ್ʼ ಸಿನಿಮಾ ಟ್ರೇಲರ್‌ ಮೂಲಕವೇ ಕೌತುಕ ಸೃಷ್ಟಿಸಿದೆ. ಈ ಸಿನಿಮಾ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿವೆ. ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ತೆರೆಗೆ ಬರುವುದರಿಂದ ಹಿಂದಿ ಬೆಲ್ಟ್‌ನಲ್ಲಿಯೂ ಈ ಚಿತ್ರಕ್ಕೆ ದೊಡ್ಡ ಬೇಡಿಕೆ ಸೃಷ್ಟಿಯಾಗಿದೆ. ಇದೀಗ ಸಿನಿಮಾದ ಪ್ರಚಾರ ಕೆಲಸದಲ್ಲಿಯೂ ಚಿತ್ರತಂಡ ಬ್ಯುಸಿ ಆಗಿದ್ದು, ಆ ಹಿನ್ನೆಲೆಯಲ್ಲಿ ʻರೆಬೆಲ್‌ ಸಾಬ್ʼ ಸಾಂಗ್‌ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

Prabhas: ವದಂತಿಗಳಿಗೆ ತೆರೆ ಎಳೆದ ಚಿತ್ರತಂಡ; ಪ್ರಭಾಸ್‌ ‘ದಿ ರಾಜಾಸಾಬ್’ ಬಿಗ್‌ ಅಪ್‌ಡೇಟ್‌

ಪಕ್ಕಾ ಟಪ್ಪಾಂಗುಚ್ಚಿ ಶೈಲಿಯಲ್ಲಿ ಮೂಡಿಬಂದಿರುವ ʻರೆಬಲ್‌ ಸಾಬ್‌ʼ ಹಾಡಿನಲ್ಲಿ ಪ್ರಭಾಸ್‌ ಸಖತ್‌ ಸ್ಟೈಲಿಶ್‌ ಆಗಿ ಕಂಡಿದ್ದಾರೆ. ಕಲರ್‌ಫುಲ್‌ ಬಟ್ಟೆ ಧರಿಸಿ, ಹಾಡಿಗೆ ಮಸ್ತ್‌ ಮಸ್ತ್‌ ಡಾನ್ಸ್‌ ಮಾಡಿದ್ದಾರೆ. ಈ ಮೂಲಕ ಸಿನಿಮಾ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಿದ್ದು, ಅಭಿಮಾನಿ ವಲಯದಲ್ಲಿ ಸಂಭ್ರಮ ದುಪ್ಪಟ್ಟಾಗಿದೆ.

ಕನ್ನಡಿಗ ಸಂಜಿತ್‌ ಹೆಗ್ಡೆ ಗಾಯನ

ಅಂದಹಾಗೆ, 'ದಿ ರಾಜಾ ಸಾಬ್‌' ಸಿನಿಮಾಕ್ಕೆ ಸಂಗೀತ ನೀಡಿರುವುದು ಖ್ಯಾತ ಸಂಗೀತ ಸಂಯೋಜಕ ಥಮನ್‌ ಎಸ್. ವಿಶೇಷವೆಂದರೆ, ʻದಿ ರಾಜಾ ಸಾಬ್‌ʼ ಸಿನಿಮಾದ ಮೂಲ ತೆಲುಗು ವರ್ಷನ್‌ ಮತ್ತು ಕನ್ನಡ ವರ್ಷನ್‌ ಅನ್ನು ಹಾಡಿರುವುದು ಕನ್ನಡಿಗ ಸಂಜಿತ್‌ ಹೆಗ್ಡೆ. ಮಿಕ್ಕಂತೆ ಉಳಿದ ಭಾಷೆಗಳಲ್ಲಿ ಬೇರೆ ಬೇರೆ ಗಾಯಕರು ಈ ಹಾಡನ್ನು ಹಾಡಿದ್ದಾರೆ. ಪ್ರಭಾಸ್‌ಗೆ ಫ್ಯಾನ್ಸ್‌ಗೆ ಕಿಕ್‌ ನೀಡುವಂತಿದೆ ಈ ಹಾಡು. ಭಾರತದ ಅತಿದೊಡ್ಡ ಹಾರರ್ ಫ್ಯಾಂಟಸಿ ಡ್ರಾಮಾ ಎಂದು ಬಿಂಬಿಸಲಾಗಿರುವ 'ದಿ ರಾಜಾಸಾಬ್' ಚಿತ್ರಕ್ಕಾಗಿ ಭಾರತದಲ್ಲಿಯೇ ಅತಿದೊಡ್ಡ ಹಾರರ್ ಸಿನಿಮಾ ಸೆಟ್ ಹಾಕಲಾಗಿದೆಯಂತೆ.

ಪ್ರಭಾಸ್‌ ಚಿತ್ರದ ಮೂಲಕ ತೆಲುಗಿಗೆ ಕಾಲಿಟ್ಟ ಕನ್ನಡತಿ; ಯಾರಿವರು?

ತೆಲುಗಿನ ಮಾರುತಿ ಕಥೆ ಬರೆದು ನಿರ್ದೇಶನ ಮಾಡಿರುವ ಈ ಹಾರರ್‌ ಕಾಮಿಡಿ ಶೈಲಿಯ ʻದಿ ರಾಜಾ ಸಾಬ್ʼ ಸಿನಿಮಾವನ್ನು ಪೀಪಲ್‌ ಮೀಡಿಯಾ ಫ್ಯಾಕ್ಟರಿ ಸಂಸ್ಥೆ ನಿರ್ಮಾಣ ಮಾಡಿದೆ. ಟಿ ಜಿ ವಿಶ್ವಪ್ರಸಾದ್‌ ಮತ್ತು ಕೃತಿ ಪ್ರಸಾದ್‌ ಈ ಸಿನಿಮಾದ ನಿರ್ಮಾಪಕರು. ಪ್ರಭಾಸ್‌ ಜೊತೆಗೆ ಸಂಜಯ್ ದತ್, ಮಾಳವಿಕಾ ಮೋಹನನ್‌, ನಿಧಿ ಅಗರ್ವಾಲ್‌, ರಿದ್ಧಿ ಕುಮಾರ್‌ ಮತ್ತು ಝರೀನಾ ವಹಾಬ್‌ ಮುಂತಾದವರು ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ.

2026ರ ಜನವರಿ 9ರಂದು ಸಂಕ್ರಾಂತಿ ಹಬ್ಬದ ಪ್ರಯುಕ್ತ ದಿ ರಾಜಾ ಸಾಬ್‌ ಸಿನಿಮಾ ತೆರೆಗೆ ಬರಲಿದೆ. ತೆಲುಗು ಜತೆಗೆ ಕನ್ನಡ, ತಮಿಳು, ಮಲಯಾಳಂ, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಈ ಸಿನಿಮಾ ತೆರೆಗೆ ಬರಲಿದೆ.