ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rajamouli: 120 ದೇಶಗಳಲ್ಲಿ SSMB 29 ರಿಲೀಸ್‌! ಬ್ಯುಸಿ ಶೂಟಿಂಗ್‌ ನಡುವೆಯೇ ಕೀನ್ಯಾ ಸಚಿವರನ್ನು ಭೇಟಿಯಾದ ರಾಜಮೌಳಿ

Rajamouli meets Kenya minister: ಬ್ಯುಸಿ ಶೂಟಿಂಗ್‌ ನಡುವೆಯೇ ನಿರ್ದೇಶಕ ರಾಜಮೌಳಿ ಕೀನ್ಯಾದ ಸಚಿವರೊಬ್ಬರನ್ನು ಭೇಟಿಯಾಗಿದ್ದಾರೆ. ಇನ್ನು ಈ ಫೋಟೋವನ್ನು ಕೀನ್ಯಾ ಸಚಿವ ಮುಸಾಲಿಯಾ ಮುಡವಾಡಿ ಫೋಟೋ ಶೇರ್‌ ಮಾಡಿದ್ದಾರೆ. ಫೋಟೋದಲ್ಲಿ ರಾಜಮೌಳಿ, ಅವರ ಪುತ್ರ ಎಸ್‌.ಎಸ್‌. ಕಾರ್ತಿಕೇಯನ್‌ ಹಾಗೂ ಸಚಿವಾಲಯದ ಇತರ ಅಧಿಕಾರಿಗಳು ಇದ್ದಾರೆ. ಇನ್ನು ಇದೇ ರಾಜಮೌಳಿಯವರು ಸಚಿವರ ಜೊತೆ ಸಿನಿಮಾದ ಬಗ್ಗೆ ಚರ್ಚೆ ನಡೆಸಿದ್ದಾರೆ ಸದ್ಯ ಆಫ್ರಿಕಾದಲ್ಲಿ SSMB 29 ಶೂಟಿಂಗ್‌ ನಡೆಯುತ್ತಿದೆ.

ಬ್ಯುಸಿ ಶೂಟಿಂಗ್‌ ನಡುವೆಯೇ ಕೀನ್ಯಾ ಸಚಿವರನ್ನು ಭೇಟಿಯಾದ ರಾಜಮೌಳಿ

-

Rakshita Karkera Rakshita Karkera Sep 3, 2025 11:32 AM

ನವದೆಹಲಿ: ಎಸ್‌.ಎಸ್‌. ರಾಜಮೌಳಿ(SS Rajamouli) ಮತ್ತು ಸೂಪರ್‌ ಸ್ಟಾರ್‌ ಮಹೇಶ್‌ ಬಾಬು(Mahesh Babu) ಕಾಂಬಿನೇಶನ್‌ನಲ್ಲಿ ಮೂಡಿಬರುತ್ತಿರುವ ಬಹು ನಿರೀಕ್ಷಿತ ಸಿನಿಮಾ SSMB 29 ಶೂಟಿಂಗ್‌ ಭರದಿಂದ ನಡೆಯುತ್ತಿದೆ. ಈ ಸಿನಿಮಾ ಬರೋಬ್ಬರಿ 120 ದೇಶಗಳಲ್ಲಿ ಬಿಡುಗಡೆಗೆ ಚಿತ್ರತಂಡ ನಿರ್ಧರಿಸಿದೆ. ಇದೀಗ ಬ್ಯುಸಿ ಶೂಟಿಂಗ್‌ ನಡುವೆಯೇ ನಿರ್ದೇಶಕ ರಾಜಮೌಳಿ ಕೀನ್ಯಾದ ಸಚಿವರೊಬ್ಬರನ್ನು ಭೇಟಿಯಾಗಿದ್ದಾರೆ. ಇನ್ನು ಈ ಫೋಟೋವನ್ನು ಕೀನ್ಯಾ ಸಚಿವ ಮುಸಾಲಿಯಾ ಮುಡವಾಡಿ ಫೋಟೋ ಶೇರ್‌ ಮಾಡಿದ್ದಾರೆ. ಫೋಟೋದಲ್ಲಿ ರಾಜಮೌಳಿ, ಅವರ ಪುತ್ರ ಎಸ್‌.ಎಸ್‌. ಕಾರ್ತಿಕೇಯನ್‌ ಹಾಗೂ ಸಚಿವಾಲಯದ ಇತರ ಅಧಿಕಾರಿಗಳು ಇದ್ದಾರೆ. ಇನ್ನು ಇದೇ ರಾಜಮೌಳಿಯವರು ಸಚಿವರ ಜೊತೆ ಸಿನಿಮಾದ ಬಗ್ಗೆ ಚರ್ಚೆ ನಡೆಸಿದ್ದಾರೆ ಸದ್ಯ ಆಫ್ರಿಕಾದಲ್ಲಿ SSMB 29 ಶೂಟಿಂಗ್‌ ನಡೆಯುತ್ತಿದೆ.

123

ಕಳೆದ 15 ದಿನಗಳಿಂದ ಪ್ರಪಂಚ ಸುಪ್ರಸಿದ್ಧ ನಿರ್ದೇಶಕ ರಾಜಮೌಳಿಯವರ ಸಿನಿಮಾ ಶೂಟಿಂಗ್‌ಗೆ ಆಫ್ರಿಕಾ ವೇದಿಕೆಯಾಗಿದೆ. ರಾಜಮೌಳಿಯೊಬ್ಬ ದೂರದೃಷ್ಟಿವುಳ್ಳ ನಿರ್ದೇಶಕ. ಅಲ್ಲದೇ ಇಡೀ ಪ್ರಪಂಚ ಜನರನ್ನ ತಮ್ಮ ಸಿನಿಮಾದ ಮೂಲಕ ಸೆಳೆಯುವ ಶಕ್ತಿ ಇವರಿಗಿದೆ ಎಂದು ಕೀನ್ಯಾ ಸಚಿವ ಮುಸಾಲಿಯಾ ಮುಡವಾಡಿ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

12334

ಸದ್ಯ ಶೂಟಿಂಗ್‌ ಭರದಿಂದ ಸಾಗುತ್ತಿದ್ದು, ಇದುವರೆಗೆ ಚಿತ್ರ ನಿರ್ಮಾಪಕರು ಹೆಚ್ಚಿನ ಗುಟ್ಟು ಬಿಟ್ಟು ಕೊಟ್ಟಿಲ್ಲ. ಆಗಸ್ಟ್‌ 9ರಂದು ಮಹೇಶ್‌ ಬಾಬು ಹುಟ್ಟುಹಬ್ಬದ ಪ್ರಯುಕ್ತ ಸಿನಿಮಾದ ಫಸ್ಟ್‌ ಲುಕ್‌ ರಿಲೀಸ್‌ ಆಗಿದ್ದು, ಪ್ರೇಕ್ಷಕರ ನಿರೀಕ್ಷೆ, ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಅದ್ಧೂರಿಯಾಗಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಕಡೆಯಿಂದ ಇದೀಗ ಪ್ರೇಕ್ಷಕರಿಗೆ ಭರ್ಜರಿ ಗಿಫ್ಟ್‌ ಸಿಕ್ಕಿದೆ. ರಿಲೀಸ್‌ ಆಗಿರುವ ಪೋಸ್ಟರ್‌ ನೋಡಿ ಮಹೇಶ್‌ ಬಾಬು ಅಭಿಮಾನಿಗಳು ಥ್ರಿಲ್‌ ಆಗಿದ್ದಾರೆ.

1234

ಮಹೇಶ್‌ ಬಾಬು ಅವರ 50ನೇ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆಯಾದ ಈ ಫಸ್ಟ್‌ ಲುಕ್‌ ಗಮನ ಸೆಳೆಯುತ್ತಿದೆ. ಪ್ಯಾನ್‌ ವರ್ಲ್ಡ್‌ ಚಿತ್ರವಾಗಿ ಇದು ಮೂಡಿ ಬರಲಿದ್ದು, ಅದರ ಸೂಚನೆ ಇದೀಗ ಹೊರ ಬಂದಿರುವ ಪೋಸ್ಟರ್‌ ಮೂಲಕವೇ ಸಿಕ್ಕಿದೆ. ಪೋಸ್ಟರ್‌ನಲ್ಲಿ ಮಹೇಶ್‌ ಬಾಬು ಮುಖವನ್ನು ತೋರಿಸಿಲ್ಲ. ಇದರಿಂದ ಅವರ ಅಭಿಮಾನಿಗಳಿಗೆ ಕೊಂಚ ನಿರಾಸೆ ಉಂಟಾಗಿದ್ದರೂ ಕೂತೂಹಲ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಇದರಲ್ಲಿ ಮಹೇಶ್‌ ಬಾಬು ಅವರ ಎದೆ ಭಾಗವನ್ನಷ್ಟೇ ತೋರಿಸಲಾಗಿದೆ. ಕುತ್ತಿಗೆ ಭಾಗದಿಂದ ರಕ್ತ ಒಸರುತ್ತಿದ್ದು, ಕತ್ತಿನಲ್ಲಿ ಹಾರವಿದ್ದು, ಇದರಲ್ಲಿ ತ್ರಿಶೂಲ, ಡಮರು ಮತ್ತು ನಂದಿಯ ವಿಗ್ರಹವನ್ನೊಳಗೊಂಡ ಪದಕವಿದೆ. ಇದು ಶಕ್ತಿ, ಸಂಪ್ರದಾಯ ಮತ್ತು ಆಧ್ಯಾತ್ಮವನ್ನು ಪ್ರತಿಫಲಿಸಿದೆ. ಇನ್ನು ಚಿತ್ರದ ಫಸ್ಟ್‌ ಲುಕ್‌ ನವೆಂಬರ್‌ನಲ್ಲಿ ಬಿಡುಗಡೆಯಾಗಲಿದ್ದು, ನಂತರ 2026 ರಲ್ಲಿ ಚಿತ್ರದ ಅದ್ದೂರಿ ಬಿಡುಗಡೆ ನಡೆಯಲಿದೆ.

ಈ ಸುದ್ದಿಯನ್ನೂ ಓದಿ: SSMB29 Movie: ರಾಜಮೌಳಿ-ಮಹೇಶ್‌ ಬಾಬು ಚಿತ್ರಕ್ಕೆ ಮಾಧವನ್ ಎಂಟ್ರಿ?