ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Sanjana Burli: ವೈವಾಹಿಕ ಜೀವನಕ್ಕೆ ಕಾಲಿಟ್ಟ 'ಪುಟ್ಟಕ್ಕನ ಮಕ್ಕಳು' ಸಂಜನಾ ಬುರ್ಲಿ

Sanjana Burli: ಕಿರುತೆರೆಯ ನಟಿ ಸಂಜನಾ ಬುರ್ಲಿ ಮತ್ತು ಸಮರ್ಥ್ ಚೆನ್ನಗಿರಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. 'ಪುಟ್ಟಕ್ಕನ ಮಕ್ಕಳು' ಹಾಗೂ 'ಶ್ರೀಗಂಧದಗುಡಿ' ಅಂತಹ ಸೂಪರ್ ಹಿಟ್ ಧಾರಾವಾಹಿಗಳ ಮೂಲಕ ಜನಪ್ರಿಯತೆ ಗಳಿಸಿರುವ ಸಂಜನಾ, ಈಗ ಹೊಸ ಜೀವನದ ಆರಂಭ ಮಾಡಿದ್ದಾರೆ. ಸಂಜನಾ ಬುರ್ಲಿ ಅವರ ಕೈ ಹಿಡಿಯುತ್ತಿರುವ ಸಮರ್ಥ್ ಚೆನ್ನಗಿರಿ ಅವರು ವೃತ್ತಿಯಲ್ಲಿ ವೈದ್ಯರು . ಸಂಜನಾ ಅವರು ಕೂಡ ಇಂಜಿನಿಯರಿಂಗ್ ಪದವೀಧರೆಯಾಗಿದ್ದು, ಓದಿಗೂ ಅಷ್ಟೇ ಪ್ರಾಮುಖ್ಯತೆ ನೀಡಿದವರು.

ವೈವಾಹಿಕ ಜೀವನಕ್ಕೆ ಕಾಲಿಟ್ಟ 'ಪುಟ್ಟಕ್ಕನ ಮಕ್ಕಳು' ಸಂಜನಾ ಬುರ್ಲಿ

ಸಂಜನಾ ಬುರ್ಲಿ -

Yashaswi Devadiga
Yashaswi Devadiga Mar 27, 2026 8:15 AM

ಕಿರುತೆರೆಯ ನಟಿ ಸಂಜನಾ ಬುರ್ಲಿ (Sanjana Burli) ಮತ್ತು ಸಮರ್ಥ್ ಚೆನ್ನಗಿರಿ (samartha channagiri) ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. 'ಪುಟ್ಟಕ್ಕನ ಮಕ್ಕಳು' ಹಾಗೂ 'ಶ್ರೀಗಂಧದಗುಡಿ' ಅಂತಹ ಸೂಪರ್ ಹಿಟ್ ಧಾರಾವಾಹಿಗಳ ಮೂಲಕ ಜನಪ್ರಿಯತೆ ಗಳಿಸಿರುವ ಸಂಜನಾ, ಈಗ ಹೊಸ ಜೀವನದ ಆರಂಭ ಮಾಡಿದ್ದಾರೆ. ಸಂಜನಾ ಬುರ್ಲಿ ಅವರ ಕೈ ಹಿಡಿಯುತ್ತಿರುವ ಸಮರ್ಥ್ ಚೆನ್ನಗಿರಿ ಅವರು ವೃತ್ತಿಯಲ್ಲಿ ವೈದ್ಯರು (Doctor). ಸಂಜನಾ ಅವರು ಕೂಡ ಇಂಜಿನಿಯರಿಂಗ್ ಪದವೀಧರೆಯಾಗಿದ್ದು, ಓದಿಗೂ ಅಷ್ಟೇ ಪ್ರಾಮುಖ್ಯತೆ ನೀಡಿದವರು.

ಇದನ್ನೂ ಓದಿ: New OTT Releases: ಈ ತಿಂಗಳ ಕೊನೆ ವಾರ ಯಾವೆಲ್ಲಾ ಚಿತ್ರಗಳು ಒಟಿಟಿಗೆ ಬರ್ತಿವೆ?

ಮಾರ್ಚ್‌ 24ರ ರಾತ್ರಿ ಆರತಕ್ಷತೆ

ಸಂಜನಾ ಅವರು ಇನ್ನೂ ಡಿಗ್ರಿ ಓದುವಾಗಲೇ ನಟನೆ ಆಫರ್ ಬಂದಿತ್ತು. ಇವರ ಮೊದಲ ಧಾರಾವಾಹಿ ‘ಲಗ್ನಪತ್ರಿಕೆ’ ನಂತರ ‘ಪುಟ್ಟಕ್ಕನ ಮಕ್ಕಳು’ ಇದಾದ ಮೇಲೆ ಸಿಕ್ಕ ಆಫರ್ ‘ಶ್ರೀಗಂಧದ ಗುಡಿ’.ಈ ಜೋಡಿ ಮದುವೆ ಅದ್ದೂರಿಯಾಗಿ ಖಾಸಗಿ ರೆಸಾರ್ಟ್ ಒಂದರಲ್ಲಿ ನಡೆದಿದೆ. ಮಾರ್ಚ್‌ 24ರ ರಾತ್ರಿ ಆರತಕ್ಷತೆ ಕಾರ್ಯಕ್ರಮ ಕೂಡ ಜರುಗಿತ್ತು.

ಸಮರ್ಥ್ ಅವರು ಸಂಜನಾ ಅವರ ದೀರ್ಘಕಾಲದ ಗೆಳೆಯ ಎನ್ನಲಾಗಿದೆ. ಇತ್ತೀಚೆಗಷ್ಟೇ ಸಂಜನಾ ತಮ್ಮ ನಿಶ್ಚಿತಾರ್ಥದ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದರು. ಮಾರ್ಚ್ 24ರಂದು ಬೆಂಗಳೂರಿನಲ್ಲಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ನೆರವೇರಿತ್ತು. . ಬಂಗಾರದ ಬಣ್ಣದ ಉಡುಪಿನಲ್ಲಿ ಸಂಜನಾ ಕಂಗೊಳಿಸುತ್ತಿದ್ದರೆ, ಸಮರ್ಥ್ ಕೂಡ ಅಷ್ಟೇ ಮಿಂಚಿದ್ದರು.

ದೊಡ್ಡ ಮಟ್ಟದ ಬ್ರೇಕ್

ಸಂಜನಾ ಬುರ್ಲಿ ಅವರಿಗೆ ದೊಡ್ಡ ಮಟ್ಟದ ಬ್ರೇಕ್ ಕೊಟ್ಟಿದ್ದು 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ. ಇದರಲ್ಲಿ ಅವರು ಸ್ನೇಹಾ ಎಂಬ ಐಎಎಸ್ ಅಧಿಕಾರಿ ಪಾತ್ರವನ್ನು ನಿರ್ವಹಿಸಿ ಮನೆಮಾತಾಗಿದ್ದರು. ಆದರೆ ಓದಿನ ಕಾರಣ ನೀಡಿ ಅವರು ಈ ಧಾರಾವಾಹಿಯನ್ನು ಅರ್ಧಕ್ಕೆ ತೊರೆದಿದ್ದರು.

ಇದನ್ನೂ ಓದಿ: Ram Charan: ಬರ್ತ್‌ಡೇಗೂ ಮುನ್ನ ಫ್ಯಾನ್ಸ್‌ ಭೇಟಿ ಮಾಡಿದ ರಾಮ್ ಚರಣ್! ಹೇಗಿದ್ದಾರೆ ನಟ?

ಕಲರ್ಸ್ ಕನ್ನಡದ 'ಶ್ರೀಗಂಧದಗುಡಿ' ಧಾರಾವಾಹಿಯ ಮೂಲಕ ಮತ್ತೆ ಕಿರುತೆರೆಗೆ ಮರಳಿದರು. ಈ ಸೀರಿಯಲ್ ಕೂಡ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಆದರೆ, ಮದುವೆಯ ತಯಾರಿಗಾಗಿ ಈ ಧಾರಾವಾಹಿಯಿಂದಲೂ ಅವರು ಹೊರನಡೆದಿದ್ದಾರೆ.