ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Actor Prabhas: ಪ್ರಭಾಸ್ ನಟನೆಯ 'ದಿ ರಾಜಾ ಸಾಬ್' ಚಿತ್ರದ ಟ್ರೈಲರ್ ರಿಲೀಸ್ ಡೇಟ್ ಫಿಕ್ಸ್

Raja Saab: ಪ್ರಭಾಸ್‌ ಅವರ ʼರಾಜಾ ಸಾಬ್ʼ ಚಿತ್ರಕ್ಕಾ ಗಿ ಕಾಯ್ತಾ ಇದ್ದ ಫ್ಯಾನ್ಸ್ ಗೆ ಸಿಹಿ ಸುದ್ದಿ ಸಿಕ್ಕಿದೆ. ಬಹುನಿರೀಕ್ಷಿತ ಸಿನಿಮಾ 'ದಿ ರಾಜಾ ಸಾಬ್' ಟ್ರೈಲರ್ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಜತೆಗೆ ಚಿತ್ರದ ಹೊಸ ಪೋಸ್ಟರ್ ಕೂಡ ಬಿಡುಗಡೆಯಾಗಿದ್ದು ಅಭಿಮಾನಿಗಳಲ್ಲಿ ಸಖತ್ ಖುಷಿ ಮೂಡಿಸಿದೆ.

‘ರಾಜಾ ಸಾಬ್' ಚಿತ್ರದ ಟ್ರೈಲರ್ ರಿಲೀಸ್ ಯಾವಾಗ?

Prabhas -

Profile Pushpa Kumari Sep 28, 2025 8:48 PM

ಹೈದರಾಬಾದ್‌: ಈವರೆಗೂ ಆ್ಯಕ್ಷನ್ ಅವತಾರದಲ್ಲಿಯೇ ಹೆಚ್ಚಾಗಿ ಕಾಣಿಸಿಕೊಂಡಿದ್ದ ನಟ ಪ್ರಭಾಸ್ (Prabhas) ಇದೇ ಮೊದಲ ಬಾರಿಗೆ 'ದಿ ರಾಜಾ ಸಾಬ್' ಹಾರರ್ ಚಿತ್ರದ ಮೂಲಕ ಕಮಾಲ್ ಮಾಡಲು ಸಜ್ಜಾಗಿದ್ದಾರೆ. ಇದೀಗ ʼರಾಜಾ ಸಾಬ್ʼ ಸಿನಿಮಾಕ್ಕಾಗಿ ಕಾಯ್ತಾ ಇದ್ದ ಫ್ಯಾನ್ಸ್‌ಗೆ ಸಿಹಿ ಸುದ್ದಿ ಸಿಕ್ಕಿದೆ. ಇದೀಗ ಪ್ರಭಾಸ್ ಅವರ ಬಹು ನಿರೀಕ್ಷಿತ ಸಿನಿಮಾ 'ದಿ ರಾಜಾ ಸಾಬ್' ಟ್ರೈಲರ್ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದೆ. ಜತೆಗೆ ಚಿತ್ರದ ಹೊಸ ಪೋಸ್ಟರ್ ಕೂಡ ಬಿಡುಗಡೆಯಾಗಿದ್ದು, ಅಭಿಮಾನಿಗಳಲ್ಲಿ ಸಖತ್ ಖುಷಿ ಮೂಡಿಸಿದೆ.

ಪ್ರಭಾಸ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹೊಸ ಪೋಸ್ಟರ್ ಶೇರ್ ಮಾಡುವ ಮೂಲಕ ಟ್ರೈಲರ್ ದಿನಾಂಕವನ್ನು ಖಚಿತಪಡಿಸಿದ್ದಾರೆ. ಹೌದು, ಸೆಪ್ಟೆಂಬರ್ 29ರಂದು 'ದಿ ರಾಜಾ ಸಾಬ್' ಚಿತ್ರದ ಟ್ರೈಲರ್ ಬಿಡುಗಡೆಯಾಗಲಿದೆ. ಅದೇ ರೀತಿ ಈ ಹೊಸ ಪೋಸ್ಟರ್‌ನಲ್ಲಿ ನಟ ಸಂಜಯ್ ದತ್ ಅವರ ಹೊಸ ರಗಡ್ ಲುಕ್ ಅನ್ನು ಬಿಡುಗಡೆ ಮಾಡಲಾಗಿದೆ. ಇದನ್ನು ನೋಡಿದ ಅಭಿಮಾನಿಗಳು ಸಖತ್ ಎಕ್ಸೈಟ್ ಆಗಿದ್ದಾರೆ. ಸಿನಿಮಾದಲ್ಲಿ ಪ್ರಭಾಸ್ ದ್ವಿಪಾತ್ರದಲ್ಲಿ ನಟಿಸಿದ್ದು ಮಾಳವಿಕಾ ಮೋಹನನ್, ನಿಧಿ ಅಗರ್ವಾಲ್ ಕೂಡ ಅಭಿನಯಿಸಿದ್ದಾರೆ.

ಈಗಾಗಲೇ ರಿಲೀಸ್ ಆಗಿರುವ 'ದಿ ರಾಜಾ ಸಾಬ್‌' ಸಿನಿಮಾದ ಟೀಸರ್ ಪೋಸ್ಟರ್‌ ವೀಕ್ಷಕರ ಕುತೂಹಲ ಕೆರಳಿಸಿದೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ, ಟಿ.ಜಿ. ವಿಶ್ವ ಪ್ರಸಾದ್ ನಿರ್ಮಾಣದಲ್ಲಿ ಈ ಚಿತ್ರ ಮೂಡಿ ಬರುತ್ತಿದೆ.‌ ಈ ಚಿತ್ರಕ್ಕೆ ಕಾರ್ತಿಕ್ ಪಲನಿ ಛಾಯಾಗ್ರಹಣ ನಿರ್ವಹಿಸುತ್ತಿದ್ದು, ಥಮನ್ ಎಸ್. ಸಂಗೀತ ನೀಡುತ್ತಿದ್ದಾರೆ. ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಯಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ 'ದಿ ರಾಜಾ ಸಾಬ್‌' ಸಿನಿಮಾ ಬಿಡುಗಡೆ ಆಗುತ್ತಿದೆ.

ಇದನ್ನು ಓದಿ:Fraud Rushi Movie: ʼಫ್ರಾಡ್ ಋಷಿʼ ಚಿತ್ರದ ಎರಡನೇ ಹಾಡು ರಿಲೀಸ್‌!

ಈ ಸಿನಿಮಾದಲ್ಲಿ ಹಾರರ್, ಕಾಮಿಡಿ ಜತೆಗೆ ಲವ್ ಸ್ಟೋರಿಯೂ ಸಹ ಇರಲಿದೆ. ಈಗಾಗಲೇ ಬೃಹತ್ ಸೆಟ್​​ಗಳಲ್ಲಿ ‘ದಿ ರಾಜಾ ಸಾಬ್’ ಸಿನಿಮಾವನ್ನು ಶೂಟ್ ಮಾಡಲಾಗಿದೆ. ಸಂಕ್ರಾಂತಿ ಹಬ್ಬದ ಸಂದರ್ಭ‌ ಜನವರಿ 9, 2026 ರಂದು ಬಿಡುಗಡೆ ಮಾಡಲು ಯೋಚಿಸುತ್ತಿರುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ. ಸದ್ಯ ಸಿನಿಮಾದ ಬಗ್ಗೆ ನಿರೀಕ್ಷೆ ಹೆಚ್ಚು ಮಾಡುವಂತೆ ಮಾಡಿದೆ.