ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Producer Pushkara Mallikarjunaiah: 'ಹಾಯ್‌ ನನ್ನಾ' ತೆಲುಗು ಚಿತ್ರತಂಡದ ವಿರುದ್ಧ ನಿರ್ಮಾಪಕ ಪುಷ್ಕರ್ ಕಿಡಿ; ಕಾರಣವೇನು?

2023ರಲ್ಲಿ ತೆರೆಕಂಡ ಟಾಲಿವುಡ್‌ ಸ್ಟಾರ್‌ ನಟ ನಾನಿ ಅಭಿನಯದ ʼಹಾಯ್ ನಾನ್ನʼ ಚಿತ್ರದ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ತಾವು ನಿರ್ಮಿಸಿದ ಭೀಮಸೇನ ನಳ ಮಹಾರಾಜ ಕನ್ನಡ ಚಿತ್ರದ ರಿಮೇಕ್‌ ಇದಾಗಿದ್ದು, ಹಕ್ಕು ಪಡೆದುಕೊಂಡಿರಲಿಲ್ಲ ಎಂದು ಕನ್ನಡ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಆರೋಪಿಸಿದ್ದಾರೆ. ನಾನಿ ಅವರೇ ಎಷ್ಟು ಕೀಳುಮಟ್ಟದ ಕೆಲಸ ಮಾಡಿದ್ದೀರಿ ಎಂದು ಪುಷ್ಕರ್ ಅಸಮಾಧಾನ ಹೊರ ಹಾಕಿದ್ದಾರೆ.

ತೆಲುಗು ನಟ ನಾನಿ ವಿರುದ್ಧ ನಿರ್ಮಾಪಕ ಪುಷ್ಕರ್ ಗರಂ

Hi Nanna flim

Profile Pushpa Kumari Feb 1, 2025 10:20 PM

ಹೈದರಾಬಾದ್‌: 2023ರಲ್ಲಿ ತೆರೆಕಂಡ, ಟಾಲಿವುಡ್‌ನ ನ್ಯಾಚುರಲ್ ಸ್ಟಾರ್ ನಾನಿ ಅಭಿನಯದ ʼಹಾಯ್ ನಾನ್ನʼ (Hi Nanna) ಸಿನಿಮಾ ಇದೀಗ ವಿವಾದದ ಸುಳಿಯಲ್ಲಿ ಸಿಲುಕಿಕೊಂಡಿದೆ. ಕನ್ನಡ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ತೆಲುಗು ನಟ ನಾನಿ ಮೇಲೆ ಬೇಸರ ವ್ಯಕ್ತಪಡಿಸಿದ್ದಾರೆ. ಪುಷ್ಕರ್ ನಿರ್ಮಾಣದ ಕನ್ನಡ ಚಿತ್ರ ʼಭೀಮಸೇನ ನಳಮಹಾರಾಜʼದ ರಿಮೇಕ್ ಇದಾಗಿದೆ ಎಂದು ಅವರು ಆರೋಪಿಸಿದ್ದಾರೆ. ಹಕ್ಕು ಪಡೆಯದೆ ಸಿನಿಮಾವನ್ನು ರಿಮೇಕ್ ಮಾಡಿದ್ದಾರೆ ಎಂದು ಅವರು ʼಹಾಯ್ ನಾನ್ನʼ ಸಿನಿಮಾ ತಂಡದ ವಿರುದ್ಧ ಕಿಡಿಕಾರಿದ್ದಾರೆ.

2023ರಲ್ಲಿ ರಿಲೀಸ್‌ ಆದ ನಾನಿ ಮತ್ತು ಮೃಣಾಲ್‌ ಠಾಕೂರ್‌ ಅಭಿನಯ್ ʼಹಾಯ್ ನಾನ್ನʼ ಚಿತ್ರ ಗಮನ ಸೆಳೆದಿತ್ತು. 2020ರಲ್ಲಿ ತಾವು ನಿರ್ಮಿಸಿದ ʼಭೀಮಸೇನ ನಳಮಹರಾಜʼ ಚಿತ್ರದ ರಿಮೇಕ್ ಇದಾಗಿದ್ದು, ನನ್ನ ಅನುಮತಿ ಪಡೆದಿಲ್ಲ. ನಾನಿ ಅವರೇ ಎಷ್ಟು ಕೀಳುಮಟ್ಟದ ಕೆಲಸ ಮಾಡಿದ್ದೀರಿ ಎಂದು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರು ಅಸಮಾಧಾನ ಹೊರ ಹಾಕಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು ಸದ್ಯ ವೈರಲ್ ಆಗಿದೆ.



ಪೋಸ್ಟ್‌ನಲ್ಲಿ ಏನಿದೆ?

ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಶೇರ್‌ ಮಾಡಿದ್ದಾರೆ. ʼಹಾಯ್ ನಾನ್ನʼ ಸಿನೆಮಾ ಕನ್ನಡದ ʼಭೀಮಸೇನ ನಳಮಹಾರಾಜʼದ ರಿಮೇಕ್ ಆಗಿದ್ದು, ಅವರು ಹಕ್ಕು ಪಡೆದಿಲ್ಲ. ಇದು ತುಂಬಾ ಚೀಪ್ ಆದ ಕೆಲಸ ಎಂದು ನಾನಿ ಅವರ ಹೆಸರನ್ನು ಟ್ಯಾಗ್ ಮಾಡಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಪೋಸ್ಟ್ ವೈರಲ್ ಆಗುತ್ತಿದ್ದಂತೆ ನಾನಿ ಅಭಿಮಾನಿಗಳು ಇದೆಲ್ಲ ಸುಳ್ಳು ಎಂದು ಆಶ್ಚರ್ಯ ವ್ಯಕ್ತಪಡಿಸಿ ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ಕನ್ನಡದ ಅನೇಕ ಸಿನೆಮಾ ಹೀಗೆ ಆಗಿರುವ ಸಾಧ್ಯತೆ ಇದೆ ಎಂದಿದ್ದಾರೆ. ʼಹಾಯ್ ನಾನ್ನʼ ಚಿತ್ರ ರಿಲೀಸ್ ಆಗಿ ಒಂದು ವರ್ಷದ ಬಳಿಕ ಈ ರೀತಿಯ ಆರೋಪ ಕೇಳಿ ಬಂದಿದ್ದು, ನಿರ್ದೇಶಕ ಶೌರ್ಯೇವ್ ಅವರಾಗಲಿ, ನಾಯಕ ನಾನಿ ಆಗಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.

ಕಾರ್ತಿಕ್ ಸರಗೂರು ನಿರ್ದೇಶನದಲ್ಲಿ ಮೂಡಿ ಬಂದಿರುವ ʼಭೀಮಸೇನ ನಳಮಹಾರಾಜʼ ಸಿನೆಮಾ 2020ರಲ್ಲಿ ತೆರೆಕಂಡಿತ್ತು. ರಕ್ಷಿತ್ ಶೆಟ್ಟಿ, ಹೇಮಂತ್ ಎಂ. ರಾವ್ ಮತ್ತು ಪುಷ್ಕರ್ ಮಲ್ಲಿಕಾರ್ಜುನಯ್ಯ ಈ ಚಿತ್ರ ನಿರ್ಮಿಸಿದ್ದಾರೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಈ ಚಿತ್ರ ಒಟಿಟಿ ಫ್ಲ್ಯಾಟ್‌ಫಾರ್ಮ್‌ ಅಮೇಜಾನ್ ಪ್ರೈಮ್‌ನಲ್ಲಿ ತೆರೆ ಕಂಡಿತ್ತು.

ಇದನ್ನು ಓದಿ: 2024 Flashback: 2024ರಲ್ಲಿ ನೀಡಲಾದ ಪ್ರತಿಷ್ಠಿತ ಪ್ರಶಸ್ತಿಗಳು! ನೊಬೆಲ್, ಪುಲಿಟ್ಜರ್ ಅವಾರ್ಡ್‌ ಪಡೆದ ಸಾಧಕರ ಪಟ್ಟಿ ಇಲ್ಲಿದೆ

ʼಹಾಯ್ ನಾನ್ನʼ ತಂದೆ-ಮಗಳ ಬಾಂಧವ್ಯ ಸಾರುವ ಚಿತ್ರವಾಗಿದ್ದು, ಇದೇ ರೀತಿಯ ಕಥೆ ʼಭೀಮಸೇನ ನಳಮಹಾರಾಜʼದಲ್ಲೂ ಇದೆ. ಎರಡು ಸಿನಿಮಾದ ಕಥಾ ವಸ್ತು ಒಂದೇ ಆಗಿದ್ದು ಅದನ್ನು ಪ್ರೇಕ್ಷಕರ ಮುಂದೆ ಪ್ರಸ್ತುತಪಡಿಸಿದ ರೀತಿ ವಿಭಿನ್ನವಾಗಿತ್ತು. ʼಹಾಯ್ ನಾನ್ನʼ ಚಿತ್ರ ರಿಲೀಸ್ ಆದಾಗಾಲೂ ಇದೇ ರೀತಿಯ ಅಭಿಪ್ರಾಯ ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತವಾಗಿತ್ತು.