ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Prithviraj Sukumaran: SS ರಾಜಮೌಳಿ ಚಿತ್ರದಲ್ಲಿ ʻಕುಂಭʼನಾದ ಪೃಥ್ವಿರಾಜ್ ಸುಕುಮಾರನ್; ಪೋಸ್ಟರ್ ಔಟ್‌

ಮಹೇಶ್ ಬಾಬು - ರಾಜಮೌಳಿ (Rajamouli) ಕಾಂಬಿನೇಷನ್‌ನ ಸಿನಿಮಾದಲ್ಲಿ ಪೃಥ್ವಿರಾಜ್ ಸುಕುಮಾರನ್ (Pruthviraj Sukumaran) ನಟಿಸುತ್ತಿದ್ದು, ಅವರಿಲ್ಲಿ 'ಕುಂಭ' ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮಹೇಶ್ ಬಾಬು ಮತ್ತು ಪ್ರಿಯಾಂಕಾ ಚೋಪ್ರಾ (Priyanka Chopra) ಅಭಿನಯದ ಚಿತ್ರದಲ್ಲಿ ವಿಲನ್‌ ಆಗಿ ನಟಿಸುತ್ತಿದ್ದಾರೆ ಎಂದು ಹೇಳಲಾಗಿದೆ .ವೀಲ್‌ಚೇರ್‌ನಲ್ಲಿ ಕುಳಿತು ರೋಬೋಟಿಕ್ ಬೆಂಬಲದೊಂದಿಗೆ ಶಕ್ತಿಶಾಲಿ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ.

ಭಾರಿ ನಿರೀಕ್ಷೆಯಿಂದ ರಾಜಮೌಳಿ & ಟೀಮ್ ಕುಂಭ (Kumbha) ಫಸ್ಟ್ ಲುಕ್ ರಿಲೀಸ್ ಮಾಡಿದೆ. ನ.15 ರಂದು SSMB 29 ಚಿತ್ರದ ಶೀರ್ಷಿಕೆ, ಮಹೇಶ್ ಬಾಬು (Mahesh Babu) ಲುಕ್ ಮತ್ತು 2 ನಿಮಿಷದ ಪ್ರೋಮೋ ಬಿಡುಗಡೆ ಆಗಲಿದೆ. ಮಹೇಶ್ ಬಾಬು - ರಾಜಮೌಳಿ (Rajamouli) ಕಾಂಬಿನೇಷನ್‌ನ ಸಿನಿಮಾದಲ್ಲಿ ಪೃಥ್ವಿರಾಜ್ ಸುಕುಮಾರನ್ (Pruthviraj Sukumaran) ನಟಿಸುತ್ತಿದ್ದು, ಅವರಿಲ್ಲಿ 'ಕುಂಭ' ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮಹೇಶ್ ಬಾಬು ಮತ್ತು ಪ್ರಿಯಾಂಕಾ ಚೋಪ್ರಾ (Priyanka Chopra) ಅಭಿನಯದ ಚಿತ್ರದಲ್ಲಿ ವಿಲನ್‌ ಆಗಿ ನಟಿಸುತ್ತಿದ್ದಾರೆ ಎಂದು ಹೇಳಲಾಗಿದೆ .

ಇದಕ್ಕೂ ಮುನ್ನ ರಾಜಮೌಳಿ ಅವರು ಚಿತ್ರದ ಬಗ್ಗೆ ದೊಡ್ಡ ಅಪ್‌ಡೇಟ್ ಅನ್ನು ಹಂಚಿಕೊಂಡು ಅಭಿಮಾನಿಗಳಿಗೆ ಪೃಥ್ವಿರಾಜ್ ಅವರ ಫಸ್ಟ್ ಲುಕ್ ಬಗ್ಗೆ ತಿಳಿಸಿದ್ದರು. ವೀಲ್‌ಚೇರ್‌ನಲ್ಲಿ ಕುಳಿತು ರೋಬೋಟಿಕ್ ಬೆಂಬಲದೊಂದಿಗೆ ಶಕ್ತಿಶಾಲಿ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: Bigg Boss Kannada 12: ಧ್ರುವಂತ್‌ರ ಆ ಒಂದು ಮಾತಿಗೆ ಕಾವ್ಯ ಕೆಂಡ! ಆವಾಜ್ ಹಾಕಿದ ಗಿಲ್ಲಿ

ಆಕ್ಷನ್-ಸಾಹಸಮಯ ಮೂವಿ

ಪೃಥ್ವಿರಾಜ್ ಪಾತ್ರದ ಹೆಸರು ಕುಂಭ, ಮಹೇಶ್ ಬಾಬು ಫಸ್ಟ್ ಲುಕ್ ಹಂಚಿಕೊಂಡು ಹೀಗೆ ಬರೆದಿದ್ದಾರೆ: "ಇನ್ನೊಂದು ಬದಿಯಲ್ಲಿ ನಿಂತಿದ್ದೇನೆ... ಕುಂಭದಲ್ಲಿ ನಿನ್ನನ್ನು ನೇರವಾಗಿ ಭೇಟಿಯಾಗುವ ಸಮಯ ಎಂದು ಬರೆದುಕೊಂಡಿದ್ದಾರೆ,

ಮಹೇಶ್ ಬಾಬು ಮತ್ತು ಎಸ್.ಎಸ್. ರಾಜಮೌಳಿ ಮೊದಲ ಬಾರಿಗೆ ಮಾಡುತ್ತಿರುವ ಈ ಚಿತ್ರಕ್ಕೆ SSMB29 ಅಥವಾ ಗ್ಲೋಬ್ ಟ್ರಾಟರ್ ಶೀರ್ಷಿಕೆಯಾಗಿರಲಿದೆ ಎನ್ನಲಾಗಿದೆ. ವರದಿಗಳ ಪ್ರಕಾರ, ಈ ಚಿತ್ರವು ಪ್ರಪಂಚದಾದ್ಯಂತ ನಡೆಯುವ ಆಕ್ಷನ್-ಸಾಹಸಮಯ ಮೂವಿ.



ಅತಿದೊಡ್ಡ ಭಾರತೀಯ ಚಿತ್ರ

SSMB29 ನಲ್ಲಿ ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಮತ್ತು ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರದಲ್ಲಿದ್ದಾರೆ ಮತ್ತು ಇದು ಇದುವರೆಗೆ ಮಾಡಿದ ಅತಿದೊಡ್ಡ ಭಾರತೀಯ ಚಿತ್ರಗಳಲ್ಲಿ ಒಂದಾಗಿ ರೂಪುಗೊಳ್ಳುತ್ತಿದೆ.

ಪೃಥ್ವಿರಾಜ್ ಸುಕುಮಾರನ್ ಅವರ ಕುಂಭ ಪಾತ್ರದ ಫಸ್ಟ್ ಪೋಸ್ಟರ್‌ ಅನ್ನು ಹಂಚಿಕೊಂಡಿರುವ ರಾಜಮೌಳಿ, "ಮೊದಲ ಶಾಟ್ ತೆಗೆದ ತಕ್ಷಣ, ನಾನು ಪೃಥ್ವಿಯ ಬಳಿಗೆ ಹೋಗಿ, 'ನೀವು ನಾನು ನೋಡಿದ ಶ್ರೇಷ್ಠ ನಟರಲ್ಲಿ ಒಬ್ಬರು. ಈ ದುಷ್ಟ, ನಿರ್ದಯ ಮತ್ತು ಶಕ್ತಿಶಾಲಿ ಖಳನಾಯಕ 'ಕುಂಭ'ನಿಗೆ ಜೀವ ತುಂಬಿದ್ದು ನನಗೆ ಅಪಾರ ತೃಪ್ತಿಯನ್ನು ನೀಡಿತು ಎಂದು ಬರೆದುಕೊಂಡಿದ್ದಾರೆ.

ಭಾರಿ ಬಜೆಟ್‌ ಸಿನಿಮಾ

ಕೆ.ಎಲ್.ನಾರಾಯಣ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ʼಎಸ್​ಎಸ್​ಎಂಬಿ 29ʼ ಸಿನಿಮಾದಲ್ಲಿ ಪಾತ್ರವರ್ಗಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ. ಇತ್ತೀಚೆಗಷ್ಟೇ ಸಿನಿಮಾದ ಮುಖ್ಯ ಪಾತ್ರದಲ್ಲಿ ನಟಿಸಲು ಆರ್ .ಮಾಧವನ್ ಅವರಿಗೆ ನಿರ್ಮಾಪ ಕರು ಆಫರ್ ನೀಡಿದ್ದರು ಎನ್ನುವ ಗಾಸಿಪ್ ಹರಿದಾಡಿದೆ.

ಮಹೇಶ್ ಬಾಬು ಜತೆಗೆ ನಟ ಆರ್.ಮಾಧವನ್ ಅವರ ಪಾತ್ರಕ್ಕೂ ಸಾಕಷ್ಟು ಒತ್ತು ನೀಡಲಾಗಗಿದೆ ಎಂದು ಮೂಲಗಳು ತಿಳಿಸಿವೆ. ಒಂದು ಸಾವಿರ ಕೋಟಿ ರೂಪಾಯಿ ಬಜೆಟ್​ನಲ್ಲಿ ಈ ಸಿನಿಮಾ ಸಿದ್ಧವಾಗುತ್ತಿದ್ದು, ಕಲಾವಿದರಿಗೆ ಭಾರಿ ಮೊತ್ತದ ಸಂಭಾವನೆ ನೀಡಲಾಗುತ್ತಿದೆ ಎಂಬ ಸುದ್ದಿ ಕೂಡ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ: Mahanati Season2: ಗೆಲುವಿನ ಟ್ರೋಫಿಗಾಗಿ 5 ಫೈನಲಿಸ್ಟ್‌ಗಳ ಸಾರ್ಥಕ ಯಾನ! ಯಾರಿಗೆ ಸಿಗಲಿದೆ ‘ಮಹಾನಟಿ ಸೀಸನ್ 2’ಕಿರೀಟ?

ರಾಜಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್ ʼಎಸ್ಎಸ್ಎಂಬಿ 29ʼ ಚಿತ್ರಕ್ಕೆ ಕಥೆ ಬರೆದಿದ್ದಾರೆ. ʼಬಾಹುಬಲಿʼ, ʼಮಗಧೀರʼ, ʼಆರ್​ಆರ್​ಆರ್ʼನಂತಹ ಬ್ಲಾಕ್ ಬ್ಲಸ್ಟರ್ ಹಿಟ್ ಸಿನಿಮಾಗಳನ್ನು ನೀಡಿರುವ ರಾಜಮೌಳಿ ಅವರ ಈ ಚಿತ್ರದ ಬಗ್ಗೆ ಸಾಕಷ್ಟು ಕುತೂಹಲ ಮೂಡಿದೆ.

Yashaswi Devadiga

View all posts by this author