ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕೊಹ್ಲಿ, ರೋಹಿತ್‌ಗಾಗಿ ಹೆಚ್ಚುವರಿ ಏಕದಿನ ಸರಣಿ ನಡೆಸಲು ಬಿಸಿಸಿಐ ಚಿಂತನೆ

BCCI: ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಏಕದಿನ ವಿಶ್ವಕಪ್‌ ಮಾತ್ರ ಆಡುತ್ತಿರುವ ಕಾರಣ ಏಕದಿನ ವಿಶ್ವಕಪ್‌ಗೆ ಉಭಯ ಆಟಗಾರರು ಫಾರ್ಮ್‌ ಉಳಿಸಿಕೊಳ್ಳುವ ಮತ್ತು ಭಾರತೀಯ ಕ್ರಿಕೆಟ್‌ ಅಭಿಮಾನಗಳ ಬೇಡಿಕೆಯಂತೆ ಬಿಸಿಸಿಐ ಏಕದಿನ ಸರಣಿಯಲ್ಲಿ ಪಂದ್ಯಗಳನ್ನು ಹೆಚ್ಚುವರಿಯಾಗಿ ಸೇರಿಸಿಕೊಳ್ಳಲು ನಿರ್ಧರಿಸಿದೆ.

ಕೊಹ್ಲಿ, ರೋಹಿತ್‌ಗಾಗಿ ಹೆಚ್ಚುವರಿ ಏಕದಿನ ಸರಣಿ ನಡೆಸಲು ಬಿಸಿಸಿಐ ಚಿಂತನೆ

Virat Kohli, Rohit Sharma and Shubman Gill -

Abhilash BC
Abhilash BC Mar 13, 2026 4:10 PM

ನವದೆಹಲಿ, ಮಾ.13: ಮೇ ತಿಂಗಳಲ್ಲಿ ಐಪಿಎಲ್ ಮುಗಿದ ನಂತರ, ಭಾರತೀಯ ಕ್ರಿಕೆಟ್ ತಂಡವು ಏಕದಿನ ಕ್ರಿಕೆಟ್‌ನತ್ತ ಗಮನ ಹರಿಸಲಿದೆ. ಇಂಗ್ಲೆಂಡ್, ಯುಎಇ, ಬಾಂಗ್ಲಾದೇಶ, ಜಪಾನ್‌ನಲ್ಲಿ ನಿಗದಿತ ಪಂದ್ಯಗಳು ಮತ್ತು ತವರಿನಲ್ಲಿ ಪೂರ್ಣ ಪ್ರಮಾಣದ ಪಂದ್ಯಗಳನ್ನು ಹೊರತುಪಡಿಸಿ, ಐರ್ಲೆಂಡ್, ಶ್ರೀಲಂಕಾ ಮತ್ತು ಜಿಂಬಾಬ್ವೆಯಲ್ಲಿ ಹೆಚ್ಚುವರಿ ಏಕದದಿನ ಪಂದ್ಯಗಳನ್ನು ಆಡುವ ಸಾಧ್ಯತೆಯಿದೆ.

ಭಾರತ ಈಗಾಗಲೇ ಎರಡು ಟಿ20 ವಿಶ್ವಕಪ್‌ಗಳನ್ನು ಗೆದ್ದಿದೆ ಮತ್ತು ಚಾಂಪಿಯನ್ಸ್ ಟ್ರೋಫಿ ವಿಜೇತರೂ ಆಗಿದೆ. ಆದಾಗ್ಯೂ, 2011 ರಿಂದ ತಂಡವು ಏಕದಿನ ವಿಶ್ವಕಪ್ ಅನ್ನು ಗೆದ್ದಿಲ್ಲ. 2023 ರಲ್ಲಿ ರೋಹಿತ್ ಶರ್ಮಾ ನೇತೃತ್ವದ ತಂಡವು ಫೈನಲ್‌ ತಲುಪಿತ್ತು. ಆದರೆ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿತ್ತು. ಇದೀಗ 2027 ರ ವಿಶ್ವಕಪ್ ಅನ್ನು ಬಿಸಿಸಿಐ ದೊಡ್ಡ ಪ್ರಮಾಣದಲ್ಲಿ ಗುರಿಯಾಗಿಸಿಕೊಂಡಿದೆ. ದಿ ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಯ ಪ್ರಕಾರ, ಬಿಸಿಸಿಐ ವಿದೇಶಿ ಮಂಡಳಿಗಳಿಂದ ತಮ್ಮ ವಿದೇಶ ಪ್ರವಾಸಗಳಲ್ಲಿ ಹೆಚ್ಚುವರಿ ಏಕದಿನ ಪಂದ್ಯಗಳನ್ನು ಆಡಲು ಮನವಿ ಮಾಡಿದೆ ಎನ್ನಲಾಗಿದೆ.

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಏಕದಿನ ವಿಶ್ವಕಪ್‌ ಮಾತ್ರ ಆಡುತ್ತಿರುವ ಕಾರಣ ಏಕದಿನ ವಿಶ್ವಕಪ್‌ಗೆ ಉಭಯ ಆಟಗಾರರು ಫಾರ್ಮ್‌ ಉಳಿಸಿಕೊಳ್ಳುವ ಮತ್ತು ಭಾರತೀಯ ಕ್ರಿಕೆಟ್‌ ಅಭಿಮಾನಗಳ ಬೇಡಿಕೆಯಂತೆ ಬಿಸಿಸಿಐ ಏಕದಿನ ಸರಣಿಯಲ್ಲಿ ಪಂದ್ಯಗಳನ್ನು ಹೆಚ್ಚುವರಿಯಾಗಿ ಸೇರಿಸಿಕೊಳ್ಳಲು ನಿರ್ಧರಿಸಿದೆ.

ಧೋನಿ ಇಲ್ಲದೆ ಸಿಎಸ್‌ಕೆ ಅಪೂರ್ಣ, ಈ ಬಾರಿಯದ್ದು ಕೊನೆಯ ಸೀಸನ್; ಇರ್ಫಾನ್ ಪಠಾಣ್

ಶ್ರೀಲಂಕಾ ಕ್ರಿಕೆಟ್ ಕೂಡ ಬಿಸಿಸಿಐ ಬಳಿ ಏಕದಿನ ಪಂದ್ಯಗಳನ್ನು ನಡೆಸಲು ಮನವಿ ಮಾಡುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಭಾರತವು ಬಾಂಗ್ಲಾದೇಶ (ಅನುಮತಿಗೆ ಒಳಪಟ್ಟು), ವೆಸ್ಟ್ ಇಂಡೀಸ್ ಮತ್ತು ನ್ಯೂಜಿಲೆಂಡ್ ವಿರುದ್ಧ ಸೀಮಿತ ಓವರ್‌ಗಳ ಸರಣಿಯನ್ನು ಆಡಲು ನಿರ್ಧರಿಸಲಾಗಿದೆ. ಈ ಹಿಂದೆ ತಿಳಿಸಲಾದ ವರದಿಯ ಪ್ರಕಾರ, ಪ್ರವಾಸದ ಸಮಯದಲ್ಲಿ ನ್ಯೂಜಿಲೆಂಡ್ ಹೆಚ್ಚುವರಿ ಏಕದಿನ ಪಂದ್ಯಗಳನ್ನು ಕೇಳಿದೆ.

ಏತನ್ಮಧ್ಯೆ, ಕೊಹ್ಲಿ ಮತ್ತು ರೋಹಿತ್ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ 2026 ರ ಸೀಸನ್‌ಗಾಗಿ ತಯಾರಿ ಆರಂಭಿಸಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮಾಜಿ ನಾಯಕ ಕೊಹ್ಲಿ ನೆಟ್ಸ್‌ನಲ್ಲಿ ತರಬೇತಿ ಪಡೆಯುತ್ತಿರುವ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.