2024 Flashback: 2024ರಲ್ಲಿ ನೀಡಲಾದ ಪ್ರತಿಷ್ಠಿತ ಪ್ರಶಸ್ತಿಗಳು! ನೊಬೆಲ್, ಪುಲಿಟ್ಜರ್ ಅವಾರ್ಡ್‌ ಪಡೆದ ಸಾಧಕರ ಪಟ್ಟಿ ಇಲ್ಲಿದೆ

2024 Flashback: ಈ  ವರ್ಷದ  ಪ್ರತಿಷ್ಠಿತ ಕ್ಷೇತ್ರದಲ್ಲಿ ಸಂದ ಪ್ರಶಸ್ತಿ (Important Awards) ಹಾಗೂ ಈ ಪ್ರಶಸ್ತಿ  ಪಡೆದುಕೊಂಡಂತಹ  ಸಾಧಕರ ಪಟ್ಟಿ  ಇಲ್ಲಿದೆ.

Profile Pushpa Kumari Dec 27, 2024 12:42 PM
ನವದೆಹಲಿ: ಈ ವರ್ಷದ ಕೊನೆಯ ಹಂತಕ್ಕೆ ಬಂದು ನಿಂತಿದ್ದೇವೆ. 2024 ಮುಗಿಯಲು ಕೌಂಟ್‌ಡೌನ್‌ ಶುರುವಾಗಿದೆ. ಇದೀಗ ಹೊಸ ವರ್ಷದ  ಆಗಮನದ ತಯಾರಿ ಜೋರಾಗಿದ್ದು, 2024ರ ಕೆಲವೊಂದು ವಿಚಾರಗಳನ್ನು ಮೆಲುಕು ಹಾಕುತ್ತಿದ್ದೇವೆ. ಈ ವರ್ಷದ ಪ್ರತಿಷ್ಠಿತ ಕ್ಷೇತ್ರದಲ್ಲಿ ಸಂದ ಪ್ರಶಸ್ತಿ (Important Awards) ಹಾಗೂ ಈ ಪ್ರಶಸ್ತಿ  ಪಡೆದುಕೊಂಡಂತಹ  ಸಾಧಕರ ಪಟ್ಟಿ ಇಲ್ಲಿದೆ(2024 Flashback).
ಪುಲಿಟ್ಜರ್ ಪ್ರಶಸ್ತಿ:
ಪುಲಿಟ್ಜರ್ ಪ್ರಶಸ್ತಿಯು ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯವು ನೀಡುವ ಗೌರವಯುತ ಪ್ರಶಸ್ತಿಯಾಗಿದೆ. ಈ ಪ್ರಶಸ್ತಿ ಯನ್ನು ಪತ್ರಿಕೋದ್ಯಮ ಮತ್ತು ಕಲೆ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ನೀಡಲಾಗುತ್ತದೆ. ವಾರ್ಷಿಕವಾಗಿ ಈ ಭಾರಿ  ಪತ್ರಿಕೆ, ಪತ್ರಿಕೋದ್ಯಮ ಕ್ಷೇತ್ರದ ಒಟ್ಟು  23 ವಿಭಾಗಗಳಲ್ಲಿ ಗುರುತಿಸಿ ಪ್ರಶಸ್ತಿ ನೀಡಲಾಗಿದೆ. ಈ ಭಾರಿ ತನಿಖಾ ವರದಿಗಾಗಿ  ನ್ಯೂಯಾರ್ಕ್ ಟೈಮ್ಸ್ ನ ಹನ್ನಾ ಡ್ರೀಯರ್‌ಗೆ ಪ್ರಶಸ್ತಿ ದೊರೆತಿದೆ.  ಸಂಪಾದಕೀಯ ಬರವಣಿಗೆಗೆ  ವಾಷಿಂಗ್ಟನ್ ಪೋಸ್ಟ್‌ನ ಡೇವಿಡ್  ಹಾಫ್‌ಮನ್ ಅವರು ಆಯ್ಕೆಯಾಗಿದ್ದರು.
ಅಕಾಡೆಮಿ ಪ್ರಶಸ್ತಿ (ಆಸ್ಕರ್)
ಆಸ್ಕರ್ ಅಕಾಡೆಮಿ ಪ್ರಶಸ್ತಿಯನ್ನು ಈ‌ ಬಾರಿ  ಮಾರ್ಚ್ 10, 2024 ರಂದು ನೀಡಲಾಗಿದ್ದು ಈ ಪ್ರಶಸ್ತಿಯನ್ನು ಸಿನಿಮಾ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಗಳನ್ನು ಮಾಡಿದವರಿಗೆ ನೀಡಲಾಗುತ್ತದೆ. ಈ ಬಾರಿ ಅತ್ಯುತ್ತಮ ಚಿತ್ರ  ಕ್ರಿಸ್ಟೋಫರ್ ನೋಲನ್ ಅವರ ಓಪನ್ ಹೈಮರ್ ಚಿತ್ರ  ಆಯ್ಕೆಯಾಗಿದೆ.  ಉತ್ತಮ ನಿರ್ದೇಶಕ ಪ್ರಶಸ್ತಿಯು ಇದೇ ಚಿತ್ರಕ್ಕೆ ‌ದೊರೆತಿದೆ. ಚಿತ್ರದಲ್ಲಿ ಅತ್ಯುತ್ತಮ ನಟನೆಯ ಮೂಲಕ ಗುರುತಿಸಿಕೊಂಡಿದ್ದ ಸಿಲಿಯನ್ ಮರ್ಫಿ ಅವರು ಉತ್ತಮ ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ನೊಬೆಲ್ ಪ್ರಶಸ್ತಿ
ನೊಬೆಲ್ ಪ್ರಶಸ್ತಿಯನ್ನು ವಿಜ್ಞಾನ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದವರಿಗೆ ಪ್ರದಾನ ಮಾಡಲಾಗುತ್ತದೆ. ಭೌತಶಾಸ್ತ್ರ, ರಸಾಯನಶಾಸ್ತ್ರ, ಶರೀರಶಾಸ್ತ್ರ ಅಥವಾ ಔಷಧ, ಸಾಹಿತ್ಯ ಕ್ಷೇತ್ರಗಳಿಗೆ ನೀಡಿರುವ   ಕೊಡುಗೆಗಳಿಗಾಗಿ ನೊಬೆಲ್ ಪ್ರಶಸ್ತಿಗಳನ್ನು  ನೀಡಿ ಗೌರವಿಸಲಾಗುತ್ತದೆ.
ಸಾಹಿತ್ಯ ಕ್ಷೇತ್ರದಲ್ಲಿ  ಪ್ರಸ್ತಕ ವರ್ಷದಲ್ಲಿ  ಹಾನ್ ಕೇಂಗ್ ಅವರಿಗೆ  ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ನಿಹೋನ್ ಹಿಂದಾಕ್ಯೊ ಅವರಿಗೆ ನೊಬೆಲ್ ಶಾಂತಿ ಪುರಸ್ಕಾರ ದೊರೆತಿದೆ. ಪರಮಾಣು ಶಸ್ತ್ರಾಸ್ತ್ರ ವಿಷಯದಲ್ಲಿ  ನಿಹೋನ್ ಅವರಿಗೆ ಈ  ಪುರಸ್ಕಾರ  ದೊರೆತಿದ್ದು,  ಭೌತಶಾಸ್ತ್ರದಲ್ಲಿ ಜಾನ್ ಜೆ. ಹಾಪ್ಫೀಲ್ಡ್ ಮತ್ತು ಜೆಫ್ರಿ ಹಿಂಟನ್ ಅವರು  ಪಡೆದುಕೊಂಡಿದ್ದಾರೆ. ರಸಾಯನಶಾಸ್ತ್ರ ಕ್ಷೇತ್ರದಲ್ಲಿ  ಡೇವಿಡ್ ಬೇಕರ್ ಅವರಿಗೆ ನೊಬೆಲ್ ಪ್ರಶಸ್ತಿ ಲಭಿಸಿದೆ. ಮೆಡಿಸಿನ್ ವಿಭಾಗದಲ್ಲಿ ವಿಕ್ಟರ್ ಅಂಬ್ರೋಸ್ ಮತ್ತು ಗ್ಯಾರಿ ರುವ್ಕುನ್ ಅವರು ಆಯ್ಕೆಯಾಗಿದ್ದಾರೆ. ಅರ್ಥಶಾಸ್ತ್ರ ವಿಭಾಗದಲ್ಲಿ ಡ್ಯಾರನ್ ಅಸೆಮೊಗ್ಲು ಅವರು ಪ್ರಶಸ್ತಿ ಪಡೆದುಕೊಂಡಿದ್ದಾರೆ‌. ಸಂಘ ಸಂಸ್ಥೆಗಳು ಹೇಗೆ ರಚನೆಯಾಗುತ್ತವೆ ಮತ್ತು ಸಮೃದ್ಧಿಯ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದರ ಅಧ್ಯಯನದಲ್ಲಿ ಸಾಧನೆ ಮಾಡಿದ್ದಕ್ಕಾಗಿ ಅಸೆಮೊಗ್ಲು ಅವರು ಪ್ರಶಸ್ತಿ ಮುಡಿಗೇರಿಸಿದ್ದಾರೆ.
ಗ್ರ್ಯಾಮಿ ಪ್ರಶಸ್ತಿ:
ಪ್ರಸ್ತಕ ವರ್ಷದಲ್ಲಿ ಫೆಬ್ರವರಿ 4  ರಂದು ಲಾಸ್ ಏಂಜಲೀಸ್ ನಲ್ಲಿ ಈ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಸಲಾಯಿತು. ಈ  ಪ್ರಶಸ್ತಿಯನ್ನು ಸಂಗೀತ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದವರಿಗೆ ನೀಡಲಾಗುತ್ತೆ. ಈ ವರ್ಷ ಟೇಲರ್ ಸ್ವಿಫ್ಟ್ ಅವರ ಮಿಡ್ನೈಟ್ಸ್ ಆಲ್ಬಮ್ ಗೆ ಈ ಬಾರಿಯ ಗ್ರ್ಯಾಮಿ ಪ್ರಶಸ್ತಿ ದೊರೆತಿದೆ. ಹಾಗೆಯೇ  ಬಾರ್ಬಿ' ಚಿತ್ರದ 'ವಾಟ್ ವಾಸ್ ಐ ಮೇಡ್ ಫಾರ್' ಹಾಡನ್ನು ಹಾಡಿದ ಬಿಲ್ಲಿ ಎಲಿಶ್ ಒ ಕಾನ್ನೆಲ್ ಮತ್ತು ಫಿನ್ನಿಯಾಸ್ ಒ ಕಾನ್ನೆಲ್ ಅವರಿಗೆ ಲಭಿಸಿದೆ. ಈ ವರ್ಷದ ರೆಕಾರ್ಡ್ ಪ್ರಶಸ್ತಿಗೆ ಮಿಲೆ ಸಿರೆಸ್ ಅವರ ಫ್ಲವರ್ಸ್ ಹಾಡಿಗೆ ಸಿಕ್ಕಿದೆ ವರ್ಷದ ಅತ್ಯುತ್ತಮ ಹೊಸ ಸಿಂಗರ್ ಪ್ರಶಸ್ತಿಯನ್ನು ವಿಕ್ಟೋರಿಯಾ ಮೋನೆಟ್ ಅವರು ಮುಡಿಗೇರಿಸಿಕೊಂಡರು.
ಈ ಸುದ್ದಿಯನ್ನೂ ಓದಿ:Manmohan Singh: ದೇಶಕ್ಕೆ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ನೀಡಿದ ಅಪರೂಪದ ಕೊಡುಗೆಗಳಿವು
Kichcha Sudeep and Rajath Kishan
7:31 AM January 29, 2025

Rajath BBK 11: ಫಿನಾಲೆಯಲ್ಲಿ ಯುವನ್​ಗೆ ಸುದೀಪ್ ಗಿಫ್ಟ್ ಕೊಟ್ಟ ಚೈನ್ ಬೆಲೆ ಎಷ್ಟು?, ರಜತ್ ಏನಂದ್ರು?

Bus accident
6:06 PM January 25, 2025

Bus Accident: ಬಸ್‌ನಿಂದ ತಲೆ ಹೊರ ಹಾಕಿದ ಮಹಿಳೆ; ಲಾರಿ ಡಿಕ್ಕಿಯಾಗಿ ತುಂಡಾಗಿ ಬಿದ್ದ ರುಂಡ!

Robbery
3:26 PM January 28, 2025

Robbery: ತಿಪಟೂರು ಎಪಿಎಂಸಿ ಮಾರುಕಟ್ಟೆಯಿಂದ 3,635 ಕೆಜಿ ಕೊಬ್ಬರಿ ಹೊತ್ತೊಯ್ದ ಕಳ್ಳರು

Lokayukta Raid in T.Begur
10:22 PM January 24, 2025

Lokayukta Raid: 5 ಬಾರಿ ಸಸ್ಪೆಂಡ್‌ ಆದ್ರೂ ತೀರದ ಲಂಚದ ದಾಹ; 20 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದ ಟಿ.ಬೇಗೂರು ಪಿಡಿಒ

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

BBK 11 Final Elimination (1)
7:49 PM January 25, 2025

BBK 11 Final: ಬಿಗ್ ಬಾಸ್ ಫಿನಾಲೆಯಲ್ಲಿ ನಡೆಯಿತು ಎರಡು ಶಾಕಿಂಗ್ ಎಲಿಮಿನೇಷನ್: ಔಟ್ ಆಗಿದ್ದು ಇವರೇ

Hanumantha BBK 11 Winner
8:44 PM January 26, 2025

BBK 11 Winner: ಅಧಿಕೃತ ಘೋಷಣೆಗು ಮುನ್ನವೇ ರಿವೀಲ್ ಆಯ್ತು ಬಿಗ್ ಬಾಸ್ ಸೀಸನ್ 11ರ ವಿನ್ನರ್ ಯಾರೆಂದು: ಇವರೇ ನೋಡಿ

Rajath Kishan (2)
7:07 AM January 30, 2025

BBK11 Rajath Kishan: ನಂದೂ ಹಳೆ ಕತೆಗಳಿವೆ.. ಆದರೆ ಆ ಹುಡುಗಿಯ ಫೋಟೊ ಬಿಡಬಾರದಿತ್ತು: ರಜತ್